ಚಿಕ್ಕನಾಯಕನಹಳ್ಳಿ: ನೇರವಾಗಿ ಜನರ ಸಮಸ್ಯೆಗಳನ್ನು ಆಲಿಸಲು ತಾಲ್ಲೂಕಿನ ಆರು ಜಿ.ಪಂ. ವ್ಯಾಪ್ತಿಯಲ್ಲಿ ಹಾಗೂ ಒಂದು ಪಟ್ಟಣ ಪಂಚಾಯಿತಿ, ಒಂದು ಪುರಸಭೆಯ ವ್ಯಾಪ್ತಿಯಲ್ಲಿ ಪ್ರತಿಶುಕ್ರವಾರ ಗ್ರಾಮಪಂಚಾಯಿವಾರು ಪ್ರತಿಗ್ರಾ ಮಗಳಿಗೆ ಬೇಟಿ ನೀಡುವಂತಹ ರಾಜ್ಯದಲ್ಲೇ ವಿಶೇಷವಾದ ಮನೆ ಬಾಗಿಲಿಗೆ ಮನೆಮಗ ಕಾರ್ಯಕ್ರಮವನ್ನು ಆಯೋ ಜಿಸುವ ಮೂಲಕ ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡುವಂತಹ ಕೆಲಸ ಮಾಡಲಾಗುತ್ತಿದೆ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.
ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ನಾಲ್ಕನೇ ವಾರದ ಮನೆ ಬಾಗಿಲಿಗೆ ಮನೆಮಗ ಶಿರ್ಷಿಕೆಯ ಕಾರ್ಯಕ್ರಮದಡಿಯಲ್ಲಿ ಪಟ್ಟಣದ ನಾಲ್ಕು ವಾರ್ಡ್ ಗಳಲ್ಲಿ ಸಭೆ ನಡೆಸಿ ಮಾತನಾಡಿದ ಅವರು ನನ್ನ ಕ್ಷೇತ್ರದಲ್ಲಿ ಈಗಾಗಲೇ ಮನೆಬಾಗಿಲಿಗೆ ಮನೆಮಗ ಎಂಬ ಶಿರ್ಷಿಕೆಯಡಿ ಕಂದಿಕೆರೆ , ಹಂದನಕೆರೆ, ಬುಕ್ಕಾಪಟ್ಟಣ ಹೋಬಳಿಗಳಲ್ಲಿ ಈ ಕಾರ್ಯಕ್ರಮವನ್ನು ಮಾಡಿದ್ದು ಇಂದು ಪಟ್ಟಣದ ನಾಲ್ಕು ವಾರ್ಡಗಳಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ಜನಪ್ರತಿನಿಧಿಗಳು, ಎಲ್ಲಾ ಇಲಾಖೆಯ ಅಧಿಕಾರಿಗಳು ಮನೆಬಾಗಿಲಿಗೆ ಬರುವ ಮೂಲಕ ಅಧಿಕಾರ ಶಾಶ್ವತವಲ್ಲ ನಾವು ಮಾಡುವಂತಹ ಸೇವೆ ಶಾಶ್ವತ ಎಂಬAತೆ ಜನರ ಸಮಸ್ಯೆಗಳ ಅಹವಾಲುಗಳನ್ನು ಸ್ವಿಕರಿಸಿ ಸಾದ್ಯವಾದಷ್ಟು ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳುವ ಉದ್ದೇಶವಾಗಿದೆ ಎಂದ ಅವರು ಪಟ್ಟಣದಲ್ಲಿ ಈಗಾಗಲೇ ಒಳಚರಂಡಿ ಕಾಮ ಗಾರಿ ನಡೆಯುತ್ತಿದ್ದು ಇದರಿಂದ ರಸ್ತೆಗಳು ಹಾಳಾಗಿವೆ ಅವುಗಳನ್ನು ಮೊದಲಿನ ರೀತಿಯಲ್ಲಿ ದುರಸ್ಥಿ ಮಾಡಲು ಒಳಚರಂಡಿ ಕಾಮಗಾರಿಯ ಗುತ್ತಿಗೆದಾರರಿಗೆ ಸೂಚನೆ ನೀಡಿದಅವರು ಮುಂದಿನ ದಿನಗಳಲ್ಲಿ ೭೦ಕೋಟಿ ವೆಚ್ಚದಲ್ಲಿ ಅಮೃತಜಲ್ ಯೋಜನೆಯ ಮೂಲಕ ಮನೆಮನೆಗೆ ಕೊಳಾಯಿ ಹಾಕುವ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಆ ವೇಳೆ ಪುನಃ ರಸ್ತೆಗಳನ್ನುಅಗೆಯ Äವಂತಾಗುತ್ತದೆ ಅದ್ದರಿಂದ ಈ ಕೆಲಸವು ಮುಗಿದ ಮೇಲೆ ಉತ್ತಮವಾದ ಗುಣಮಟ್ಟದ ಸಿಸಿ ರಸ್ತೆಗಳನ್ನು ಮಾಡಲಾಗುವುದು ಇನ್ನು ಪಟ್ಟಣದ ಸ್ವಚ್ಚತೆಯ ಕಡೆ ಹೆಚ್ಚು ಗಂಬೀರವಾಗಿ ಗಮನಹರಿಸುವಂತೆ ಆರೋಗ್ಯ ನಿರೀಕ್ಷಕರಿಗೆ ಸೂಚಿಸಿದ ಅವರು ಬೆಸ್ಕಾಂ ಹಾಗೂ ಅರಣ್ಯ ಇಲಾಖೆಯವರು ಒಟ್ಟಾಗಿ ಒಣಗಿದ ಮರಗಳ ತೆರವು ಹಾಗೂ ವಿದ್ಯುತ್ ತಂತಿಗಳ ಮೇಲೆ ಬಿದ್ದಿರುವಂತಹ ಮರಗಳನ್ನು ತೆರವಿನ ಕಾರ್ಯಚರಣೆಯನ್ನು ಮಾಡುವಂತೆ ಸೂಚಿಸಿದ ಅವರು ನಿವೇಶನಗಳಿಗೆ, ಮನೆಗಳಿಗೆ ಹೋಗಲು ರಸ್ತೆಗಳು ಇಲ್ಲವೆಂಬ ದೂರಿಗೆ ಅಕ್ಕಪಕ್ಕದ ನಿವೇಶನದವರು ದಾರಿಯನ್ನು ಬಿಟ್ಟು ಕೊಟ್ಟರೆ ರಸ್ತೆಯನ್ನು ಮಾಡಿಸುವುದಾಗಿ ತಿಳಿಸಿದ ಅವರು ಕಾಮಗಾರಿಗಳು ಗುಣಮಟ್ಟದಲ್ಲಿರುವಂತೆ ಪುರಸಭಾ ಇಂಜಿನಿಯರ್ ಎಚ್ಚರಿಕೆ ವಹಿಸಬೇಕು ಎಂದರು.
ಸಭೆಯಲ್ಲಿ ತಿಪಟೂರು ಉಪವಿಭಾಗಾಧಿಕಾರಿ ಸಪ್ತಶ್ರೀ ಮಾತನಾಡಿ ಪಟ್ಟಣದಲ್ಲಿ ವಾರ್ಡ್ ಗಳಲ್ಲಿ ಸರಿಯಾಗಿ ಕಸವಿಲೇವಾರಿಯಾಗುತ್ತಿಲ್ಲ ವೆಂದು ಸಾರ್ವಜನಿಕರು ದೂರು ನೀಡುತ್ತಿದ್ದಾರೆ ಕೂಡಲೇ ಈ ಬಗ್ಗೆ ಗಮನಹರಿಸಿ ಪ್ರತಿದಿನ ಪ್ರತಿವಾರ್ಡ್ ನಲ್ಲೂ ಕಸವಿಲೇವಾರಿಯಾಗುವಂತೆ ಎಚ್ಚರಿಕೆ ವಹಿಸಿ ಎಂದರು.
