BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಬಸವರಾಜ ಕನ್ನಾಳೆ ಅವರನ್ನು ಸಿಂಡಿಕೇಟ್ ಸದಸ್ಯತ್ವದಿಂದ ವಜಾಗೊಳಿಸಬೇಕೆಂದು ಆಗ್ರಹ
  • ಸರ್ಕಾರ ಶ್ರೀಕೃಷ್ಣ ಜಯಂತಿಯ ಮೂಲಕ ಸಮುದಾಯದ ಎಲ್ಲರೂ ಒಂದೆಡೆ ಸೇರುವ ಅವಕಾಶ ಮಾಡಿಕೊಟ್ಟಿದೆ
  • ರೈತರ ವಿಕಸನಕ್ಕೆ ವಿಬಿ-ಜಿ ರಾಮ್ ಜಿ ಯೋಜನೆ ಸಹಕಾರಿ: ಹೇಮಂತ್
  • ರೈತರು ಜೀವಿತಾವಧಿಯಲ್ಲಿ ೫ ಲಕ್ಷದವರೆಗೆ ಸೌಲಭ್ಯಗಳನ್ನು ಪಡೆದುಕೊಳ್ಳಿ: ಪಿಡಿಒ
  • ಸೇವಾ ಕಾರ್ಯಗಳೇ ರೋಟರಿ ಕ್ಲಬ್‌ನ ಮೂಲ ದ್ಯೇಯೊದ್ದೇಶ
  • ಲೋಪವಿಲ್ಲದಂತೆ ನಡೆಸಲು ಜಿಲ್ಲಾಧಿಕಾರಿ ಸೂಚನೆ
  • ಜಾಬ್ ಕಾರ್ಡ್ ಪಡೆಯಲು ಗ್ರಾಮಸ್ಥರಿಗೆ ಕರೆ
  • ಸೆ.೫ ರಿಂದ ಜಿಲ್ಲಾದ್ಯಂತ “ಪ್ರಜಾಸೇವೆ ಆಂದೋಲನ”- ಜಿಲ್ಲಾಧಿಕಾರಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ತುಮಕೂರು: ಶ್ರೀಕ್ಷೇತ್ರ ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯಲು ಯತ್ನ
ಇತರೆ ಸುದ್ಧಿಗಳು

ತುಮಕೂರು: ಶ್ರೀಕ್ಷೇತ್ರ ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯಲು ಯತ್ನ

ನಗರದಲ್ಲಿ ಧರ್ಮಸ್ಥಳದ ಭಕ್ತಾಧಿಗಳ ಹೆಸರಿನಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ
By News Desk BenkiyabaleUpdated:August 13, 2025 3:02 pm

