ತುಮಕೂರು: ವಿದ್ಯಾರ್ಥಿಗಳು ಆಶಾವಾದದ ಚಿಂತನೆಗಳೊ0ದಿಗೆ ನಿರ್ದಿಷ್ಟ ಗುರಿಗಳನ್ನು ಸಿದ್ಧಪ ಡಿಸಿಕೊಂಡಾಗ ಜೀವನ ದರ್ಶನ ಸಾಧ್ಯವಾಗುತ್ತದೆ. ಜಾಗತಿಕ ವೇದಿಕೆಯಲ್ಲಿ ಔದ್ಯೋಗಿಕ ಸ್ಥಾನಮಾನ ಪಡೆಯಬೇಕಾದರೆ ನಿರ್ವಹಣಾ ಸಾಮ ರ್ಥ್ಯ ಮತ್ತು ಕೌಶಲ್ಯಗಳನ್ನು ಹೊಂದಿರಬೇಕು ಎಂದು ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಾಣಿಜ್ಯಶಾಸ್ತç ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥರಾದ ಪ್ರೊ. ಬಿ ಶೇಖರ್ ತಿಳಿಸಿದರು.
ತುಮಕೂರಿನ ಶ್ರೀ ಸಿದ್ಧಾರ್ಥ ವ್ಯವಹಾರ ನಿರ್ವಹಣಾ ಅಧ್ಯಯನ ಕೇಂದ್ರದಲ್ಲಿ ನಡೆದ ಎಂ.ಕಾA. ಎರಡನೇ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬದ್ಧತೆ, ಸಮಯಪಾಲನೆ, ವಸ್ತುನಿಷ್ಠ ಮಾದರಿಯು, ವ್ಯಕ್ತಿತ್ವ ವಿಕಸನಕ್ಕೆ ದಾರಿ ಮಾಡುವ ಮುಖೇನ ಗುಣಮಟ್ಟದ ಜೀವನಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ಮೌಲ್ಯಾಧಾರಿತ ಸಂಬ0ಧಗಳನ್ನು ಕಟ್ಟುವ ಶಿಕ್ಷಣವೇ ಶ್ರೇಷ್ಠ ಎಂದರು.
ಪ್ರಾಚೀನ ಕಾಲದಲ್ಲಿ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರು, ಹೆಣ್ಣಿನ ಅಂತಃಶಕ್ತಿ ಅರಿಯದ ಅಂದಿನ ವ್ಯವಸ್ಥೆ ಅವಳನ್ನು ನಾಲ್ಕು ಗೋಡೆಗಳ ಮಧ್ಯೆ ಬಂಧಿಸಿ ಬಾಯಿ ಮುಚ್ಚಿಸಲಾಗಿತ್ತು. ಆ ದರೆ, ಕಾಲ ಬದಲಾಗಿದೆ ಶೈಕ್ಷಣಿಕ ರಾಜಕೀಯ ಸಾಮಾಜಿಕ ವೈದ್ಯಕೀಯ ಹೀಗೆ ಎಲ್ಲ ರಂಗದಲ್ಲೂ ಹೆಣ್ಣು ಸಶಕ್ತಳಾಗಿದ್ದಾಳೆ ಎಂದು ನುಡಿದರು.
ಮುಂದಿನ ದಿನಗಳಲ್ಲಿ ವಿದ್ಯಾಭ್ಯಾಸಗಳು ಉದ್ಯೋಗ ಹುಡುಕುವ ಮತ್ತು ಉದ್ಯೋಗ ಪಡೆದ ನಂತರದ ಸಂಧರ್ಭಗಳಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅವುಗಳನ್ನು ಅತ್ಯಂತ ಚಾಣಾ ಕ್ಷತನದಿಂದ ನಿರ್ವಹಿಸಬೇಕಾಗುತ್ತದೆ. ಭವಿಷ್ಯದ ಸವಾಲು ಗಳನ್ನು ಎದುರಿಸಲು ಮಾನಸಿಕವಾಗಿ ಸಿದ್ಧರಿರಿ ಎಂದು ಕರೆ ನೀಡಿದರು. ಈ ಸಂಧರ್ಭದಲ್ಲಿ ಪ್ರಾಂಶುಪಾಲರಾದ ಡಾ. ಈ. ಮಮತ, ವಿಭಾಗದ ಮುಖ್ಯಸ್ಥರಾದ ಮುತ್ತುರಾಜ್, ಸಹಾಯಕ ಪ್ರಾಧ್ಯಾಪಕರಾದ ಶ್ವೇತ ಜಿ. ಕೆ, ಗೀತಶ್ರೀ, ಹರಿಪ್ರಸಾದ್ ಹಾಜರಿದ್ದರು.

(Visited 1 times, 1 visits today)