ಉಪಾದ್ಯಕ್ಷ ಸಿ.ಎಂ.ರಾಜಶೇಖರ್ ಮಾತನಾಡಿ ಪಟ್ಟಣ ದಲ್ಲಿ ಖಾಲಿ ನಿವೇಶನಗಳಲ್ಲಿ ಹೆಚ್ಚು ಗಿಡಗಳು ಬೆಳೆದು ಪರಿಸರ ಹಾಳಾಗುತ್ತಿದೆಅದ್ದರಿಂದ ಸಂಬAದ ಪಟ್ಟ ನಿವೇ ಶನದ ಮಾಲೀಕರುಗಳಿಗೆ ನೋಟಿಸ್ ನೀಡಿ ಅವರೆ ಸ್ವಚ್ಚಗೊಳಿಸಿಕೊಳ್ಳಲಿ ಇಲ್ಲದಿದ್ದರೆ ಪುರಸಭೆಯವತಿಯಿಂದ ಸ್ವಚ್ಛಗೊಳಿಸಿ ಮಾಲೀಕರಿಂದ ಅದರ ಖರ್ಚನ್ನು ಭರಿಸಬೇಕು ಈ ರೀತಿಯ ಕ್ರಮವನ್ನು ಕೈಗೊಳ್ಳುವಂತೆ ತಿಳಿಸಿದರು.
ಪಟ್ಟಣದಲ್ಲಿ ೧ನೇ ವಾರ್ಡ್ ನ ದಶವಾತಾರ ದೇವಾಲ ಯದ ಬಳಿ ಸಭೆ ನಡೆಸಿದರೆ ೨ನೇವಾರ್ಡ್ ನಲ್ಲಿ ಜೋಗಿಹಳ್ಳಿ ಆಂಜನೇಯಸ್ವಾಮಿ ದೇವಾಲಯದ ಬಳಿ , ೩ನೇವಾರ್ಡ್ ನಲ್ಲಿ ಆದಿ ಆಂಜನೇಯಸ್ವಾಮಿ ದೇವಾಲಯದ ಆವರಣ ದಲ್ಲಿ, ೪ನೇವಾರ್ಡ್ ನಲ್ಲಿ ಶ್ರೀಮರುಳಸಿದ್ದೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಸಭೆ ನಡೆಸಿದ ಶಾಸಕರಿಗೆ ಒಟ್ಟು ೪೩ ಅಹವಾಲುಗಳು ಬಂದಿದ್ದು ಇವುಗಳಲ್ಲಿ ಹೆಚ್ಚು ಒಳಚರಂಡಿ ಕಾಮಗಾರಿಗೆ ಸಂಬAದಿಸಿದ್ದವಾದರೆ ಉಳಿದವು ಸ್ವಚ್ಛತೆ, ರಸ್ತೆ, ಸಮುದಾಯಭವನ ನಿರ್ಮಾಣ ಮಾಡುವಂತೆ ಬಂದಿರುವ ಅರ್ಜಿಗಳಾಗಿದ್ದವು.
ಈ ಕಾರ್ಯಕ್ರಮದಲ್ಲಿ ಪುರಸಭಾ ಸ್ಥಾಯಿ ಸಮಿತಿ ಅದ್ಯಕ್ಷ ಸಿ.ಡಿ.ಸುರೇಶ್, ಸೇರಿದಂತೆ ಸದಸ್ಯರುಗಳಾದ ಪೂರ್ಣಿಮಾಸುಬ್ರಮಣ್ಯ, ರತ್ನಮ್ಮ ,ಮಂಜುನಾಥಗೌಡ, ಮಲ್ಲೇಶಯ್ಯ, ಮಲ್ಲಿಕಾರ್ಜುನಯ್ಯ, ರೇಣುಕಾಗು ರುಮೂರ್ತಿ, ಲಕ್ಷ್ಮೀಪಾಂಡುರAಗ, ಮಮತಾದೃವಕುಮಾರ್, ಹಾಗೂ ಇತರೆ ಸದಸ್ಯರುಗಳು, ಪುರಸಭಾ ಮುಖ್ಯಾಧಿಕಾರಿ ಮಂಜಮ್ಮ, ಬೆಸ್ಕಾಂ ಎಇಇ ಗವಿರಂಗಯ್ಯ, ಟಿ.ಹೆಚ್.ಯಶ್ವಂತ್, ಮಾಜಿ ಪುರಸಾಭದ್ಯಕ್ಷರುಗಳಾದ ಎಂ.ಎನ್. ಸುರೇಶ್, ರೇಣುಕಸಣ್ಣಮುದ್ದಯ್ಯ, ದೊರೆಮುದ್ದಯ್ಯ, ಸೇರಿದಂತೆ ಇತರರು ಇದ್ದರು.

(Visited 1 times, 1 visits today)