BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಡಯಾಬಿಟಿಕ್ ಪುಟ್ ಕಾಯಿಲೆಯನ್ನು ಆರಂಭದಲ್ಲೇ ಗುರುತಿಸಿ
  • ಅಸಹಾಯಕ ಮಹಿಳೆಯನ್ನು ದತ್ತು ಪಡೆದ ಇಕ್ಬಾಲ್ ಅಹಮದ್
  • ಬದಲಾವಣೆ ಅಗತ್ಯ ಎಂಬ ಹೆಸರಿನಲ್ಲಿ ರಾಜಕೀಯ ಅಭಿಯಾನ
  • ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಜಾಗೃತಿ ಕಾರ್ಯಕ್ರಮ
  • ಮಕ್ಕಳು ಕಲೆ ಕಲಿತು ಭವಿಷ್ಯದ ಪ್ರತಿಭೆಗಳಾಗಿ: ಈಶ್ವರ್ ಕು.ಮಿರ್ಜಿ
  • ರೈತರ ಬೃಹತ್ ಪಾದಯಾತ್ರೆಗೆ ಚಾಲನೆ
  • ಬೈಕ್ ಅಪಘಾತಕ್ಕೆ ವಿದ್ಯಾರ್ಥಿ ಬಲಿ
  • ನವಜಾತ ಶಿಶುವಿಗೆ ತಾಯಿಯ ಹಾಲಿನಿಂದ ರೋಗನಿರೋಧಕ ಶಕ್ತಿ ವೃದ್ಧಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಕೈಗಾರಿಕಾ ಪ್ರದೇಶಗಳ ಸುರಕ್ಷತೆಗಾಗಿ ಅಗತ್ಯ ಕ್ರಮ
ತುಮಕೂರು

ಕೈಗಾರಿಕಾ ಪ್ರದೇಶಗಳ ಸುರಕ್ಷತೆಗಾಗಿ ಅಗತ್ಯ ಕ್ರಮ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಕೈಗಾರಿಕೋದ್ಯಮಿಗಳಿಗೆ ಭರವಸೆ
By News Desk BenkiyabaleUpdated:June 18, 2025 4:26 pm

