ತುಮಕೂರು: ಗೃಹಿಣಿಯಾಗಿಯೇ, ತನ್ನಕುಟುಂಬವನ್ನುತಿದ್ದಿ, ತೀಡಿ, ಸಮಾಜದಲ್ಲಿಆದರ್ಶ ವ್ಯಕ್ತಿಗಳನ್ನಾಗಿ ರೂಪಿಸುವ ಮೂಲಕ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ, ಭಾರತೀಯಗೃಹಿಣಿಯರಿಗೆ ಮಾದರಿಯಾಗಿದ್ದಾರೆಎಂದುತುಮಕೂರು ತಹಶೀಲ್ದಾರ್ ರಾಜೇಶ್ವರಿಅಭಿಪ್ರಾಯಪಟ್ಟಿದ್ದಾರೆ.
ನಗರದಡಾ.ಗುಬ್ಬಿ ವೀರಣ್ಣಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ,ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾರೆಡ್ಡಿಜನಸಂಘ(ರಿ), ವತಿಯಿಂದ ಆಯೋಜಿಸಿದ್ದ ಹೇಮರೆಡ್ಡಿ ಮಲ್ಲಮ್ಮಜಯಂತಿಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದಅವರು,ಹೇಮರೆಡ್ಡಿ ಮಲ್ಲಮ್ಮ, ವಿಜ್ಞಾನಿಯಾಗಿರಲಿಲ್ಲ, ವೈದ್ಯರಾಗಿರಲಿಲ್ಲ. ರಾಣಿಯಾಗಿರಲಿಲ್ಲ. ಶಿಕ್ಷಕರು ಅಲ್ಲ, ಆದರುಅವರನ್ನು ನಾವು ಇಂದು ಪೂಜ್ಯನೀಯ ಭಾವನೆಯಿಂದ ನೋಡುತ್ತಿದ್ದೇವೆಎಂದರೆ, ಅವರು ಸಂಸಾರಿಕ ಜೀವನದಲ್ಲಿಇದ್ದುಕೊಂಡೇ ಸಂತರರೀತಿ ಬದುಕಿದವರು.ಪಾಮರನಾಗಿದ್ದ ಪತಿಯನ್ನು ಪಂಡಿತನಾಗಿಸಿದ್ದಲ್ಲದೆ,ಲೋಪಪನಾಗಿದ್ದ ಮೈದುನ ವೇಮನನ್ನು ತಪಸ್ವಿಯಾಗಿಸಿದ್ದು ಈಕೆಯದೊಡ್ಡ ಸಾಧನೆಎಂದರು.
ಸಾAಸಾರಿಕಜೀವನದಲ್ಲಿಎಲ್ಲರಿಗೂಅತ್ತೆ, ನಾದಿನಿಯರ ಕಾಟ ಇದ್ದದ್ದೇ, ಆದರೆಅವೆಲ್ಲವನ್ನು ಮೀರಿ, ತನ್ನ ಸಹನೆ, ತಾಳ್ಮೆ, ಪ್ರೀತಿಯಿಂದ ಮಲ್ಲಿಕಾರ್ಜುನನ್ನೇ ಒಲಿಸಿಕೊಂಡ ಮಹಾನ್ ಸಾದ್ವಿ ಹೇಮರೆಡ್ಡಿ ಮಲ್ಲಮ್ಮ.ಜೀವನದಲ್ಲಿ ನಡೆದಅಹಿತಕರಘಟನೆಯನ್ನೇ ನೆಪಮಾಡಿಕೊಂಡುಕೊರಗೆದೆ, ಅದರ ಹೊರಬರಲುಆಧ್ಯಾತ್ಮದ ಮೊರೆ ಹೋಗಿ,ಇಡೀ ಮಹಿಳಾ ಕುಲಕ್ಕೆ ಕಳಸ ಪ್ರಾಯರಾಗಿದ್ದಾರೆ.ಸ್ವಾರ್ಥವಿಲ್ಲದಅವರ ನಡೆಇಡೀಗೃಹಿಣಿಯರಿಗೆ ಮಾದರಿಯಾದುದ್ದುಎಂದು ತಹಶೀಲ್ದಾರ್ ರಾಜೇಶ್ವರಿ ನುಡಿದರು.
