ತುಮಕೂರು: ಮಂಡಿಪೇಟೆಯಲ್ಲಿರುವ ಶ್ರೀ ಮಾರಯಮ್ಮ ದೇವಿಯ ೬೨ ನೇ ಜಾತ್ರ ಮಹೊತ್ಸವದ ಕರಗಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ನಗರ ಶಾಸಕರಾದ ಜ್ಯೋತಿಗಣೇಶ್ ತುಮಕೂರು ನಗರದ ಅಭಿವೃದ್ದೀಯಲ್ಲಿ ಸ್ಲಂ ನಲ್ಲಿರುವ ಬಡವರ ಕೊಡುಗೆ ಅಪಾರವಾಗಿದೆ ಮಂಡಿಪೆಟೆ ಮಾರ್ಕೇಟ್ ಗಳಲ್ಲಿ ಅಗತ್ಯವಿರುವ ಮಾನವ ಶ್ರಮವನ್ನು ಮಾರಿಯಮ್ಮ ನಗರದ ಜನರು ನೀಡುತ್ತಿದ್ದಾರೆ ಇಲ್ಲಿರುವ ಯುವಕರು ಅಸಂಘಟಿತ ವಲಯಗಳಲ್ಲಿ ದುಡಿಯುತ್ತಿದ್ದಾರೆ ಅಂಬೇಡ್ಕರ್ ಆಶಯದಂತೆ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕು ದ್ರಾವಿವಿಡ ಸಂಸ್ಕೃತಿ ಹಿರಿಯರನ್ನು ಗೌರವಿಸುವ ಒಗ್ಗಟ್ಟಿನಲ್ಲಿ ನಡೆಯು ವುದನ್ನು ಕಲಿಸಿದೆ ಇದರಿಂದಲೇ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಇಂಡಿಯಾಕ್ಕೆ ಮಾದರಿಯಾದ ವಸತಿ ಸಮುಚ್ಛಯಗಳನ್ನು ಪಡೆಯಲಾಗಿದೆ ಮಾರಿಯಮ್ಮ ನಗರದ ಮೂಲ ದೇವಸ್ಥಾನದ ಅಭಿವೃದ್ಧಿಗೆ ಅಗತ್ಯ ನೆರವು ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ ಎಂದರು.
ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿ ಸ್ಲಂ ಜನರ ಕೊಡಿಗೆಯನ್ನು ಶಾಸಕರು ಗುರುತಿಸಿರುವುದಕ್ಕೆ ಧನ್ಯವಾದಗಳು ನಿವೇಶ ರಹಿತರಿಗೆ ನಿವೇಶನ ಮತ್ತು ಸ್ಲಂ ಜನರಿಗೆ ಹಕ್ಕು ಪತ್ರ ದೊರೆಕಿಸಿಕೊಡಬೆಕೇಂದು ಅಗ್ರಹಿಸದರು ಮಾಜಿ ನಗರ ಪಾಲಿಕೆ ಸದಸ್ಯರಾದ ಎಂ.ಪಿ. ಮಹೇಶ್ , ಲಕ್ಷ್ಮೀನರಸಿಂಹರಾಜು, ಮುಖಂಡರಾದ ಜಿಯಾಉಲ್ಲ, ವಿನಯ್ ಜೈನ್ ಪೂಜೆ ಸಲ್ಲಿಸಿದರು . ಮಾರಿಯಮ್ಮ ಯುವಕರ ಸಂಘದ ಪದಾಧಿಕಾರಿಗಳಾದ ಕಣ್ಣನ್ , ಕೃಷ್ಣ , ಮಾದವನ್, ಮಾರಿ, ರಾಜ, ಯುವ ಭೀಮ್ ಪಡೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

(Visited 1 times, 1 visits today)