ತುಮಕೂರು: ಕೈಗಾರಿಕಾ ಪ್ರದೇಶಗಳ ಸುರಕ್ಷತೆಗಾಗಿ ಅಗತ್ಯ ಭದ್ರತೆಯನ್ನು ಒದಗಿಸಲು ಪೊಲೀಸ್ ಇಲಾಖೆ ಸನ್ನದ್ಧವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಕೈಗಾರಿಕೋದ್ಯಮಿಗಳು ಭರವಸೆ ನೀಡಿದರು.
ನಗರದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ತೆಯ ಸಭಾಂಗಣದಲ್ಲಿ ಜರುಗಿದ ಕೈಗಾರಿಕೋದ್ಯಮಿಗಳ ಕುಂದು ಕೊರತೆಗಳು ಹಾಗೂ ಬೇಡಿಕೆಗಳ ಮನವಿ ಕುರಿತ ಸಂವಾದ ಸಭೆಯಲ್ಲಿ ಅವರು ಮಾತನಾಡಿದರು.
ಕೈಗಾರಿಕೋದ್ಯಮಿಗಳು ಮತ್ತು ಪೊಲೀಸರ ನಡುವೆ ಸದಾ ಸಮನ್ವಯತೆ ಇರಬೇಕು. ಕೈಗಾರಿಕಾ ಪ್ರದೇಶಗಳಲ್ಲಿ ರೌಡಿಗಳು, ಗೂಂಡಾಗಳು, ಹಫ್ತಾ ವಸೂಲಿ, ಬ್ಲಾಕ್‌ಮೇಲ್ ಮಾಡುವಂತಹ ವ್ಯಕ್ತಿಗಳು ಕಂಡು ಬಂದಲ್ಲಿ ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದರೆ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಕೈಗಾರಿಕಾ ಪ್ರದೇಶಗಳಿಗೆ ಭದ್ರತೆ ಹಾಗೂ ಸುರಕ್ಷತೆಗಾಗಿ ನಮ್ಮ ಇಲಾಖೆ ಸನ್ನದ್ದವಾಗಿದ್ದು, ಇದಕ್ಕೆ ತಮ್ಮೆಲ್ಲರ ಸಹಕಾರ ಅತ್ಯಂತ ಅವಶ್ಯಕ ಎಂದು ಅವರು ಹೇಳಿದರು.
ಹಿರೇಹಳ್ಳಿ, ಅಂತರಸನಹಳ್ಳಿ ಮತ್ತು ಸತ್ಯಮಂಗ ಪೊಲೀಸ್ ಔಟ್ ಪೋಸ್ಟ್ ಸ್ಥಾಪನೆ ಮಾಡುವುದು ಹಾಗೂ ನಿತ್ಯ ಪೊಲೀಸ್ ಗಸ್ತನ್ನು ಹೆಚ್ಚಿಸಬೇಕೆಂಬ ಕೈಗಾರಿಕೋದ್ಯಮಿಗಳ ಬೇಡಿಕೆಗೆ ಸ್ಪಂದಿಸಿದ ಎಸ್ಪಿ ಅಶೋಕ್ ಅವರು, ಸೂಕ್ತ ಸ್ಥಳ ನೀಡಿದರೆ ಪೊಲೀಸ್ ಔಟ್ ಪೋಸ್ಟ್ ಸ್ಥಾಪಿಸಿ ಭದ್ರತೆ ಒದಗಿಸಲು ಸಿದ್ದರಿದ್ದೇವೆ ಎಂದರು.
ಕೈಗಾರಿಕಾ ಪ್ರದೇಶಗಳಲ್ಲಿ ಭದ್ರತೆ ಹಿತ ದೃಷ್ಟಿಯಿಂದ ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಜತೆಗೆ ಕೈಗಾರಿಕಾ ಪ್ರದೇಶಗಳಲ್ಲಿ ಅಗತ್ಯ ಇರುವ ಕಡೆ ರಸ್ತೆ ಉಬ್ಬುಗಳನ್ನು ಹಾಕಲಾಗುವುದು ಹಾಗೂ ಅದಕ್ಕೆ ಬಣ್ಣ ಬಳೆಯಲಾಗುವುದು ಎಂದು ತಿಳಿಸಿದರು.