ಕಸಾಪ ಜಿಲ್ಲಾಧ್ಯಕ್ಷರಾದ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ,ಅವಿಭಕ್ತಕುಟುಂಬದಓರ್ವ ಸೊಸೆಯಾಗಿ,ತನಗಾದಎಲ್ಲಅವಮಾನ, ಅಪಮಾನಗಳನ್ನು ಸಹಿಸಿಕೊಂಡು, ಸಮಾಜದಎದುರುಕುಟುಂಬದಘನತೆಯನ್ನುಎತ್ತಿ ಹಿಡಿದಕೀರ್ತಿ ಹೇಮರೆಡ್ಡಿ ಮಲ್ಲಮ್ಮಅವರಿಗೆ ಸಲ್ಲುತ್ತದೆಎಂದರು.
ಜಿಲ್ಲಾರೆಡ್ಡಿಜನಸAಘ ಹಾಗೂ ರೆಡ್ಡಿಕ್ರೆಡಿಟ್ ಕೋ ಅಪರೇಟಿವ್ ಸೋಸೈಟಿಯಅಧ್ಯಕ್ಷ ಕೆ.ಶ್ರೀನಿವಾಸರೆಡ್ಡಿ ಮಾತನಾಡಿ,ರೆಡ್ಡಿಜನಸಮುದಾಯಕ್ಕೆ ವೇಮನ ಮತ್ತು ಹೇಮರೆಡ್ಡಿ ಮಲ್ಲಮ್ಮಇಬ್ಬರು ಸಾಂಸ್ಕೃತಿಕ ನಾಯಕರು. ಇವರಜಯಂತಿಯನ್ನು ಪ್ರತಿಯೊಬ್ಬರೆಡ್ಡಿಜನಾಂಗದ ಮನೆಯಲ್ಲಿಯೂ ಹಬ್ಬದರೀತಿಆಚರಿಸಬೇಕಾಗಿದೆ.ಇಡೀ ಸಮುದಾಯದಜನರುತಮ್ಮಕುಟುಂಬ ಸಮೇತರಾಗಿಇಂತಹಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮಒಗ್ಗಟ್ಟು ಪ್ರದರ್ಶಿಸಬೇಕು.ರೆಡ್ಡಿ ಜನಸಂಘ ಸಮುದಾಯದ ಮಕ್ಕಳ ಶೈಕ್ಷಣಿಕ ಏಳಿಗೆಗಾಗಿ ಸುಮಾರು ೩ ಎಕರೆಜಮೀನು ಖರೀದಿಸಿದ, ಬಾಲಕ, ಬಾಲಕಿಯರ ಹಾಸ್ಟಲ್ ನಿರ್ಮಾಣ ಮಾಡಲಾಗುತ್ತಿದೆ. ಎಲ್ಲವೂ ಕೊನೆಗೊಳ್ಳುವ ಹಂತಲ್ಲಿದ್ದು, ಸಮುದಾಯಅರ್ಥಿಕ ಸಹಾಯ ಮಾಡಬೇಕು. ಗ್ರಾಮೀಣ ಭಾಗದ ಬಡ್ಡಿರೆಡ್ಡಿ ಕುಟುಂಬಗಳ ಮಕ್ಕಳ ಓದಿಗೆ ಇದು ಅನುಕೂಲವಾಗಲಿದೆಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಹಿರೇಮಠದ ಶ್ರೀಶ್ರೀಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ,ವೇಮನ, ಹೇಮರೆಡ್ಡಿ ಮಲ್ಲಮ್ಮ, ಬಸವಣ್ಣಇಂತಹದಾರ್ಶಾನಿಕರನ್ನುಒAದುಜಾತಿಗೆ ಸಿಮೀತವಾಗಿಸುವುದು ಸರಿಯಲ್ಲ. ವೇದಿಕೆಯಲ್ಲಿಅವರತತ್ವ ಸಿದ್ದಾಂತಗಳನ್ನು ಹಾಡಿ ಹೊಗಳುವ ಜನರು, ಕಾರ್ಯಕ್ರಮವನ್ನು ಮಾತ್ರಒಂದು ಸಮುದಾಯಕ್ಕೆ ಸಿಮೀತಗೊಳಿಸುವುದು ಸರಿಯಲ್ಲ.ಜಗಜ್ಯೋತಿ ಬಸವಣ್ಣನವರನ್ನುಒಂದುಜಾತಿಗೆ ಮಾತ್ರಎಂಬAತೆ ಬಿಂಬಿಸಿರುವುದು ದುರಂತ.ಇದು ಬದಲಾಗಬೇಕುಎಂದರು.
