ತುಮಕೂರು: ಕಾಶ್ಮೀರದ ಪಹಲ್ಗಾಮ್‌ಗೆ ಪ್ರವಾಸಕ್ಕೆಂದು ತೆರಳಿದ್ದ ೨೬ ಅಮಾಯಕ ಪ್ರವಾಸಿಗರನ್ನ ತಮ್ಮ ಕುಟುಂಬದ ಮುಂದೆಯೇ ಧರ್ಮವನ್ನು ಕೇಳಿ ಅಮಾನುಷವಾಗಿ ಹತ್ಯೆ ಮಾಡಿರುವುದು ಇಡೀ ಮಾನವ ಸಮಾಜವೇ ತಲೆ ತಗ್ಗಿಸುವ ವಿಚಾರವಾಗಿದೆ. ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರ ರಣಹೇಡಿ ಕೃತ್ಯಕ್ಕೆ ಸಾಕ್ಷಿಯಾಗಿದೆ.
ಈ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿರ್ಣಾಮ ಮಾಡುವ ಒಂದೇ ಸಂಕಲ್ಪದೊAದಿಗೆ ಭಾರತದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ನರೇಂದ್ರ ಮೋದೀ ನೇತೃತ್ವದ ಕೇಂದ್ರ ಸರ್ಕಾರ ಪಾಕಿಸ್ತಾನದ ವಿರುದ್ಧ ಹಲವಾರು ರಾಜತಾಂತ್ರಿಕ ನಿರ್ಧಾರಗಳನ್ನು ಕೈಗೊಂಡು ಭಯೋತ್ಪಾದಕರ ಹುಟ್ಟಡಗಿಸುವ ಕ್ರಮ ಕೈಗೊಂಡಿತು.
ನಮ್ಮ ದೇಶದ ಹೆಮ್ಮೆಯ ಸೈನಿಕರು ನಮ್ಮ ಮಾತೆಯರ, ಸಹೋದರಿಯರ ಸಿಂಧೂರವನ್ನ ಅಳಿಸಿದ ಪಾಪಿ ಪಾಕಿಸ್ತಾನಿ ಭಯೋತ್ಪಾದಕರಿಗೆ `ಆಪರೇಷನ್ ಸಿಂಧೂರ್’ ಎಂಬ ಘೋಷ ವಾಕ್ಯದೊಂದಿಗೆ ಪಾಕಿಸ್ತಾನದಲ್ಲಿರುವ ೦೯ ಉಗ್ರರ ಅಡಗು ತಾಣಗಳ ಮೇಲೆ ದಾಳಿ ನಡೆಸಿ ೧೦೦ಕ್ಕೂ ಹೆಚ್ಚು ಉಗ್ರರನ್ನ ಸಂಹರಿಸಿ, ಪಾಕಿಸ್ತಾನದ ವಾಯು ನೆಲೆಗಳನ್ನು ದ್ವಂಸ ಮಾಡುವುದರ ಮೂಲಕ ಭಯೋತ್ಪಾದಕರಿಗೆ ಹಾಗೂ ಭಯೋತ್ಪಾದನೆಯನ್ನು ಬೆಂಬಲಿಸುವವರಿಗೆ ಉಳಿಗಾಲವಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಭಾರತದ ಹೆಮ್ಮೆಯ ಸೇನೆಯು ನೇರವಾಗಿ ಇಡೀ ವಿಶ್ವಕ್ಕೆ ತೋರಿಸುವ ಮೂಲಕ ತನ್ನ ಶಕ್ತಿ ಸಾಮಾಥ್ರ÷್ಯವನ್ನು ಅನಾವರಣಗೊಳಿಸಿದೆ.
