
ತುಮಕೂರು: ನಗರದ ಕೋತಿ ತೋಪು ಬಾಬು ಜಗಜೀವನ್ರಾಂ ವೃತ್ತದಲ್ಲಿ ಕರ್ನಾಟಕ ಸರ್ಕಾರದ ಆದೇಶ ಮತ್ತು ಜಸ್ಟೀಸ್ ಹೆಚ್ ಎನ್.ನಾಗಮೋಹನ್ದಾಸ್ ಏಕ ಸದಸ್ಯ ವಿಚಾರಣಾ ಆಯೋಗದ ಶಿಫಾರಸ್ಸಿನಂತೆ ಪರಿಶಿಷ್ಟರ ಜಾತಿಗಳ ಸಮಗ್ರ ಸಮೀಕ್ಷೆ- ೨೦೨೫ಕ್ಕೆ ಜಿಲ್ಲಾಡಳಿತದಿಂದ ಚಾಲನೆ ನೀಡಲಾಯಿತು.
ಕಾಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್ ರವರು ಸಂವಿಧಾನ ಶಿಲ್ಪಿ ಭಾರತ ರತ್ನ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಹಸಿರು ಕ್ರಾಂತಿ ಹರಿಕಾರರಾದ ಬಾಬು ಜಗಜೀವನ್ರಾಂ ರವರ ಬಾವಚಿತ್ರಳಿಗೆ ಪುಸ್ಪ ನಮನವನ್ನು ಸಲ್ಲಿಸಿ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ- ೨೦೨೫ಕ್ಕೆ ಅಧಿಕೃತವಾಗಿ ಚಾಲನೆ ನೀಡಿ ಮಾತನಾಡಿದ ಅವರು ಜಸ್ಟೀಸ್ ಹೆಚ್ ಎನ್.ನಾಗಮೋಹನ್ದಾಸ್ ಏಕ ಸದಸ್ಯ ವಿಚಾರಣಾ ಆಯೋಗದ ಶಿಫಾರಸ್ಸಿನಂತೆ ಪರಿಶಿಷ್ಟರ ಜಾತಿಗಳ ಸಮಗ್ರ ಸಮೀಕ್ಷೆ ಕರ್ನಾಟಕದಲ್ಲೆ ಪ್ರಥಮವಾಗಿದೆ. ಒಳ ಮೀಸಲು ಸಮೀಕ್ಷೆ ಸಂಬAದ ಸಮೀಕ್ಷಾ ವರದಿ ಸಂಗ್ರಹಣೆ ಬಗ್ಗೆ ೧೦ ದಿನಗಳ ಕಾಲ ರಾಜ್ಯ ಮಟ್ಟದಲ್ಲಿ ವೈಜ್ಞಾನಿಕ ತರಬೇತಿ ನೀಡಲಾಗಿದೆ. ಜಿಲ್ಲಾ ಮಟ್ಟದ ೧೫ ಜನ ಅಧಿಕಾರಿಗಳನ್ನು ಗುರುತಿಸಿ ಮಾಸ್ಟರ್ ಟ್ರೈನರ್ ಆಗಿದೆ. ನಗರ ಮತ್ತು ತಾಲ್ಲೂಕ್ ಮಟ್ಟದಲ್ಲಿ ೩೦೦ ಸಾವಿರ ಸಮೀಕ್ಷಾ ವರದಿಗಾರರನ್ನು ಯೋಜಿಸಲಾಗಿದೆ. ಸಮೀಕ್ಷೆಯಲ್ಲಿ ನುರಿತ ಸರ್ಕಾರಿ ಶಾಲಾ ಶಿಕ್ಷರನ್ನೆ ನೇಮಿಸಲಾಗಿದೆ ವೈಜ್ಞಾನಿಕವಾಗಿ ಸಂಪೂರ್ಣ ಮಾಹಿತಿ ಪಡೆದು ಸಮೀಕ್ಷೆಯಲ್ಲಿ ದಾಖಲಿಸಲಾಗುವುದು. ಸಾರ್ವಜನಿಕರು ಸಮೀಕ್ಷೆಯಲ್ಲಿ ಪಾಲ್ಗೊಂಡು ಸರಿಯಾದ ಮಾಹಿತಿ ನೀಡುವ ಮೂಲಕ ಸಮಾಜದಲ್ಲಿ ಸಮಾನತೆಗಾಗಿ ಒಳ ಮೀಸಲಾತಿ ಸಮೀಕ್ಷೆಯನ್ನು ಯಶಸ್ವಿಗೊಳಿಸಬೇಕೆಂದು ತುಮಕೂರು ನಾಗರೀಕರಿಗೆ ಕರೆ ನೀಡಿದರು.
