ಚಿಕ್ಕನಾಯಕನಹಳ್ಳಿ: ಪುಣ್ಯಕ್ಷೇತ್ರಗಳ ದರ್ಶ ನಕ್ಕೆ ತೆರಳಿ ಅಪಘಾತಕ್ಕೆ ಈಡಾಗಿ ಸಾವನ್ನಪ್ಪಿದ ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಕೆಂಕೆರೆ ನವೀನ್ ಬಿಜೆಪಿ ಮುಖಂಡ ಕೆಂಕೆರೆ ಸಂತೋ ಷ್ ಹಾಗೂ ಲೋಕೇಶ್ ರವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಪಟ್ಟಣದ ನೆಹರು ಸರ್ಕಲ್ ನಲ್ಲಿ ನಡೆದ ಶ್ರದ್ಧಾಂಜಲಿ ಸಂದರ್ಭದಲ್ಲಿ ಅ.ಭಾವೀ.ಲಿಂ.ಮ.ಸಭಾ ತಾಲ್ಲೂಕು ಅಧ್ಯಕ್ಷ ಸಾಸಲು ದಿನೇಶ್ ಮಾತನಾಡಿ ಮೃತ ದುರ್ದೈವಿಗಳು ಸಮಾ ಜಕ್ಕೆ ಅನೇಕ ಸೇವೆಸಲ್ಲಿಸಿದ್ದರು. ಕೆಂಕೆರೆ ನವೀನ್ ರಾಜಕೀಯ ಕ್ಷೇತ್ರದಲ್ಲಿ ಸರಳತೆಯ ನಾಯಕತ್ವವನ್ನ ಹೊಂದಿದ್ದರು. ಸಂತೋಷ್ ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು ಲೋಕೇ ಶ್ ಕೂಡ ಸಮಾಜದ ಸೇವೇಯಲ್ಲಿ ಸಾಧನೆಯ ಕನಸುಗಳನ್ನ ಕಂಡಿದ್ದರು ಅವರ ಅಕಾಲಿಕ ಮರಣದಿಂದ ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಕಂಬನಿ ಮಿಡಿದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ನಿರಂಜನ್ ಮಾತನಾಡಿ ಭಾರತೀಯ ಜನತಾ ಪಾರ್ಟಿ ಯಲ್ಲಿ ಮೃತರು ಪ್ರಾಮಾಣಿಕ ಕಾರ್ಯಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದರು. ಪಕ್ಷ ಸಂಘಟಣೆಯಲ್ಲಿ ನವೀನ್ ಚತುರರಾಗಿದ್ದರು. ಸಂತೋಷ್ ಪಕ್ಷದ ಯುವಮೋರ್ಚರಾಗಿ ಕೆಲಸ ನಿರ್ವಹಿಸಿದ್ದರು ಲೋಕೇಶ್ ಪಕ್ಷದ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದರು ಅವರ ಸಾವಿನಿಂದ ಪಕ್ಷಕ್ಕೆ ಹೊಡೆತ ಬಿದ್ದಂತಾಗಿದೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಇಟ್ಟಿಗೆ ರಂಗಸ್ವಾಮಯ್ಯ ಎಪಿಎಂಸಿ ಮಾಜಿ ಅಧ್ಯಕ್ಷ ಅಗಸರ ಹಳ್ಳಿ ಶಿವರಾಜು ಶರಣ ಸಾಹಿತ್ಯಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಬಸವರಾಜು ಹೊನ್ನೇಬಾಗಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಿಲಿಟರಿ ಶಿವಣ್ಣ ಮಾತನಾಡಿದರು. ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಟಿ.ಶಂಕರಲಿAಗಪ್ಪ, ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾ ನಿರ್ದೇಶಕ ರವಿಶ್ಯಾಮಿಯಾನ ಪುರಸಭಾ ಸದಸ್ಯ ರೇಣುಕ ಪ್ರಸಾದ್ ಶ್ರೀಉಚ್ಛಸಂಗಪ್ಪನವರ ಮಠದ ಸೇವಾಟ್ರಷ್ಟ್ ಅಧ್ಯಕ್ಷ ಸಿ.ಮಲ್ಲಿಕಾರ್ಜುನಸ್ವಾಮಿ ವೀ.ಲಿಂ.ಮ.ಸಭಾ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಗಂಗಾಧರ್ ಬಿಜೆಪಿ ಮುಖಂಡರುಗಳಾದ ಹರಳಿಕೆರೆ ಉಮೇಶ್, ಅಣೇಕಟ್ಟೆ ರಾಕೇಶ್ ಬಾಚಿಹಳ್ಳಿ ರಾಜಶೇಖರ್ ಸೇರಿದಂತೆ ಅನೇಕರು ಮೃತರ ಆತ್ಮಕ್ಕೆ ಶಾಂತಿಕೊರಿ ಮೌನ ಆಚರಿಸಿ ಶ್ರದ್ಧಾಂಜಲಿ ಅರ್ಪಿಸಿದರು.
(Visited 1 times, 1 visits today)