ಪಾಕಿಸ್ಥಾನದ ಮೇಲಿನ ಪ್ರತೀಕಾರದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಪರಾಕ್ರಮದಿಂದ ಪಾಕಿಸ್ಥಾನಕ್ಕೆ ತಕ್ಕ ಪಾಠ ಕಲಿಸಿದ ಭಾರತೀಯ ಸೈನ್ಯದೊಂದಿಗೆ ದೇಶದ ಜನತೆ ಗರ್ವದಿಂದ ಎದೆ ಉಬ್ಬಿಸುವಂತೆ ಮಾಡಿದೆ. ವೈವಿಧ್ಯಮಯ ಭಾಷೆ, ಸಂಸ್ಕೃತಿ, ಆಚಾರ ವಿಚಾರ ಎಲ್ಲವನ್ನು ಹೊಂದಿದ್ದರೂ ಐಕ್ಯತೆಯಿಂದ ಭಾರತದ ಸಾರ್ವಭೌಮತ್ವವನ್ನ ಇಡಿ ಪ್ರಪಂಚವೇ ಕೊಂಡಾಡುವ ರೀತಿಯಲ್ಲಿ ಭಾರತದ ನಾಗರೀಕರು ಜೀವಿಸಿದ್ದಾರೆ. ಸರ್ವೇಜನ ಸುಖಿನೋಭವಂತು ಎಂಬ ಧ್ಯೇಯವನ್ನ ಪಾಲಿಸುತ್ತಾ ಬಂದಿರುವ ಭಾರತ ದೇಶ ಕೊರೋನ ಸಂದರ್ಭದಲ್ಲಿ ಇದನ್ನ ಸಾಬೀತುಪಡಿಸಿತು. ವಿಶ್ವ ಶಾಂತಿಯನ್ನು ಬಯಸುವ ಭಾರತ ದೇಶ ತನ್ನ ಸಹನೆಗೆ ಪೆಟ್ಟು ಬಿದ್ದ ಸಂದರ್ಬದಲ್ಲಿ ತನ್ನ ಶೌರ್ಯವನ್ನು ಸಹ ಪ್ರದರ್ಶಿಸಿದೆ. ಒಟ್ಟಾರೆಯಾಗಿ ಭಯೋತ್ಪಾದನೆಯ ವಿರುದ್ಧ ಹೋರಾಟ ಹಾಗೂ ರಾಷ್ಟç ರಕ್ಷಣೆಯ ವಿಚಾರದಲ್ಲಿ ದೇಶದ ಎಲ್ಲ ನಾಗರೀಕರು ಬೇಷರತ್ತಾಗಿ ಸೈನ್ಯದೊಂದಿಗೆ ನಿಲ್ಲುತ್ತದೆ.
ಪಾಕಿಸ್ಥಾನದ ಮೇಲಿನ ಪ್ರತೀಕಾರದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಪರಾಕ್ರಮದಿಂದ ಪಾಕಿಸ್ಥಾನಕ್ಕೆ ತಕ್ಕ ಪಾಠ ಕಲಿಸಿದ ಭಾರತೀಯ ಸೈನ್ಯದೊಂದಿಗೆ, ರಾಷ್ಟç ರಕ್ಷಣೆಗಾಗಿ ನಾವೆಲ್ಲರೂ ಜೊತೆಯಾಗಬೇಕಾದ ಸಮಯವಿದು. ಈ ನಿಟ್ಟಿನಲ್ಲಿ ರಾಷ್ಟಿçÃಯ ರಕ್ಷಣೆಗಾಗಿ ದೇಶದ ಜನ ತಮ್ಮ ಐಕ್ಯತೆಯನ್ನು ಪ್ರದರ್ಶಿಸುವ ಸಲುವಾಗಿ ತುಮಕೂರಿನಲ್ಲಿ ಎಲ್ಲಾ ನಾಗರೀಕರು ಸೇರಿ ತಿರಂಗ ಯಾತ್ರೆಯನ್ನ ದಿನಾಂಕ:೧೮ ಮೇ ೨೦೨೫ ಭಾನುವಾರ ಬೆಳಿಗ್ಗೆ ೯.೦೦ ಕ್ಕೆ ನಗರದ ಎಸ್.ಐ.ಟಿ ಕಾಲೇಜು ಮುಂಭಾಗದಿAದ-ಗAಗೋತ್ರಿ ರಸ್ತೆ-ಎಸ್.ಎಸ್.