ಸತ್ಯಮಂಗಲ ಕೈಗಾರಿಕಾ ಪ್ರದೇಶದ ಸರ್ವೀಸ್ ರಸ್ತೆಗಳಿಂದ ಮಧುಗಿರಿ ರಸ್ತೆಯಲ್ಲಿ ಅಂತರಸನಹಳ್ಳಿ ಬೈಪಾಸ್ ಬ್ರಿಡ್ಜ್ ಬಳಿ ಬರುವುದಕ್ಕೆ ಸಂಪರ್ಕ ಇಲ್ಲದಿರುವುದರಿಂದ ತೊಂದರೆಯಾಗುತ್ತಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಕೂಡಲೇ ಈ ಸಮಸ್ಯೆಗೆ ಪರಿಹಾರ ಒದಗಿಸಲಾಗುವುದು ಎಂದು ತಿಳಿಸಿದರು.
ಸತ್ಯಮಂಗಲ ಕೈಗಾರಿಕಾ ಪ್ರದೇಶದಲ್ಲಿ ಭಾರಿ ಲಾರಿಗಳನ್ನು ರಸ್ತೆಯಲ್ಲೆ ರಿಪೇರಿ ಕೆಲಸ ಮಾಡುವ ಸಲುವಾಗಿ ಪಾರ್ಕಿಂಗ್ ಮಾಡುತ್ತಿದ್ದು, ಇದರಿಂದ ವಾಹನ ಚಾಲನೆ ದುಸ್ತರವಾಗಿದೆ. ಅಲ್ಲದೆ ಕಾರ್ಮಿಕರು ನಡೆದಾಡಲು ಕೂಡ ಅಪಾಯಕಾರಿಯಾಗಿದೆ ಎಂದು ಕೈಗಾರಿಕೋದ್ಯಮಿಗಳು ಎಸ್ಪಿ ಅಶೋಕ್ ರವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಅವರು, ಆ ಸ್ಥಳಕ್ಕೆ ಶೀಘ್ರ ಭೇಟಿ ನೀಡಿ ಪರಿಶೀಲನೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಕೈಗಾರಿಕಾ ಪ್ರದೇಶಗಳಲ್ಲಿ ಸಂಜೆ ೭ ಗಂಟೆಯ ನಂತರ ಕುಡುಕರ ಹಾವಳಿ ಹಾಗೂ ಕಳ್ಳತನ ವಿಪರೀತವಾಗಿರುವ ಬಗ್ಗೆಯೂ ನನ್ನ ಗಮನಕ್ಕೆ ಬಂದಿದೆ. ಈ ಸಮಸ್ಯೆಯನ್ನು ಬಗೆಹರಿಸಲು ಮುಂದಾಗುತ್ತೇವೆ ಎಂದರು.
ಕೈಗಾರಿಕಾ ಪ್ರದೇಶಗಳಲ್ಲಿ ಹೈಮಾಸ್ಟ್ ದೀಪಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದಾಗಿ ತೊಂದರೆಯಾಗುತ್ತಿದೆ ಎಂದು ಕೈಗಾರಿಕೋದ್ಯಮಿಗಳು ಹೇಳಿದಾಗ ಅಗತ್ಯ ಇರುವ ಕಡೆ ಇನ್ನೂ ಹೆಚ್ಚಿನ ಹೈಮಾಸ್ಟ್ ಲೈಟ್ ಪೋಲ್‌ಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದರು.
ಕೈಗಾರಿಕಾ ಪ್ರದೇಶಗಳಲ್ಲಿ ರಸ್ತೆಯ ತಿರುವುಗಳಲ್ಲಿ ನಾಮಫಲಕಗಳನ್ನು ಅಳವಡಿಸಬೇಕೆಂಬ ಮನವಿಗೆ ಸ್ಪಂದಿಸಿದ ಎಸ್ಪಿ ಅಶೋಕ್ ಅವರು ಇದಕ್ಕೆ ಸಂಬAಧಿಸಿದAತೆ ಅಧಿಕಾರಿಗಳ ಜತೆ ಚರ್ಚಿಸಿ ಪೂರಕವಾದ ಕಾರ್ಯಕ್ಕೆ ಶ್ರಮಿಸುತ್ತೇವೆ ಎಂದು ಹೇಳಿದರು.
