ತುಮಕೂರು: ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳ ಸೇವೆಯಲ್ಲಿ ತೊಡಗಿಕೊಂಡಿರುವ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂನ ರಾಷ್ಟಿçÃಯ ಅಧ್ಯಕ್ಷ ಟಿ.ಬಿ.ಶೇಖರ್ ಅವರನ್ನು ಅಭಿನಂದನಾ ಸಮಿತಿ ಬುಧವಾರ ನಗರದಲ್ಲಿ ನಾಗರೀಕ ಸನ್ಮಾನ ನೀಡಿಗೌರವಿಸಿ, ಅವರ ಅನನ್ಯಸೇವೆ ಸ್ಮರಿಸಿತು.
ಡಾ.ಗುಬ್ಬಿವೀರಣ್ಣ ರಂಗಮAದಿರದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಅಟವಿ ಸುಕ್ಷೇತ್ರದ ಅಟವಿ ಶಿವಲಿಂಗ ಸ್ವಾಮೀಜಿ, ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಸಿದ್ಧಗಂಗಾ ಮಠದ ಶಿವಸಿದ್ಧೇಶ್ವರ ಸ್ವಾಮೀಜಿಯವರು ಟಿ.ಬಿ.ಶೇಖರ್‌ಗೆ ಬೆಳ್ಳಿ ಕಿರೀಟ ತೊಡಿಸಿ, ‘ಸತ್ಯಾರ್ಥ ಸೇವಾ’ ಅಭಿದಾನ ನೀಡಿಶೇಖರ್ ಹಾಗೂ ಇವರ ಪತ್ನಿಟಿ.ಎಸ್.ಆಶಾಅವರನ್ನು ಸನ್ಮಾನಿಸಿ ಗೌರವಿಸಿದರು.
ಸಮಾರಂಭ ಉದ್ಘಾಟಿಸಿದ ಸಹಕಾರ ಸಚಿವಕೆ.ಎನ್.ರಾಜಣ್ಣ ಮಾತನಾಡಿ, ಯಾವುದೇ ಪ್ರತಿ ಫಲಾಪೇಕ್ಷೆ ಇಲ್ಲದೆ ಸಮಾಜ ಸೇವಾಕಾರ್ಯ ಮಾಡುತ್ತಿರುವ ಟಿ.ಬಿ.ಶೇಖರ್‌ಅವರುದೇವರಲ್ಲಿ ನಂಬಿಕೆ, ಶ್ರದ್ಧೆಯಿಟ್ಟು ದೇವರು ಮೆಚ್ಚುವಂಥಾ ಕೆಲಸ ಮಾಡುತ್ತಿದ್ದಾರೆ. ನಿಸ್ವಾರ್ಥತೆಯಿಂದ ಸಮಾಜದ ಒಳಿತಿಗಾಗಿ ಶ್ರಮಿಸಿದರೆ ಭಗವಂತ ಶ್ರೇಯಸ್ಸುಕೊಡುತ್ತಾನೆ. ಮನುಷ್ಯರಾಗಿ ಹುಟ್ಟಿದ ಮೇಲೆ ಈ ಸಮಾಜಕ್ಕೆಏನನ್ನಾದರೂ ಮಾಡಬೇಕು, ನಮ್ಮ ಹೆಜ್ಜೆಗುರುತು ಉಳಿಸಿ ಹೋಗಬೇಕುಎಂದು ಹೇಳಿದರು.
ಟಿ.ಬಿ.ಶೇಖರ್‌ಅವರಿಗೆ ಸಮಾಜಸೇವೆತಮ್ಮತಂದೆಯಿAದ ಬಂದ ಬಳುವಳಿ.ತಂದೆಯನ್ನು ಮೀರಿಸಿ ಸೇವಾಕಾರ್ಯದಲ್ಲಿತೊಡಗಿಕೊಂಡಿದ್ದಾರೆ. ಸಾಮಾಜಿಕ, ಧಾರ್ಮಿಕಕಾರ್ಯದಲ್ಲಿತಮ್ಮನ್ನು ಅರ್ಪಿಸಿಕೊಂಡು ಸ್ವಾರ್ಥವಿಲ್ಲದೆಸಲ್ಲಿಸುತ್ತಿರುವಇವರ ಸೇವೆ ಎಲ್ಲರಿಗೂ ಮಾದರಿ ಆಗಬೇಕು. ಶಬರಿಮಲೆಅಯ್ಯಪ್ಪ ಸೇವಾ ಸಮಾಜಂರಾಷ್ಟಿçÃಯಅಧ್ಯಕ್ಷರಾಗಿರುವುದುತುಮಕೂರಿಗೂ ಹೆಮ್ಮೆ. ಇವರ ಸಜ್ಜನ ನಡವಳಿಕೆ, ಸರಳ ಜೀವನ ಶೈಲಿಯಿಂದಾಗಿಎಲ್ಲಾಜಾತಿಯವರ ಪ್ರೀತಿ ವಿಶ್ವಾಸ ಗಳಿಸಿದ್ದಾರೆ ಎಂದುಕೆ.ಎನ್.ರಾಜಣ್ಣ ಹೇಳಿದರು.
