ತುಮಕೂರು: ದಿ:೦೧/೦೨/೨೦೨೫ ರಂದು ಸಂಜೆ ೦೬-೧೫ ಗಂಟೆಗೆ ಪಿರ್ಯಾದಿ ಬಸವರಾಜ ಪೂಜಾರಿರವರು ಠಾಣೆಗೆ ಹಾಜರಾಗಿ, ಪಾವಗಡ ತಾ ತಿರುಮಣಿ ಪೊಲೀಸ್ ಠಾಣಾ ವ್ಯಾಪ್ತಿಯ ವಳ್ಳೂರು ಗ್ರಾಮದ ಅವಧಾ ಸೋಲಾರ್ ಪ್ಲಾಂಟ್‌ನಲ್ಲಿ ದಿ:೨೦/೦೧/೨೦೨೫ ರಂದು ರಾತ್ರಿ ೧೦-೦೦ ಗಂಟೆಯಿAದ ದಿನಾಂಕ:೨೧/೦೧/೨೦೨೫ ರಂದು ಸುಮಾರು ಬೆಳಗ್ಗೆ ೦೭-೦೦ ನಡುವಿನ ಸಮಯದಲ್ಲಿ ಯಾರೋ ಕಳ್ಳರು ಸೋಲಾರ್ ಪ್ಯಾನಲ್‌ಗೆ ಆಳವಡಿಸಿದ್ದ ಸುಮಾರು ೨,೫೦೦ ಮೀಟರ್ ಡಿ.ಸಿ ಕೇಬಲ್ ವೈರ್ (ಇವುಗಳ ಅಂದಾಜು ಮೌಲ್ಯ ೧.೩೦,೦೦೦/- ರೂಗಳು) ಅನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ತಿರುಮಣಿ ಪೊಲೀಸ್ ಠಾಣೆಯಲ್ಲಿ ಮೊ.ನಂ:೦೭/೨೦೨೫, ಕಲಂ:೩೦೩(೨) ಬಿ.ಎನ್.ಎಸ್ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ. ದಿ:೧೭-೦೫-೨೦೨೫ ರಂದು ಈ ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿಗಳಾದ ೧) ಮಲ್ಲೇಶ್ @ ಮಲ್ಲಿಕಾರ್ಜುನ ಕೋಯಪ್ಪ ಬಿನ್ ಸುಂಕಪ್ಪ, ೨೮ ವರ್ಷ, ಈಚಲು ಪೊರಕೆ ವ್ಯಾಪಾರ, ಆಫ್ ಬಂಡೆ. ಪಾವಗಡ ಟೌನ್. ೨) ಬಾಬು @ ಬಾಬುರಾವ್ ಬಿನ್ ಲೇಟ್ ಸುಂಕಪ, ೩೩ ವರ್ಷ, ಈಚಲು ಪೊರಕೆ ವ್ಯಾಪಾರ, ಆಫ್ ಬಂಡೆ, ಪಾವಗಡ ಟೌನ್, ೩) ಮಂಜ ಬಿನ್ ಅಣ್ಣಪ್ಪ, ೨೮ ವರ್ಷ, ಈಚಲು ಪೊರಕೆ ವ್ಯಾಪಾರ, ಆಫ್ ಬಂಡೆ, ಪಾವಗಡ ಟೌನ್. ರವರನ್ನು ದಸ್ತಗಿರಿ ಮಾಡಿ, ಆರೋಪಿತರಿಂದ ಸುಮಾರು ೨ಲಕ್ಷ ರೂಪಾಯಿ ಮೌಲ್ಯದ ಡಿ.ಸಿ ಕೇಬಲ್ ವೈರ್ ಅನ್ನು ಹಾಗೂ ಕೃತ್ಯಕ್ಕೆ ಬಳಸಿರುವ ಎರಡು ಟಿವಿಎಸ್ ಎಕ್ಸ್ ಎಲ್ ಬೈಕ್ ಗಳನ್ನು ವಶಪಡಿಸಿಕೊಂಡಿರುತ್ತೆ. ಪ್ರಕರಣಗಳಲ್ಲಿ ಭಾಗಿಯಾಗಿರುವ ನಾಗರಾಜು @ ನಾಗ ಎಂಬುವವನು ತಲೆಮರೆಸಿಕೊಂಡಿದ್ದು ಪತ್ತೆ ಕಾರ್ಯ ಮುಂದುವರೆದಿರುತ್ತದೆ. ಸದರಿ ಆರೋಪಿಗಳು ವಳ್ಳೂರು ಗ್ರಾಮದ ಅವಧಾ ಸೋಲಾರ್‌ನಲ್ಲಿ ಹಾಗೂ ತಿರುಮಣಿ, ಪಾವಗಡ ಮತ್ತು ವೈ.ಎನ್.ಹೊಸಕೋಟೆ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿನ ತಿರುಮಣಿ, ಕ್ಯಾತಗಾನಕೆರೆ, ಕಡಪಲಕೆರೆ. ನೇರಳೆಕುಂಟೆ, ಚಿಕ್ಕಹಳ್ಳಿ ಗ್ರಾಮದ ಸೋಲಾರ್ ಪ್ಲಾಂಟ್ಳಲ್ಲಿ ಕಳ್ಳತನ ಮಾಡಿರುತ್ತಾರೆ.
ಮಾನ್ಯ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್ ಕೆ.ವಿ. ರವರ ಮಾರ್ಗದರ್ಶನದಲ್ಲಿ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಸಿ.ಗೋಪಾಲ್ ಮತ್ತು ಪುರುಷೋತ್ತಮ ಎಂ.ಎಲ್. ರವರ ನೇತೃತ್ವದಲ್ಲಿ, ಮಧುಗಿರಿ ಉಪವಿಭಾಗದ ಡಿ.ವೈ.ಎಸ್.ಪಿ. ಮಂಜುನಾಥ್ ಜಿ ರವರ ಮಾರ್ಗಸೂಚನೆ ಮೇರೆಗೆ ಪಾವಗಡ ಗ್ರಾಮಾಂತರ ವೃತ್ತದ ಸಿಪಿಐ ಬಿ.ಸಿ.ಗಿರೀಶ್.ತಿರುಮಣಿ ಪೊಲೀಸ್ ಠಾಣೆಯ ಪಿ.ಎಸ್.ಐ. ಲಕ್ಷ್ಮಣ್, ವೈ.ಎನ್.ಹೊಸಕೋಟೆ ಪೊಲೀಸ್ ಠಾಣೆಯ ಪಿ.ಎಸ್.ಐ.ಮಾಳಪ್ಪ ನಾಯ್ಯೋಡಿ ಹಾಗೂ ಸಿಬ್ಬಂದಿಗಳಾದ ಎ.ಎಸ್.ಐ. ಗೋವಿಂದರಾಜು.ಸೋಮಶೇಖರ್, ಶ್ರೀಕಾಂತ್ ನಾಯ್ ರವರು ಆರೋಪಿಗಳು ಮತ್ತು ಮಾಲುಗಳ ಪತ್ತೆಗೆ ಶ್ರಮಿಸಿರುತ್ತಾರೆ. ಸದರಿ ಪತ್ತೆ ತಂಡವನ್ನು ಮಾನ್ಯ ಪೊಲೀಸ್ ಅಧೀಕ್ಷಕರಾದ ಕೆ.ವಿ.ಅಶೋಕ್, ಐ.ಪಿ.ಎಸ್ ರವರು ಪ್ರಶಂಸಿರುತ್ತಾರೆ.
(Visited 1 times, 1 visits today)