BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ವೈಭವದಿಂದ ನಡೆದ ಕಳಸೋತ್ಸವ
  • ತಾಲ್ಲೂಕು ಮಟ್ಟದ ಪಂಚ ಗ್ಯಾರಂಟಿ ಸಭೆ
  • ಶಿಕ್ಷಕರಿಗೆ, ಶಿಕ್ಷಕರೇತರರ ಸಮಸ್ಯೆಗೆ ಸ್ಪಂದಿಸುವೆ ನನಗೆ ಮತ ನೀಡಿ: ಶಶಿ ಹುಲಿಕುಂಟೆ ಮಠ್
  • ಕಾರ್ಪೊರೇಟ್ ಕಣ್ಣೆಗೆ ಬೆಣ್ಣೆ, ಶ್ರಮಜೀವಿಗಳ ಕಣ್ಣೆಗೆ ಸುಣ್ಣ
  • ಕಾನೂನು ರೀತಿಯ ಮಾನದಂಡಗಳನ್ನು ಪಾಲಿಸಿ
  • ಗ್ರಾಮೀಣ ಪತ್ರಕರ್ತರಿಗೆ ಆಶ್ರಯ ನಿವೇಶನದ ಭರವಸೆ
  • ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣಾರ್ಪಣೆ ಮಾಡಿದ ವೀರರನ್ನು ಸ್ಮರಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ: ಬಿ.ಕೆ.ಸಪ್ತಶ್ರೀ ಹೇಳಿಕೆ
  • ಸಂವಿಧಾನದ ಆಶಯಗಳನ್ನು ಬದಿಗೊತ್ತಿ ಕೇಂದ್ರ ಸರ್ಕಾರ ತಾರತಮ್ಯ ಧೋರಣೆ ಅನುಸರಿಸುತ್ತಿದೆ: ಶಾಸಕ ವೆಂಕಟೇಶ್
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಮುಸ್ಲಿಮರನ್ನು ತಪ್ಪು ದಾರಿಗೆಳೆಯುವ, ಭದ್ರತಾ ಆತಂಕ
ಇತರೆ ಸುದ್ಧಿಗಳು

ಮುಸ್ಲಿಮರನ್ನು ತಪ್ಪು ದಾರಿಗೆಳೆಯುವ, ಭದ್ರತಾ ಆತಂಕ

ಪಾಕ್ ಮೂಲದ ಸಂಘಟನೆಯ ಚಟುವಟಿಕೆಗಳ ಬಗ್ಗೆ ದೂರು
By News Desk BenkiyabaleUpdated:August 25, 2025 2:24 pm

