ಹುಳಿಯಾರು: ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹೇಮಾವತಿ ಕುಡಿಯುವ ನೀರಿನ ಯೋಜನೆಯಡಿ ಗುರತ್ವಾಕರ್ಷಣೆಯ ಮೂಲಕ ಈಗಾಗಲೇ ಚಾನಲ್ ಕೆಲಸ ಆಗಿರುವಂತಹ ಶೆಟ್ಟಿಕೆರೆ ಹೋಬಳಿಯ ಸಾಸಲು ಕೆರೆಯಿಂದ ಹುಳಿಯಾರು ಕೆರೆಯವರೆಗೆ ಹೇಮಾವತಿ ನೀರನ್ನು ಹರಿಸಲಾಗುತ್ತದೆ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹೇಮಾವತಿ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಗಡಬನಹಳ್ಳಿ ಬಳಿಯ ಮುಖ್ಯ ನಾಲೆಯಿಂದ ಗುರುತ್ವಾಕರ್ಷಣೆಯ ಮೂಲಕ ನೀರು ಹರಿಸುವ ಗೇಟ್‌ನ್ನು ತೆರವು ಮಾಡುವ ಮೂಲಕ ಚಾಲನೆ ನೀಡಿ ಗಂಗಾಪೂಜೆ ನೆರೆವೆರಿಸಿ ಅವರು ಮಾತನಾಡಿದರು.
ಮಂಗಳವಾರದಿ0ದ ಮೂರು ತಿಂಗಳಕಾಲ ೮.೩ ಕಿ.ಮೀ ಚಾನಲ್ ಮೂಲಕ ಹರಿಯುವಂತ ನೀರು ತಾಲ್ಲೂಕಿನ ಸಾಸಲು ಕೆರೆಯಿಂದ ಪ್ರಾರಂಭವಾಗಿ ಶೆಟ್ಟಿಕೆರೆ, ಅಜ್ಜನಕೆರ, ಗೌಡನಹಳ್ಳಿಕೆರೆ, ಹೆಸರಹಳ್ಳಿಕೆರೆ, ಅಂಕಸAದ್ರಹಣೆಯ ಮೂಲಕ ತಿಮ್ಲಾಪುರದ ಕೆರೆ ಮೂಲಕ ಹುಳಿಯಾರು ಕೆರೆಯನ್ನು ತಲುಪುವುದು. ಹಾಗೇ ಮುಂದುವರೆದು ಸಾದ್ಯವಾದರೆ ಬೋರನಕಣಿವೆಗೂ ಹರಿಸಲಾಗುವುದು ಎಂದರು.
ಈ ಚಾನಲ್ ೧೦ ವೆಂಟಿಲೇಟರ್‌ಗಳಲ್ಲಿ ಮಳೆಯಿಂದಾಗಿ ಹೂಳೂ ತುಂಬಿತ್ತು. ಅದನ್ನು ೨೮ ಲಕ್ಷ ವೆಚ್ಚದಲ್ಲಿ ತೆಗೆಸಲಾಗಿದ್ದು ಈ ಬಾರಿ ಸಂಪೂರ್ಣ ನೀರು ಸರಾಗವಾಗಿ ಹರಿಯುವ ಸಾದ್ಯತೆ ಇದೆ. ಈ ಕೆಲಸದ ಬಗ್ಗೆ ಸಹಕರಿಸಿದ ಇಂಜಿನಿಯರ್‌ಗಳು, ರೈತರಿಗೆ ಹಾಗೂ ಗುತ್ತಿಗೆದಾರರಿಗೆ ಧನ್ಯವಾದ ಸಲ್ಲಿಸುವ ಜೊತೆಗೆ ಈ ಕೆಲಸದ ಬಗ್ಗೆ ನಮ್ಮನ್ನು ಎಚ್ಚರಿಕೆ ನೀಡಿ ನಿಂದಿಸಿದವರಿಗೂ ಧನ್ಯವಾದಗಳು. ನಿಮ್ಮ ನಿಂದನೆಗೆ ನಾವು ಯಾವುದೇ ವಿರೋಧ ವ್ಯಕ್ತಪಡಿಸುವುದಿಲ್ಲ. ನಿಮ್ಮ ನಿಂದನೆ ನಮಗೆ ಜಾಗೃತಿ ಇದ್ದಂತೆ ಅದನ್ನು ನಾನು ಸ್ವೀಕರಿಸುತ್ತೇನೆ. ಅವರ ಆಸೆಯಂತೆ ನೀರನ್ನು ಹರಿಸುವ ಕೆಲಸ ಮಾಡಿದ್ದೇನೆ. ಯಾವ ಸಂದರ್ಭಕ್ಕೆ ಯಾವ ಕೆಲಸ ಮಾಡಬೇಕೊ ಆ ಕೆಲಸವನ್ನು ಮಾಡುತ್ತೇನೆ. ಯಾವುದೇ ಸಂಶಯ ಬೇಡ ಎಂದರು.
