ತುಮಕೂರು: ನಗರದ ಎಸ್‌ಎಸ್‌ಐಟಿ ಕ್ಯಾಂಪಸ್‌ನಲ್ಲಿರುವ ಶ್ರೀ ಸಿದ್ಧಾರ್ಥ ಮಾಧ್ಯಮ ಕೇಂದ್ರದ ರೇಡಿಯೋ ಸಿದ್ಧಾರ್ಥ ೯೦.೮ ಸಿಆರಎಸ್‌ಗೆ ಬುಧವಾರ(ಜುಲೈ-೨) ಶೈಕ್ಷಣಿಕ ಭೇಟಿ ನೀಡಿ, ನಿರೂಪಣೆ ಮತ್ತು ನಿರ್ಮಾಣ ಕುರಿತ ಒಂದು ದಿನ ಕಾರ್ಯಾಗಾರದಲ್ಲಿ ಪಾಲ್ಗೊಂಡರು.
ಮಾಧ್ಯಮ ವಿದ್ಯಾರ್ಥಿಗಳಿಗೆ ಬೇಕಾದ ಆ ಧುನಿಕಸೌಲಭ್ಯಗಳನ್ನು ಹೊಂದಿರುವ ಸಿದ್ಧಾ ರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಾರ್ಯಗಳನ್ನು ಮಾಡುವ ಕುರಿತು ತಜ್ಞ ಪ್ರಾಧ್ಯಾಪಕರಿಂದ ತರಬೇತಿ ನೀಡಲಾಯಿತು.
ರೇಡಿಯೋ ಕುರಿತಾಗಿ ನಿರ್ಮಾಣ ಪೂರ್ವ, ನಿರ್ಮಾಣ ಮತ್ತು ನಿರ್ಮಾಣೋತ್ತರ ಕುರಿತು ಮಾಹಿತಿ ಪಡೆದುಕೊಂಡರು. ರೇಡಿಯೋ ನಿರೂಪಣೆ, ಹಿನ್ನೆಲೆ ಧ್ವನಿ ಮತ್ತು ಬಾನುಲಿಯ ವಿವಿಧ ಕಾರ್ಯಕ್ರಮ ನಿರ್ಮಾಣ ಕುರಿತಂತೆ ಮಾಹಿತಿ ನೀಡಲಾಯಿತು. ಜತೆಗೆ ಪ್ರಯೋಗಿಕವಾಗಿ ವಿದ್ಯಾರ್ಥಿಗಳೇ ರೇಡಿ ಯೋ ಕಾರ್ಯಕ್ರಮಗಳನ್ನು ನಿರ್ಮಾಣ ಮಾಡಿಸಲಾಯಿತು. ಹಿನ್ನೆಲೆ ಧ್ವನಿ, ಕಾರ್ಯ ಕ್ರಮ ನಿರ್ಮಾಣ, ಸಂಕಲನ ಸ್ವತಃ ತಯಾರಿಸಿ ಕಾರ್ಯಾಗಾರದ ಪ್ರಯೋಜನ ಪಡೆದುಕೊಂಡರು. ಇದೇ ವೇಳೆ ಸಿದ್ಧಾರ್ಥ ಟಿ.ವಿ. ಕೇಂದ್ರಕ್ಕೂ ಭೇಟಿ ನೀಡಿ, ಸ್ಟುಡಿಯೋ ಕ್ಯಾಮರಾ ಬಳಕೆ ಮಾಡುವುದು, ಸ್ಟುಡಿಯೋ ಸೆಟ್‌ಅಪ್, ಟಿ.ವಿ ಕಾರ್ಯ್ರಮ ನಿರ್ಮಾಣ ಕುರಿತು ತರಬೇತಿ ಪಡೆದುಕೊಂಡರು.
ಸೇAಟ್ ಪೌಲ್ಸ್ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ೨೦ ವಿದ್ಯಾರ್ಥಿಗಳ ತಂಡ ಈ ಶೈಕ್ಷಣಿಕ ಭೇಟಿಯಲ್ಲಿ ಭಾಗವಹಿಸಿತ್ತು. ವಿದ್ಯಾರ್ಥಿಗಳೊಂದಿಗೆ ಪತ್ರಿ ಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ. ಪ್ರಶಾಂತ್ ವೇಣುಗೋಪಾಲ್, ಅಧ್ಯಾಪಕರಾದ ವಿನೋದ್ ಕುಮಾರ್ ಪಾಲ್ಗೊಂಡಿದ್ದರು.
ಸಮುದಾಯ ರೇಡಿಯೋ ಕಾರ್ಯಾ ಚರಣೆಗಳು ಮತ್ತು ಅದರ ಸಾಮಾಜಿಕ ಪ್ರಸ್ತುತತೆಗೆ ಕುರಿತು ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಕಾರ್ಯಾಗಾರ ಮತು ಸಂವಾದದಲ್ಲಿ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನದ ಕೇಂದ್ರದ ನಿರ್ದೇಶಕರಾದ ಡಾ. ಬಿ.ಟಿ. ಮುದ್ದೇಶ್, ಸಹಾಯಕ ಪ್ರಾಧ್ಯಾಪಕರಾದ ಶ್ವೇತಾ ಎಂ.ಪಿ.ಕಿರಣ್ ಸಿ ಎನ್, ನವೀನ್ ಎನ್ ಜಿ, ರೇಡಿಯೋ ಸಿದ್ಧಾರ್ಥ ೯೦.೮ ಎಫ್ ಎಂ ನ ಕಾರ್ಯಕ್ರಮ ನಿರ್ಮಾಣ ಸಹಾಯಕರಾದ ಗೌತಮ್ ಎ ವಿ ಮತ್ತು ಮಾಧ್ಯಮ ವಿದ್ಯಾರ್ಥಿಗಳು ಉಪಸ್ಥಿತರಿದ್ದರು
(Visited 1 times, 1 visits today)