ರೆಡ್ಡಿಜನಾAಗದವರುಕೊಡುವವರಾಗಬೇಕೆAಬುದು ಹೇಮರೆಡ್ಡಿ ಮಲ್ಲಮ್ಮಅವರಆಶಯವಾಗಿತ್ತು.ಹಾಗಾಗಿ ಮಲ್ಲಿಕಾರ್ಜನ ಪ್ರೇತ್ಯೆಕ್ಷವಾಗಿ ನಿನಗೆ ಏನು ಬೇಕು ಎಂದು ಕೇಳಿದಾಗ ತನಗೆಏನನ್ನು ಕೇಳದೆ ಸಮುದಾಯ ಸೌಖ್ಯವಾಗಿರುವಂತೆಕರುಣಿಸುಎAದು ಕೇಳಿಕೊಂಡಿದ್ದಾರೆ.ಇದಕ್ಕಿAತ ನಿಸ್ವಾರ್ಥ ಬದುಕು ಮತ್ತೊಂದಿಲ್ಲ.ಅAದಿನ ಅನುಭವ ಮಂಟಪದಲ್ಲಿ ಭಿನ್ನಾಭಿಪ್ರಾಯಗಳು ಅಭಿಪ್ರಾಯಗಳಾಗಿ ಬದಲಾಗುತ್ತಿದ್ದವು. ಅಧುನಿಕಅನುಭವ ಮಂಟಪ ಪಾರ್ಲಿಮೆಂಟಿನಲ್ಲಿ ಅಭಿಪ್ರಾಯಗಳಲೇ ಭಿನ್ನಾಭಿಪ್ರಾಯಗಳಾಗಿ ಬದಲಾಗುತ್ತಿರುವುದು ವಿಪರ್ಯಾಸ.ಭಾರತೀಯರುಕೌರ್ಯವನ್ನುಎಂದೂ ಬೆಂಬಲಿಸಿಲ್ಲ.ಹಾಗೆAದ ಮಾತ್ರಕ್ಕೆ ನೆರೆ ಹೊರೆಯ ರಾಷ್ಟçಗಳನ್ನು ಅದನ್ನೇಅಸಹಾಯಕತೆಎಂಬAತೆ ತಿಳಿಯಬಾರದು ಎಂದು ಪೆಹಲ್ಗಾಮ್‌ಘಟನೆಯನ್ನು ಪ್ರಾಸ್ತಾಪಿಸಿದರು.
ಜಿಲ್ಲಾರೆಡ್ಡಿಜನಸಂಘದಿAದ ನಿರ್ಮಿಸುತ್ತಿರುವ ಹಾಸ್ಟಲ್‌ಕಟ್ಟಡದ ನೆರವಿಗಾಗಿ ಸಂಘದ ನಿರ್ದೇಶಕ ಎನ್.ನರಸಿಂಹರೆಡ್ಡಿ ಎರಡು ಲಕ್ಷ ರೂಗಳ ಚೆಕ್ ನೀಡಿದರು.ಜಿಲ್ಲಾರೆಡ್ಡಿಜನಸಂಘದಜAಟಿ ಕಾರ್ಯದರ್ಶಿ ಕೆ.ಜೆ.ರಾಜಗೋಪಾಲರೆಡ್ಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೊ.ಅಶ್ವಥ್ ವಿಶೇಷ ಉಪನ್ಯಾಸ ನೀಡಿದರು.ವೇದಿಕೆಯಲ್ಲಿಕನ್ನಡ ಮತ್ತು ಸಂಸ್ಕೃತಿಇಲಾಖೆಯ ಸುರೇಶಕುಮಾರ್,ಜಿಲ್ಲಾರೆಡ್ಡಿಜನಸಂಘದ ಕಾರ್ಯದರ್ಶಿ ಬಿ.ಆರ್.ಮಧು,ಖಜಾಂಚಿ ಶಿವಾರೆಡ್ಡಿ, ನಿರ್ದೇಶಕರಾದ ಎಸ್,ಕೆ.ಮಲ್ಲಿಕಾರ್ಜುನರೆಡ್ಡಿ, ಎನ್.ನರಸಿಂಹರೆಡ್ಡಿ, ಶ್ರೀಮತಿ.ಕೆ.ನಿರ್ಮಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

(Visited 1 times, 1 visits today)