ತುಮಕೂರು: ಶ್ರೀಕ್ಷೇತ್ರ ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯಲು ಯತ್ನಿಸಿ, ಧರ್ಮಾಧಿಕಾರಿಗಳಾದ ಶ್ರೀವೀರೇಂದ್ರ ಹೆಗಡೆ ಅವರ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವವರನ್ನು ಕೂಡಲೇ ಬಂಧಿಸಬೇಕು, ಅವರುಗಳನ್ನು ತನಿಖೆಗೆ ಒಳಸಪಡಿಸಬೇಕು ಎಂದು ಆಗ್ರಹಿಸಿ ಬುಧವಾರ ವಿವಿಧ ಸಮುದಾಯಗಳ ಜನರು, ಶ್ರೀಕ್ಷೇತ್ರ ಧರ್ಮಸ್ಥಳದ ಭಕ್ತಾಧಿಗಳ ಹೆಸರಿನಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನಗರದ ಟೌನ್‌ಹಾಲ್ ವೃತ್ತದಿಂದ ಎಂ.ಜಿ.ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ತಲುಪಿದ ನೂರಾರು ಭಕ್ತಾಧಿಗಳು,ಧರ್ಮಸ್ಥಳದ ಹೆಸರಿಗೆ ಚ್ಯುತಿ ಉಂಟು ಮಾಡಲು ಯತ್ನಿಸುತ್ತಿರುವ ಎಲ್ಲಾ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ, ಬಿತ್ತಿ ಪತ್ರ ಹಿಡಿದು ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಗರದ ಟೌನ್‌ಹಾಲ್ ಬಳಿ ಪ್ರತಿಭಟನೆ ಕುರಿತಂತೆ ಮಾತನಾಡಿದ ಅಯ್ಯಪ್ಪಸ್ವಾಮಿ ಸೇವಾ ಸಮಾಜಂನ ರಾಷ್ಟಿçÃಯ ಅಧ್ಯಕ್ಷ ಟಿ.ಬಿ.ಶೇಖರ್,ಕಳೆದ ೨೫-೩೦ ವರ್ಷಗಳಿಂದಲೂ ಧರ್ಮಸ್ಥಳದ ಪರಂಪರೆಯ ಮೇಲೆ ನಿರಂತರವಾಗಿ ದಾಳಿ ನಡೆಸಲಾಗುತ್ತಿದೆ.ಧರ್ಮಸ್ಥಳದ ಹೆಸರು ಹಾಳು ಮಾಡಲು ಇನ್ನಿಲ್ಲದ ಪ್ರಯತ್ನವನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನಡೆಸುತ್ತಿವೆ.ಭಕ್ತರು ದೇವರ ಸಮಾನ ಎಂದು ಪರಿಗಣಿಸಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರ ಬಗ್ಗೆ ಜನರಲ್ಲಿ ತಪ್ಪು ಭಾವನೆ ಬರುವಂತೆ ಸುಳ್ಳು ಆರೋಪ ಮಾಡುತ್ತಿರುವುದು ಖಂಡನೀಯ.ತನಿಖೆಗೆ ಮುಕ್ತವಾದ ಅವಕಾಶ ನೀಡುತ್ತಿದ್ದರೂ ಸಹ ಅವರ ಮೇಲೆ ನಿರಂತರವಾಗಿ ಹುಸಿ ಆರೋಪಗಳನ್ನು ಮಾಡಿ ತೇಜೋವಧೆಗೆ ಪ್ರಯತ್ನಿಸಲಾಗುತ್ತಿದೆ.ಹಾಗಾಗಿ ಧರ್ಮಸ್ಥಳದ ಭಕ್ತಾಧಿಗಳು ಇಂದು ಬೀದಿಗಿಳಿದು ಹೋರಾಟಕ್ಕೆ ನಿಂತಿದ್ದಾರೆ.