ನಾಲೆಯಲ್ಲಿ ಹೂಳು ತೆಗೆಯಲು ಪ್ರತಿ ವರ್ಷ ಹಣದ ಅವಶ್ಯಕತೆ ಇರುತ್ತದೆ. ಹಾಗಾಗಿ ಸಂಸದ ಸೋಮಣ್ಣ ಅವರಿಗೆ ಈ ಚಾನಲ್‌ಗೆ ಕಟ್ ಆಂಡ್ ಕವರ್‌ಗೆ ಅನುದಾನ ನೀಡುವಂತೆ ಪತ್ರ ಬರೆದಿದ್ದೆ. ಅದಕ್ಕೆ ಅವರು ಸಕರಾತ್ಮಕವಾಗಿ ಸ್ಪಂದಿಸಿ ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಕಳುಹಿಸಿದರೆ ನಾನು ಕೇಂದ್ರದಿAದ ನೀಡುತ್ತೇನೆ ಎಂದು ತಿಳಿಸಿದ್ದಾರೆ. ಈ ಕಾಮಗಾರಿ ನಡೆಯದಿದ್ದರೆ ಪ್ರತಿ ವರ್ಷ ಈ ಸಮಸ್ಯೆ ಇರುತ್ತದೆ. ಅದ್ದರಿಂದ ಕಟ್ ಆಂಡ್ ಕವರ್ ಮಾಡಬೇಕು. ಇದಕ್ಕೆ ನಾನೇ ಖುದ್ದು ಕೇಂದ್ರಕ್ಕೆ ಹೋಗಿ ಈ ಕೆಲಸವನ್ನು ಮಾಡಿಸುತ್ತೆನೆ ಎಂದರು.
ಇನ್ನೊ0ದು ಭಾಗವಾದ ನವಿಲೆಕೆರೆ ಭಾಗದ ಚಾನಲ್ ಕೆಲಸಕ್ಕೆ ರೈತರು ಭೂಮಿ ನೀಡಲು ಮುಂದೆ ಬಂದಿದ್ದು ಅವರನ್ನು ವಿಶ್ವಾಸಕ್ಕೆ ಪಡೆದು ಈ ಭಾಗದ ಕೆಲಸ ಮಾಡುತ್ತೆನೆ. ರೈತರ0 ಭೂಸ್ವಾದೀನಕ್ಕೆ ೧೫ ಕೋಟ ಹಣ ಇದ್ದು ರೈತರು ದೊಡ್ಡ ಮನಸ್ಸು ಮಾಡಿ ತಮ್ಮ ಭೂಮಿ ಬಿಟ್ಟು ಕೊಟ್ಟರೆ ಚಾನಲ್ ಕೆಲಸ ಮಾಡಿ ಈ ವರ್ಷದ ಕೊನೆಯ ವೇಳೆಗೆ ನೀರನ್ನು ಪ್ರಾಯೋಗಿಕವಾಗಿ ಹರಿಸುತ್ತೇನೆ. ಈಗಾಗಲೇ ದಾಖಲೆ ನೀಡಿರುವಂತಹ ರೈತರಿಗೆ ಮೂರು ಕೋಟಿಗಳಷ್ಟು ಪರಿಹಾರದ ಹಣ ನೀಡಿದ್ದೇನೆ. ಅದೇ ರೀತಿ ಗ್ಯಾರೇಹಳ್ಳಿ ಭಾಗದ ರೈತರ ಮನವೊಲಿಸುವ ಕೆಲಸ ಮಾಡಿದ್ದೇನೆ. ರೈತರು ಸಹಕರಿಸಿದರೆ ಖಂಡಿತ ಈ ಹೇಮಾವತಿ ನಾಲಾ ಕಾಮಗಾರಿಯನ್ನು ಸಂಪೂರ್ಣಗೊಳಿಸುತ್ತೆನೆ ಎಂದರು.
