ತುಮಕೂರು: ಆಡಳಿತ ಮಂಡಳಿಯ ಆರ್ಥಿಕ ಶಿಸ್ತು, ಬದ್ಧತೆ, ಆತ್ಮವಿಶ್ವಾಸದಿಂದ ಸಹಕಾರ ಸಂಸ್ಥೆಯನ್ನು ಸದೃಢವಾಗಿ ಬೆಳೆಸಲು ಸಾಧ್ಯವಿದೆ. ಠೇವಣಿದಾರರು ಸಂಸ್ಥೆಯಲ್ಲಿ ಹೂಡಿರುವ ಹಣವನ್ನು ಲಾಭದಾಯಕವಾಗಿ ಬೆಳೆಸುವ ನಂಬಿಕೆ, ವಿಶ್ವಾಸ ಗಳಿಸಿಕೊಳ್ಳಬೇಕು ಎಂದು ಹಿರೇಮಠದ ಅಧ್ಯಕ್ಷರಾದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಲಹೆ ಮಾಡಿದರು.
ನಗರದಲ್ಲಿ ಶನಿವಾರ ತುಮಕೂರು ಸಿಟಿ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ೧೩ನೇ ವಾರ್ಷಿಕ ಸರ್ವಸದಸ್ಯರ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಸ್ವಾಮೀಜಿ, ವಾರ್ಷಿಕ ಸಭೆಗಳು ಆ ಸಹಕಾರ ಸಂಸ್ಥೆಯ ಹಿಂದಿನ, ಈ ಸಾಲಿನ ಹಾಗೂ ಮುಂದಿನ ವರ್ಷದ ಸಾಧನೆ ನೋಟ, ಆಡಳಿತ ಮಂಡಳಿಯ ಆತ್ಮಾವಲೋಕನಾ ಸಭೆ. ಸದಸ್ಯರ, ಗ್ರಾಹಕರ, ಠೇವಣಿದಾರರ ನಂಬಿಕೆ, ವಿಶ್ವಾಸ ಮೂಡಿಸುವ ಸಾಧನೆ ಆಗಬೇಕು ಎಂದು ಹೇಳಿದರು.
ದುಡ್ಡಿನ ಜೊತೆಗಿನ ಸಂಬAಧ, ವ್ಯವಹಾರ ಸೂಕ್ಷö್ಮವಾದದ್ದು, ಹಣಕಾಸು ಸಂಸ್ಥೆಯನ್ನು ಬಹಳ ಎಚ್ಚರಿಕೆಯಿಂದ, ಜವಾಬ್ದಾರಿಯಿಂದ ಹೆಗಲ ಮೇಲೆ ಹೊತ್ತು ನಿರ್ವಹಿಸಬೇಕಾಗುತ್ತದೆ. ಈ ಸಂಸ್ಥೆ ಅಂತಹ ಜವಾಬ್ದಾಯೊಂದಿಗೆ ಪ್ರಗತಿ ಸಾಧಿಸುತ್ತಿದೆ. ಸಂಸ್ಥೆ ಕಟ್ಟುವಲ್ಲಿ ಎಡವಿದರೆ ಎಲ್ಲರಿಗೂ ನಷ್ಟ, ಹಾನಿ ಅನುಭವುಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಯಾವುದೇ ಸಂಸ್ಥೆ ನಿರ್ವಹಿಸಲು ಆತ್ಮವಿಶ್ವಾಸ, ಶ್ರದ್ಧೆ, ಬದ್ಧತೆ, ಪ್ರಾಮಾಣಿಕತೆ ಅತ್ಯಗತ್ಯ. ಈ ತತ್ವಗಳನ್ನು ಅಳವಡಿಸಿಕೊಳ್ಳದ ಎಷ್ಟೋ ಹಣಕಾಸಿನ ಸಂಸ್ಥೆಗಳು ಶುರುವಾದ ಕೆಲವೇ ದಿನಗಳಲ್ಲಿ ಮುಚ್ಚಿಹೋಗಿವೆ. ಸಹಕಾರ ಸಂಸ್ಥೆಗಳು ಕೇವಲ ಅಲ್ಲಿನ ಸದಸ್ಯರ ಬೆಳವಣಿಗೆಗೆ ಮಾತ್ರ ಸಹಕಾರಿಯಾಗಿರುವುದಿಲ್ಲ, ಸಮಾಜದ ವಿವಿಧ ಆರ್ಥಿಕ ಚಟುವಟಿಕೆಗಳ ಬೆಳವಣಿಗೆಗೂ ಪೂರಕವಾಗಿರುತ್ತವೆ. ಹೀಗಾಗಿ ಸಹಕಾರ ಸಂಸ್ಥೆಯನ್ನು ಜವಾಬ್ದಾರಿಯಿಂದ, ಸಮರ್ಥವಾಗಿ ಕಟ್ಟಿ ಬೆಳೆಸಬೇಕು ಎಂದು ಹಿರೇಮಠ ಶ್ರೀಗಳು ಹೇಳಿದರು.
