ತುರುವೇಕೆರೆ: ತಾಲೂಕಿನ ಅಮ್ಮಸಂದ್ರ ಗ್ರಾಮ ಪಂಚಾಯತಿವತಿಯಿ0ದ ಕಂದಾಯ ವಸೂಲಾತಿ ಆಂದೋಲನವನ್ನು ಈ ಭಾರಿ ತಮಟೆ ಬಾರಿಸಿ ಎಚ್ಚರಿಸುವ ಮೂಲಕ ಅದ್ಯಕ್ಷರು, ಸದಸ್ಯರು ವಿನೂತನವಾಗಿ ಆಚರಿಸಿ ಜನರ ಗಮನ ಸೆಳೆದರು.
ಗ್ರಾಮ ಪಂಚಾಯತಿ ಮಾಜಿ ಅದ್ಯಕ್ಷ ಹಾಲಿ ಸದಸ್ಯ ಸಿದ್ದಗಂಗಯ್ಯ ಮಾತನಾಡಿ ಗ್ರಾಮ ಪಂಚಾಯತಿ ಗ್ರಾಮಗಳ ಅಭಿವೃದ್ದಿಗೆ ಮೂಲ ಸೌಕರ್ಯ ಓದಗಿಸಲು ಅನುದಾನದ ಕೊರತೆ ಕಾಡುತ್ತಿದೆ. ತೆರಿಗೆ ಕಂದಾಯ ಗ್ರಾಮ ಪಂಚಾಯತಿಗೆ ಮೂಲ ಆದಾಯವಾಗಿದೆ. ಗ್ರಾಮ ಪಂಚಾಯತಿಯಲ್ಲಿ ಶೇ ೮೦ ರಷ್ಟು ಕಂದಾಯ ವಸೂಲಿ ಮಾಡಬೇಕು ಎಂಬ ಸರ್ಕಾರದ ಆದೇಶವಿದೆ. ಆದರೆ ನಮ್ಮ ಗ್ರಾಮ ಪಂಚಾಯತಿಯಲ್ಲಿ ಲಕ್ಷಾಂತರ ರೂ ತೆರಿಗೆ ಕಂದಾಯ ಬಾಕಿ ಉಳಿಸಿಕೊಂಡಿದ್ದು ಕಂದಾಯ ಸರಿಯಾಗಿ ವಸೂಲಾತಿಯಾಗದೇ ನೀರು ವಿತರಕರು, ನೌಕರರಿಗೆ ಸಂಬಳ ನೀಡಲಾಗುತ್ತಿಲ್ಲ. ಜನರಿಗೆ ವಿದ್ಯುತ್ ಬೀದಿ ದೀಪ, ಚರಂಢಿ ಸ್ವಚ್ಚತೆ ಮಾಡಲು ಹಣ ವಿಲ್ಲದೇ ಪರದಾಡುವಂತಾಗಿದೆ ಅದ್ದರಿಂದ ಕಂದಾಯ ವಸೂಲಾತಿ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಹೈಡನ್ ಬರ್ಗ್ ಸಿಮೆಂಟ್ ಕಾರ್ಖಾನೆ ಆಡಳಿತ ಮಂಡಳಿ ಸುಮಾರು ವರ್ಷಗಳಿಂದ ಕಂದಾಯ ತೆರಿಗೆ ಹಣ ಪಾವತಿಸದೇ ಸತಾಯಿಸುತ್ತಿದ್ದಾರೆ. ಗ್ರಾಮ ಪಂಚಾಯತಿ ಯಿಂದ ಕಂದಾಯ ತೆರಿಗೆ ಕಟ್ಟುವಂತೆ ಹಲವಾರು ಬಾರಿ ನೋಟೀಸ್ ನೀಡಿದರೂ ಸಹ ಕಂದಾಯ ತೆರಿಗೆ ಕಟ್ಟಿಲ್ಲ. ಕಾರ್ಖಾನೆ ಆಡಳಿತ ಮಂಡಳಿ ತೆರಿಗೆ ಕಡಿಮೆ ಮಾಡುವಂತೆ ಸಿ.ಎಸ್. ನ್ಯಾಯಲಯದಲ್ಲಿ ಮನವಿ ಮಾಡಿದ್ದರೂ ಈಗಾಗಲೇ ಸಿ.ಎಸ್. ನ್ಯಾಯಾಲಯದಲ್ಲಿಯೂ ಸಹ ಕಂದಾಯ ತೆರಿಗೆಯನ್ನು ಕಡಿಮೆ ಮಾಡಿ ಕೂಡಲೇ ಪಾವತಿ ಸುವಂತೆ ಸಿಮೆಂಟ್ ಕಾರ್ಖನೆಗೆ ಆದೇಶ ನೀಡಿದರೂ ಮತ್ತೆ ಇನ್ನು ಕಡಿಮೆ ಮಾಡಬೇಕು ಹಾಗೂ ಜಂಟಿ ಸರ್ವೆ ಮಾಡಬೇಕು ಎಂದು ಸಬೂಬು ಹೇಳುತ್ತಾ ಸುಮಾರು ೧ ಕೋಟಿಗೂ ಅಧಿಕ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದ್ದಾರೆ ಕೂಡಲೇ ಕಂದಾಯ ತೆರಿಗೆ ಕಟ್ಟಬೇಕು ಎಂದು ಕಂದಾಯ ಆಂದೋಲನದಲ್ಲಿ ಸಿಮೆಂಟ್ ಕಾರ್ಖಾನೆ ಮುಂಬಾಗ ತಮಟೆ ಬಾರಿಸಿ ಒತ್ತಾಯಿಸಲಾಯಿತು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಗಂಗಾಧರ್ ಉಪಾಧ್ಯಕ್ಷ ಪಲ್ಲವಿ ಸದಸ್ಯರಾದ ಶಿವರಾಜು, ವರಲಕ್ಷ್ಮೀ, ಪವಿತ್ರ, ಸಿದ್ದಗಂಗಮ್ಮ, ಪದ್ಮರೋಹಿತ್, ಕಾರ್ಯದರ್ಶಿ ರಾಜಣ್ಣ, ಬಿಲ್ ಕಲಕ್ಟರ್ ಗುರುಮೂರ್ತಿ, ಸಿಬ್ಬಂದಿಗಳಾದ ಶೋಭಾ, ಆಶ್ವಿನಿ ಸೇರಿದಂತೆ ವಾಟರ್ ಮ್ಯಾನ್ ಗಳು ಇದ್ದರು.

(Visited 1 times, 1 visits today)