ಚಿಕ್ಕನಾಯಕನಹಳ್ಳಿ: ಸರ್ಕಾರಿ ಜಾಗದಲ್ಲಿ ೭೦ವರ್ಷದಿಂದ ವಾಸವಿರುವ ನಿವೇಶನರಹಿತ ಕುಟುಂಬಗಳಿಗೆ ಜಾಗದ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಭಾರತೀಯ ಕಿಸಾನ್ ಸಂಘದಿAದ ಸಂತ್ರಸ್ಥರಪರವಾಗಿ ವರಿಷ್ಠರ ವಿಳಾಸಕ್ಕೆ ಅಂಚೆ ಮೂಲಕ ಮನವಿಸಲ್ಲಿಸಲಾಯಿತು.
ಪಟ್ಟಣದ ಅಂಚೆ ಇಲಾಖೆಯ ಮುಂದೆ ಹಕ್ಕುಪತ್ರ ವಂಚಿತ ವಸತಿರಹಿತರ ಪರವಾಗಿ ಭಾರತೀಯ ಕಿಸಾನ್ ಸಂಘದ ರಾಷ್ಟಿçÃಯ ಅಧ್ಯPಕ್ಷ ಎಚ್.ಆರ್. ಭೋಜರಾಜ್ ಮಾತನಾಡಿ ತಾಲ್ಲೂಕಿನ ಶೆಟ್ಟಿಕೆರೆ ಗ್ರಾಮದ ಸ.ನಂ.೮/೧.೮/೨.೮/೩ರ ೨.೨೬ ಎಕರೆ ಸರ್ಕಾರಿ ಜಾಗದಲ್ಲಿ ಅತಿ ಹಿಂದುಳಿದ ಹಾಗೂ ದಲಿತರ ೩೦ ಕುಟುಂಬಗಳು ಸುಮಾರು ೭೦ವರ್ಷದಿಂದ ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ. ಈ ಮನೆಗಳಿಗೆ ನಲ್ಲಿ ಹಾಗೂ ವಿದ್ಯುತ್‌ಸಂಪರ್ಕಮುAತಾದ ಮೂಲಭೂತ ಸೌಕರ್ಯಗಳನ್ನು ನೀಡಲಾಗಿದೆ. ಆದರೆ ಹಲವು ವರ್ಷಗಳಿಂದ ಇಲ್ಲಿನ ನಿವಾಸಿಗಳು ಹಲವು ಬಾರಿ ಜಾಗದ ಹಕ್ಕುಪತ್ರ ನೀಡುವಂತೆ ಗ್ರಾಮ ಪಂಚಾಯಿತಿಗೆ ಮನವಿ ಮಾಡಿಕೊಂಡು ಬಂದಿದ್ದರೂ ಈವರೆಗೂ ನೀಡುತ್ತಿಲ್ಲ, ಸದರಿ ಜಾಗದಲ್ಲಿ ವಾಸಿಸುವ ಕೆಲವೇ ಕುಟುಂಬಗಳಿಗೆ ಹಕ್ಕುಪತ್ರ ನೀಡಿದ್ದು, ನಮಗೆ ನೀಡದೆ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ೧೯೬೭ ರಲ್ಲಿ ತಾಲ್ಲೂಕು ಡೆವಲಪ್‌ಮೆಂಟ್ ಬೋರ್ಡ್ಗೆ ಈ ನಿವೇಶನದ ಅಲಿನೇಷನ್‌ಗೆ ಜಿಲ್ಲಾಧಿಕಾರಿಗಳು ಆ ದೇಶಿಸಿದ್ದು, ಸದರಿ ಜಾಗ ತಾಲ್ಲೂಕು ಪಂಚಾಯಿತಿಯ ಸುಪರ್ಧಿಯಲ್ಲಿದೆ ಎಂದು ಪಹಣಿಯಲ್ಲಿ ಬರುತ್ತಿದ್ದರೂ, ನಿವೇಶನದ ಹಕ್ಕುಪತ್ರ ನೀಡಲು ಆಸಕ್ತಿವಹಿಸುತ್ತಿಲ್ಲ, ಈ ಕುರಿತು ಮಾಹಿತಿ ಹಕ್ಕಿನಡಿ ಲಿಖಿತ ಮನವಿ ಮಾಡಿದರೂ ಈವರೆಗೂ ಉತ್ತರಿಸದೆ ಕಾನೂ ನು ಉಲ್ಲಂಘಿಸಿದ್ದಾರೆ. ನಾವು ಶಾಸಕರಿಗೆ, ತಹಸೀಲ್ದಾರ್‌ರಿಗೆ ಮನವಿ ಸಲ್ಲಿಸಿದರೂ ಸರಿ ಯಾಗಿ ಸ್ಪಂದಿಸಿಲ್ಲವೆAದರು. ಈ ಸಂದರ್ಭದಲ್ಲಿ ತುರುವೇಕೆರೆ ತಾಲ್ಲೂಕು ಅಜ್ಜೇನಹಳ್ಳಿರಾಜಶೇಖರ್, ಮುರಳಿ ಬಾಣಸಂದ್ರ,ಶೆಟ್ಟೆಕೆರೆ ಗ್ರಾಮದ ಆನಂದಪ್ಪ, ಲಕ್ಷಿö್ಮದೇವಮ್ಮ,ಕಲಾವತಿ, ದರ್ಶನ್ ಮುಂತಾದವರಿದ್ದರು.

(Visited 1 times, 1 visits today)