ತುಮಕೂರು: ತುಮಕೂರು ಮಹಾನಗರ ಪಾಲಿಕೆ ಆವರಣ ದಲ್ಲಿ ಇಂದು ನಡೆದ ಉದ್ಯಮಿ ಪರವಾನಿಗೆ ಮೇಳವನ್ನು ಆಯೋ ಜಿಸಲಾಗಿದ್ದು, ಉದ್ದಿಮೆದಾರರಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸದರಿ ಉದ್ಯಮಿ ಪರವಾನಿಗೆ ಮೇಳದಲ್ಲಿ ನಗರದ ಆಸಕ್ತಿ ಉದ್ದಿಮೆದಾರರು ೫೦೦ ಹೆಚ್ಚು ಸಂಖ್ಯೆಯಲ್ಲಿ ಆಗಮಿಸಿ ಉದ್ಯಮಿ ಪರವಾನಿಗೆಗೆ ಇ ವ್ಯಾಪಾರ ಸಾಫ್ಟ್ವೇರ್ ನಲ್ಲಿ ಪಡೆಯಲು ಅವಶ್ಯಕತೆ ಇರುವ ದಾಖಲಾತಿಗಳನ್ನು ಸಲ್ಲಿಸಿದರು
ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ೩೫ ವಾರ್ಡ್ಗಳಿಂದ ಹೋಟೆಲ್,ಚಿನ್ನ,ಬೆಳ್ಳಿ,ದಿನಸಿ ಅಂಗಡಿ, ಮಾಲ್, ಮಾರ್ಟ್,ಹೊಸೈರಿಗಳು,ಕಿರಾಣಿ ಅಂಗಡಿ, ವ್ಯಾಪಾರ ಬಾರ್ ಅಂಡ್ ರೆಸ್ಟೋರೆಂಟ್ ಸೇರಿದಂತೆ ಹೀಗೆ ಸುಮಾರು ೨೦೫ ರೀತಿಯ ಉದ್ಯಮಿಗಳಿದ್ದು,ಇದರ ದರ ಮತ್ತು ಸಂಬAಧಸಿದ ದಾಖಲಾತಿಗಳು ಆನ್ಲೈನ್ ಮೂಲಕ ಹೊಸ ಸಾಪ್ಟ್ವೇರ್ ಇ ವ್ಯಾಪಾರ್ ತಂತ್ರಾAಶದಿAದ ಹಾಗು ವೆಬ್ಸೈಟ್ ವಿಳಾಸ :hಣಣಠಿ://WWW.mಡಿಛಿ.govಣ.iಟಿ ಅರ್ಜಿ ಸಲ್ಲಿಸಬಹುದಾಗಿದೆ.
ಉದ್ದಿಮೆ ಪರವಾನಗಿ ಮೇಳದ ಕುರಿತು ಮಾತನಾಡಿದ ಪಾಲಿಕೆ ಯ ಆಯುಕ್ತರಾದ ಆಶ್ವಿಜ ಅವರು, ತುಮಕೂರು ನಗರದಲ್ಲಿ ೧೩,೦೦೦ ಉದ್ಯಮಗಳಿದ್ದು,ಪ್ರತಿ ವರ್ಷ ಉದ್ಯಮಿ ಪರವಾನಿಗೆ ನವೀಕರಣ ಮಾಡಿಕೊಂಡು ವ್ಯಾಪಾರ ವಹಿವಾಟು ಮಾಡಿಕೊಂಡು ಹೋಗುತ್ತಿದ್ದಾರೆ.ಬಾಕಿ ಇರುವ ಉದ್ಯಮಿಗಳಿಗೆ ಅನುಕೂಲವಾಗಲು ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿಗಳಿಂದ ಈ ವ್ಯಾಪಾರ ಉದ್ದಿಮೆ ಪರವಾನಿಗೆ ಮೇಳವನ್ನು ಆಯೋಜಿಸಲಾಗಿದೆ. ಇಂದು ಬೆಳಗಿಂದ ಸಂಜೆವರೆಗೆ ಸುಮಾರು ೫೦೦ಕ್ಕೂ ಹೆಚ್ಚು ಅರ್ಜಿಗಳನ್ನು ಬಂದಿದ್ದು,ಈ ಅರ್ಜಿಗಳನ್ನು ಸಿಬ್ಬಂದಿ ವರ್ಗದವರು ಇ ವ್ಯಾಪಾರ ತಂತ್ರಾAಶದ ಮೂಲಕ ಪರಿಶೀಲಿಸಿ, ಮುಂದಿನ ೧೫ ದಿನಗಳ ಒಳಗೆ ಪರವಾನಗಿಯನ್ನು ಸಂಬAಧಪಟ್ಟವರಿಗೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
(Visited 1 times, 1 visits today)