ಪುರಂ ಮುಖ್ಯರಸ್ತೆ-ಸರ್ಕಾರಿ ಜೂನಿಯರ್ ಕಾಲೇಜು ಮೈದಾನದವರೆಗೆ ಏರ್ಪಡಿಸಲಾಗಿದೆ. ದೇಶದ ರಕ್ಷಣೆಗಾಗಿ ನಮ್ಮೆಲ್ಲರ ನಡೆ ಎಂಬ ಧ್ಯೇಯದೊಂದಿಗೆ ಈ ಕಾರ್ಯಕ್ರಮವನ್ನ ರೂಪಿಸಲಾಗಿದೆ. ರಾಷ್ಟç ಭಕ್ತಿಯನ್ನ ಅನಾವರಣಗೊಳಿಸುವ ಈ ಒಂದು ಭಾವನಾತ್ಮಕ ಕಾರ್ಯಕ್ರಮಕ್ಕೆ ತುಮಕೂರಿನ ಎಲ್ಲಾ ಕೈಗಾರಿಕೋಧ್ಯಮಿಗಳ ಸಂಘ, ಕಾರ್ಮಿಕರ ಸಂಘಗಳು, ಮಹಿಳಾ ಸಂಘಟನೆಗಳು, ಕನ್ನಡಪರ ಸಂಘಟನೆಗಳ ಒಕ್ಕೂಟಗಳು, ಶಿಕ್ಷಣ ಸಂಸ್ಥೆಗಳು, ಜಿಲ್ಲಾ ವೈದ್ಯರ ಸಂಘ, ಜಿಲ್ಲಾ ವಕೀಲರ ಸಂಘ, ಆಟೋ ಚಾಲಕರ ಸಂಘ, ನಗರದ ಸಹಕಾರಿ ಬ್ಯಾಂಕುಗಳು, ನಿವೃತ್ತ ಸೈನಿಕರ ಸಂಘ, ದಕ್ಷಿಣ ಕನ್ನಡ ಮಿತ್ರ ಬಳಗ, ದಲಿತ ಸಂಘಟನೆಗಳು ಹಾಗೂ ಎಲ್ಲಾ ಜನಾಂಗದ ಮುಖಂಡರುಗಳು ಸಹಕಾರವನ್ನ ಘೋಷಿಸಿದ್ದು, ಈ ಕಾರ್ಯಕ್ರಮದಲ್ಲಿ ವಿವಿಧ ಮಠದ ಮಠಾಧಿಪತಿಗಳು, ಚರ್ಚ್ ಪಾದ್ರಿಗಳು, ಮಸೀದಿಯ ಮೌಲ್ವಿಗಳು, ವಿದ್ಯಾರ್ಥಿಗಳು, ಎನ್.ಸಿ.ಸಿ-ಎನ್.ಎಸ್.ಎಸ್ ಕೆಡೆಟ್‌ಗಳು, ಭಾಗವಹಿಸಲಿದ್ದಾರೆ. ರಾಷ್ಟಿçÃಯತೆ ಮತ್ತು ರಾಷ್ಟçದ ಸಾರ್ವಭೌಮತ್ವ ಹಾಗೂ ನಮ್ಮ ಹೆಮ್ಮೆಯ ಸೈನಿಕರು ಪರಾಕ್ರಮವನ್ನ ಮೇಳೈಸುವ, ಸಹಸ್ರಾರು ತಿರಂಗದೊAದಿಗೆ ನಡೆಯುವ, ಈ ಒಂದು ಅದ್ಭುತ ತಿರಂಗ ಯಾತ್ರೆಯಲ್ಲಿ ತುಮಕೂರಿನ ಎಲ್ಲಾ ನಾಗರೀಕರು ಭಾಗವಹಿಸುವ ಮೂಲಕ ತಮ್ಮ ರಾಷ್ಟç ಭಕ್ತಿಯನ್ನ ಅನಾವರಣಗೊಳಿಸಬೇಕೆಂದು ಈ ಮೂಲಕ ವಿನಂತಿಸಲಾಗಿದೆ.
ಬನ್ನಿ ತಿರಂಗಾ ಯಾತ್ರೆಯ ಮೂಲಕ ರಾಷ್ಟç ರಕ್ಷಣೆಯ ಪಣ ತೊಡೋಣ, ದೇಶ ಕಾಯುವ ಸೈನಿಕರಿಗೆ ನೈತಿಕ ಸ್ಥೆöÊರ್ಯ ತುಂಬೋಣ
ಪತ್ರಿಕಾಗೋಷ್ಠಿಯಲ್ಲಿ ಟಿಸಿಸಿಐನ ನಿರ್ದೇಶಕ ಜಿ. ಆರ್. ಸುರೇಶ್, ಚಂದ್ರಮೌಳಿ, ಸುರೇಶ್ ಆರ್.ಜೆ., ಪಿ. ರಾಮಯ್ಯ, ಶಿವಾಜಿ ಬ್ಯಾಂಕ್ ಸುರೇಶ್, ಡಾ. ಸುರೇಶ್‌ಬಾಬು, ಶಂಕರ್, ಶಿವನಂಜಪ್ಪ, ರಾಮಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.