ಹುಳಿಯಾರು:  ಪಟ್ಟಣ ಪಂಚಾಯ್ತಿಯ ವಾಣಿಜ್ಯ ಮಳಿಗೆಗಳ ಬಾಡಿಗೆ ಸಂಗ್ರಹ ಪುಸ್ತಕ ನಾಪತ್ತೆಯಾಗಿದೆ. ಯಾವ ಮಳಿಗೆಯವರು ಎಷ್ಟು ಬಾಡಿಗೆ ಕಟ್ಟಿದ್ದಾರೆ, ಎಷ್ಟು ಬಾಕಿ ಉಳಿದಿದೆ ಎನ್ನುವ ಯಾವ ನಿಖರ ಮಾಹಿತಿಯೂ ಇಲ್ಲಿ ಲಭ್ಯವಿಲ್ಲ. ಬರೋಬ್ಬರಿ ಐವತ್ತಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳಿಂದ ಮಾಸಿಕ ಲಕ್ಷಾಂತರ ರೂ.ಬಾಡಿಗೆ ಸಂಗ್ರಹವಾಗುವ ಹಣಕಾಸಿನ ವಹಿವಾಟಿನ ಪುಸ್ತಕ ಇಲ್ಲದಿರುವುದು ಅವ್ಯವಹಾರ ನಡೆಯುತ್ತಿರುವ ಅನುಮಾನವನ್ನು ಹುಟ್ಟುಹಾಕಿದೆ.
ಹುಳಿಯಾರು ಪಂಚಾಯ್ತಿಯ ಪ್ರಮುಖ ಆದಾಯ ಮೂಲವೇ ಐವತ್ತಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳು. ಬರೋಬ್ಬರಿ ೪೦ ವರ್ಷಗಳಿಂದ ಈ ಮಳಿಗೆಗಳನ್ನು ವಿವಿಧ ವ್ಯಾಪಾರಕ್ಕೆ ಬಾಡಿಗೆ ಕೊಟ್ಟಿದ್ದಾರೆ. ಈ ಮಳಿಗೆಗಳ ಬಾಡಿಗೆ ಎಷ್ಟು, ಯಾವ ಸಭೆಯಲ್ಲಿ ಬಾಡಿಗೆ ನಿಗದಿ ಮಾಡಲಾಯಿತು. ಯಾವ ಮಾಹೆಯಲ್ಲಿ ಯಾರು ಎಷ್ಟು ಬಾಡಿಗೆ ಕಟ್ಟಿದ್ದಾರೆ. ಎಷ್ಟು ಬಾಡಿಗೆ ಬಾಕಿ ಉಳಿದಿದೆ ಎನ್ನುವ ನಿಖರ ಮಾಹಿತಿಯ ಡಿಸಿಬಿ ಪುಸ್ತಕ ಪಂಚಾಯ್ತಿಯಲ್ಲಿ ನಿರ್ವಹಿಸಬೇಕಿದೆ. ಆದರೆ ಒಬ್ಬೊಬ್ಬರು ಬಿಲ್ ಕಲೆಕ್ಟರ್‌ಗಳು ತಮ್ಮತಮ್ಮ ಅವಧಿಯಲ್ಲಿ ಒಂದೊAದು ಪುಸ್ತಕ ಇಟ್ಟಿದ್ದಾರೆ. ಅದರಲ್ಲಿ ಬಾಡಿಗೆದಾರರು ಬ್ಯಾಂಕ್‌ನಲ್ಲಿ ಕಟ್ಟಿದ ಅಥವಾ ಬಿಲ್ ಕಲೆಕ್ಟರ್ ಬಳಿ ಕಟ್ಟಿದ್ದ ರಸೀಧಿ ಕೊಟ್ಟರೆ ಮಾತ್ರ ಎಂಟ್ರಿ ಮಾಡಿಕೊಂಡಿದ್ದಾರೆ. ಕೊಡದಿದ್ದರೆ ಬಾಡಿಗೆ ಕಟ್ಟಿದ್ದರೂ ಪುಸ್ತಕದಲ್ಲಿ ಎಂಟ್ರಿ ಇಲ್ಲದಾಗಿದೆ. ಇದು ಅನೇಕ ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ.
