ಪಾವಗಡ: ಚುನಾವಣಾ ಸಮಯದಲ್ಲಿ ಭರವಸೇ ನೀಡಿದ್ದು ಅದರಂತೆ ಪಾವಗಡ ಪಟ್ಟಣವನ್ನು ೨೦ ಕೋಟಿ ವೆಚ್ಚದಲ್ಲಿ ೨೩ ವಾರ್ಡ ಗಳ ಮೂಲ ಭೂತ ಸೌಕರ್ಯಗಳನ್ನು ಕಲ್ಪಿಸಲು ಭದ್ದನಾ ಗೀದ್ದೇನೆ ಎಂದು ಶಾಸಕರಾದ ಎಚ್.ವಿ. ವೆಂಕಟೇಶ್ ತಿಳಿಸಿದರು.
ಬುದುವಾರ ಬೆಳಿಗಿನಿಂದ ಸಂಜೆ ವರೆಗೂ ೨೩ ವಾರ್ಡಗಳಿಗೆ ಕಾಲ್ನಡಗೆಯಲ್ಲಿ ಸುಮಾರು ೧೦ ಕಿಲೋಮೀಟರ್ ದೂರದವರೆಗೂ ಪುರಸಭಾ ಅಧ್ಯಕ್ಷ ಮತ್ತು ಸದಸ್ಯರೊಂದಿಗೆ ಬೇಟಿ ನೀಡಿs ಸಮಸ್ಯೆಗಳನ್ನು ಖುದ್ದು ಪರಿಶೀಲಿಸಿ ನಂತರ ಮಾದ್ಯಮಗಳೊಂದಿಗೆ ಮಾತನಾಡಿ,
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ತಾಲ್ಲೂಕಿಗೆ ವಿಶೇಷ ಅನುದಾನ ೫೦ ಕೋಟಿ ಹಣ ಬಿಡುಗಡೆ ಮಾಡಿದ್ದಾರೆ, ಈ ಹಣದಲ್ಲಿ ಪಾವಗಡದ ೨೦ ಕೋಟಿ ಹಣವನ್ನು ಪಾವಗಡ ಪಟ್ಟಣದ ಅಭಿವೃದ್ಧಿಗೆ ನೀಡಲಾಗುತ್ತಿದೆ, ಅಮೃತಗ್ರಾಮ ೦೨ ಯೋಜನೆಯಲ್ಲಿ ಕುಡಿಯುವ ನೀರಿನ ಪೈಪ್ ಲೇನ್ ಕಾಂಗಾರಿ ಪ್ರಗತಿಯಲ್ಲಿದ್ದು, ಇದೇ ವೇಳೆ ಸಂಬ0ದಪಟ್ಟ ಗುತ್ತಿಗೆದಾರರಿಗೆ ಖಡಕ್ ಹೆಚ್ಚರಿಕೆಯನ್ನು ಸಹ ನೀಡಿದರು.
ವಾರ್ಡಗಳ ಸಮಸ್ಯೆ ಸಾರ್ವಜನಿಕರ ಸಮಸ್ಯೆಯನ್ನು ಆಲಿಸಿದ್ದೇನೆ, ಪುರಸಭಾ ಸದಸ್ಯರು ಸಹ ಭರವಸೇ ನೀಡಿದ್ದು ಅವರ ಸೂಚಿಸಿದ್ದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು, ಎಂದು ತಿಳಿಸಿದರು.
ಮುಖ್ಯವಾಗಿ ವಾರ್ಡಗಳಲ್ಲಿ ರಸ್ತೆ, ಚರಂಡಿ, ಬೇಡಿಕೆ ಇಟ್ಟಿದ್ದು, ಅಭಿವೃದ್ದಿಗೊಳಿಸಲಾಗುವುದು,ಅಲ್ಲದೇ ರಾಜ ಕಾಲುವೆಯ ಅಭಿವೃದ್ದಿ
ಮತ್ತು ೫ ಪಾರ್ಕಗಳ ಅಭಿವೃದ್ದಿಗಾಗಿ ತಲಾ ೫ ಲಕ್ಷö ದಂತೆ ೨೫ ಲಕ್ಷöದಲ್ಲಿ ಅಭಿವೃದ್ಧಿ ಪಡಿಸಲಾಗುವುದು,
ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣಕ್ಕೆ ಪುರಸಭೆಯಿಂದ ಜಾಗ ನೀಡಲಾಗಿದೆ, ಸಾರಿಗೆ ಸಚಿವರು ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿಯವರು ೧೨ ಕೋಟಿ ವೆಚ್ಚದಲ್ಲಿ ನಾಗಲಮಡಿಕೆ ದೇವಸ್ಥಾನದ ಜಿರ್ಣೋದ್ದಾರ ಮಾಡಲು ಒಪ್ಪಿದ್ದಾರೆ, ಮತ್ತು ಡಿಪ್ಲಮೊ ಕಾಲೇಜು ಮತ್ತು ಐ.ಟಿ. ಐ. ಕಾಲೇಜು ಕಟ್ಟಡಗಳ ನಿರ್ಮಾಣ ಮತ್ತು ರ‍್ಯಾಪ್ಟೆ ಗ್ರಾಮಪಂಚಾಯಿತಿಯಲ್ಲಿ ೧೦ ಸಾವಿರ ಎಕರೆಯಲ್ಲಿ ೧೩ ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ಸೋಲಾರ್ ಪಾರ್ಕ ನಿರ್ಮಾಣಕ್ಕೆ ಚಾಲನೇ ನೀಡಲಾಗುವುದು ಮತ್ತೊಮ್ಮೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾವಗಡಕ್ಕೆ ಆಗಮಿಸುತ್ತಾರೆ ಎಂದು ತಿಳಿಸಿದರು.
