ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ೨೨ಕೆರೆಗಳಿಗೆ ಮಂಜೂರಾಗಿರುವ ಹೇಮಾವತಿ ಕುಡಿಯುವ ನೀರಿನ ಯೋಜನೆಗೆ ಚಾನಲ್‌ನ ರಕ್ಷಣೆಗಾಗಿ ಕಟ್ ಆಂಡ್ ಕವರ್ ಮಾಡಲು ಅಗತ್ಯವಿರುವಂತಹ ೧೫೦ಕೋಟಿ ಅನುದಾನವನ್ನು ನೀಡುವಂತೆ ಶಾಸಕ ಸಿ.ಬಿ.ಸುರೇಶ್‌ಬಾಬು ಕೇಂದ್ರ ಸಚಿವ ವಿ.ಸೋಮಣ್ಣನವರಲ್ಲಿ ಮನವಿ ಮಾಡಿದರು.
ತಾಲ್ಲೂಕಿನ ಬಿ.ಪಾಳ್ಯದ ಶ್ರೀಸಿದ್ದರಾಮೇಶ್ವರ ವಾಕ್‌ಮತ್ತು ಶ್ರವಣದೋಷ ಮಕ್ಕಳವಸತಿ ಶಾಲೆಗೆ ಗುರುವಾರ ಬೇಟಿನೀಡಿದ ಕೇಂದ್ರಸಚಿವ ವಿ.ಸೋಮಣ್ಣ ಇವರನ್ನು ಬೇಟಿ ಮಾಡಿದ ಶಾಸಕರು ತಮ್ಮ ಕ್ಷೇತ್ರದ ಅಭಿವೃದ್ದಿಗೆ ಒತ್ತು ನೀಡುವಂತೆ ಹಾಗೂ ಅಗತ್ಯವಿರುವಂತಹ ಅನುದಾನವನ್ನು ನೀಡುವ ಮೂಲಕ ಸಹಕಾರ ನೀಡುವಂತೆ ಹಾಗೂ ಇನ್ನು ಅಭಿವೃದ್ದಿ ಕಾರ್ಯಗಳ ಬಗ್ಗೆ ಸುಧೀರ್ಘ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಶಾಸಕರ ಮನವಿಯನ್ನು ಆಲಿಸಿದ ಕೇಂದ್ರ ಸಚಿವ ವಿ. ಸೋಮಣ್ಣ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಅಭಿವೃದ್ದಿಗೆ ಅಗತ್ಯವಿರುವಂತಹ ನೆರವನ್ನು ನೀಡುವುದಾಗಿ ಭರವಸೆ ನೀಡಿದ ಅವರು ಈ ವಿಕಲಚೇತನರ ವಸತಿ ಶಾಲೆಯ ಸರ್ವತೋಮುಖ ಅಭಿವೃದ್ದಿ ಮೂಲಭೂತ ಸೌಲಭ್ಯಗಳಿಗೆ ೫೦ಲಕ್ಷ ಅನುದಾನವನ್ನು ನೀಡುವುದಾಗಿ ತಿಳಿಸಿದ ಅವರು . ತೆಂಗು ಹಾಗೂ ಅಡಿಕೆಗೆ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜೆಯಡಿ ಹವಾಮಾನ ಆಧಾರಿತ ವಿಮೆಯ ಸೌಲಭ್ಯಕ್ಕೆ ರೈತರು ಮನವಿ ಮಾಡಿದರು.
ತಿಪಟೂರು ಉಪವಿಭಾಗಾಧಿಕಾರಿ ಸಪ್ತಶ್ರೀ, ಮಾಜಿ ಸಂಸದ ಜಿ.ಎಸ್. ಬಸವರಾಜು, ಪಿಎಲ್‌ಡಿ ಬ್ಯಾಂಕ್ ಅದ್ಯಕ್ಷ ಹೆಚ್.ಆರ್.ಶಶಿಧರ್, ಶ್ರೀಸಿದ್ದರಾಮೇಶ್ವರ ವಾಕ್‌ಮತ್ತು ಶ್ರವಣದೋಷ ಮಕ್ಕಳವಸತಿ ಶಾಲೆಯ ಕಾರ್ಯದರ್ಶಿ ಸಿದ್ದೇಶ್ ಸೇರಿದಂತೆ ಇತರರು ಇದ್ದರು.

(Visited 1 times, 1 visits today)