ಹುಳಿಯಾರು: ಹುಳಿಯಾರು ಕಸ ವಿಲೇವಾರಿ ಘಟಕವನ್ನು ಎಚ್.ಮೇಲನಹಳ್ಳಿ ಬಳಿ ನಿರ್ಮಾಣ ಮಾಡಲು ನಾವು ಬಿಡುವುದಿಲ್ಲ. ಹುಳಿಯಾರು ಸಮೀಪದಲ್ಲೇ ಸಾಕಷ್ಟು ಸರ್ಕಾರಿ ಭೂಮಿ ಇರುವಾಗ ೨೦ ಕಿ.ಮೀ. ದೂರದ ಎಚ್.ಮೇಲನಹಳ್ಳಿಯ ಭೂಮಿಯ ಮೇಲೆ ಕಣ್ಣೇಕೆ? ಎಂದು ಸ್ಥಳೀಯರು ತಹಸೀಲ್ದಾರ್ ಅವರನ್ನು ಪ್ರಶ್ನಿಸಿದ ಘಟನೆ ಶನಿವಾರ ನಡೆದಿದೆ.
ಹುಳಿಯಾರಿನ ಕಸ ವಿಲೇವಾರಿ ಘಟಕ ನಿರ್ಮಿಸಲು ಎಚ್.ಮೇಲ ನಹಳ್ಳಿ ಸರ್ವೆ ನಂಬರ್ ೬೯ ಹಾಗೂ ೬೯/೩ ರಲ್ಲಿ ಈ ಹಿಂದಿನ ತಹಸೀಲ್ದಾರ್ ಕೆ.ಪುರಂದರ ಅವರು ಸ್ಥಳ ಗುರುತಿಸಿದ್ದು ನೂತನÀ ತಹಸೀಲ್ದಾರ್ ಎಂ.ಮಮತ ಅವರು ಶನಿವಾರ ಸ್ಥಳ ವೀಕ್ಷಣೆಗೆ ಆಗಮಿ ಸಿದ್ದರು. ಈ ಸಂದರ್ಭದಲ್ಲಿ ಘಟಕ ನಿರ್ಮಾಣ ಸ್ಥಳಕ್ಕೆ ಹೋ ಗದೆ ಗ್ರಾಮದಲ್ಲೇ ಸ್ಥಳೀಯರು ಕಾರಿಗೆ ಮುತ್ತಿಗೆ ಹಾಕಿ ವ್ಯಾಪಕ ವಿರೋಧ ವ್ಯಕ್ತಪಡಿಸಿದರು. ಹಿಂದಿನ ತಹಸೀಲ್ದಾರ್ ಅವರ ನಡೆಯನ್ನು ತೀರ್ವವಾಗಿ ಖಂಡಿಸಿದರು.
ಎಚ್.ಮೇಲನಹಳ್ಳಿ ಗ್ರಾಮದಲ್ಲೇ ೧೮೦೦ ರಿಂದ ೨೦೦೦ ಸಾವಿರ ಜನಸಂಖ್ಯೆ ಇದೆ. ಅಲ್ಲದೆ ಊರಿಗೆ ಹೊಂದಿಕೊAಡAತೆ ಹನುಮ ದಾಸಯ್ಯನಪಾಳ್ಯ, ಜಯಸುವರ್ಣಪುರ, ಲಂಬಾಣಿತಾAಡ್ಯ ಹಾಗೂ ತೋಟದ ಮನೆಗಳೂ ಸಹ ಇವೆ. ೨೦೨೪-೨೫ ನೇ ಸಾಲಿನ ಪಶು ಇಲಾಖೆ ನಡೆಸಿದ ಗಣತಿಯ ಪ್ರಕಾರ ೨೩೧ ದನಗಳು, ೫೩೦ ಎಮ್ಮೆಗಳು, ೨೦೦೦ ಕ್ಕೂ ಹೆಚ್ಚು ಕುರಿ ಮೇಕೆಗಳಿಗೆ. ಈಗ ಕಸ ವಿಲೇವಾರಿ ಘಟಕ ನಿರ್ಮಿಸಲು ಉದ್ದೇಶಿಸಿರುವ ಸ್ಥಳವೇ ಇಷ್ಟು ಜಾನುವಾರುಗಳು ಅನಾದಿಕಾಲದಿಂದಲೂ ಮೇವಿನ ಆಶ್ರಯ ತಾಣವಾಗಿದೆ. ಇಲ್ಲಿ ಕಸದ ಘಟಕ ಮಾಡಿದರೆ ಮೂಕಪ್ರಾಣಿಗಳ ಮೇವಿಗೆ ತೊಂದರೆಯಾಗುತ್ತದೆ ಎಂದು ತಿಳಿಸಿದ್ದಾರೆ.
