ತುಮಕೂರು: ನಗರದ ಜಿಲ್ಲಾ ಕಾಂಗ್ರೆಸ ಕಚೇರಿಯಲ್ಲಿ ಮಾಜಿ ಪ್ರಧಾನಿ ದಿ.ರಾಜೀವ್‌ಗಾಂಧಿಯವರ ೩೫ನೇ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಭಯೋತ್ಪಾಧನಾ ವಿರೋಧಿ ದಿನವನ್ನಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ ಅವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.
ಕಾಂಗ್ರೆಸ ಕಚೇರಿಯಲ್ಲಿ ಇರಿಸಿದ್ದ ಮಾಜಿ ಪ್ರಧಾನಿ ದಿ.ರಾಜೀವ್‌ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಮಾಜಿ ಪ್ರಧಾನಿಗಳ ಜೀವನ ಮತ್ತು ಸಾಧನೆಯನ್ನು ನೆನಪು ಮಾಡಿಕೊಳ್ಳುವ ಮೂಲಕ ಮಾನವ ಬಾಂಬ್‌ಗೆ ತುತ್ತಾದ ಪಕ್ಷದ ನಾಯಕರಿಗೆ ಮುಖಂಡರುಗಳು ಶ್ರದ್ದಾಂಜಲಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ರಾಮಕೃಷ್ಣ, ದೇಶ ಅಭಿವೃದ್ದಿಯಾಗಬೇಕಾದರೆ, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ಎಂಬ ಸತ್ಯವನ್ನು ಅರಿತು,ವಿಜ್ಞಾನದ ತಳಹದಿಯ ಮೇಲೆ ದೇಶಕಟ್ಟುವ ಮುಂದಾದ ಪ್ರಧಾನಿ ರಾಜೀವಗಾಂಧಿಯವರು, ತಂತ್ರಜ್ಞಾನದ ಒಂದು ಭಾಗವಾದ ಮಾನವ ಬಾಂಬ್‌ಗೆ ಬಲಿಯಾಗಿದ್ದು ವಿಪರ್ಯಾಸ.ಕಂಪ್ಯೂಟರ್,ಟಿ.ವಿ. ಮೊಬೈಲ್‌ನಂತಹ ಅತ್ಯಾಧುನಿಕ ಸಕಲರಣೆಗಳು ಅಭಿವೃದ್ದಿಯ ಭಾಗವಾಗಿ ಬಳಕೆ ಮಾಡುವ ಮೂಲಕ ದೇಶವನ್ನು ಮುಂದುವರೆದ ರಾಷ್ಟçಗಳ ಸಾಲಿಗೆ ನಿಲ್ಲಿಸಿದ್ದು ನಮ್ಮ ರಾಜೀವಗಾಂಧಿಯವರು,ಪೈಲೇಟ್ ಆಗಬೇಕಾದವರು, ಪ್ರಧಾನಿಯಾಗಿ ಅಪಾರ ಜನಮನ್ನಣೆಯ ಜೊತೆಗೆ, ದೇಶದ ಅಭಿವೃದ್ದಿಗೆ ಕೊಡುಗೆ ನೀಡಿದ್ದಾರೆ. ಅವರ ಪರಿಚಯಿಸಿದ ಆಧುನಿಕ ತಂತ್ರಜ್ಞಾನವನ್ನು ಮುಂದಿಟ್ಟುಕೊAಡು ದೇಶಕ್ಕೆ ಕಾಂಗ್ರೆಸ್ ಕೊಡುಗೆ ಏನು ಎಂದು ಪ್ರಶ್ನಿಸುವ ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕು ಎಂದರು.
