ತುಮಕೂರು: ತುಮಕೂರು ರಾಜ್ಯ ರಾಜ್ಯಧಾನಿಗೆ ಹತ್ತಿರವಾಗಿ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ನಗರವಾಗಿದ್ದು ಇಲ್ಲಿ ಪ್ರತಿನಿತ್ಯ ಒಂದಿಲ್ಲೊ0ದು ಸಮಸ್ಯೆಗಳು ನಾಗರೀಕರನ್ನ ಕಾಡುತ್ತಿವೆ ನಗರದ ಗುಬ್ಬಿ ಗೇಟ್ ಬಳಿ ಇರುವ ರಿಂಗ್ ರಸ್ತೆ, ಗಾರ್ಡನ್ ರಸ್ತೆ, ಸೇರಿದಂತೆ ಇತರೆ ರಸ್ತೆಗಳಲ್ಲಿ ಅಳವಡಿಸಿರುವ ಯುಜಿಡಿ ಚೇಂಬರ್ ನಿಂದ ಅಪಘಾತಗಳಾಗಿ ಪ್ರಾಣ ಹಾನಿಗಳಾಗಿರುವ ಘಟನೆಗಳು ನಡೆದಿದ್ದು ಇಂತಹ ದುರ್ಘಟನೆಗಳು ನಡೆಯದಂತೆ ಜಿಲ್ಲಾಧಿಕಾರಿಗಳು ಮತ್ತು ಪಾಲಿಕೆ ಆಯುಕ್ತರು ಸೂಕ್ತ ಕ್ರಮ ವಹಿಸಬೇಕು ಎಂದು ಡಾ. ಎಪಿಜೆ ಅಬ್ದುಲ್ ಕಲಾಂ ಫೌಂಡೇಶನ್ ಅಂಡ್ ಅಕಾಡೆಮಿ ಅಧ್ಯಕ್ಷರು, ಸಾಮಾಜಿಕ ಕಾರ್ಯಕರ್ತರಾದ ನಿಸಾರ್ ಅಹಮದ್ ಆರಿಫ್ ಅವರು ಒತ್ತಾಯಿಸಿದ್ದಾರೆ.
ನಗರದ ಪ್ರಮುಖ ರಸ್ತೆಗಳಲ್ಲಿ ಅಳವಡಿಸಿರುವ ಯುಜಿಡಿ ಚೆಂಬರ್ ನಿಂದಾಗಿ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಇದನ್ನು ಮನಗಂಡ ಸಾಮಾಜಿಕ ಕಾರ್ಯಕರ್ತ ನಿಸಾರ್ ಅಹಮದ್ ಆರಿಫ್ ಪಾಲಿಕೆ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಿರುವ ಯುಜಿಡಿ ಕಾಮಗಾರಿಗಳು ಅವೈಜ್ಞಾನಿಕವಾಗಿದ್ದು ಕಳಪೆ ಗುಣಮಟ್ಟದಿಂದ ಕೂಡಿರುತ್ತದೆ ನನಗೂ ಕೂಡ ಈ ಅಪಘಾತದ ಅನುಭವವಾಗಿದ್ದು ದಿನಾಂಕ ೨೧-೦೫-೨೦೨೫ ರ ರಾತ್ರಿ ಸುಮಾರು ಎಂಟು ೪೫ ಗಂಟೆ ಸಮಯದಲ್ಲಿ ನಾನು ನನ್ನ ಪತ್ನಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನದಲ್ಲಿ ಸುಮಾರು ೪೫ ವೇಗದಲ್ಲಿ ಗುಬ್ಬಿ ಗೇಟ್ ಬಳಿ ಇರುವ ರಿಂಗ್ ರಸ್ತೆಯಲ್ಲಿ ಹೋಗುತ್ತಿದ್ದಾಗ ರಸ್ತೆಯಲ್ಲಿ ಯಾವುದೇ ಸಂಚಾರಿ ಸೂಚನಾ ಫಲಕಗಳು ಇಲ್ಲದೇ ಇರುವ ಯುಜಿಡಿ ಚೇಂಬರಿಗೆ ಗುದ್ದಿ ಕೊಂಡು ನಾನು ನನ್ನ ಪತ್ನಿ ಬೆನ್ನು ಮೂಳೆ ಸೇರಿದಂತೆ ಕಾಲುಗಳಿಗೆ ಪೆಟ್ಟು ಮಾಡಿಕೊಂಡಿದ್ದೇವೆ.