ತುಮಕೂರು: ನಗರದಲ್ಲಿ ಪಾಕಿಸ್ತಾನ ಮೂಲದ ಸಂಘಟನೆಯ ಚಟುವಟಿಕೆಗಳು ನಡೆಯುತ್ತಿದ್ದು, ಮುಸ್ಲಿಂರನ್ನು ತಪ್ಪು ದಾರಿಗೆಳೆಯುವ ಮತ್ತು ಭದ್ರತೆಯ ಆತಂಕ ಎದುರಾಗಿದೆ. ಈ ಸಂಘಟನೆಗಳ ಬಗ್ಗೆ ನಿಗಾ ವಹಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮರ್ಕಜಿ ಮಜ್ಲಿಸೆ ಮುಶಾವರತ್ ನೇತೃತ್ವದಲ್ಲಿ ತುಮಕೂರಿನ ಮುಸ್ಲಿಂ ಬಾಂಧವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ನೂರಾನಿ ಮಸೀದಿ ಅಧ್ಯಕ್ಷರು ಹಾಗೂ ಮರ್ಕಜಿ ಮಜ್ಲಿಸೆ ಮುಶಾವರತ್ ಸದಸ್ಯರಾದ ಜಾಹಿದ್ ಖಾನ್ ಶೀರಾನಿ, ಇಕ್ಬಾಲ್ ಅಹಮದ್, ನಯಾಜ್ ಅಹಮದ್ ನೇತೃತ್ವದಲ್ಲಿ ನೂರಾರು ಮಂದಿ ಮುಸ್ಲಿಂ ಬಾಂಧವರು ತೆರಳಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಗೋಪಾಲ್ ಹಾಗೂ ಪುರುಷೋತ್ತಮ್ ಅವರಿಗೆ ಮನವಿ ಸಲ್ಲಿಸಿ ಪಾಕಿಸ್ತಾನ ಮೂಲದ ಸಂಘಟನೆಗಳ ಬಗ್ಗೆ ತೀವ್ರ ನಿಗಾ ವಹಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಇಕ್ಬಾಲ್ ಅಹಮದ್, ರಿಯಾಜ್ ಅಹ್ಮದ್ ಗೋಹಲ್ ಶಾಹಿ ಗುಂಪು (ಎಂಎಫ್‌ಐ) ಪಾಕಿಸ್ತಾನದಲ್ಲಿ ಹುಟ್ಟುಕೊಂಡ ಸಂಘಟನೆಯಾಗಿದೆ. ಇದರ ಸ್ಥಾಪಕ ರಿಯಾಜ್ ಅಹ್ಮದ್ ಗೋಹರ್ ಶಾಹಿ ಅವರನ್ನು ಭಾರತದ ಎಲ್ಲಾ ಖ್ಯಾತ ಉಲಮಾಗಳು ಇಸ್ಲಾಮಿಕ್ ಧರ್ಮದಿಂದ ಹೊರಗಿಟ್ಟಿದ್ದಾರೆ. ಈ ಸಂಘಟನೆಯ ನಂಬಿಕೆಗಳು ಇಸ್ಲಾಮಿಕ್ ತತ್ವಗಳಿಗೆ ವಿರುದ್ಧವಾಗಿದ್ದು, ನಿರಪರಾಧಿ ಜನರನ್ನು ತಪ್ಪು ದಾರಿಗೆಳೆಯುತ್ತಿವೆ. ಭಾರತೀಯ ಮುಸ್ಲಿಮರಿಗೆ ಇಂತಹ ಪಾಕಿಸ್ತಾನ ಮೂಲಕ ಸಂಘಟನೆಗಳು ಅಗತ್ಯವಿಲ್ಲ. ಇವು ಸಮುದಾಯದ ಶಾಂತಿ, ಏಕತೆ ಮತ್ತು ಸಾಮರಸ್ಯಕ್ಕೆ ಅಪಾಯ ಉಂಟು ಮಾಡುತ್ತವೆ ಎಂದು ಹೇಳಿದರು.
ಈ ಪಂಥದ ಸದಸ್ಯಯಾದ ಇಶ್ರತ್ ಎಂಬ ಮಹಿಳೆ ಎಂಎಫ್‌ಐ ಸಂಘಟನೆಯ ಸಕ್ರಿಯ ಸದಸ್ಯೆಯಾಗಿದ್ದಾರೆ. ತುಮಕೂರಿನ ಮುಸ್ಲಿಂ ಸಮುದಾಯದಲ್ಲಿ ಈ ಸಂಘಟನೆಯ ತತ್ವಗಳನ್ನು ಪ್ರಚಾರ ಮಾಡಲು ಪ್ರಯತ್ನಿಸುತ್ತಿದ್ದಾರೆ. ಬೆಂಗಳೂರು ಮೂಲದ ಈ ಸಂಘಟನೆಯ ಇತರ ಸದಸ್ಯರು ಇವರೊಂದಿಗೆ ಸಂಪರ್ಕದಲ್ಲಿದ್ದು, ಈ ಗುಂಪಿನ ಜನರು ನಗರದಲ್ಲಿ ಶೈಖ್ ಅಹಮದ್ ಮತ್ತು ಅವರ ಪತ್ನಿ ಹಾಗೂ ಅವರ ಕುಟುಂಬದ ಬಳಿಗೆ ಮತ್ತೆ ಮತ್ತೆ ಬರುತ್ತಿರುತ್ತಾರೆ ಎಂದು ಆರೋಪಿಸಿದರು.
