ಪಾವಗಡ: ತಾಲೂಕಿನ ವೆಂಕಟಾಪುರ ಗ್ರಾಮ ಪಂಚಾಯತಿಯಲ್ಲಿನ ಅಭಿವೃದ್ಧಿ ಅಧಿಕಾರಿಗಳು ಪಂಚಾಯತಿಗೆ ಬಾರದೆ ಅಭಿವೃದ್ಧಿ ಕಾರ್ಯಗಳು ಕುಂಟಿತಗೊAಡಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ
ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳು ಹಲವಾರು ಮೂಲ ಸೌಲಭ್ಯದಿಂದ ನರಳುತ್ತಿದ್ದು, ಸ್ಥಳದಲ್ಲಿದ್ದು ಯೋಜನೆಯನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತರಬೇಕಾದ ಪಿಡಿಓ ಹಾಗೂ ಸಿಬ್ಬಂದಿಯವರು ಅನಧಿಕೃತವಾಗಿ ಗೈರು ಹಾಜರಾಗುತ್ತಿದ್ದರಿಂದ ಗ್ರಾಮ ಸ್ಥರಿಗೆ ದಿಕ್ಕು ತೋಚದಂತಾಗಿದೆ.
ವೆಂಕಟಾಪುರ ಗ್ರಾಮ ಪಂಚಾಯಿತಿಯಲ್ಲಿ ಕಂಪ್ಯೂ ಟರ್ ಆಪರೇಟರ್ ಬಡ್ತಿ ಪಡೆದು ಬೇರೊಂದು ಪಂಚಾಯಿತಿಗೆ ವರ್ಗಾವಣೆಯಾಗಿದ್ದಾರೆ, ಇಲ್ಲಿಯ ವರೆಗೂ ಕಂಪ್ಯೂಟರ್ ಆಪರೇಟರ್ ಅನ್ನು ನೇಮಿಸಿ ಕೊಂಡಿಲ್ಲ, ಇದರಿಂದಾಗಿ ಇ ಖಾತೆ, ನರೇಗಾ ಸೇರಿದಂತೆ ಹಲವು ಕೆಲಸಗಳನ್ನು ಮಾಡಲು ಸಾಧ್ಯ ವಾಗುತ್ತಿಲ್ಲ, ಇಲ್ಲಿನ ಸದಸ್ಯರ ಹೊಂದಾಣಿಕೆಯ ಕೊರತೆಯಿಂದಾಗಿ ಪಂಚಾಯಿತಿ ಅಬಿವೃದ್ಧಿ ಅಧಿಕಾರಿ ಕೆಲಸ ಮಾಡಲು ಆಗುತ್ತಿಲ್ಲ ಎಂದು ಕಚೇರಿಗೆ ಬರುತ್ತಿಲ್ಲ ಎಂದು ತಿಳಿದು ಬಂದಿದೆ. ಪ್ರಭಾರ ಪಿ.ಡಿ.ಒ ರವರು ವಾರಕ್ಕೊಮ್ಮೆ, ಮೂರು ದಿನಕ್ಕೊಮ್ಮೆ ಬರುತ್ತಿರುವುದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅನುಷ್ಟಾನಗೊಂಡರೆ ಮಾತ್ರ ಅದು ಸಾರ್ವಜನಿಕರಿಗೆ ಮುಟ್ಟುತ್ತದೆ. ಆದರೆ, ಅದನ್ನು ಮುಟ್ಟಿಸುವ ಅಧಿಕಾರಿಗೇ ಕಛೇರಿಗೆ ಬರದಿದ್ದರೆ, ಅದನ್ನು ತಲುಪಿಸುವವರು ಯಾರು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಗಟ್ಟಿಯಾಗಿ ಕೇಳಿ ಬರುತ್ತಿದೆ.