ಮತ್ತೊರ್ವ ಕೆಪಸಿಸಿ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಅಹಮದ್ ಮಾತನಾಡಿ,ಕಿರಿಯ ವಯಸ್ಸಿನಲ್ಲಿಯೇ ದೇಶದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿ, ದೇಶವನ್ನು ಅಭಿವೃದ್ದಿ ಪಥದತ್ತ ತೆಗೆದುಕೊಂಡು ಹೋಗುವ ಮೂಲಕ ಆ ಹುದ್ದೆಗೆ ಘನತೆಯನ್ನು ತಂದುಕೊಟ್ಟುವರು ರಾಜೀವ್‌ಗಾಂಧಿ,ಭಾರತವಲ್ಲದೆ, ಭಾರತದ ಸುತ್ತಮುತ್ತಲಿನ ರಾಷ್ಟçಗಳಲ್ಲಿಯೂ ಶಾಂತಿ ನೆಲಸಬೇಕು ಎಂಬ ಕನಸು ಕಂಡಿದ್ದ ರಾಜೀವ್‌ಗಾಂಧಿ ಶ್ರೀಲಂಕಾ ದೇಶದಲ್ಲಿ ಎಲ್‌ಟಿಟಿಇ ಉಪಟಳಕ್ಕೆ ಕಡಿವಾಣ ಹಾಕಲು ಶಾಂತಿಪಾಲನಾ ಪಡೆ ಕಳುಹಿಸಿದ್ದನೇ, ದ್ವೇಷವಾಗಿ ಪರಿಗಣಿಸಿದ ಎಲ್.ಟಿ.ಟಿ.ಇ ಯವರು ಚುನಾವಣಾ ಪ್ರಚಾರಕ್ಕೆ ತೆರಳಿದ ಅವರನ್ನು ಮಾನವ ಬಾಂಬ್ ಮೂಲಕ ಕೊಲೆ ಮಾಡಿದರು.ಭಯೋತ್ಪಾಧಕರಿಗೆ ಜಾತಿ, ಮತ, ಧರ್ಮದ ಇಲ್ಲ. ಭಯೋತ್ಪಾಧಕರು ಎಲ್ಲಿಯೇ ಇದ್ದರೂ ಅವರನ್ನು ಕಾನೂನಿಗೆ ಒಪ್ಪಿಸುವ ಮೂಲಕ ದೇಶದ ಐಕ್ಯತೆ ಮತ್ತು ಸಮಗ್ರತೆಯನ್ನು ಎತ್ತಿ ಹಿಡಿಯುವ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಮಾತನಾಡಿ,ಒಂದು ದೇಶದ ಪ್ರಧಾನಿಯ ಮಗನಾಗಿ ಎರ್‌ಫೈಲಟ್ ಆಗುವ ಮೂಲಕ ದೇಶ ಸೇವೆಗೆ ಮುಂದಾಗಿದ್ದ ರಾಜೀವ್‌ಗಾಂಧಿ,ಇAದಿರಾಗಾAಧಿಯ ಹತ್ಯೆಯಿಂದಾಗಿ ಅನಿವಾರ್ಯವಾಗಿ ಪ್ರಧಾನಿ ಪಟ್ಟ ವಹಿಸಿಕೊಂಡರು.ದೇಶ ಹಿಂದೆ ಉಳಿಯಲು ಕಾರಣವೆನೆಂದು ತಿಳಿಯಲು ಹಲವಾರು ದೇಶಗಳಲ್ಲಿ ಪ್ರವಾಸ ಮಾಡಿ, ಅಧ್ಯಯನ ನಡೆಸಿ, ವಿಜ್ಞಾನ, ತಂತ್ರಜ್ಞಾನವನ್ನು ಅಳವಡಿಸಿಕೊಂಡು ಭಾರತಕ್ಕೆ ಭದ್ರ ಬುನಾದಿ ಹಾಕಿದರು.ಅದರ ಫಲವಾಗಿ ಇಂದು ಭಾರತ ವಿಶ್ವದ ಮುಂದುವರೆದ ರಾಷ್ಟçಗಳ ಪಟ್ಟಿಯಲ್ಲಿದೆ.ನಿಮ್ಮ ಜೀವಕ್ಕೆ ಅಪಾಯವಿದೆ ಎಂದು ಹೇಳಿದರೂ ಲಕ್ಕಿಸದೆ ಜನರೊಂದಿಗೆ ಜನರ ಕಲ್ಯಾಣಕ್ಕಾಗಿ ದುಡಿದ ಮಹನೀಯರು ರಾಜೀವ್‌ಗಾಂಧಿ, ಆದರೆ ಇಂದಿನ ಪ್ರಧಾನಿ ಕಳದೆ ಎರಡು ವರ್ಷಗಳಿಂದ ನಮ್ಮದೇ ದೇಶದ ಮಣಿಪುರ ಹೊತ್ತಿ ಉರಿದರು ಅತ್ತ ತಿರುಗಿಯೂ ನೋಡಿಲ್ಲ.ಇದು ಓರ್ವ ಪ್ರಧಾನಿಯ ಅಡಳಿತ ವೈಖರಿಯೇ ಎಂದು ನಾವೆಲ್ಲರೂ ಪ್ರಶ್ನಿಸಬೇಕಿದೆ ಎಂದರು.