ಅಂತರಸನಹಳ್ಳಿ ಹ್ಯಾಂಡ್ ಟೂಲ್ ಕಾಂಪ್ಲೆಕ್ಸ್ ಕೈಗಾರಿಕಾ ಪ್ರದೇಶದಿಂದ ಮಧುಗಿರಿ ಮುಖ್ಯ ರಸ್ತೆಗೆ ಸೇರುವಾಗ ಹೆಚ್ಚು ಅಫಘಾತಗಳು ಸಂಭವಿಸುತ್ತಿದ್ದು, ರಸ್ತೆ ಉಬ್ಬುಗಳನ್ನು ನಿರ್ಮಿಸಿ ಕೊಡಬೇಕು ಎಂಬ ಕೈಗಾರಿಕೋದ್ಯಮಿಗಳು ಮನವಿಗೆ ಸ್ಪಂದಿಸಿದ ಅವರು, ಸಂಬAಧಪಟ್ಟ ಇಲಾಖೆಗಳೊಂದಿಗೆ ಚರ್ಚಿಸಲಾಗುವುದು ಎಂದರು.
ಮAಚಕಲ್ ಕುಪ್ಪೆಯಿಂದ ಹಿರೇಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಬರುವವರು ರಾಂಗ್ ಸೈಡ್‌ನಲ್ಲಿ ಬರುವುದರಿಂದ ಅಪಘಾತಗಳು ಸಂಭವಿಸುತ್ತಿದ್ದು ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗುವುದು. ಬೆಳಗಿನಜಾವ ಹಾಗೂ ಸಂಜೆಯ ನಂತರ ಚಿಂದಿ ಆಯುವವರ ಉಪಟಳ ವಿಪರೀತವಾಗಿದ್ದು, ಇದರಿಂದ ಗಲಾಟೆ ಮತ್ತು ಕಳ್ಳತನ ಹೆಚ್ಚಾಗಿ ತುಂಬಾ ತೊಂದರೆಯಾಗುತ್ತಿದೆ. ಕೈಗಾರಿಕಾ ಸಮಸ್ಯೆಗಳಿಗೆ ಸಂಬAಧಪಟ್ಟAತೆ ಪೊಲೀಸ್ ಇಲಾಖೆಯಲ್ಲಿ ಸಿಂಗಲ್ ಪಾಯಿಂಟ್ ಕಾಂಟೆಕ್ಟ್ ಕಲ್ಪಿಸಿಕೊಡುವುದು ಎಂದು ಹೇಳಿದರು.
ನಗರದ ಹಲವೆಡೆ ಈ ಸಮಸ್ಯೆ ಇದ್ದು, ಜನ ಅರಿತುಕೊಳ್ಳಬೇಕು. ರಿಂಗ್ ರೋಡ್ ಸುತ್ತಲೂ ಹಾಗೂ ನಗರದ ಕೆಲವು ಕಡೆ ವ್ಯಾಪಾರಸ್ಥರು ರಸ್ತೆಯನ್ನು ಆಕ್ರಮಣ ಮಾಡಿದ್ದಾರೆ. ಈ ಬಗ್ಗೆಯೂ ಸಂಬAಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ ಪರಿಹಾರ ಒದಗಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಅಡಿಷನಲ್ ಎಸ್ಪಿ ಪುರುಷೋತ್ತಮ್, ಟಿಡಿಸಿಸಿಐ ಅಧ್ಯಕರಾದ ಪಿ.ಆರ್.ಕುರಂದವಾಡ್, ಉಪಾಧ್ಯಕ್ಷ ಸಿ.ಎಸ್.ಸಂಜಯ್, ಗೌರವ ಕಾರ್ಯದರ್ಶಿ ಟಿ.ಎನ್.ಶ್ರೀಕಂಠ ಸ್ವಾಮಿ, ಜಂಟಿ ಕಾರ್ಯದರ್ಶಿ ಎಂ.ಎಸ್.ಉಮೇಶಯ್ಯ, ಖಜಾಂಚಿ ರವಿಶಂಕರ್ ಮತ್ತಿತರರು ಭಾಗವಹಿಸಿದ್ದರು.

