ತುಮಕೂರು: ಜಿಲ್ಲೆಯಲ್ಲಿ ಹೊಸದಾಗಿ ಕಂದಾಯ ಗ್ರಾಮ/ಉಪ ಗ್ರಾಮ/ ಬಡಾವಣೆ ರಚನೆಗೆ ಸಂಬ0ಧಿಸಿದ0ತೆ ಒಂದು ವಾರದೊಳಗಾಗಿ ಪ್ರಸ್ತಾವನೆಗಳನ್ನು ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕಂದಾಯ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದರು.
ಕಂದಾಯ ಇಲಾಖೆ, ಜಿಲ್ಲಾ ಪಂಚಾಯತ್ ಹಾಗೂ ಭೂಮಾಪನ ಮತ್ತು ಭೂ ದಾಖಲೆಗಳ ಇಲಾಖೆಯ ಸಹಯೋಗದಲ್ಲಿ ಕಂದಾಯ ಗ್ರಾಮ, ಉಪಗ್ರಾಮ ಹಾಗೂ ಬಡಾವಣೆ ರಚನೆ ಸಂಬ0ಧಿತ ವಿಷಯಗಳ ಬಗ್ಗೆ ಮಂಗಳವಾರ ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ವಿಶೇಷ ತರಬೇತಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು ೫೦ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಮನೆಗಳು ಅ ಥವಾ ೨೫೦ಕ್ಕೂ ಹೆಚ್ಚು ಜನಸಂಖ್ಯೆ ಇರುವ ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಗುರುತಿಸಬೇಕು. ಈ ಗ್ರಾಮವು ಮೂಲ ಗ್ರಾಮದಿಂದ ೧ ಕಿ.ಮೀ. ಅಂತರದಲ್ಲಿರಬೇಕು. ಅದೇ ರೀತಿ ೧೦ಕ್ಕೂ ಅಧಿಕ ೫೦ಕ್ಕಿಂತ ಕಡಿಮೆ ಮನೆಗಳನ್ನು ಹೊಂದಿರುವ ಹಾಗೂ ಕಂದಾಯ ಗ್ರಾಮವಾಗಲು ಅನರ್ಹವಿರುವ ಜನವಸತಿ ಪ್ರದೇಶಗಳನ್ನು ಉಪಗ್ರಾಮವನ್ನಾಗಿಸುವ ಪ್ರಸ್ತಾವನೆ ಸಲ್ಲಿಸಲು ಅವಕಾಶವಿದೆ ಎಂದು ತಿಳಿಸಿದರು.
ಕಂದಾಯ ಗ್ರಾಮ ರಚನೆ ಸಂಬAಧ ಸಂಪನ್ಮೂಲ ವ್ಯಕ್ತಿಗಳು ತರಬೇತಿಯಲ್ಲಿ ನೀಡಿದ ನಿಯಮಗಳನ್ನು ಅನುಸರಿಸಬೇಕು. ಕಂದಾಯ ವಿಷಯಗಳ ಬಗ್ಗೆ ಇರುವ ಸಂದೇ ಹಗಳನ್ನು ಪರಿಹರಿಸಿಕೊಳ್ಳಲು ತರಬೇತಿ ಕುರಿತ ಹೆಚ್ಚಿನ ಮಾಹಿತಿಯನ್ನು ಯು-ಟ್ಯೂಬ್ ಚಾನೆಲ್‌ಗೆ ಅಪ್‌ಲೋಡ್ ಮಾಡಲಾಗುವುದು. ಅಧಿಕಾರಿ/ಸಿಬ್ಬಂದಿಗಳು ಇದರ ಸದುಪಯೋಗ ಪಡೆಯಬಹುದು ಎಂದರು.
ತರಬೇತಿಯ ಸಂಪನ್ಮೂಲ ವ್ಯಕ್ತಿ ಹಾಗೂ ಕಂದಾಯ ಇಲಾಖೆ ಆಯುಕ್ತಾಲಯದ ತಹಶೀಲ್ದಾರ್ ಗಣಪತಿಶಾಸ್ತಿç ಅವರು ಕಂದಾಯ ಗ್ರಾಮ ರಚನೆಯ ಕಾಯ್ದೆ/ನಿಯಮ, ಕಂದಾಯ ಗ್ರಾಮ/ಉಪ ಗ್ರಾಮಗಳಿಗಿರಬೇಕಾದ ಅರ್ಹತೆ, ಪ್ರಸ್ತಾವನೆ ತಯಾರಿಕೆ, ಕಂದಾಯ ಗ್ರಾಮಗಳನ್ನಾಗಿಸಲು ಪ್ರಾಥಮಿಕ ಹಾಗೂ ಅಂತಿಮ ಅಧಿಸೂಚನೆ, ಹಕ್ಕುಪತ್ರ ನೀಡಿಕೆ, ಹಕ್ಕುಪತ್ರ ತಂತ್ರಾ0ಶ ನಿರ್ವಹಣೆ, ಹಕ್ಕುಪತ್ರ ತಿದ್ದುಪಡಿ, ಸೇರಿದಂತೆ ಮತ್ತಿತರ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿಗಳಾದ ಗೋಟೂರು ಶಿವಪ್ಪ, ನಾಹಿದಾ ಜಮ್ ಜಮ್, ಸಪ್ತಶ್ರೀ, ತಹಶೀಲ್ದಾರರಾದ ಮಂಜುನಾಥ, ಶಿರಿನ್ ತಾಜ್, ಪಿ.ಎಸ್. ರಾಜೇಶ್ವರಿ, ಮೋಹನ್‌ಕುಮಾರ್, ಎನ್.ಎ. ಕುಂಜಿ ಅಹ ಮದ್, ಭೂ ದಾಖಲೆಗಳ ಇಲಾಖೆ ಉಪ ನಿರ್ದೇಶಕ ನಿರಂಜನ್ ಸೇರಿದಂತೆ ಗ್ರಾಮಾಡಳಿತಾಧಿಕಾರಿಗಳು, ಪಿಡಿಒಗಳು, ಕಂದಾಯ ನಿರೀಕ್ಷಕರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

(Visited 1 times, 1 visits today)