ಸರಕಾರ ಕೂಡಲೇ ಸುಳ್ಳು ಸುದ್ದಿ ಹರಡುತ್ತಿರುವ ಜನರ ವಿರುದ್ದ ಶಿಸ್ತು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಮಾಜಿ ಸಚಿವ ಎಸ್.ಶಿವಣ್ಣ ಮಾತನಾಡಿ,ಶ್ರೀಕ್ಷೇತ್ರ ಧರ್ಮಸ್ಥಳ ಸಮಸ್ತ ಹಿಂದೂಗಳ ಪಾಲಿಗೆ ಪವಿತ್ರ ಕ್ಷೇತ್ರವಾಗಿದೆ.ದೇವರ ರೂಪದಲ್ಲಿರುವ ವೀರೇಂದ್ರ ಹೆಗಡೆ ಅವರಿಗೆ ಕೆಟ್ಟ ಹೆಸರು ತರಲು ಕೆಲ ಸಮಾಜ ವಿದ್ರೋಹಿಗಳು ಕಾರ್ಯನಿರ್ವಹಿಸುತ್ತಿದ್ದು, ಇಂತಹವರ ವಿರುದ್ದ ನಾವೆಲ್ಲರೂ ಒಗ್ಗೂಡಿ ಹೋರಾಟ ನಡಸಬೇಕಾಗಿದೆ.ಧರ್ಮಸ್ಥಳದ ಬಗ್ಗೆ ಮಾಡುತ್ತಿರುವ ಅಪಪ್ರಚಾರ ನಿಲ್ಲಬೇಕು.ಪ್ರಕರಣದ ಕುರಿತು ತನಿಖೆ ಸರಿಯಾದ ರೀತಿಯಲ್ಲಿ ನಡೆದು, ಸತ್ಯ ಹೋರ ಬರುವ ಮೂಲಕ ಕ್ಷೇತ್ರದ ಪಾವಿತ್ರತೆಯನ್ನು ಕಾಪಾಡಲು ಸರಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
ಪತ್ರಕರ್ತ ಆರ್.ಕಾಮರಾಜು ಮಾತನಾಡಿ,ಇಡೀ ವಿಶ್ವದಲ್ಲಿಯೇ ಧರ್ಮಸ್ಥಳ ಎಂಬ ಹೆಸರು ಭಕ್ತಿ ಮತ್ತು ಯುಕ್ತಿಗೆ ಹೆಸರಾಗಿರುವ ಪುಣ್ಯಕ್ಷೇತ್ರವಾಗಿದೆ.ಶಿಸ್ತು ಬದ್ದ ಆಡಳಿತ ಮತ್ತು ಭಕ್ತರಿಗೆ ಸಕಲ ಸೌಕರ್ಯಗಳನ್ನು ನೀಡಿ, ಸ್ವಾಮಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.ಹೀಗಿದ್ದರೂ ಕೆಲವು ಪಟ್ಟಭದ್ರ ಹಿತಾಸಕ್ತಿಗಳೂ, ಕೆಲ ಯೂಟೂರ‍್ಸ್ಗಳು,ಧಾರ್ಮಿಕ ಪರಂಪರೆಗೆ ಕೆಲವರು ಚ್ಯುತಿ ತರುವ ನಿಟ್ಟಿನಲ್ಲಿ ಹುನ್ನಾರ ನಡೆಸಿ, ಅಪಪ್ರಚಾರ ನಡೆಸಿ,ಭಕ್ತರ ಧಾರ್ಮಿಕ ನಂಬಿಕೆಯನ್ನು ಹೊಡೆದು ಹಾಕಲು ಪ್ರಯತ್ನಿಸಿದ್ದಾರೆ.ಸರಕಾರ ಕೂಡಲೇ ಇಂತಹ ಚುಟವಟಿಕೆಯಲ್ಲಿ ತೊಡಗಿರುವ ಯುಟೂರ‍್ಸ್ ಸಮೀರ್. ಎಂ.ಡಿ,ಗಿರೀಶ್ ಮಟ್ಟಣ್ಣನವರ್,ಮಹೇಶ್ ತಿಮ್ಮರೋಡಿ ಅವರುಗಳನ್ನು ಬಂಧಿಸಿ, ತನಿಖೆಗೆ ಒಳಪಡಿಸಿದರೆ ನ್ಯಾಯ ಹೊರಬರಲಿದೆ.ಹಿಂದುಗಳ ಪವಿತ್ರ ಧಾರ್ಮಿಕ ಕೇಂದ್ರವಾದ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಧಕ್ಕೆ ತರಲು ಎಂದಿಗೂ ಭಕ್ತವೃಂದ ಅವಕಾಶ ಮಾಡಿಕೊಡುವುದಿಲ್ಲ. ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಬಲ ಹೋರಾಟ ನಡೆಯಲಿದೆ ಎಂದರು.