ಕಾವೇರಿ ನೀರಾವತಿ ನಿಗದಮದ ಎಕ್ಸಿಟಿಟಿವ್ ಇಂಜಿನಿಯರ್ ಮುರುಳಿಧರ್ ಹೆಚ್.ಆರ್ ಮಾತನಾಡಿ ಮುಖ್ಯ ನಾಲೆಯಿಂದ ೧೪೨ ಕ್ಯೂಸೆಕ್ಸ್ ನೀರನ್ನು ಹಂಚಿಕೆ ಮಾಡಿದ್ದು ಈ ಹೇಮಾವತಿ ನಾಲೆಯಲ್ಲಿ ಹರಿಸಲಾಗುವುದು. ಇದು ಮರುಳು ಮಿಶ್ರೀತ ಮಣ್ಣು ಹೆಚ್ಚಾಗಿದ್ದು ಅದು ಪ್ರತಿವರ್ಷ ಕುಸಿಯುತ್ತಿದೆ. ಅದ್ದರಿಂದ ಇದಕ್ಕೆ ಕಟ್ ಆಂಡ್ ಕವರ್ ಮಾಡಿಸಲೇಬೇಕಿದೆ. ಈ ಬಗ್ಗೆ ಶಾಸಕರು ಹಾಗೂ ಸರ್ಕಾರದಿಂದ ಸಂಸದರಿ0ದ ಆಗಬೇಕಿದೆ. ಈ ಕಟ್ ಆಂಡ್ ಕವರ್ ಮಾಡದೇ ಇದ್ದರೆ ಹೂಳು ತೆಗೆಯಲು ಪ್ರತಿ ವರ್ಷ ಒಂದರಿAದ ಒಂದುವರೆ ಕೋಟಿ ಹಣ ಬೇಕಾಗುತ್ತದೆ. ಅದ್ದರಿಂದ ಶಾಸಕರಿಗೆ ಈ ಬಗ್ಗೆ ಅರಿವಿದ್ದು ಅವರು ಈಗಾಗಲೇ ಅದರ ಬಗ್ಗೆ ಕಾರ್ಯೋನ್ಮೂಖರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪುರಸಭಾದ್ಯಕ್ಷ ಸಿ.ಹೆಚ್.ದಯಾನಂದ್, ಪಿಎಲ್‌ಡಿ ಬ್ಯಾಂಕ್‌ಅದ್ಯಕ್ಷ ಹೆಚ್.ಆರ್.ಶಶಿದರ್, ನಿರ್ದೇಶಕ ರಾಮಚಂದ್ರಯ್ಯ, ಕಾವೇರಿ ನಿರಾವರಿ ನಿಗಮದ ಕೀರ್ತಿ ನಾಯ್ಕ, ಎಇ ಸೌಜನ್ಯ ಸೇರಿದಂತೆ ನೀರಾವರಿ ಹೋರಾಟಗಾರರಾದ ಆಟೋ ಮಂಜುನಾಥ್, ಶ್ಯಾವಿಗೆಹಳ್ಳಿ ಮಧು ಗುತ್ತಿಗೆದಾರರು ಮುಖಂಡರುಗಳು ಇದ್ದರು.

(Visited 1 times, 1 visits today)