ಹುಳಿಯಾರು: ಗ್ರಾಹಕರು ತಮ್ಮ ವ್ಯವಹಾರಕ್ಕಾಗಿ ಬ್ಯಾಂಕಿಗೆ ಅಲೆದಾಡುವುದನ್ನು ತಪ್ಪಿಸಲು ಕೇಂದ್ರ ಸರ್ಕಾರವು ಡಿಜಿಟಲ್ ಬ್ಯಾಂಕಿAಗ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ ಎಂದು ತುಮಕೂರು ಮಾರ್ಗದರ್ಶಿ ಬ್ಯಾಂಕಿನ ಲೀಡ್ ಡಿಸ್ಟಿçಕ್ಟ್ ಮ್ಯಾನೇಜರ್ ಚೈತನ್ಯ ಕಂಚಿಬೈಲು ತಿಳಿಸಿದರು.
ಹುಳಿಯಾರು ಹೋಬಳಿಯ ಕೋರಗೆರೆ ಗ್ರಾಮ ಪಂಚಾಯಿತಿ, ನಿಸರ್ಗ ಸಂಜೀವಿನಿ ಒಕ್ಕೂಟ ಹಾಗೂ ಚಿಕ್ಕನಾಯಕನಹಳ್ಳಿ ಆರ್ಥಿಕ ಸಾಕ್ಷರ ಕೇಂದ್ರ ಜಂಟಿಯಾಗಿ ಏರ್ಪಡಿಸಿದ್ದ ಜನ ಸುರಕ್ಷಾ ಶಿಬಿರದಲ್ಲಿ ಮಾತನಾಡಿದರು.
ಕೇಂದ್ರ ಸರ್ಕಾರದ ಯೋಜನೆಗಳಾದ ಪ್ರಧಾನಮಂತ್ರಿ ಸುರಕ್ಷಾ ಹಾಗೂ ಜೀವನ ಜ್ಯೋತಿ ಪಸಲ್ ಭೀಮಾ ಯೋಜನೆ ಮುಂತಾ ದವುಗಳನ್ನು ಬ್ಯಾಂಕುಗಳ ಮುಖಾಂ ತರ ನೋಂದಣಿ ಮಾಡಿಸಿ ಅದರ ಪ್ರಯೋಜನ ಪಡೆಯಬೇಕೆಂದು ಕರೆ ನೀಡಿದರು.
ತುಮಕೂರು ಹಿರೇಹಳ್ಳಿಯ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ನಿರ್ದೇ ಶಕರಾದ ವಾದಿರಾಜ್ ಮಾತನಾಡಿ ನಮ್ಮ ಸಂಸ್ಥೆಯು ಮಹಿಳೆಯರಿಗಾಗಿ ಟೈಲರಿಂಗ್, ಎಂಬ್ರಾಯಿಡರಿ, ಫ್ಯಾಶನಿಂಗ್, ಬ್ಯೂಟಿಷಿಯನ್, ಮೊಬೈಲ್ ರಿಪೇರಿ ಮುಂತಾದ ಹಲವಾರು ತರಬೇತಿಗಳನ್ನು ಈಗಾಗಲೇ ನೀಡುತ್ತಿದ್ದು ನಿಮ್ಮ ಊರಿನಲ್ಲೇ ೩೦ ಜನ ಸೇರಿ ತರಬೇತಿ ಪಡೆಯಲು ಇಚ್ಚಿಸಿದರೆ ಇಲ್ಲಿಗೆ ಬಂದು ತರಬೇತಿ ನೀಡುವುದಾಗಿ ತಿಳಿಸಿದರು.
ಕೋರಗೆರೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ನವೀನ್ ಕುಮಾರ್ ಮಾತನಾಡುತ್ತಾ ಗ್ರಾಮೀಣ ಪ್ರದೇಶದ ಮಹಿಳೆಯರು ಇಂತಹ ಕೌಶ ಲ್ಯಾಧರಿತ ತರಬೇತಿಗಳನ್ನು ಪಡೆದು ಸ್ವಾವಲಂಬಿಗಳಾಗಬೇಕೆAದು ಕರೆ ನೀಡಿದರು.