ಅಟವಿ ಶಿವಲಿಂಗ ಸ್ವಾಮೀಜಿಮಾತನಾಡಿ, ತನ್ನ ಹಿತಕ್ಕಾಗಿ ಕೆಲಸ ಮಾಡುವವನು ಸಾಮಾನ್ಯ ಮಾನವ, ಕುಟುಂಬದಜೊತೆಗಿದ್ದೂ ಸಮಾಜಕ್ಕೆತಾನು ಅರ್ಪಿಸಿಕೊಳ್ಳುವವನು ವಿಶೇಷ ಮಾನವ. ಟಿ.ಬಿ.ಶೇಖರ್‌ಕೂಡಾ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡು ದೇವಮಾನವರಾಗಿದ್ದಾರೆ. ಜಗತ್ತಿನಲ್ಲಿ ಪರೋಪಕಾರಕ್ಕೆ ವಿಶೇಷ ಮಹತ್ವವಿದೆ. ಪರೋಪಕಾರ ಮಾಡುತ್ತಿರುವಗಿಡಮರ, ನದಿ, ಗಾಳಿಯಾರಿಂದಲೂ ಪ್ರತಿಫಲ ನಿರೀಕ್ಷಿಸುವುದಿಲ್ಲ, ಹೀಗೆ ಶೇಖರ್‌ಅವರೂನಿಸ್ವಾರ್ಥಸೇವೆ ಮಾಡುತ್ತಿದ್ದಾರೆಎಂದು ಶ್ಲಾಘಿಸಿದರು.
ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿಮಾತನಾಡಿ, ಕೆಲವರದ್ದು ಸೈಲೆನ್ಸ್ ಕೆಲಸ, ಕೆಲವರು ಸೈರನ್ ಹಾಕಿಕೊಂಡು ಕೆಲಸ ಮಾಡಿ ಪ್ರಚಾರ ಪಡೆಯುತ್ತಾರೆ.ಟಿ.ಬಿ.ಶೇಖರ್‌ಅವರು ಸೈಲೆಂಟಾಗಿ ಸಮಾಜ ಸೇವೆಯಲ್ಲಿ ನಿರತರಾಗಿದ್ದಾರೆ.ಇವರನ್ನು ಟಿ.ಬಿ.ಶೇಖರ್‌ಅವರನ್ನುಇನ್ನುಮುಂದೆ‘ಸೇವಾ ಶೇಖರ್’ಎಂದುಕರೆದರೆ ಸೂಕ್ತ ಎಂದರು.
ಬಸವಣ್ಣನವರ ಕಾಲಮಾನಕ್ಕೂ ಈಗಿನ ಕಾಲ ಮಾನದ ಸಾಮಾಜಿಕ ಸಮಸ್ಯೆಗಳಿಗೂ ವ್ಯತ್ಯಾಸವಿದೆ.ಅಂದುಜಾತಿ ವಿಜಾತಿ ಬೇಡಎನ್ನುವ ಹೋರಾಟವಿತ್ತು.ಇಂದುಜಾತಿ, ಉಪಜಾತಿಗಳು ಬೇಕು ಎನ್ನುವ ಕಾಲ ಇದುಎಂದು ಹೇಳಿದರು.
