ತುಮಕೂರು: ಕಾಶ್ಮೀರದಲ್ಲಿ ನಡೆದ ಪ್ರವಾಸಿಗರ ಹತ್ಯೆಗೆ ಪ್ರತೀಕಾರಾಗಿ ಭಾರತದ ಸೈನ್ಯ ಆಪರೇಷನ್ ಸಿಂಧೂರ ಯಶಸ್ವಿ ಯಾಗಿ ನಡೆಸಿ, ಪಾಕಿಸ್ತಾನದ ಉಗ್ರರನ್ನು ಮತ್ತು ಉಗ್ರರ ನೆಲೆಗಳನ್ನು ನಾಶಪಡಿಸಿ ಮತ್ತು ಪಾಕಿಸ್ಥಾನದ ಸೈನಿಕರನ್ನು ಸಹ ಹಿಮ್ಮೆಟ್ಟಿಸಿ ಭಾರತದ ಸಾರ್ವಭೌಮತೆಯನ್ನು ಯಾವ ವಿದೇಶಿ ಶಕ್ತಿಗಳು ಊಹಿಸಿಲಾಗದಂತೆ ಉತ್ತರವನ್ನು ಸಮರ್ಪಕ ಹೋರಾಟದ ಮೂಲಕ ತೋರಿಸಿಕೊಟ್ಟಿದ್ದಾರೆ.ಇದಕ್ಕಾಗಿ ಭಾರತೀಯ ಸೇನೆಗೆ ಅಭಿನಂದನೆ ಸಲ್ಲಿಸುವುದಾಗಿ ಅಮ್ ಆದ್ಮಿ ಪಾರ್ಟಿಯ ತುಮ ಕೂರು ಜಿಲ್ಲಾಧ್ಯಕ್ಷ ಜಯರಾಮಯ್ಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಅಪರೇಷನ್ ಸಿಂಧೂರ್ ಹೆಸರಿನಲ್ಲಿ ಭಾರತೀಯ ಸೇನೆ ಉಗ್ರರ ನೆಲೆಗಳನ್ನು ದ್ವಂಸಗೊಳಿಸುವ ಮೂಲಕ ಪ್ರತ್ಯುತ್ತರ ನೀಡಿ ಉಗ್ರರ ದಾಳಿಯಲ್ಲಿ ಮಡಿದ ಜನರ ಆತ್ಮಕ್ಕೆ ಶಾಂತಿ ದೊರಕಿಸಿದೆ.ಅಲ್ಲದೆ ಈ ಘಟನೆ ಉಗ್ರವಾದವನ್ನು ಬೆಂಬಲಿಸುವ ಎಲ್ಲರಿಗೂ ಎಚ್ಚರಿಕೆಯ ಗಂಟೆಯಾಗಿದೆ ಎಂದರು.
ನಮ್ಮ ನೆರೆ ರಾಷ್ಟ್ರ ಪಾಕಿಸ್ಥಾನವು ಸದಾ ಕುತಂತ್ರ ಬುದ್ಧಿಯನ್ನು ಅನುಸರಿಸುತ್ತಾ ಬಂದಿದೆ. ಸಾಮಾಜಿಕ ನ್ಯಾಯದ ಚೌಕಟ್ಟಿನಲ್ಲಿ ದೇಶದ ಆಡಳಿತವನ್ನು ನಡೆಸದೆ,ಉಗ್ರವಾದ ಮತ್ತು ಅರಾಜಕತೆಯ ಮೂಲಕ ಜನರ ಜೀವನದ ಜೊತೆ ಆಟವಾಡುತ್ತಾ ಕಾಲಹರಣ ಮಾಡುತ್ತಿದೆ.ಇದು ಸಲ್ಲದು,ಭಾರತದ ಮೃದುತ್ವನ್ನು ಬಂಡವಾಳವನ್ನಾಗಿಸಿಕೊಳ್ಳಲು ಹೊರಟ ಪಾಕಿಸ್ಥಾನ ಮತ್ತು ಪಾಕಿ ಸ್ಥಾನದ ಉಗ್ರರಿಗೆ ಭಾರತದ ಮತ್ತು ಭಾರತದ ಸೈನಿಕರು ಭಾರತದ ಮೃದುತ್ವದ ಉಗ್ರ ರೂಪವನ್ನು ತೋರಿಸಿಕೊಟ್ಟಿದ್ದಾರೆ ಎಂದು ಜಯರಾಮಯ್ಯ ತಿಳಿಸಿದರು.