ಕ್ರೀಡಾಂಗಣ ಅಭಿವೃದ್ದಿಗೆ ೨೦ ಲಕ್ಷöಹಣ ಮೂಂಜೂರು ಮಾಡಿಸಿದ್ದು ಇನ್ನೊಂದು ವಾರದಲ್ಲಿ ೪ ರಿಂದ ೬, ಐ ಮ್ಯಾಕ್ಸ್ ಲೈಟ್ ಗಳನ್ನು ಹಾಕುವುದು, ಮತ್ತು ೨ ಶೌಚಾಲಯದ ನಿರ್ಮಾಣ ಮತ್ತು ನೀರಿನ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಹೊಸಬಸ್ ನಿಲ್ದಾಣಕ್ಕೆ ಆಗಮಿಸಿ ಫುಟ್‌ಪಾತ್ ವ್ಯಾಪಾರಿಗಳಿಗೆ ಪ್ರಯಾಣಿಕರಿಗೆ ತೋಂದರೆಯಾಗದAತೆ ವ್ಯಾಪಾರ ಮಾಡಿಕೊಳ್ಳ ಬೇಕು, ಮತ್ತು ಪ್ರಯಾಣಿಕರಿಗೆ ಕುಳಿತುಕೊಳ್ಳುವ ಆಸನಗಳನ್ನು ನಿರ್ಮೀಸಿ ಅಭಿವೃದ್ದಿ ಪಡಿಸಲಾಗುವುದು, ಹಾಗೂ ಸ್ಥಳಾಂತರ ವಾಗಿರುವ ಉವಿನ ಮಂಡಿಯ ಅಭಿವೃದ್ದಿ ಮಾಡಲಾಗುವುದು, ಉವಿನ ವ್ಯಾಪಾರ ಮಾಡಬೇಕು ಎಂದು ವ್ಯಾಪಾರಸ್ಥರಿಗೆ ತಿಳಿ ಹೇಳಿದರು.
ಈ ವೇಳೆ ಮುಖ್ಯಾಧಿಕಾರಿ ಜಾಫರ್ ಷರೀಫ್, ಪುರಸಭಾದ್ಯಕ್ಷರಾದ ಸುದೇಶ್‌ಬಾಬು, ಮಾಜಿ ಅಧ್ಯಕ್ಷರಾದ ಪಿ.ಎಚ್. ರಾಜೇಶ್, ಎ.ಶಂಕರರೆಡ್ಡಿ,ರಾಮಾAಜಿನಪ್ಪ, ನಾಗಬೂಷಣರೆಡ್ಡಿ, ಸದಸ್ಯರಾದ ಕಲ್ಪವೃಕ್ಷ ರವಿ,ಮಹಮದ್ ಇಮ್ರಾನ್,ವಿಜಯ್‌ಕುಮಾರ್, ಬಾಲಸುಭ್ರಮಣಿ.ಗೊಂಚಿಕಾರ್ ವೆಂಕಟರವಣಪ್ಪ, ಸಿನಿಮಾ ಗಂಗಾಧರ್, ಮುಖಂಡರಾದ ಜಿ.ಎಸ್. ಪ್ರಮೋದ್ ಕುಮಾರ್, ಆರ್.ಎ. ಹನುಮಂತರಾಯ, ಆಲಿ, ಗಜರಮೇಶ್, ಕಾಂಗೈನ ನಗರಯುವ ಘಟಕದ ಅದ್ಯಕ್ಷ ಗೊಂಚಿಕಾರ್ ನವೀನ್, ಮಹೇಶ್,ದೊರಸುರೇಶ್, ಆರ್.ಕೆ. ನಿಸಾರ್ ಅಹವiದ್, ಅನಿಲ್‌ಹಂಡೆ, ಹನುಮೇಶ್,ವಿ.ಎಚ್. ಪಾಳ್ಯಪಾಪಣ್ಣ, ಹರೀಶ್, ಮಾಜಿ ಸದಸ್ಯರಾದ ರಿಜ್ವಾನ್ ಹುಲ್ಲಾ, ಅಲ್ಪ ಸಂಖ್ಯಾತ ಮುಖಂಡರಾದ ಬಾಬು, ಅರೋಗ್ಯಾಧಿಕಾರಿ ಷಂಷುದ್ದಾಹ ಇಂಜನೀಯರ್ ಹೇಂಜೇಶ್, ಮತ್ತಿರಿದ್ದರು.
(Visited 1 times, 1 visits today)