ಸಿದ್ಧಗಂಗಾ ಮಠದ ಶಿವಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ಹತ್ತಾರು ಸಂಘಟನೆಗಳಲ್ಲಿ ಸೇವೆ ಸಲ್ಲಿಸಿಕೊಂಡು ಬರುತ್ತಿರುವ ಟಿ.ಬಿ.ಶೇಖರ್‌ಅವರಔದಾರ್ಯ ಗುಣಗಳು ಅವರಕುಟುಂಬದಿAದ ಬಂದಕೊಡುಗೆಯಾಗಿವೆ. ಸೇವೆ, ತ್ಯಾಗಕ್ಕೆತಮ್ಮನ್ನು ಮುಡುಪಾಗಿಟ್ಟುಕೊಂಡಿತರುವ ಶೇಖರ್ ೧೨ನೇ ಶತಮಾನದ ಶರಣರಕಾಯಕವನ್ನುಆದರ್ಶವಾಗಿಟ್ಟುಕೊಂಡಿದ್ದಾರೆಎAದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಟಿ.ಬಿ.ಶೇಖರ್, ನಾನು ಮಾಡಿರುವ ಸೇವೆಯನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಹೃದಯತುಂಬಿಬAದಿದೆ.ನಾನು ಏನೇ ಸೇವೆ ಮಾಡಿದ್ದರೂಅದಕ್ಕೆ ನನ್ನ ಒಡನಾಡಿಗಳೇ ಕಾರಣ, ಉತ್ತಮರ ಸಂಘದಿAದ ಒಳ್ಳೆಯ ಕೆಲಸ ಸಾಧ್ಯವಾಗಿದೆ. ಹೆಸರು ಪಡೆಯಲು ಕೆಲಸ ಮಾಡಿದರೆ ಮನ್ನಣೆ ಸಿಗುವುದಿಲ್ಲ. ತಾಯಿ ನೀಡಿದ ಪ್ರೇರಣೆ, ಕುಟುಂಬದ ಸಹಕಾರದಿಂದ ನಾನು ಜನರೊಂದಿಗೆ ಸೇರಿ ಕೆಲಸ ಮಾಡಲು ಸಾಧÀ್ಯವಾಯಿತುಎಂದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ಅಧ್ಯಕ್ಷ ಡಾ.ಸಿ.ಸೋಮಶೇಖರ್ ಅಭಿನಂದನಾ ನುಡಿಗಳನ್ನಾಡಿ, ಸಾಮಾಜಿಕ ಸೇವೆಯಚೈತನ್ಯವಾಗಿರುವ ಶೇಖರ್‌ತುಮಕೂರುಜನರ ಮನಸ್ಸಿನಲ್ಲಿ ಉನ್ನತ ಸ್ಥಾನ ಪಡೆದುಕೊಂಡಿದ್ದಾರೆ.ಬೇರೆಯವರಿಗಾಗಿ ಬದುಕುವ ಮೂಲಕ ಜೀವನವನ್ನು ಸಾರ್ಥಕವಾಗಿಸಿಕೊಂಡು ಸಮಾಜದಿಂದಅಭಿನAದಿತರಾಗಿದ್ದಾರೆಎAದರು.
ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಸಿ.ಬಿ.ಸುರೇಶ್‌ಬಾಬು, ಅಭಿನಂದನಾ ಸಮಿತಿಗೌರವಾಧ್ಯಕ್ಷಆರ್.ಎಲ್.ರಮೇಶ್‌ಬಾಬು, ಅಧ್ಯಕ್ಷ ಡಾ.ಎಸ್.ಪರಮೇಶ್, ಕಾರ್ಯಾಧ್ಯಕ್ಷ ಬಿ.ಜಿ.ಕೃಷ್ಣಪ್ಪ,ಪ್ರಧಾನ ಕಾರ್ಯದರ್ಶಿ ಎಸ್.ಎನ್.ಕೃಷ್ಣಯ್ಯ, ಮೀಜೋರಾಂ ಮಾಜಿರಾಜ್ಯಪಾಲ ಕುಮನಂ ರಾಜಶೇಖರ್‌ಜೀ, ಎಸ್.ಎ.ಎಸ್.ಎಸ್.ರಾಷ್ಟಿçÃಯ ಕಾರ್ಯದರ್ಶಿ ಬುಚ್ಚಿರೆಡ್ಡಿ, ಉಪಾಧ್ಯಕ್ಷದೊರೈ ಶಂಕರ್, ಖಜಾಂಚಿ ಪ್ರಕಾಶ್ ಪೈ, ರಾಜ್ಯಅಧ್ಯಕ್ಷಡಾ.ಎನ್.ಜಯರಾಂ, ನಗರ ವೀರಶೈವ ಸಮಾಜ ಸೇವಾ ಸಮಿತಿಅಧ್ಯಕ್ಷ ಎಸ್.ಜಿ.ಚಂದ್ರಮೌಳಿ,ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಮುಖಂಡರಾದ ಹೆಚ್.ಜಿ.ಚಂದ್ರಶೇಖರ್, ಟಿ.ಸಿ.ಓಹಿಲೇಶ್ವರ್, ಎನ್.ಪ್ರದೀಪ್‌ಕುಮಾರ್, ಡಾ.ಗುಬ್ಬಿ ಪ್ರಕಾಶ್, ಆರ್.ಕೃಷ್ಣಯ್ಯ, ಪಿ.ಮೂರ್ತಿ, ನಟರಾಜಶೆಟ್ಟರು,ಡಾ.ಪ್ರಶಾಂತ್, ಜಿ.ಕೆ.ಶ್ರೀನಿವಾಸ್, ಡಾ.ಟಿ.ಆರ್.ಲೀಲಾವತಿ ಮೊದಲಾದವರು ಭಾಗವಹಿಸಿದ್ದರು.ರಾಜ್ಯದ ವಿವಿಧ ಭಾಗಗಳಿಂದ ಆಂಧ್ರ, ತೆಲಂಗಾಣ, ತಮಿಳುನಾಡು, ಕೇರಳದಿಂದ ಆಗಮಿಸಿದ್ದ ಮಿತ್ರರು ಶೇಖರ್‌ಅವರನ್ನು ಅಭಿನಂದಿಸಿದರು.
(Visited 1 times, 1 visits today)