ಭಾರತದ ಸಾರ್ವಭೌಮತ್ವಕ್ಕೆ ದಕ್ಕೆ ಬರುತ್ತದೆ ಎಂಬ ಸಂದ ರ್ಭದಲ್ಲಿ ನಮ್ಮ ದೇಶದ ಎಲ್ಲಾ ರಾಜಕೀಯ ಪಕ್ಷಗಳಿಗೂ ಸಹ ದೇಶವೇ ಮೊದಲು ಎಂಬ ಅಂಶವನ್ನು ಘಟನೆಯ ನಂತರ ಎಲ್ಲರು ಒಗ್ಗೂಡಿ ಪ್ರತ್ಯುತ್ತರ ನೀಡುವ ಮೂಲಕ ತೋರಿಸಿಕೊ ಟ್ಟಿದ್ದೇವೆ. ಅದೇ ರೀತಿ ಆಮ್ ಆದ್ಮ ಪಾರ್ಟಿಯೂ ರಾಜಕೀಯ ವನ್ನು ಬದಿಗಿಟ್ಟು ದೇಶ ಮತ್ತು ಸೈನಿಕರ ಪರವಾಗಿ ನಿಂತಿದೆ. ಭವ್ಯ ಭಾರತದ ಸೈನಿಕರು ಮತ್ತು ಸೈನಿಕರ ಕುಟುಂಬಗಳನ್ನು ಆಮ್ ಆದ್ಮ ಪಾರ್ಟಿಯು ಆತ್ಮೀಯವಾಗಿ ಅಭಿನಂದಿಸುತ್ತಾ ಸದಾ ಚಿರಋ ಣಿಯಾಗಿರುತ್ತದೆ ಎಂಬ ಸಂದೇಶವನ್ನು ಈ ಮೂಲಕ ತಿಳಿಸಲು ಬಯಸುತ್ತದೆ ಎಂದು ಜಯರಾಮಯ್ಯ ನುಡಿದರು.
ನಮ್ಮ ದೇಶದ ಮೂರು ಪ್ರಮುಖ ಶಕ್ತಿಗಳಾದ ರೈತರು,ಸೈನಿಕರು ಮತ್ತು ಶ್ರಮಿಕ ವರ್ಗ ಸೇರಿದಂತೆ ಎಲ್ಲಾ ಕಾರ್ಮಿಕರು ದೇಶದ ಬೆನ್ನೆಲುಬುಗಳು.ಸೈನಿಕರು ದೇಶದ ಗಡಿ ಕಾಯ್ದರೆ,ರೈತರ ಅನ್ನ ಬೆಳೆದು ನೀಡಿ ದೇಶವನ್ನು ಸಂರಕ್ಷಿಸುತ್ತಾರೆ.ಹಾಗೆಯೇ ಕಾರ್ಮಿಕರು ದುಡಿಯುವ ಮೂಲಕ ದೇಶದ ಅರ್ಥಿಕ ಬೆಳವಣಿಗೆಗೆ ಕಾರಣರಾಗಿದ್ದಾರೆ. ಹಾಗಾಗಿ ಈ ಮೂರು ವರ್ಗಗಳಿಗೆ ಹೆಚ್ಚಿನ ಸೌಲಭ್ಯ ಗಳನ್ನು ರಾಜ್ಯ ಮತ್ತು ಕೇಂದ್ರ ಸರಕಾರಗಳು ನೀಡಬೇಕೆಂದು ಆಮ್ ಆದ್ಮ ಪಾರ್ಟಿಯ ಒತ್ತಾಯವಾಗಿದೆ ಎಂದು ತುಮಕೂರು ಜಿಲ್ಲಾಧ್ಯಕ್ಷರಾದ ಹೆಚ್ ಎ ಜಯರಾಮಯ್ಯ ತಿಳಿಸಿದರು.
ಪೆಹಲ್ಗಾಮ್ ಗ್ರಾಮದಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿಯ ಕುರಿತು ಹಲವು ಪ್ರಶ್ನೆಗಳಿದ್ದರೂ ಅವುಗಳನ್ನು ಕೇಳಲು ಇದು ಸುಸಮಯವಲ್ಲ.ಈಗ ಒಗ್ಗಟ್ಟು ಮುಖ್ಯ.ಜೊತೆಗೆ ಸೈನಿಕರಿಗೆ ನೈತಿಕ ಬೆಂಬಲ ನೀಡುವ ಅಗತ್ಯವಿದೆ. ಹಾಗಾಗಿ ಭಾರತೀಯ ಸೈನಿಕರ ಧೈರ್ಯ ಮತ್ತು ಸಾಹಸವನ್ನು ಅಮ್‌ಆದ್ಮಿ ಪಕ್ಷ ಸದಾ ಸ್ಮರಿಸುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಎನ್ ರಾಮಾಂ ಜನಪ್ಪ, ರೈತ ಘಟಕದ ಬಿ.ಆರ್ ಯೋಗೇಶ್ ಕರಿಗೌಡ, ಮಾಧ್ಯಮ ಉಸ್ತುವಾರಿಗಳಾದ ಪ್ರಭುಸ್ವಾಮಿ,ಮುಂಖAಡರುಗಳಾದ ಪ್ರಕಾಶ್,ತಿಮ್ಮಪ್ಪ,ಹೆಚ್.ಬಿ.ಶಿವಲಿಂಗಯ್ಯ, ನಾಗಭೂಷಣ್, ಕೆಂಪನಹಳ್ಳಿ ಕುಮಾರ್, ಬಸವರಾಜು, ಚರಣ್ ಮತ್ತಿತರರು ಉಪಸ್ಥಿತರಿದ್ದರು.

 

(Visited 1 times, 1 visits today)