ಬಿಲ್ ಕಲೆಕ್ಟರ್ ಬಳಿ ಇರುವ ಪುಸ್ತಕದಲ್ಲಿ ಹದಿನೈದಕ್ಕೂ ಹೆಚ್ಚು ಬಾಡಿಗೆದಾರರ ಮಳಿಗೆಗಳ ಬಾಡಿಗೆ ಎಷ್ಟು, ಎಷ್ಟು ಬಾಡಿಗೆ ಹಣ ಕಟ್ಟಿದ್ದಾರೆ, ಎಷ್ಟು ಬಾಕಿ ಉಳಿದಿದೆ ಎನ್ನುವ ಡಿಮ್ಯಾಂಡ್ ಸಹ ಇಲ್ಲ. ಅದೂ ಕಳೆದ ಮರ‍್ನಲ್ಕು ವರ್ಷಗಳ ಹಿಂದಿನಿAದ ಈ ಪುಸ್ತಕ ನಿರ್ವಹಿಸಿದ್ದಾರೆ. ಅದರ ಹಿಂದಿನ ವರ್ಷಗಳ ಯಾವ ಲೆಕ್ಕವೂ ಪಂಚಾಯ್ತಿಯಲ್ಲಿ ಇಲ್ಲದಾಗಿದೆ. ಹಾಗಾದರೆ ಇಲ್ಲಿಯವರೆವಿಗೆ ಯಾವ ಮಳಿಗೆಯವರು ಎಷ್ಟು ಹಣ ಕಟ್ಟಿದ್ದರು. ಬ್ಯಾಂಕ್‌ನಲ್ಲಿ ಕಟ್ಟಿದ್ದಾರೆಯೇ, ಬಿಲ್ ಕಲೆಕ್ಟರ್ ಬಳಿ ಕಟ್ಟಿದ್ದಾರೆಯೇ, ಕಟ್ಟಿರುವ ಆ ಹಣ ಪಂಚಾಯ್ತಿ ಖಾತೆಗೆ ಜಮೆ ಆಗಿದೆಯೇ ಎನ್ನುವ ಪ್ರಶ್ನೆಗಳಿಗೆ ಉತ್ತರಿಸುವವರಾರು..?.
ಪಂಚಾಯ್ತಿಯ ಸಂಪೂರ್ಣ ಹಣಕಾಸಿನ ಆಡಿಟ್ ಅನ್ನು ಪ್ರತಿ ವರ್ಷ ಮಾಡಿಸುತ್ತಾರೆ. ಆದರೆ ಈ ಮಳಿಗೆಗಳ ಬಾಡಿಗೆ ಹಣದ ಆಡಿಟ್ ಮಾಡಿಲ್ಲವೇ, ಮಾಡಿದ್ದರೆ ಯಾರಾರ್ರಿಂದ ಎಷ್ಟೆಷ್ಟು ಬಾಡಿಗೆ ಹಣ ಸಂಗ್ರಹವಾಯ್ತು ಎಂಬ ಮಾಹಿತಿ ಇರಬೇಕು. ಇಲ್ಲವಾದರೆ ಆಡಿಟ್ ಸಹ ಬೋಗಸ್ ಆಗಿರುತ್ತದೆ. ಬಾಡಿಗೆ ಹಣವೇ ಹೀಗಾಗಿರುವಾಗ ಉಳಿದ ಹಣಕಾಸಿನ ನಿರ್ವಹಣೆ ಇನ್ನೇಗೆ ಮಾಡಿದ್ದಾರೋ ತಿಳಿಯದಾಗಿದೆ. ಮೇಲಧಿಕಾರಿಗಳು ಈ ಬಗ್ಗೆ ಸಮಗ್ರ ತನಿಖೆ ಮಾಡುವ ಅಗತ್ಯವಿದೆ.

(Visited 1 times, 1 visits today)