(Visited 1 times, 1 visits today)
tumkur
Previous Article೫.೬೧ ಕೋಟಿ ಮೊತ್ತದ ವಸ್ತು ಜಪ್ತಿ
Next Article ಕಾಂಗ್ರೆಸ್ ಸರ್ಕಾರ ಜನರ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲ
News Desk Benkiyabale

Related Posts

ಡಯಾಬಿಟಿಕ್ ಪುಟ್ ಕಾಯಿಲೆಯನ್ನು ಆರಂಭದಲ್ಲೇ ಗುರುತಿಸಿ

August 07, 2026 5:05 pm news

ಅಸಹಾಯಕ ಮಹಿಳೆಯನ್ನು ದತ್ತು ಪಡೆದ ಇಕ್ಬಾಲ್ ಅಹಮದ್

August 07, 2026 5:03 pm news

ಬದಲಾವಣೆ ಅಗತ್ಯ ಎಂಬ ಹೆಸರಿನಲ್ಲಿ ರಾಜಕೀಯ ಅಭಿಯಾನ

August 07, 2026 5:01 pm news
ತಾಜಾ ಸುದ್ಧಿಗಳು
news

ಡಯಾಬಿಟಿಕ್ ಪುಟ್ ಕಾಯಿಲೆಯನ್ನು ಆರಂಭದಲ್ಲೇ ಗುರುತಿಸಿ

August 07, 2026 5:05 pm
news

ಅಸಹಾಯಕ ಮಹಿಳೆಯನ್ನು ದತ್ತು ಪಡೆದ ಇಕ್ಬಾಲ್ ಅಹಮದ್

August 07, 2026 5:03 pm
news

ಬದಲಾವಣೆ ಅಗತ್ಯ ಎಂಬ ಹೆಸರಿನಲ್ಲಿ ರಾಜಕೀಯ ಅಭಿಯಾನ

August 07, 2026 5:01 pm
news

ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಜಾಗೃತಿ ಕಾರ್ಯಕ್ರಮ

August 07, 2026 4:59 pm
news

ಮಕ್ಕಳು ಕಲೆ ಕಲಿತು ಭವಿಷ್ಯದ ಪ್ರತಿಭೆಗಳಾಗಿ: ಈಶ್ವರ್ ಕು.ಮಿರ್ಜಿ

August 07, 2026 4:57 pm
news

ರೈತರ ಬೃಹತ್ ಪಾದಯಾತ್ರೆಗೆ ಚಾಲನೆ

August 07, 2026 4:54 pm
Our Youtube Channel
Our Picks

ಡಯಾಬಿಟಿಕ್ ಪುಟ್ ಕಾಯಿಲೆಯನ್ನು ಆರಂಭದಲ್ಲೇ ಗುರುತಿಸಿ

August 07, 2026 5:05 pm

ಅಸಹಾಯಕ ಮಹಿಳೆಯನ್ನು ದತ್ತು ಪಡೆದ ಇಕ್ಬಾಲ್ ಅಹಮದ್

August 07, 2026 5:03 pm

ಬದಲಾವಣೆ ಅಗತ್ಯ ಎಂಬ ಹೆಸರಿನಲ್ಲಿ ರಾಜಕೀಯ ಅಭಿಯಾನ

August 07, 2026 5:01 pm

ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಜಾಗೃತಿ ಕಾರ್ಯಕ್ರಮ

August 07, 2026 4:59 pm

ಮಕ್ಕಳು ಕಲೆ ಕಲಿತು ಭವಿಷ್ಯದ ಪ್ರತಿಭೆಗಳಾಗಿ: ಈಶ್ವರ್ ಕು.ಮಿರ್ಜಿ

August 07, 2026 4:57 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಡಯಾಬಿಟಿಕ್ ಪುಟ್ ಕಾಯಿಲೆಯನ್ನು ಆರಂಭದಲ್ಲೇ ಗುರುತಿಸಿ

By News Desk BenkiyabaleAugust 07, 2026 5:05 pm

ತುಮಕೂರು: ಮಧುಮೇಹ ರೋಗಿಗಳು ಅನುಭವಿಸುವ ಡಯಾಬಿಟಿಕ್ ಪುಟ್ ಕಾಯಿಲೆಯನ್ನು ಆರಂಭದಲ್ಲೇ ಗುರುತಿಸಿ,ಸುಧಾರಿತ ವ್ಯಾಸ್ಕ÷್ಯಲರ್ ಚಿಕಿತ್ಸೆಯ ಮೂಲಕ ಅಂಗವೈಕಲ್ಯವನ್ನು ತಡೆಯಬಹುದಾಗಿದೆ ಎಂದು…

ಅಸಹಾಯಕ ಮಹಿಳೆಯನ್ನು ದತ್ತು ಪಡೆದ ಇಕ್ಬಾಲ್ ಅಹಮದ್

August 07, 2026 5:03 pm

ಬದಲಾವಣೆ ಅಗತ್ಯ ಎಂಬ ಹೆಸರಿನಲ್ಲಿ ರಾಜಕೀಯ ಅಭಿಯಾನ

August 07, 2026 5:01 pm

ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಜಾಗೃತಿ ಕಾರ್ಯಕ್ರಮ

August 07, 2026 4:59 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.