ಯಾವುದೇ ಅಭಿವೃದ್ಧಿಗೆ ಅದೃಷ್ಟವನ್ನೇ ನಂಬಿ ಕೂರಬಾರದು. ಪ್ರಯತ್ನ ಬಿಡಬಾರದು. ಅದೃಷ್ಟಕ್ಕೆ ಕೈ ಕೊಡುವ ಚಾಳಿಯಿದೆ. ಪ್ರಯತ್ನ ಕೈ ಕೊಡುವುದಿಲ್ಲ. ಪ್ರಯತ್ನ, ಶ್ರಮ, ಆತ್ಮವಿಶ್ವಾಸವಿದ್ದರೆ ಯಾವುದೂ ಕಷ್ಟವಲ್ಲ. ಹಿರೇಮಠವು ತಮ್ಮ ಪ್ರಯತ್ನ ಹಾಗೂ ಭಕ್ತರ ಸಹಕಾರದಿಂದಲೇ ಬೆಳೆದಿದೆ. ಹಿರೇಮಠ ಸನ್ಯಾಸದ ಜೊತೆ ಮೌಲ್ಯವನ್ನು ಉಳಿಸಿಕೊಂಡು ಬೆಳೆದಿದೆ, ಮೌಲ್ಯರಹಿತವಾಗಿ ಬೆಳೆದಿಲ್ಲ ಎಂದರು.
ಸಭೆಯ ಅಧ್ಯಕ್ಷತೆವಹಿಸಿದ್ದ ತುಮಕೂರು ಸಿಟಿ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಕೆ.ಎನ್.ಶಶಿಧರ್ ಮಾತನಾಡಿ, ಸೊಸೈಟಿ ಈ ಸಾಲಿನಲ್ಲಿ ೯೦ ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಸುಮಾರು ೫೦ ಕೋಟಿ ರೂ.ಗಳ ಠೇವಣಿ ಸಂಗ್ರಹಿಸಿದೆ. ನಮ್ಮ ಸಹಕಾರಿಯಲ್ಲಿ ಹಲವಾರು ಠೇವಣಿ ಯೋಜನೆಗಳು ಜಾರಿಯಿದ್ದು, ಹಿರಿಯ ನಾಗರೀಕರಿಗೆ, ಮಾಜಿ ಸೈನಿಕರಿಗೆ, ಸ್ವಾತಂತ್ರö್ಯ ಹೋರಾಟಗಾರರಿಗೆ, ವಿಧವೆಯರಿಗೆ, ವಿಕಲಚೇತನರಿಗೆ ಒಂದು ವರ್ಷ ಮೇಲ್ಪಟ್ಟ ಠೇವಣಾತಿಗಳಿಗೆ ಶೇ. ೦.೫ರಷ್ಟು ಹೆಚ್ಚಿನ ಬಡ್ಡಿ ನೀಡಲಾಗುತ್ತಿದೆ ಎಂದರು.
ವಿವಿಧ ಸಾಲಸೌಲಭ್ಯಗಳ ಜೊತೆಗೆ ಸಹಕಾರಿ ಸದಸ್ಯರಿಗೆ ಮರಣೋತ್ತರ ನಿಧಿ ೧೦ ಸಾವಿರ ರೂ., ಚಿಕಿತ್ಸಾ ವೆಚ್ಚ ಹತ್ತು ಸಾವಿರ ರೂ. ನೀಡಲಾಗುವುದು ಎಂದರು.
ಸAಸ್ಥೆ ಉಪಾಧ್ಯಕ್ಷ ಎಂ.ಎನ್.ಚಿದಾನAದ, ನಿರ್ದೇಶಕರಾದ ಕೆ.ಎನ್.ರಾಮಚಂದ್ರಬಾಬು, ಎಂ.ಎಸ್.ಕಲ್ಲೇಶ್, ರವಿಶಂಕರ್, ಎಸ್.ಬಿ.ಶಿವಬಸಪ್ಪ, ಕೆ.ಎಸ್.ಗಿರೀಶ್, ಜೆ.ಟಿ.ಜಗದೀಶ್, ಕೆ.ಎಸ್.ವಿಕಾಸ್, ಪದ್ಮಾ ಪಾಲನೇತ್ರ, ಜಿ.ಮಾನಸ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಪಿ.ಶಿಲ್ಪ, ವಿವಿಧ ಶಾಖೆಗಳ ವ್ಯವಸ್ಥಾಪಕರಾದ ಕೆ.ಜೆ.ಹರ್ಷಿತ, ಮನೋಜ್‌ಕುಮಾರ್ ಹಾಗೂ ಸದಸ್ಯರು, ಸಿಬ್ಬಂದಿ ಹಾಜರಿದ್ದರು.