ತುಮಕೂರು ಗ್ರಾಮಾಂತರ ಶಾಸಕರಾದ ಸುರೇಶಗೌಡ ಅವರು ಬೆಳಗ್ಗೆ ಸರಕಾರ ಮತ್ತು ಜಿಲ್ಲಾ ಮಂತ್ರಿಯನ್ನು ಟೀಕಿಸುವುದು, ಸರಕಾರದ ನೀಡಿದ ಹಣದಲ್ಲಿಯೇ ಅಭಿವೃದ್ದಿ ಕಾಮಗಾರಿಗಳ ಗುದ್ದಲಿ ಪೂಜೆ ನಡೆಸುವ ಕಾರ್ಯಕ್ರಮ ಮಾಡುತ್ತಿದ್ದಾರೆ. ಇವರಿಗೆ ನೈತಿಕತೆ ಇದೆಯೇ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಪ್ರಶ್ನಿಸಿದರು.
ಕೇಂದ್ರ ಸರಕಾರ ಹಾಗೂ ಕಾಂಗ್ರೆಸ್ ಪಕ್ಷದಿಂದ ಆಚರಿಸುತ್ತಿರುವ ಭಯೋತ್ಪಾಧನಾ ವಿರೋಧಿ ದಿನ ಪ್ರತಿಜ್ಞಾ ವಿಧಿಯನ್ನು ಕೆಪಿಸಿಸಿ ಉಪಾಧ್ಯಕ್ಷರಾದ ಮುರುಳೀಧರ ಹಾಲಪ್ಪ ಬೋಧಿಸಿದರು.ಕಾರ್ಯಕ್ರಮದಲ್ಲಿ ಹಿರಿಯರಾದ ಮಾಜಿ ಶಾಸಕರಾದ ಗಂಗಹನುಮಯ್ಯ,ರೇವಣ್ಣ ಸಿದ್ದಯ್ಯ,ಬಿ.ಜಿ.ಲಿಂಗರಾಜು, ಷಣ್ಮುಗಪ್ಪ,ಪಂಚಾಕ್ಷರಯ್ಯ ಅವರುಗಳು ರಾಜೀವ್‌ಗಾಂಧಿ ಅವರ ಸಾಧನೆಗಳ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಹೇಶ್, ಪಾಲಿಕೆ ಮಾಜಿ ಸದಸ್ಯ ನಯಾಜ್,ಯೂತ್ ಕಾಂಗ್ರೆಸ್‌ನ ಜೆನ್ ಷೇಕ ಫಯಾಜ್, ಸುಜಾತ, ಮುಬೀನಾ ಬಾನು,ಕೆಂಪರಾಜು, ಅನಿಲ್‌ಕುಮಾರ್,ಸೇವಾದಳದ ಶಿವಪ್ರಸಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.