ತುರುವೇಕೆರೆ: ತಾಲೂಕಿನ ಗೋಣಿತುಮಕೂರು ಬಳಿಯಲ್ಲಿ ೫ ಜನರಿಗೆ ದಾಳಿ ನೆಡೆಸಿದ್ದ ತೋಟದ ಮನೆಯಲ್ಲಿ ಬಂದಿಯಾಗಿದ್ದ ಚಿರತೆಯನ್ನು ಬುಧವಾರ ರಾತ್ರಿಯೇ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆಯವರು ಯಶಸ್ವಿಯಾದರು.
ಬುಧವಾರ ಸುಮಾರು ಐದು ಜನರಿಗೆ ದಾಳಿ ನೆಡೆಸಿದ್ದ ಚಿರತೆಯನ್ನು ರೈತರು ದೈರ್ಯ ಮಾಡಿ ತೋಟದ ಮನೆಯಲ್ಲಿ ಕೂಡಿ ಹಾಕಿದ್ದರು. ಸ್ಥಳಕ್ಕೆ ದಾವಿಸಿದ ತಹಶೀಲ್ದಾರ್ ಕುಂ.ಇ. ಅಹಮದ್ ನೇತೃತ್ವದಲ್ಲಿ ಆರಣ್ಯ ಇಲಾಕೆ ಚಿರತೆಯನ್ನು ಬಂದಿಸಲು ಕಾರ್ಯಚರಣೆ ಪ್ರಾರಂಭಿಸಿದ್ದರು. ಕೆಲವು ಕಾಲ ಕಾರ್ಯಚರಣೆ ನೆಡೆಸಿದರೂ ಬೋನಿಗೆ ಕೆಡವಲು ಸಾದ್ಯವಾಗದೆ. ನಂತರ ಮೈಸೂರಿನ ಪಶು ವೈದ್ಯಾಧಿಕಾರಿ ಅರವಳಿಕೆ ತಜ್ಞರಾದ ಡಾ.ವಾಸಿಂ ಆಗಮಿಸಿ ಗನ್ ಮೂಲಕ ಚಿರತೆಗೆ ಅರವೆಳಿಕೆ ಮದ್ದು ನೀಡಿ ಪ್ರಜ್ಞೆ ತಪ್ಪಿಸಿ ನಂತರ ಬಲೆ ಮೂಲಕ ಹಿಡಿದು ಬೋನ್ ನಲ್ಲಿ ಬಂದಿಸಿ ಬಂಡಿ ಪುರ ಅರಣ್ಯಕ್ಕೆ ಬಿಡಲು ಸಾಗಿಸಲಾಯಿತು.
ನಿಟ್ಟಿಸಿರು ಬಿಟ್ಟ ಜನತೆ: ಸುಮಾರು ೫ ಜನರ ಮೇಲೆ ದಾಳಿ ನೆಡೆಸಿ ಮುಖ ಕೈ ಕಾಲು ಗಾಯ ಮಾಡಿದ್ದರಿಂದ ಗೋಣಿತುಮಕೂರು, ದೇವಿಹಳ್ಳಿ, ನಡುವನಹಳ್ಳಿ ಭಾಗದ ಜನರಲ್ಲಿ ಭಯದ ವಾತವರಣ ಮೂಡಿ ಜನರು ಆತಂಕ ಎದರಿಸುವಂತಾಗಿತ್ತು. ಆರಣ್ಯ ಇಲಾಕೆ ಕಾರ್ಯಚರಣೆ ನೆಡೆಸಿ ಚಿರತೆ ಹಿಡಿದ ನಂತರ ಈ ಬಾಗದ ರೈತರು ನಿಟ್ಟಿಸಿರು ಬಿಡುವಂತಾಯಿತು.
ತುರುವೇಕೆರೆ ತಾಲೂಕಿನಲ್ಲಿ ಚಿರತೆ ಹಾವಳಿ ಇದ್ದರು ಮನುಷ್ಯರ ಮೇಲೆ ದಾಳಿ ನೆಡೆಸಿದ್ದು ಇದೇ ಮೊದಲ ಪ್ರಕರಣವಾಗಿದೆ. ತಾಲೂಕಿನ ಹಲವು ಕಡೆಗಳಲ್ಲಿ ಬೋನ್ ಗಳನ್ನು ಇಡಲಾಗಿದೆ. ಚಿರತೆ ಇರುವ ಕಡೆಗಳಲ್ಲಿ ರೈತರು ಸಹ ಬಹಳ ಎಚ್ಚರಿಕೆಯಿಂದ ಇರಬೇಕಿದೆ. ಚಿರತೆ ಕಂಡು ಬಂದರೆ ನಮಗೆ ಮಾಹಿತಿ ನೀಡಬೇಕು. ಬುಧವಾರ ಬಂದಿಸಲಾದ ಚಿರತೆ ಸುಮಾರು ಎರಡುವರೆ ವರ್ಷದ ಗಂಡು ಚಿರತೆಯಾಗಿದ್ದು ಬಂಡಿಪುರ ಅರಣ್ಯಕ್ಕೆ ಬಿಡಲಾಗಿದೆ. ಅಮಿತ್. ಆರ್.ಎಪ್.ಓ. ತಿಳಿಸಿದ್ದಾರೆ.
ತಾಲೂಕಿನಾದ್ಯಂತ ಚಿರತೆ ಹಾವಳಿ ಹೆಚ್ಚಾಗಿ ಕಂಡು ಬರುತ್ತಿದೆ. ರೈತರು ತೋಟಗಳಿಗೆ ತೆರಳಲು ಭಯ ಪಡುವಂತಾಗಿದೆ. ಹಗಲಿನಲ್ಲಿಯೇ ಚಿರತೆ ದಾಳಿ ನೆಡೆಸಿದರೆ ದನ ಕರುಗಳನ್ನು ಮೇಯಿಸುವುದು ಕಷ್ಟವಾಗುತ್ತದೆ. ಗೋಣಿತುಮಕೂರಿನ ಬಳಿಯ ಚಿರತೆ ದಾಳಿಯಿಂದ ಜನರು ಭಯ ಬೀತರಾಗಿದ್ದಾರೆ. ಅರಣ್ಯ ಇಲಾಕೆ ಕೂಡಲೇ ಎಚ್ಚೆತ್ತುಕೊಂಡು ಚಿರತೆ ಇರುವಂತಹ ಕಡೆಗಳಲ್ಲಿ ವಿಶೇಷವಾಗಿ ಗಮನ ಹರಿಸಬೇಕಿದೆ. ಹೆಚ್ಚು ಕಡೆಗಳಲ್ಲಿ ಬೋನ್ ಇಟ್ಟು ಚಿರತೆಗಳನ್ನು ಇಡಿಯಬೇಕು ಎಂದು ರೈತ ಸಂಘದ ಅಧ್ಯಕ್ಷ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.

(Visited 1 times, 1 visits today)