ಎಚ್.ಮೇಲನಹಳ್ಳಿ ಸುತ್ತಲಿನ ಪ್ರದೇಶ ಮಲೆನಾಡನ್ನೂ ನಾಚಿಸು ವಂತ ಪ್ರಕೃತಿ ಸೊಬಗನ್ನು ಹೊಂದಿದೆ. ಗುಡ್ಡಗಾಡು ಪ್ರದೇಶ, ಅರಣ್ಯ ಪ್ರದೇಶ ಸಮೀಪದಲ್ಲಿರುವುದರಿಂದ ವನ್ಯಜೀವಿಗಳಾದ ನವೀಲು, ಜಿಂಕೆ, ಕಾಡುಹಂದಿ, ಚಿರತೆಗಳ ಆಶ್ರಯ ತಾಣವಾಗಿದೆ. ಅಲ್ಲದೆ ಅಸಂಖ್ಯಾತ ಪಕ್ಷಿ ಸಂಕುಲಗಳಿವೆ. ಇಲ್ಲಿ ಹುಳಿಯಾರು ಪಟ್ಟಣದ ಕಸ ಸುರಿದರೆ ಪ್ರಕೃತಿ ಕಲ್ಮಶವಾಗಿ ಪ್ರಾಣಿಪಕ್ಷಿಗಳ ಪ್ರಾಣಕ್ಕೆ ಕುತ್ತು ತಂದAತ್ತಾಗುತ್ತದೆ. ಸಮೀಪದಲ್ಲಿ ಭೂತಪ್ಪನ ವಜ್ರವಿದ್ದು ಎಂದೂ ಬತ್ತದ ನೀರಿನ ಒರತೆಯಿದ್ದು ಈ ಭಾಗಕ್ಕೆ ಜೀವಜಲವಾಗಿದೆ. ಕಸದ ಘಟಕ ಮಾಡಿದರೆ ಮಳೆಗಾಲದಲ್ಲಿ ಕಲುಷಿತ ನೀರು ಹರಿದು ಕಲ್ಯಾಣಿ ಸೇರಿ ನೀರು ಮಲಿನಗೊಳ್ಳುತ್ತದೆ. ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
೨೫ ಕೀ.ಮೀ.ದೂರದಲ್ಲಿ ಘಟಕ ಸ್ಥಾಪನೆಯಿಂದ ಸಾಗಾಣಿಕೆ ವೆಚ್ಚವೂ ಅಧಿಕವಾಗುತ್ತದೆ. ಯಾವುದೇ ಕಾರಣಕ್ಕೂ ಇಲ್ಲಿ ಘಟಕ ಸ್ಥಾಪನೆಗೆ ಅವಕಾಶ ಕೊಡುವುದಿಲ್ಲ ಎಂದು ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಒಕ್ಕೂರಲಿನಿಂದ ತಮ್ಮ ನಿಲುವು ಪ್ರಕಟಿಸಿದರು. ಆದರೂ ತಹಶಿಲ್ದಾರ್ ಎಂ.ಮಮತಾ ಗ್ರಾಮಸ್ಥರ ಮನವೊಲಿಸಿ ಸ್ಥಳ ಪರಿಶೀಲನೆ ನಡೆಸಿದರು. ಸಿಪಿಐ ಜನಾರ್ಧನ್, ಪ್ರಭಾರ ಪಿಎಸ್‌ಐ ಚಿತ್ತರಂಜನ್, ಕಂದಾಯ ತನಿಖಾಧಿಕಾರಿ ಶ್ರೀನಿವಾಸ್, ಪಟ್ಟಣ ಪಂಚಾಯಿತಿ ಮು ಖ್ಯಾಧಿಕಾರಿ ಮಂಜುನಾಥ್ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.

(Visited 1 times, 1 visits today)