ತುರುವೇಕೆರೆ: ಜಲ ಜೀವನ್ ಮಿಷನ್ ಆಡಿಯಲ್ಲಿ ತಾಲೂ ಕಿನ ದಬ್ಬೇಘಟ್ಟ ಹೋಬಳಿ ತಂಡಗ ಹಾಗೂ ಸೋಪ್ಪನಹಳ್ಳಿ ಗ್ರಾಮಗಳಲ್ಲಿ ಮನೆಮನೆ ಗಂಗಾ ಯೋಜನೆ ಕಾಮಗಾರಿಗಳಿಗೆ ಶಾಸಕ ಎಂ.ಟಿ.ಕೃಷ್ಣಪ್ಪನವರು ಬುಧುವಾರ ಭೂಮಿ ಪೂಜೆ ನೆರವೇರಿಸಿದರು.
ತಾಲೂಕಿನ ದಬ್ಬೇಘಟ್ಟ ಹೋಬಳಿ ತಂಡಗ ಗ್ರಾಮದಲ್ಲಿ ಗ್ರಾಮಾಭಿವೃದ್ದಿ ಹಾಗೂ ಪಂಚಾ ಯತ್‌ರಾಜ್ ವಿಶೇಷ ಯೋಜನೆಯಡಿಯಲ್ಲಿ ಅಂದಾಜು ವೆಚ್ಚ ೮೦ಲಕ್ಷ ಹಾಗೂ ಸೋಪ್ಪನಹಳ್ಳಿ ಗ್ರಾಮದಲ್ಲಿ ಅಂದಾಜು ೪೪.೨೩ ಲಕ್ಷ ವ್ಯಚ್ಚದಲ್ಲಿನ ಕಾಮಗಾರಿಗಳಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು. ದಬ್ಬೇಘಟ್ಟ ಹೋಬಳಿ ಕೋಳಾಲ ಕೆರೆಯ ಕೋಡಿ ಹಳ್ಳಕ್ಕೆ ಹೇಮಾವತಿ ಎಡದಂಡೆ ನಾಲಾ ವಿಭಾಗದಿಂದ ಸುಮಾರು ೪೬.೫೬ ಲಕ್ಷ ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.
ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ ಗ್ರಾಮೀ ಣ ಭಾಗದ ಜನರಿಗೆ ಮನೆಯ ಬಳಿಗೆ ಶುದ್ದ ಕುಡಿಯುವ ನೀರು ಪೂರೈಸಲು ಕೇಂದ್ರ ಸರ್ಕಾರದ ಇದೋಂದು ಮಹತ್ವಾಕಾಂಕ್ಷೆ ಯೋಜನೆಯಾಗಿದೆ. ಗ್ರಾಮೀಣ ಭಾಗದ ಜನರು ಇದರ ಸದೂಪಯೋಗ ಪಡಿಸಿಕೊಳ್ಳಬೇಕು. ಈಗಾಗಲೇ ತಾಲ್ಲೂಕಿನ ೨೫೦ಕ್ಕು ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಲ್ಪಿಸಿಲಾಗಿದೆ. ಉಳಿದ ಕಾಮಗಾರಿ ಅದೋಷ್ಟು ಬೇಗ ಕಾಮಗಾರಿ ಮುಗಿಸಬೇಕೆಂಬುದು ಸರ್ಕಾರದ ಚಿಂತನೆಯಾಗಿದ್ದು ಆ ನಿಟ್ಟಿನಲ್ಲಿ ಕಾಮಗಾರಿ ಕಳಪೆಯಾಗದಂತೆ ಗ್ರಾಮಸ್ಥರು ಎಚ್ಚರ ವಹಿಸಬೇಕೆಂದರಲ್ಲದೆ ಕಾಮಗಾರಿಯ ಗುಣಮಟ್ಟ ಕಾಪಾಡುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ಈ ಸಂದರ್ಬದಲ್ಲಿ ಗ್ರಾಮದ ಮುಖಂಡರಾದ ಚನ್ನಬಸವಯ್ಯ, ಅಶೋಕ್, ಸತೀಶ್, ಸೋಪ್ಪ ನಹಳ್ಳಿ ರಾಜಣ್ಣ, ಹುಲಿಕಲ್‌ಲೋಕೇಶ್, ಮಹೇಶ್, ಬಸವರಾಜು, ಶಿವಣ್ಣ, ಪುನೀತ್, ಸಂತೋಷ್, ಇಂಜಿನಿಯರ್ ಶಿವಕುಮಾರ್, ರವಿಕುಮಾರ್, ಗುತ್ತಿಗೆದಾರರಾದ ತ್ಯಾಗರಾಜು, ಶಿವರಾಂ, ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
(Visited 1 times, 1 visits today)