ನಂತರ ಹಿರಿಯ ಪ್ರಗತಿಪರ ಚಿಂತಕರು ಹಾಗೂ ಬಾಬು ಜಗಜೀವನ್ ರಾಂ ಪ್ರಶಸ್ತಿ ಪುರಸ್ಕೃತರಾದ ಪ್ರೊ.ಕೆ ದೊರೈರಾಜ್ ಮಾತನಾಡಿ ಕಳೆದ ೩೦ ವಷಗಳ ದೀರ್ಘವಾದ ಹೋರಾಟದ ಪ್ರತಿಫಲವಾಗಿ ಪರಿಶಿಷ್ಟರ ಒಳ ಮೀಸಲು ಸಮೀಕ್ಷೆ ಮನೆ ಬಾಗಿಲಿಗೆ ಬಂದಿದೆ ರಾಜ್ಯದ ಸಂಪನ್ಮೂಲ ಹಂಚಿಕೆಯಲ್ಲಿ ಸಮಾನತೆಯನ್ನು ಸಾಧಿಸುವ ಹಿನ್ನಲ್ಲೆಯಲ್ಲಿ ರಾಜ್ಯ ಸರ್ಕಾರದ ನಡೆಯನ್ನು ಸ್ವಾಗತಿಸುತ್ತೇವೆ. ಪರಿಶಿಷ್ಟರ ೧೦೧ ಜಾತಿಗಳ ಜನರು ಕಡ್ಡಾಯವಾಗಿ ಸಮೀಕ್ಷೆಯಲ್ಲಿ ಪಾಲ್ಗೊಂಡಿ ಸೂಕ್ತ ಮಾಹಿತಿ ನೀಡಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿಒ ಪ್ರಭು, ಉಪವಿಭಾಗಧಿಕಾರಿ ಗೌರವಕುಮಾರ್ ಶೆಟ್ಟ, ಮಹಾನಗರ ಪಾಲಿಕೆ ಉಪ ಆಯುಕ್ತ ಗಿರೀಶ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾದ ಕೃಷ್ಣಪ್ಪ, ಶಿಕ್ಷಣ ಇಲಾಖೆಯ ಬಿ.ಒ ಹಾಗೂ ಸರ್ಕಾರಿ ನೌಕರರ ಸಂಘದ ವೈಕೆ ಬಾಲಕೃಷ್ಣ, ಡಾ. ಬಸವರಾಜು. ದಸಂಸದ ನರಸೀಯಪ್ಪ, ಸ್ಲಂ ಜನಾಂದೋಲನದ ಸಂಚಾಲಕರ ಎ.ನರಸಿಂಹಮೂರ್ತಿ, ಸಮುದಾಯದ ಮುಖಂಡರಾದ ನರಸಿಂಹಯ್ಯ, ವಾಲೇಚಂದ್ರಯ್ಯ, ಜಯಮೂರ್ತಿ, ಗಂಗಾಧರ್, ಶಿವಕುಮಾರ್, ರಂಜನ್, ದಲಿತ ಮುಖಂರಾದ ಪಿ.ಎನ್ ರಾಮಯ್ಯ, ರಘು, ಕೊಟ್ಟಶಂಕರ್ ವೈದ್ಯರಾದ ಮುರುಳೀಧರ್ ನೂರಾರು ಯುವಮುಖಂಡರು ಪಾಲ್ಗೊಂಡಿದ್ದರು.
(Visited 1 times, 1 visits today)