ಈ ಸಂಘಟನೆಯ ಸದಸ್ಯರಿಗೆ ಇಸ್ಲಾಂ ಅಥವಾ ಮುಸ್ಲಿಂ ಸಮುದಾಯದೊಂದಿಗೆ ಯಾವುದೇ ಧಾರ್ಮಿಕ ಸಂಬ0ಧ ಇಲ್ಲ. ಅವರ ಹೆಸರುಗಳು ಮುಸ್ಲಿಂ ಹೆಸರಿನಂತೆ ಕಂಡರೂ ಅವರ ನಂಬಿಕೆಗಳು ಮತ್ತು ಆಚರಣೆಗಳು ಸಂಪೂರ್ಣವಾಗಿ ಇಸ್ಲಾಂ ಹೊರಗೆ ಇವೆ. ಹಾಗಾಗಿ ನಗರದ ಮುಸ್ಲಿಂ ಸಮುದಾಯವು ಅವರನ್ನು ಗುರುತಿಸುವುದಿಲ್ಲ, ಬೆಂಬಲಿಸುವುದಿಲ್ಲ ಮತ್ತು ಅವರು ಯಾವುದೇ ಅಕ್ರಮ ಅಥವಾ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ, ಅದರ ಜವಾಬ್ದಾರಿ ಸಮುದಾಯದ ಮೇಲೆ ಬಾರದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ತುಮಕೂರಿನಲ್ಲಿ ಈ ಸಂಘಟನೆಯ ಎಲ್ಲಾ ಚಟುವಟಿಕೆಗಳನ್ನು ಗುರುತಿಸಿ, ವಿಶೇಷವಾಗಿ ಇಶ್ರತ್ ಶೈಖ್ ಅಹಮದ್ ಕುಟುಂಬ ಮತ್ತು ಅವರ ಸಹಚರರೊಂದಿಗೆ ಸಂಬ0ಧಿಸಿದ ಕಾರ್ಯಗಳ ಮೇಲೆ ನಿಗಾ ವಹಿಸಬೇಕು. ಅವರ ಪ್ರಚಾರ ಸಭೆಗಳು ಅಥವಾ ಲಿಫ್‌ಲೆಟ್‌ಗಳ ಹಂಚಿಕೆಯನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿದರು.
ದೇಶೀಯ ಮತ್ತು ಅಂತಾರಾಷ್ಟ್ರೀಯ ಸಂಪರ್ಕಗಳನ್ನು ಹೊಂದಿರುವ ಎಂಎಫ್‌ಐ ನಂತಹ ಸಂಘಟನೆಗಳ ಬಗ್ಗೆ ಸೂಕ್ತ ತನಿಖೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು. ಈ ಮೂಲಕ ನಗರದ ಶಾಂತಿ, ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ.
ತುಮಕೂರಿ ಮುಸ್ಲಿಂ ಸಮುದಾಯ ಈ ಪಾಕಿಸ್ತಾನ ಮೂಲದ ಸಂಘಟನೆ ಮತ್ತು ಅದರ ಏಜೆಂಟ್‌ಗಳನ್ನು ಸಂಪೂರ್ಣವಾಗಿ ನಿರಾಕರಿಸುತ್ತದೆ. ಈ ಸಂಘಟನೆಗಳಿಗೆ ನಮ್ಮಿಂದ ಯಾವುದೇ ಸಹಕಾರ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ ನೂರಾನಿ ಮಸೀದಿ ಅಧ್ಯಕ್ಷರಾದ ಜಾಹಿದ್ ಖಾನ್ ಶೀರಾನಿ ಅವರು ಕಾನೂನು ಮತ್ತು ಸಾಮರಸ್ಯವನ್ನು ಕಾಪಾಡಲು ತಕ್ಷಣವೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಕೋರಿದ್ದಾರೆ.
ಈ ಸಂದರ್ಭದಲ್ಲಿ ಮೌಲಾನಾ ಜಿಯಾ ಉರ್ ರೆಹಮಾನ್, ನಸ್ರುಲ್ಲಾ, ಅಬೂಬಕರ್, ಬಿಲಾಲ್, ಅಕ್ರಂಉಲ್ಲಾಖಾನ್, ಲಾಯರ್ ಅಹಮದ್, ಜಿಯಾ ಉಲ್ಲಾಖಾನ್, ಬಜರ್, ಬಕಾಶ್, ಇಮ್ರಾನ್, ಸಯ್ಯೂಬ್ ಸೇರಿದಂತೆ ಮುಸ್ಲಿಂ ಸಮುದಾಯದ ನೂರಾರು ಮಂದಿ ಪಾಲ್ಗೊಂಡಿದ್ದರು.