ಪಂಚಾಯಿತಿಯ ಆಂತರಿಕ ಕಲಹದಿಂದ ಹಿಂದೆ ಕಾರ್ಯನಿರ್ವಹಿಸಿದ ಅದಿಕಾರಿ ಬರಬೇಕು ಎಂದು ಸದಸ್ಯರ ಒಂದು ಗುಂಪು ಆಗ್ರಹಿಸಿದ್ದಾರೆ ಇದು ಮಾದ್ಯಮಗಳಲ್ಲಿ ಪ್ರಸಾರ ವಾಗಿತ್ತು, ಆದರೆ ಇಲ್ಲಿಯವರೆಗೂ ಮೇಲಾಧಿಕಾರಿಗಳು ಯಾವ ರೀತಿಯ ಕ್ರಮ ಕೈಗೊಂಡಿಲ್ಲ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಪಂಚಾಯಿತಿ ಅಧ್ಯಕ್ಷರನ್ನು, ಹಿಂದಿನ ಪಿ.ಡಿ.ಒ ರವರನ್ನು ಕರೆಸಿ ಮಾತುಕತೆ ನಡೆಸಿ ಪಂಚಾಯಿತಿ ಅಬಿವೃದ್ಧಿಗೆ ಕ್ರಮ ಕೈಗೊಳ್ಳಬಹುದು ಆದರೆ, ಕಾರ್ಯನಿರ್ವಹಣಾಧಿಕಾರಿಗಳು ಯಾವುದೇ ರೀತಿಯ ಕ್ರಮ ಕೈಗೊಳ್ಳದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಅಭಿವೃದ್ಧಿ ಕಾಮಗಾರಿಗಳು ನಡೆಯದೇ ಸಾರ್ವಜ ನಿಕರು ಪಂಚಾಯಿತಿ ಸದಸ್ಯರು ಪರಿತತಪಿಸುತ್ತಿದ್ದಾರೆ ಎಂದರೆ ತಪ್ಪಾಗಲಾರದು, ಅಭಿವೃದ್ಧಿ ಕಾರ್ಯಗಳಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಪಂಚಾಯಿತಿ ಅಧ್ಯಕ್ಷರ ಸಹಿ ಮುಖ್ಯವಾಗಿ ಬೇಕಾಗುತ್ತದೆ. ಆದರೆ, ಅಧ್ಯಕ್ಷರು ಇದ್ದು, ಪಿಡಿಒ ಇಲ್ಲದ್ದರಿಂದ ಯಾವುದೇ ಕಾಮಗಾರಿಗಳಿಗೆ ಅನುಮೋದನೆ ನೀಡಲು ಹಿನ್ನಡೆಯಾಗುತ್ತಿದೆ.
ಇದರಿಂದ ಪಿಡಿಒ ಇಲ್ಲದ ಗ್ರಾಮ ಪಂಚಾಯಿತಿ ಇದ್ದೂ ಇಲ್ಲದಂತೆ ಆಗಿ ಬೀಗ ಹಾಕುವ ಪರಿಸ್ಥಿತಿ ಬಂದಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ, ವೆಂಕಟಾಪುರ ಗ್ರಾಮ ಪಂಚಾಯಿತಿಗೆ ಕಳೆದ ಕೆಲವು ತಿಂಗಳಿನಿAದ ಖಾಯಂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಇಲ್ಲದೇ ಅವ್ಯವಸ್ಥೆ ಸೃಷ್ಟಿಯಾಗಿದ್ದು, ಕೂಡಲೇ ಖಾಯಂ ಪಿ.ಡಿ.ಒ ರವರನ್ನು ಒದಗಿಸುವಂತೆ ಗ್ರಾ.ಪಂ ಸದಸ್ಯರು, ಸಾರ್ವಜನಿಕರು ತಾಲೂಕು ಪಂಚಾ ಯಿತಿ, ಜಿಲ್ಲಾ ಪಂಚಾಯಿತಿಗೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಿ ದ್ದರು. ಆದರೂ ಇನ್ನೂ ನೇಮಕವಾಗದಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೇತೃತ್ವದಲ್ಲಿ ಆಯಾ ಗ್ರಾಮ, ವಾರ್ಡ್ಗೆ ಸಂಬAಧಿಸಿದAತೆ ಕ್ರಿಯಾ ಯೋಜನೆ ರೂಪಿಸಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. ಆದರೆ, ಅಧಿಕಾರಿಗಳೇ ಇಲ್ಲದಿದ್ದರೆ ಅವುಗಳನ್ನು ಮಾಡುವವರು ಯಾರು ಎನ್ನುವ ಪ್ರಶ್ನೆ ಕಾಡುತ್ತಿದೆ.
ಪ್ರಭಾರಿ ಅಧಿಕಾರ ವಹಿಸಿಕೊಂಡವರೂ ದೊಡ್ಡ ಮೊತ್ತದ ಕಾಮಗಾರಿಗಳಿಗೆ ಅನುಮೋದನೆ ನೀಡುತ್ತಿಲ್ಲ. ಇದರಿಂದ ಗ್ರಾಮಗಳ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ ಎಂದು ಸದಸ್ಯರ ಆರೋಪವಾಗಿದೆ.
ಆದ್ದರಿಂದ ವೆಂಕಟಾಪುರ ಗ್ರಾಮ ಪಂಚಾಯಿತಿಗೆ ಆದಷ್ಟು ಬೇಗ ಕಂಪ್ಯೂಟರ್ ಆಪರೇಟರ್ ಅನ್ನು ಮತ್ತು ಖಾಯಂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ನೇಮಕ ಮಾಡಿ ಪಂಚಾಯಿತಿಯ ಅಬಿವೃದ್ದಿಗೆ ಸಹಕರಿಸಬೇಕೆಂದು ಮೇಲಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

(Visited 1 times, 1 visits today)