ಕೊರಟಗೆರೆ: ರಾಜ್ಯ ಸರ್ಕಾರವು ನಡೆಸುತ್ತಿರುವ ಒಳಮೀಸಲಾತಿ ಜಾತಿಗಣತಿ ಸಮೀಕ್ಷೆಯ ಅವಧಿಯನ್ನು ವಿಸ್ತರಿಸುವಂತೆ ಕೊರಟಗೆರೆ ತಾಲ್ಲೂಕು ಛಲವಾದಿ ಮಹಾಸಭಾ ಉಪಾದ್ಯಕ್ಷ ಹನುಮಂತರಾಯಪ್ಪ ಸರ್ಕಾರವನ್ನು ಮನವಿ ಮಾಡಿದ್ದಾರೆ.
ಅವರು ತಾಲ್ಲೂಕಿನ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಈಗಾಗಲೇ ನ್ಯಾಯಮೂರ್ತಿಗಳಾದ ಎಚ್.ಎನ್.ನಾಗ್‌ಮೋಹನ್ದಾಸ್ ರವರ ತೀರ್ಪಿನಂತೆ ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಒಳಮೀಸಲಾತಿ ಜಾತಿಗಣತಿ ಪ್ರಾರಂಭಿಸಿದ್ದು ಛಲವಾದಿ ಮಹಾಸಭಾ ಇದನ್ನು ಸ್ವಾಗತಿಸಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತದೆ, ಆದರೆ ಈ ಜಾತಿಗಣತಿಯಲ್ಲಿ ಹಲವಾರು ತಾಂತ್ರಿಕ ದೋಷಗಳು ಬರುತ್ತಿವೆ ಸರ್ಕಾರವು ಈ ಜನಗಣತಿಗೆ ಇದೇ ಮೇ ತಿಂಗಳ ೧೭ ನೇ ತಾರೀಖು ಅಂತಿಮ ದಿನಾಂಕ ನಿಗದಿಪಡಿಸಿದ್ದು ಇದರಿಂದ ತಾಂತ್ರಿಕ ದೋµದಿಂದ ನಡೆಯುತ್ತಿರುವ ಜಾತಿಗಣತಿ ನಿಖರವಾಗಿ ಮತ್ತು ಗುಣಮಟ್ಟವಾಗಿ ಆಗದ ಕಾರಣ ಸರ್ಕಾರ ಇದರ ಕಾಲಮಿತಿಯನ್ನು ವಿಸ್ತರಿಸಬೇಕು ಎಂದ ಅವರು ಛಲವಾದಿಗಳು ಜಾತಿ ಗಣತಿ ಸಮಯದಲ್ಲಿ ಆದಿದ್ರಾವಿಡ ಎಂದು ಬರೆಸಿ ಬ್ರಾಕೆಟ್ ನಲ್ಲಿ ಛಲವಾದಿ ಎಂದು ಬರೆಸಬೇಕು ಎಂದು ಮನವಿ ಮಾಡಿದರು,
ಜಿಲ್ಲಾ ದಲಿತ ಸೇನೆ ಅದ್ಯಕ್ಷ ಅನಂತ್‌ಕುಮಾರ್ ಮಾತನಾಡಿ ಕೊರಟಗೆರೆ ತಾಲ್ಲೂಕು ಸೇರಿದಂತೆ ಈ ರಾಜ್ಯದಲ್ಲಿ ಒಳಮೀಸಲಾತಿ ಜಾತಿಗಣತಿ ಸರಿಯಾಗಿ ಆಗದಾಗಿದೆ ಒಳಮೀಸಲಾತಿ ಬರುವ ಎಲ್ಲಾ ಜಾತಿಗಳ ಜನರು ಕಡುಬಡವರಾಗಿದ್ದು ದಿನವೂ ಕೂಲಿಗೆ ಊರಿನಿಂದ ಹೊರಗೆ ಹೋಗುತ್ತಾರೆ, ಜಾತಿಗಣತಿಗೆ ಬರುವ ಸಂಪನ್ಮೂಲ ವ್ಯಕ್ತಿಗಳಿಗೆ ಮೊಬೈಲ್ ಸರ್ವರ್‌ಗಳದೆ ತೊಂದರೆಯಾಗಿದೆ ಕೆಲವೊಮ್ಮೆ ದಿನಪೂರ್ತಿ ಸರ್ವಗಳೇ ಬರುವುದಿಲ್ಲ ಇದರಿಂದ ಜಾತಿಗಣತಿಗೆ ಬರುವ ಅಧಿಕಾರಿಗಳು ಮನೆ ಮನೆಗೆ ಹೋಗಲು ಹಾಗದೆ ಸರ್ಕಾರ ನೀಡಿರುವ ಸಮಯದಲ್ಲಿ ಕೆಲಸ ಮುಗಿಸಲು ಆಗದೆ ಜಾತಿ ಗಣತಿ ಪರಿಪೂರ್ಣವಾಗದೆ ಗುಣ ಮಟ್ಟದಲ್ಲಿ ಆಗದೆ ಎಲ್ಲವೂ ಅಪೂರ್ಣವಾಗಲಿದ್ದು ಸರ್ಕಾರವು ಇದರ ಅವಧಿ ದಿನಗಳನ್ನು ವಿಸ್ತಾರ ಮಾಡಬೇಕು ಎಂದರು.
ತಾಲ್ಲೂಕು ಪ್ರದಾನ ಕಾರ್ಯದರ್ಶಿ ಪುಟ್ಟರಾಜು ಮಾತನಾಡಿ ಜಾತಿಗಣತಿ ಸಮಯದಲ್ಲಿ ತಾ ಂತ್ರಿಕ ದೋಷದಿಂದ ಸರ್ಕಾರ ನೀಡಿರುವ ೪೧ ಅಂಶಗಳನ್ನು ದೃಡೀಕರಿಸಲು ಸಾದ್ಯವಾಗುತ್ತಿಲ್ಲ, ಈ ಸಂದರ್ಭದಲ್ಲಿ ಹಲವು ಬಾರಿ ಪರಿಶಿಷ್ಟ ಜಾತಿಯವರ ಅಧಾರ್‌ಕಾರ್ಡ್ ಅಥವಾ ಪಡಿತರಚೀಟಿ ನಮೂದಿಸಿದಾಗ ಜಾತಿ ಕಾಲಂನಲ್ಲಿ ಪರಿಶಿಷ್ಟ ಪಂಗಡದ ಜಾತಿ ನಮೂದು ಆಗುತ್ತಿದೆ ಇದು ಈ ತೊಂದರೆ ಹೆಚ್ಚಾಗುತ್ತಿದೆ ದಯಾಮಾಡಿ ಸರ್ಕಾರವು ಈ ತೊಂದರೆಗಳನ್ನು ನಿವಾರಿಸಿ ತಾಂತ್ರಿಕದೋಷ ಸರಿಪಡಸಿ ಜಾತಿಗಣತಿ ಅವಧಿಯನ್ನು ವಿಸ್ತರಿಸಬೇಕು ಎಂದರು.
ಗೋಷ್ಟಿಯಲ್ಲಿ ಛಲವಾದಿ ಮಹಾಸಭಾದ ಪದಾಧಿಕಾರಿಗಳಾದ ಸೋಮಶೇಖರ್, ಪುಟ್ಟರಾಜು, ಹೊನ್ನೇಶ್, ಹನುಮಂತರಾಜು, ದೇವರಾಜು, ರಮೇಶ್, ನರಸಪ್ಪ, ಶ್ರೀನಿವಾಸ್, ನರಸಿಂಹಮೂರ್ತಿ, ಕಾಂತರಾಜ್, ವಿನಯ್, ಶ್ರೀನಿವಾಸ್‌ಯ್ಯ, ನರಸಿಂಹಮೂರ್ತಿ ಸೇರಿದಂತೆ ಛಲವಾದಿ ಬಂಧುಗಳು ಹಾಜರಿದ್ದರು.