(Visited 1 times, 1 visits today)
Previous Articleಕೆ.ಎನ್.ರಾಜಣ್ಣ ವಜಾ ಖಂಡಿಸಿ ಧರಣಿ ಸತ್ಯಾಗ್ರಹ
Next Article ಭಾರತ ಅದರಲ್ಲೂ ಕರ್ನಾಟಕದಲ್ಲಿ ಇರುವಂತಹ ಪ್ರತಿಭಾನ್ವಿತರು ಬೇರೆಲ್ಲಿಯೂ ಸಹ ನೋಡಲು ಸಾಧ್ಯವಿಲ್ಲ – ಶಾಸಕ ಟಿ.ಬಿ. ಜಯಚಂದ್ರ.
News Desk Benkiyabale

Related Posts

ವೈಭವದಿಂದ ನಡೆದ ಕಳಸೋತ್ಸವ

February 06, 2026 3:45 pm ಇತರೆ ಸುದ್ಧಿಗಳು

ತಾಲ್ಲೂಕು ಮಟ್ಟದ ಪಂಚ ಗ್ಯಾರಂಟಿ ಸಭೆ

February 06, 2026 3:44 pm ಇತರೆ ಸುದ್ಧಿಗಳು

ಶಿಕ್ಷಕರಿಗೆ, ಶಿಕ್ಷಕರೇತರರ ಸಮಸ್ಯೆಗೆ ಸ್ಪಂದಿಸುವೆ ನನಗೆ ಮತ ನೀಡಿ: ಶಶಿ ಹುಲಿಕುಂಟೆ ಮಠ್

February 06, 2026 3:42 pm ಇತರೆ ಸುದ್ಧಿಗಳು
ತಾಜಾ ಸುದ್ಧಿಗಳು
ಇತರೆ ಸುದ್ಧಿಗಳು

ವೈಭವದಿಂದ ನಡೆದ ಕಳಸೋತ್ಸವ

February 06, 2026 3:45 pm
ಇತರೆ ಸುದ್ಧಿಗಳು

ತಾಲ್ಲೂಕು ಮಟ್ಟದ ಪಂಚ ಗ್ಯಾರಂಟಿ ಸಭೆ

February 06, 2026 3:44 pm
ಇತರೆ ಸುದ್ಧಿಗಳು

ಶಿಕ್ಷಕರಿಗೆ, ಶಿಕ್ಷಕರೇತರರ ಸಮಸ್ಯೆಗೆ ಸ್ಪಂದಿಸುವೆ ನನಗೆ ಮತ ನೀಡಿ: ಶಶಿ ಹುಲಿಕುಂಟೆ ಮಠ್

February 06, 2026 3:42 pm
ಇತರೆ ಸುದ್ಧಿಗಳು

ಕಾರ್ಪೊರೇಟ್ ಕಣ್ಣೆಗೆ ಬೆಣ್ಣೆ, ಶ್ರಮಜೀವಿಗಳ ಕಣ್ಣೆಗೆ ಸುಣ್ಣ

February 06, 2026 3:39 pm
ಇತರೆ ಸುದ್ಧಿಗಳು

ಕಾನೂನು ರೀತಿಯ ಮಾನದಂಡಗಳನ್ನು ಪಾಲಿಸಿ

February 06, 2026 3:37 pm
ಇತರೆ ಸುದ್ಧಿಗಳು

ಗ್ರಾಮೀಣ ಪತ್ರಕರ್ತರಿಗೆ ಆಶ್ರಯ ನಿವೇಶನದ ಭರವಸೆ

January 27, 2026 4:05 pm
Our Youtube Channel
Our Picks

ವೈಭವದಿಂದ ನಡೆದ ಕಳಸೋತ್ಸವ

February 06, 2026 3:45 pm

ತಾಲ್ಲೂಕು ಮಟ್ಟದ ಪಂಚ ಗ್ಯಾರಂಟಿ ಸಭೆ

February 06, 2026 3:44 pm

ಶಿಕ್ಷಕರಿಗೆ, ಶಿಕ್ಷಕರೇತರರ ಸಮಸ್ಯೆಗೆ ಸ್ಪಂದಿಸುವೆ ನನಗೆ ಮತ ನೀಡಿ: ಶಶಿ ಹುಲಿಕುಂಟೆ ಮಠ್

February 06, 2026 3:42 pm

ಕಾರ್ಪೊರೇಟ್ ಕಣ್ಣೆಗೆ ಬೆಣ್ಣೆ, ಶ್ರಮಜೀವಿಗಳ ಕಣ್ಣೆಗೆ ಸುಣ್ಣ

February 06, 2026 3:39 pm

ಕಾನೂನು ರೀತಿಯ ಮಾನದಂಡಗಳನ್ನು ಪಾಲಿಸಿ

February 06, 2026 3:37 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ಇತರೆ ಸುದ್ಧಿಗಳು

ವೈಭವದಿಂದ ನಡೆದ ಕಳಸೋತ್ಸವ

By News Desk BenkiyabaleFebruary 06, 2026 3:45 pm

ಹುಳಿಯಾರು: ಹುಳಿಯಾರಿನ ಗ್ರಾಮದೇವತೆ ಶ್ರೀ ಹುಳಿಯಾರಮ್ಮ ದೇವಿಯವರ ೧೩ ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಮುಂಜಾನೆ ಏರ್ಪಡಿಸಿದ್ದ…

ತಾಲ್ಲೂಕು ಮಟ್ಟದ ಪಂಚ ಗ್ಯಾರಂಟಿ ಸಭೆ

February 06, 2026 3:44 pm

ಶಿಕ್ಷಕರಿಗೆ, ಶಿಕ್ಷಕರೇತರರ ಸಮಸ್ಯೆಗೆ ಸ್ಪಂದಿಸುವೆ ನನಗೆ ಮತ ನೀಡಿ: ಶಶಿ ಹುಲಿಕುಂಟೆ ಮಠ್

February 06, 2026 3:42 pm

ಕಾರ್ಪೊರೇಟ್ ಕಣ್ಣೆಗೆ ಬೆಣ್ಣೆ, ಶ್ರಮಜೀವಿಗಳ ಕಣ್ಣೆಗೆ ಸುಣ್ಣ

February 06, 2026 3:39 pm
News by Date
February 2026
M T W T F S S
 1
2345678
9101112131415
16171819202122
232425262728  
« Jan    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.