ಹುಳಿಯಾರು: ಹುಳಿಯಾರಿನ ಪರ್ತಕರ್ತ ಎಚ್.ಎ.ರಮೇಶ್ ಅವರ ಸಂಕಷ್ಟಕ್ಕೆ ಶಾಸಕ ಸಿಬಿ ಸುರೇಶ್ ಬಾಬು ಅವರು ಸ್ಪಂದಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಎಚ್.ಎ.ರಮೇಶ್ ಅವರಿಗೆ ಬ್ರೆöÊನ್ ಟುಮರ್ ಆಗಿ ಎರಡು ಕಣ್ಣುಗಳು ಕಾಣದಾಗಿದ್ದವು. ಜಿಲ್ಲಾ ಪತ್ರಕರ್ತರ ಸಂಘ ಆಯುಷ್ಮಾನ್ ಭಾರತ್ ಶಸ್ತç ಚಿಕಿತ್ಸೆಗೆ ವ್ಯವಸ್ಥೆ ಮಾಡಿಕೊಟ್ಟಿತ್ತು. ಚಿಕ್ಕನಾಯಕನಹಳ್ಳಿ ತಾಲೂಕು ಪತ್ರಕರ್ತರ ಸಂಘ ೪೪ ಸಾವಿರ ರೂ. ಸಂಗ್ರಹಿಸಿ ಕೊಟ್ಟಿತ್ತು. ಕಳೆದ ವಾರ ಮೆದುಳಿನ ಶಸ್ತç ಚಿಕಿತ್ಸೆ ಮಾಡಲಾಗಿತ್ತಾದರೂ ಸಹ ಕಣ್ಣುಗಳು ಮೊದಲಿನಂತಾಗಲಿಲ್ಲ. ವೈದ್ಯರು ಕೂಡ ದೇವರ ಮೇಲೆ ಭಾರ ಹಾಕಿ ಇನ್ನೆರಡು ತಿಂಗಳಲ್ಲಿ ಕಣ್ಣು ಬಂದರು ಬರಬಹುದು ಎಂದು ಹೇಳಿ ಕಳಿಸಿದ್ದಾರೆ.
ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಸಾಕಿ ಸಲುಹಿಸಬೇಕಿದ್ದ ಕುಟುಂಬದ ಯಜಮಾನ ಎರಡು ಕಣ್ಣು ಕಾಣದೆ ಅಸಹಾಯಕ ಸ್ಥಿತಿಗೆ ಜಾರಿಕೊಂಡಿದ್ದ. ಪರಿಣಾಮ ಮಕ್ಕಳ ವಿದ್ಯಾಭ್ಯಾಸ ಕುಟುಂಬದ ನಿರ್ವಹಣೆ ನೆನೆದು ಪತ್ನಿ ಚಿಂತಾಕ್ರಾAತರಾಗಿದ್ದರು.
ವಿಷಯ ತಿಳಿದ ಚಿಕ್ಕನಾಯಕನಹಳ್ಳಿ ಶಾಸಕ ಸಿಬಿ ಸುರೇಶ್ ಬಾಬು ಅವರು ಪತ್ರಕರ್ತನ ಮನೆಗೆ ಖುದ್ದು ಭೇಟಿ ನೀಡಿ ವೈಯಕ್ತಿಕವಾಗಿ ೫೦ ಸಾವಿರ ರೂ. ಧನಸಹಾಯ ನೀಡಿದರು. ಅಲ್ಲದೆ ಪತ್ರಕರ್ತರ ಪತ್ನಿಗೆ ಉದ್ಯೋಗ ಕೊಡಿಸುವ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವ ಭರವಸೆಯನ್ನು ನೀಡಿ ಕುಟುಂಬಕ್ಕೆ ಧೈರ್ಯ ತುಂಬಿ ಬಂದಿದ್ದಾರೆ.
ಪ್ರಚಾರ ಬೇಕಾದಾಗ ಮಾತ್ರ ಪತ್ರಕರ್ತನನ್ನು ಕರೆದು ತನಗೆ ಬೇಕಾದಂತೆ ಬರೆಸಿಕೊಂಡು ಒಂದು ನಮಸ್ತೆ ಅರ್ಧ ಟೀ ಕೊಟ್ಟು ಕಳುಹಿಸಿ ಬೆಳೆಯುತ್ತಿರುವ ರಾಜಕಾರಣಿಗಳ ನಡುವೆ ಶಾಸಕ ಸಿ.ಬಿ.ಸುರೇಶ್ ಬಾಬು ವಿಭಿನ್ನವಾಗಿ ಕಾಣ ಸಿಗುತ್ತಾರೆ. ಕೈಲಾಗದ ಪತ್ರಕರ್ತನಾಗಿದ್ದರು ಸಹ ಅಂತಃಕರಣ, ಮಾನವೀಯತೆಯಿಂದ ಆತನ ಮನೆಗೆ ಬಂದು ನೆರವಾಗುವ ಮೂಲಕ ಇಂದಿನ ಸಮಾಜಕ್ಕೆ ಆದರ್ಶರಾಗಿದ್ದಾರೆ.
(Visited 1 times, 1 visits today)