
ತುರುವೇಕೆರೆ: ಪಟ್ಟಣಕ್ಕೆ ರೈಲ್ವೆ ಯೋಜನೆ ತರುವಂತಹ ಪ್ರಯತ್ನ ಮಾಡುವುದಾಗಿ ಕೇಂದ್ರ ಸರ್ಕಾರದ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಭರವಸೆ ನೀಡಿದರು.
ಪಟ್ಟಣದ ಚೌದ್ರಿ ಕನ್ವೆಂಷನ್ ಆವರಣದಲ್ಲಿ ಜೆಡಿಎಸ್ ಮುಖಂಡರು, ಅಭಿಮಾನಿಗಳು ಹಾಗೂ ಕಾರ್ಯಕರ್ತರು ಹಮ್ಮಿಕೊಂಡಿದ್ದ ಶಾಸಕ ಎಂ.ಟಿ.ಕೃಷ್ಣಪ್ಪ ೭೫ ನೇ ವರ್ಷದ ಹುಟ್ಟು ಹಬ್ಬ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ ಹಾಗೂ ಉಚಿತ ದಂತ ಚಿಕಿತ್ಸ ಸೌಲಬ್ಯ ಕಾರ್ಯಕ್ರದಲ್ಲಿ ಭಾಗವಹಿಸಿ ಶಾಸಕ ಎಂ.ಟಿ.ಕೃಷ್ಣಪ್ಪರಿಗೆ ಸನ್ಮಾನಿಸಿ ಅಭಿನಂದಿಸಿ ಮಾತನಾಡಿದ ಅವರು ಲೋಕಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ಮತಗಳನ್ನು ನೀಡಿದ ತಾಲೂಕಿನ ಜನತೆಯ ಋಣ ತಿರಿಸಬೇಕು. ಅದರಿಂದ ಪಟ್ಟಣಕ್ಕೆ ರೈಲ್ವೆ ಯೋಜನೆ ತರಲು ಚಂತಿಸಿದ್ದೇನೆ ರೈತರು ಭೂಮಿ ನೀಡಿ ಸಹಕರಿಸಬೇಕು ಎಂದು ಮನವಿ ಮಾಡಿದರು.
ಮಂತ್ರಿ ಭಾಗ್ಯ ಸಿಗಲಿ: ಎಂ.ಟಿ.ಕೃಷ್ಣಪ್ಪ ಬಡವರ ದೀನ ದಲಿತರ, ರೈತರ ಪರವಾಗಿ ಸದಾ ಹೋರಾಟ ಮಾಡುತ್ತಾ ಚಟುವಟಿಕೆಗಳಿಂದ ಇರುವ ನೇರ ನುಢಿಗಾರರು, ಜನಪರವಾದ ಕಾಳಜಿ ಹೊಂದಿದ್ದು ಸುಮಾರು ವರ್ಷಗಳಿಂದ ನನಗೆ ಸ್ನೇಹಿತರು. ಅವರಿಗೆ ೭೫ ವರ್ಷವಾಗಿದೆ ಇನ್ನು ೨೫ ವರ್ಷ ಆಯಸ್ಸು ಇದೆ ಅಷ್ಟೊರೊಳಗೆ ರಾಜಕೀಯದ ಇನ್ನೊಂದು ಮೆಟ್ಟಿಲು ಹತ್ತವ ಕನಸ್ಸು ಈಡೇರಿಲ್ಲ. ಮಂದೆ ಮಂತ್ರಿ ಹಾಗುವಂತ ಕನಸ್ಸು ಬೇಗ ಈಡೇರಲಿ ಎಂದು ಶುಭ ಹಾರೈಸಿದರು.
ಬಿ.ಎಸ್.ವೈ ಹಾಗೂ ಬಿಜೆಪಿ ನಾಯಕರನ್ನು ಮರೆತ ವಿ.ಸೋಮಣ್ಣ: ಹುಟ್ಟು ಹಬ್ಬದ ಸಂಬ್ರಮದಲ್ಲಿ ಶಾಸಕ ಎಂ.ಟಿ.ಕೃಷ್ಣಪ್ಪ ಜೈಕಾರ ಹಾಕುವಂತ ಸಂದರ್ಬದಲ್ಲಿ ಹೆಚ್.ಡಿ.ದೇವೇಗೌಡರು, ಕೇಂದ್ರ ಸಚಿವ ಕುಮಾರ್‌ಸ್ವಾಮಿ ಸೇರಿ ಜೆಡೆಎಸ್ ಮುಖಂಡರಿಗೆ ವೇದಿಕೆಯಲ್ಲಿ ವಿ.ಸೋಮಣ್ಣ ಜೈ ಹಾಕಿದರು ಆದರೆ ಬಿಎಸ್.ವೈ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಸೇರಿದಂತೆ ಬಿಜೆಪಿ ನಾಯಕರಿಗೆ ಜೈಕಾರ ಹಾಕುವುದನ್ನು ಕೇಂದ್ರದ ಮಂತ್ರಿಯಾಗಿಯೂ ಮರೆತರು ಎಂದು ಕೆಲವು ಬಿಜೆಪಿ ಕಾರ್ಯಕರ್ತರು ಅಸಮಾದಾನ ವ್ಯಕ್ತಪಡಿಸಿದರು.
ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ ನನ್ನ ಆಸ್ತಿಯೇ ನನ್ನ ಕ್ಷೇತ್ರದ ಜನರು, ನಾಲ್ಕು ಭಾರಿ ಶಾಸಕರನ್ನು ಆಯ್ಕೆ ಮಾಡಿದ್ದು ಸದಾ ಅವರ ಖುಣ ತೀರಿಸುವ ಕೆಲಸ ಮಾಡುತ್ತಿದ್ದೇನೆ. ಹಣಕ್ಕೆ ಬೆಲೆ ನೀಡದ ಕ್ಷೇತ್ರದ ಜನರು ಸದಾ ಸೇವೆಯನ್ನು ಸ್ಮರಿಸುತ್ತಾರೆ. ಕಳೆದ ವಿಧಾನ ಸಭಾ ಚುನಾವಣೆ ಸಮಯದಲ್ಲಿ ನಂಬಿದ್ದ ವ್ಯಕ್ತಿ ಹಣ ತೆಗೆದುಕೊಂಡು ಪರಾರಿಯಾದ ಸಂದರ್ಬದ ಕೆಲವೇ ಗಂಟೆಗಳಲ್ಲಿ ಮುಖಂಡರು ಕಾರ್ಯಕರ್ತರು ಸ್ವಂತ ಕೈಯಿಂದ ಹಣವನ್ನು ಹಾಕಿ ಗೆಲ್ಲಿಸಿದ್ದಾರೆ ಮರೆಯಲು ಸಾದ್ಯವಿಲ್ಲ. ಚುನಾವಣೆಯಿಂದ ನಿವೃತ್ತಿ ಘೋಷಣೆ ಮಾಡಲು ತಿರ್ಮಾನಿಸಿದ್ದನು ಆದರೆ ಮಾಜಿ ಪ್ರದಾನಿ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಮತ್ತೆ ನಿಲ್ಲಬೇಕು ಎಂದು ಒತ್ತಡ ಮಾಡಿದ್ದಾರೆ. ಸಿನಿಯರ್ ಎಂಎಲ್.ಎ ಮುಂದೆ ಮಂತ್ರಿಯಾಗುವ ಅವಕಾಶ ಓದಗಿ ಬರಲಿದೆ. ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ದಿಸಬೇಕು ಎಂದು ಆದೇಶಿಸಿದ್ಧಾರೆ. ಎಂದು ೨೦೨೮ ವಿದಾನ ಸಭಾ ಚುನಾವಣೆಯ ಎನ್.ಡಿ.ಎ ಅಭ್ಯರ್ಥಿ ನಾನೇ ಎಂಬ ಸುಳಿವು ನೀಡಿದರು.
ಹುಟ್ಟು ಹಬ್ಬದ ಅಂಗವಾಗಿ ಸಾರ್ವಜನಿಕರಿಗಾಗಿ ಆದಿಚುಂಚನಗಿರಿ ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯ, ಚೌದ್ರಿ ಆಸ್ಪತ್ರೆಯಿಂದ ಆಯೋಜಿಸದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ ಹಾಗೂ ಉಚಿತ ದಂತ ಚಿಕಿತ್ಸ ಸೌಲಬ್ಯ ಕಾರ್ಯಕ್ರದಲ್ಲಿ ಜನರು ಭಾಗವಹಿಸಿ ಪ್ರಯೋಜನ ಪಡೆದರು. ಬಂದAತ ಜನರಿಗೆ ಮಾಂಸಹಾರಿ ಹಾಗೂ ಸಸ್ಯಹಾರಿ ಊಟವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಎಂ.ಡಿ.ಲಕ್ಷಿö್ಮÃನಾರಾಯಣ್, ಹೆಚ್.ನಿಂಗಪ್ಪ, ಸೊಗಡುಶಿವಣ್ಣ ಒಕ್ಕಲಿಗರ ಸಂಘದ ನಿರ್ದೇಶಕ ಹನುಮಂತರಾಯಪ್ಪ. ಶಾಸಕ ಎಂ.ಟಿ.ಕೃಷ್ಣಪ್ಪ ಧರ್ಮಪತ್ನಿ ಸರಳಕೃಷ್ಣಪ್ಪ ಮಕ್ಕಳಾದ ವೆಂಕಟೇಶ್, ರಾಜೀವ್, ಡಾ.ಆಶಾಚೌದ್ರಿ, ಅಳಿಯ ಚೌದ್ರಿ ಆಸ್ಪತ್ರೆ ಡಾ.ಚೌದ್ರಿ ನಾಗೇಶ್ ಮುಖಂಡರಾದ ಎಂ.ಡಿ.ಮೂರ್ತಿ, ಕೊಂಡಜ್ಜಿವಿಶ್ವನಾಥ್, ದೊಡ್ಡಾಘಟ್ಟ ಚಂದ್ರೇಶ್, ಎ.ಬಿ.ಜಗದೀಶ್, ಹಾವಾಳ ರಾಮೇಗೌಡ, ಬಡಗರಹಳ್ಳಿತ್ಯಾಗರಾಜು, ಮಾವಿನಕೆರೆ ವಿಜಿಕುಮಾರ್, ಬಿ.ಎಸ್.ದೇವರಾಜು, ಕುಶಾಲ್‌ಕುಮಾರ್, ಒಬ್ಬೇನಾಗಸಂದ್ರಸೋಮಣ್ಣ, ಕಾಂತರಾಜು, ರಂಗನಾಥ್ ಸೇರಿದಂತೆ ಮುಖಂಡರು, ಕಾರ್ಯಕರ್ತರು ಹಾಗೂ ಎಂ.ಟಿ.ಕೆ ಅಭಿಮಾನಿಗಳು ಶುಭ ಹಾರೈಸಿದರು.