ಇದರಿAದ ಮಾನಸಿಕವಾಗಿ ತುಂಬಾ ನೊಂದಿಕೊAಡಿದ್ದು ಇತರಹದ ಸಮಸ್ಯೆಗಳು ಬೇರೆ ಸಾರ್ವಜನಿಕರಿಗೆ ಉಂಟಾಗದಿರಲಿ ಎಂಬ ಕಾರಣಕ್ಕೆ ಸಂಚಾರಿ ಠಾಣೆಯಲ್ಲಿ ಪ್ರಕರಣ ಒಂದನ್ನ ದಾಖಲು ಮಾಡಿರುತ್ತೇನೆ ಸಂಬ0ಧಪಟ್ಟ ಅಧಿಕಾರಿಗಳು ರಸ್ತೆಯ ಕಾಮಗಾರಿಯಲ್ಲಿ ನಿರ್ಲಕ್ಷ ತೋರಿರುತ್ತಾರೆ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ನಗರದ ವಿವಿಧ ರಸ್ತೆಗಳಲ್ಲಿರುವ ಯುಜಿಡಿ ಚೇಂಬರ್ ಗಳನ್ನು ಸರಿಪಡಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ನಾನು ಈ ಮೂಲಕ ಒತ್ತಾಯಿಸುತ್ತೇನೆ ಎಂದರು.
ಗುಬ್ಬಿಗೆಟ್ ರಿಂಗ್ ರಸ್ತೆಯಲ್ಲಿರುವ ಚೇಂಬರಿಗೆ ಈಗಾಗಲೇ ಅನೇಕ ದ್ವಿಚಕ್ರವಾಹನ ಸವಾರರು ಹೀಗೆ ಅಪಘಾತ ಮಾಡಿಕೊಂಡು ಪ್ರಾಣ ಹಾನಿಯಾಗಿರುವ ಘಟನೆಗಳು ನಡೆದಿವೆ ಎಂದು ಅಲ್ಲಿನ ಸ್ಥಳಿಯರು ಹೇಳುತ್ತಿದ್ದರು ಸಂಬ0ಧಪಟ್ಟ ಅಧಿಕಾರಿಗಳು ಸ್ವಯಂ ಅಪಘಾತಕ್ಕೆ ನಾವು ಕಾರಣರಲ್ಲ ಎಂಬ ಉಡಾಫೆ ಉತ್ತರವನ್ನು ನೀಡುತ್ತಿದ್ದಾರೆ ಅಧಿಕಾರಿಗಳು,ಗುತ್ತಿಗೆದಾರರು ಮಾಡಿರುವ ಅವೈಜ್ಞಾನಿಕ ಕಳಪೆ ಕಾಮಗಾರಿಗಳಿಂದಾಗಿ ಈ ತರಹದ ಸಮಸ್ಯೆಗಳು ನಗರದಲ್ಲಿ ಕಂಡು ಬರುತ್ತಿದ್ದು ಸಾರ್ವಜನಿಕರಿಗೆ ತೀವ್ರತರಹದ ಸಮಸ್ಯೆಗಳು ಉಂಟಾಗುತ್ತಿವೆ ಇನ್ನು ಮುಂದಾದರೂ ಸಂಬAಧಪಟ್ಟ ಅಧಿಕಾರಿಗಳು ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ನಿಯಮಾನುಸಾರ ಯುಜಿಡಿ ಚೇಂಬರ್ ಗಳನ್ನು ಸರಿಪಡಿಸಿ ನಡೆಯುತ್ತಿರುವ ಅಪಘಾತ ಮತ್ತು ಪ್ರಾಣ ಹಾನಿಯನ್ನು ತಪ್ಪಿಸಬೇಕು ಎಂದು ನಿಸಾರ್ ಅಹಮದ್ ಆರಿಫ್ ಅವರು ಮನವಿ ಮಾಡಿದರು.

(Visited 1 times, 1 visits today)