ಧರ್ಮಸ್ಥಳ ಭಕ್ತರಲ್ಲಿ ಒಬ್ಬರಾದ ಶ್ರೀಮತಿ ವಿಜಯಭಾಸ್ಕರ್ ಮಾತನಾಡಿ,ನಾನು ಕೂಡ ಶ್ರೀಕ್ಷೇತ್ರ ಧರ್ಮಸ್ಥಳದ ಪಕ್ಕದ ಭಳ್ತಂಗಡಿಯವಳು, ಸುಮಾರು ಐವತ್ತು ವರ್ಷಗಳಿಂದ ಈ ಕ್ಷೇತ್ರದ ಬಗ್ಗೆ ಬಲ್ಲೆ. ಕೆಲವರು ಆರೋಪಿಸುತ್ತಿರುವಂತೆ ಯಾವುದೇ ಆಘಾತಕಾರಿ ಪ್ರಕ್ರಿಯೆಗಳು ಇಲ್ಲಿ ನಡೆದಿಲ್ಲ.ನಡೆಯುವುದಕ್ಕೆ ಶ್ರೀಕ್ಷೇತ್ರದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗಡೆ ಅವರು ಅವಕಾಶ ಮಾಡಿಕೊಟ್ಟಿಲ್ಲ.ತಿಮ್ಮರೊಡ್ಡಿ,ಮಹೇಶ್ ಮತ್ತು ಕೆಲ ಯುಟೂರ‍್ಸ್ಗಳು ದುಡ್ಡು ಮಾಡುವ ಉದ್ದೇಶದಿಂದ ಈ ರೀತಿಯ ಕಳಂಕ ಹಚ್ಚಲು ಪ್ರಯತ್ನಿಸುತಿದ್ದಾರೆ.ಧರ್ಮಸ್ಥಳದ ಹೆಸರಿಗೆ ಕಳಂಕ ತರುವ ಪ್ರಯತ್ನಗಳಿಗೆ ಸರಕಾರ ಕೂಡಲೇ ಕಡಿವಾಣ ಹಾಕಬೇಕು.ಸರಕಾರ ಕ್ರಮ ಕೈಗೊಳ್ಳದಿದರೆ ಹೋರಾಟ ನಿರಂತರವಾಗಿ ಮುಂದುವರೆಯಲಿದೆ ಎಂದರು.
ಬೆಳ್ಳಾವೆಯ ಶ್ರೀಕಾರದ ವೀರಬಸವಸ್ವಾಮೀಜಿ ಮಾತನಾಡಿ,ಪುಣ್ಯಕ್ಷೇತ್ರಗಳ ಬಗ್ಗೆ ಮಾಡುವ ಅಪಪ್ರಚಾರವನ್ನು ನಾವೆಲ್ಲರೂ ಖಂಡಿಸಬೇಕಾಗಿದೆ. ಮಠ, ಮಾನ್ಯಗಳು ಒಂದು ಸರಕಾರಕ್ಕೆ ಪರ್ಯಾಯವಾಗಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿವೆ.ಇದನ್ನು ಸಹಿಸಲಾಗದೆ ಕೆಲವರು, ಶ್ರೀಕ್ಷೇತ್ರದ ಧರ್ಮಸ್ಥಳದ ಬಗ್ಗೆ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಇದರ ವಿರುದ್ದ ನಾವೆಲ್ಲರೂ ಒಗ್ಗೂಡಿ ಹೋರಾಟ ನಡೆಸುವ ಮೂಲಕ ಸ್ವಹಿತಾಸಕ್ತಿಯ ಜನರ ಸುಳ್ಳು ಆರೋಪಗಳಿಗೆ ತಕ್ಕ ಉತ್ತರ ನೀಡಬೇಕಾಗಿದೆ ಎಂದು ಸ್ವಾಮೀಜಿ ತಿಳಿಸಿದರು.
ಪ್ರತಿಭಟನೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಭಕ್ತವೃಂದ ಹಾಗೂ ವಿವಿಧ ಸಂಘಟನೆಗಳ ಮುಖಂಡರುಗಳು, ಸಾರ್ವಜನಿಕರು, ಮಹಿಳೆಯರು, ವಿದ್ಯಾರ್ಥಿನಿಯರುಗಳು ಪಾಲ್ಗೊಂಡಿದ್ದರು.