ಸಂಜೀವಿನಿ ಒಕ್ಕೂಟ ಹಾಗೂ ಎನ್‌ಆರ್‌ಎಲ್‌ಎಂ ಪ್ರಾಯೋಜಕರಾದ ಎಚ್.ಕೆ.ರವಿ ಮಾತನಾಡುತ್ತಾ ಒಕ್ಕೂಟದ ಎಲ್ಲಾ ಸಂಘಗಳು ಮನಸ್ಸು ಮಾಡಿದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಕ್ರಾಂತಿಯನ್ನೇ ಉಂಟು ಮಾಡಬಹುದು ಎಂದು ಕರೆ ನೀಡಿದರು.
ಆರ್ಥಿಕ ಸಾಕ್ಷರತಾ ಕೇಂದ್ರದ ಸಲಹೆಗಾರ ರಾದ ಆರ್.ಎಂ.ಕುಮಾರಸ್ವಾಮಿ ಸಾಮಾಜಿಕ ಭದ್ರತಾ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರಲ್ಲದೆ, ತಮ್ಮ ಮೊಬೈಲ್‌ನಲ್ಲಿ ಅಪರಿಚಿತರ ಯಾವುದೇ ಸಂದೇಶಗಳನ್ನು ಉತ್ತರಿಸಬಾರದಾಗಿ ತಿಳಿಸಿದರು.
ಜನ ಸುರಕ್ಷಾ ಶಿಬಿರದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಯತೀಶ್, ಉಪಾಧ್ಯಕ್ಷರಾದ ಚಂದ್ರಶೇಖರ್, ನಿಸರ್ಗ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಆಶಾ, ಕಾರ್ಯದರ್ಶಿಗಳಾದ ಚಂದ್ರಮ್ಮ, ಖಜಾ ಂಚಿ ಜಯಮ್ಮ, ಎಂಬಿಕೆ ಹೇಮಲತಾ, ಎಲ್‌ಸಿಆರ್‌ಪಿಗಳಾದ ಪವಿತ್ರ, ಭವ್ಯ, ಕುಸುಮ, ಕೃಷಿ ಸಖಿ ಶೈಲಜಾ, ಬಿಸಿ ಸಖಿ ಧನಲಕ್ಷಿ÷್ಮ, ಪಶು ಸಖಿ ಶೋಭಾ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಲಿಂಗತ್ವಧಾರಿತ ಮಹಿಳಾ ದೌರ್ಜನ್ಯದ ಬಗ್ಗೆ ಜ್ಞಾಪಕ ಶಕ್ತಿ ಸ್ಪರ್ಧೆಯಲ್ಲಿ ವಿಜೇತರಾದ ಮಂಜುಳಾ, ಜಯಮ್ಮ, ಪೂಜಾ ಹಾಗೂ ಚಂದ್ರಕಲಾ ಅವರಿಗೆ ಬಹುಮಾನವನ್ನು ವಿತರಿಸಲಾಯಿತು. ಸಂಜೀವಿನಿ ಒಕ್ಕೂಟದ ಎಲ್ಲಾ ಪ್ರತಿನಿಧಿ ಗಳು, ಬರಗಿಹಳ್ಳಿ, ಕೋರಗೆರೆ, ಸಾಲಾಪುರ, ಉಪ್ಪಾರಳ್ಳಿ, ಭಟ್ಟರಹಳ್ಳಿ ಮುಂತಾದ ಊರುಗ ಳಿಂದ ಸ್ವಸಹಾಯ ಸಂಘದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರ ಮವನ್ನು ಯಶಸ್ವಿಗೊಳಿಸಿದರು.
(Visited 1 times, 1 visits today)