(Visited 1 times, 1 visits today)
Previous Articleಕೆ.ಎನ್.ರಾಜಣ್ಣ ಸಚಿವ ಸಂಪುಟದಿ0ದ ವಜಾ
Next Article ಮಳೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ ತಕ್ಷಣವೇ ಪರಿಹಾರ ನೀಡಿ: ಜಿಲ್ಲಾಧಿಕಾರಿ
News Desk Benkiyabale

Related Posts

ಬಸವರಾಜ ಕನ್ನಾಳೆ ಅವರನ್ನು ಸಿಂಡಿಕೇಟ್ ಸದಸ್ಯತ್ವದಿಂದ ವಜಾಗೊಳಿಸಬೇಕೆಂದು ಆಗ್ರಹ

September 04, 2026 4:26 pm news

ಸರ್ಕಾರ ಶ್ರೀಕೃಷ್ಣ ಜಯಂತಿಯ ಮೂಲಕ ಸಮುದಾಯದ ಎಲ್ಲರೂ ಒಂದೆಡೆ ಸೇರುವ ಅವಕಾಶ ಮಾಡಿಕೊಟ್ಟಿದೆ

September 04, 2026 3:59 pm news

ರೈತರ ವಿಕಸನಕ್ಕೆ ವಿಬಿ-ಜಿ ರಾಮ್ ಜಿ ಯೋಜನೆ ಸಹಕಾರಿ: ಹೇಮಂತ್

September 04, 2026 2:52 pm news
ತಾಜಾ ಸುದ್ಧಿಗಳು
news

ಬಸವರಾಜ ಕನ್ನಾಳೆ ಅವರನ್ನು ಸಿಂಡಿಕೇಟ್ ಸದಸ್ಯತ್ವದಿಂದ ವಜಾಗೊಳಿಸಬೇಕೆಂದು ಆಗ್ರಹ

September 04, 2026 4:26 pm
news

ಸರ್ಕಾರ ಶ್ರೀಕೃಷ್ಣ ಜಯಂತಿಯ ಮೂಲಕ ಸಮುದಾಯದ ಎಲ್ಲರೂ ಒಂದೆಡೆ ಸೇರುವ ಅವಕಾಶ ಮಾಡಿಕೊಟ್ಟಿದೆ

September 04, 2026 3:59 pm
news

ರೈತರ ವಿಕಸನಕ್ಕೆ ವಿಬಿ-ಜಿ ರಾಮ್ ಜಿ ಯೋಜನೆ ಸಹಕಾರಿ: ಹೇಮಂತ್

September 04, 2026 2:52 pm
news

ರೈತರು ಜೀವಿತಾವಧಿಯಲ್ಲಿ ೫ ಲಕ್ಷದವರೆಗೆ ಸೌಲಭ್ಯಗಳನ್ನು ಪಡೆದುಕೊಳ್ಳಿ: ಪಿಡಿಒ

September 04, 2026 2:44 pm
news

ಸೇವಾ ಕಾರ್ಯಗಳೇ ರೋಟರಿ ಕ್ಲಬ್‌ನ ಮೂಲ ದ್ಯೇಯೊದ್ದೇಶ

September 04, 2026 2:42 pm
news

ಲೋಪವಿಲ್ಲದಂತೆ ನಡೆಸಲು ಜಿಲ್ಲಾಧಿಕಾರಿ ಸೂಚನೆ

September 04, 2026 2:40 pm
Our Youtube Channel
Our Picks

ಬಸವರಾಜ ಕನ್ನಾಳೆ ಅವರನ್ನು ಸಿಂಡಿಕೇಟ್ ಸದಸ್ಯತ್ವದಿಂದ ವಜಾಗೊಳಿಸಬೇಕೆಂದು ಆಗ್ರಹ

September 04, 2026 4:26 pm

ಸರ್ಕಾರ ಶ್ರೀಕೃಷ್ಣ ಜಯಂತಿಯ ಮೂಲಕ ಸಮುದಾಯದ ಎಲ್ಲರೂ ಒಂದೆಡೆ ಸೇರುವ ಅವಕಾಶ ಮಾಡಿಕೊಟ್ಟಿದೆ

September 04, 2026 3:59 pm

ರೈತರ ವಿಕಸನಕ್ಕೆ ವಿಬಿ-ಜಿ ರಾಮ್ ಜಿ ಯೋಜನೆ ಸಹಕಾರಿ: ಹೇಮಂತ್

September 04, 2026 2:52 pm

ರೈತರು ಜೀವಿತಾವಧಿಯಲ್ಲಿ ೫ ಲಕ್ಷದವರೆಗೆ ಸೌಲಭ್ಯಗಳನ್ನು ಪಡೆದುಕೊಳ್ಳಿ: ಪಿಡಿಒ

September 04, 2026 2:44 pm

ಸೇವಾ ಕಾರ್ಯಗಳೇ ರೋಟರಿ ಕ್ಲಬ್‌ನ ಮೂಲ ದ್ಯೇಯೊದ್ದೇಶ

September 04, 2026 2:42 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಬಸವರಾಜ ಕನ್ನಾಳೆ ಅವರನ್ನು ಸಿಂಡಿಕೇಟ್ ಸದಸ್ಯತ್ವದಿಂದ ವಜಾಗೊಳಿಸಬೇಕೆಂದು ಆಗ್ರಹ

By News Desk BenkiyabaleSeptember 04, 2026 4:26 pm

ತುಮಕೂರು: ಕೆಪಿಎಸ್‌ಸಿ ಪಶು ವೈದ್ಯಾಧಿಕಾರಿ ನೇಮಕಾತಿ ಹಗರಣದಲ್ಲಿ ಭಾಗಿಯಾಗಿರುವ ತುಮಕೂರು ವಿಶ್ವವಿದ್ಯಾನಿಲಯದ ರಾಜ್ಯಪಾಲರ ನಾಮನಿರ್ದೇಶಿತ ಸಿಂಡಿಕೇಟ್ ಸದಸ್ಯ ಬಸವರಾಜ ಕನ್ನಾಳೆ…

ಸರ್ಕಾರ ಶ್ರೀಕೃಷ್ಣ ಜಯಂತಿಯ ಮೂಲಕ ಸಮುದಾಯದ ಎಲ್ಲರೂ ಒಂದೆಡೆ ಸೇರುವ ಅವಕಾಶ ಮಾಡಿಕೊಟ್ಟಿದೆ

September 04, 2026 3:59 pm

ರೈತರ ವಿಕಸನಕ್ಕೆ ವಿಬಿ-ಜಿ ರಾಮ್ ಜಿ ಯೋಜನೆ ಸಹಕಾರಿ: ಹೇಮಂತ್

September 04, 2026 2:52 pm

ರೈತರು ಜೀವಿತಾವಧಿಯಲ್ಲಿ ೫ ಲಕ್ಷದವರೆಗೆ ಸೌಲಭ್ಯಗಳನ್ನು ಪಡೆದುಕೊಳ್ಳಿ: ಪಿಡಿಒ

September 04, 2026 2:44 pm
News by Date
September 2026
M T W T F S S
 123456
78910111213
14151617181920
21222324252627
282930  
« Aug    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.