ತುಮಕೂರು: ಹತ್ತಾರು ವರ್ಷಗಳಿಂದ ಕಡಿಮೆ ವೇತನಕ್ಕೆ ಗುತ್ತಿಗೆ ನೌಕರರಾಗಿ ದುಡಿಯುತ್ತಿರುವ ಸ್ಥಳೀಯ ಸಂಸ್ಥೆಗಳ ನೀರು ಸರಬರಾಜು ನೌಕರರನ್ನು ಸರಕಾರ ನೇರಪಾವತಿಗೆ ಒಳಪಡಿಸುವಂತೆ ಹಲವಾರು ಮನವಿಗಳನ್ನು ಸರಕಾರಕ್ಕೆ ನೀಡಿದ್ದರೂ ಸರಕಾರ ನಿರ್ಲಕ್ಷಿಸುತ್ತಾ ಬಂದಿದೆ. ಸರಕಾರದ ಮೇಲೆ ಒತ್ತಡ ತರುವ ಹಿನ್ನೆಲೆಯಲ್ಲಿ ಆಕ್ಟೋಬರ್ ೦೬ ರಿಂದ ನೀರು ಸರಬರಾಜು ನೌಕರರು ಅನಿರ್ಧಿಷ್ಠಾವಧಿ ಮುಷ್ಕರವನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಪೌರ ನೀರು ಸರಬರಾಜು ನೌಕರರ ಮಹಾಸಂಘದ ರಾಜ್ಯಾಧ್ಯಕ್ಷ ಪಾವಗಡ ಶ್ರೀರಾಮ್ ತಿಳಿಸಿದ್ದಾರೆ.
ನಗರದ ಎಂ.ಜಿ.ರಸ್ತೆಯ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ಪೌರ ನೀರು ಸರಬರಾಜು ನೌಕರರ ಮಹಾಸಂಘದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಕಳೆದ ೨೦ ವರ್ಷಗಳಿಂದ ಏಜೆನ್ಸಿಗಳ ಅಡಿಯಲ್ಲಿ ಅತಿ ಕಡಿಮೆ ವೇತನಕ್ಕೆ ದುಡಿಯುತ್ತಿರುವ ನೀರು ಸರಬರಾಜು ನೌಕರರು ನಮ್ಮನ್ನು ಏಜೆನ್ಸಿಗಳ ಕಪಿಮುಷ್ಠಿಯಿಂದ ತಪ್ಪಿಸಿ, ನೇರ ಪಾವತಿ ಯೋಜನೆಗೆ ಒಳಪಡಿಸುವಂತೆ ಮುಖ್ಯಮಂತ್ರಿಗಳಿಗೆ,ಸAಬAಧಪಟ್ಟ ಇಲಾಖೆ ಯ ಸಚಿವರು,ಎಲ್ಲಾ ಮಂತ್ರಿಗಳು, ಇಲಾಖೆಯ ಪ್ರಧಾನ ಕಾರ್ಯದರ್ಶಿಯಿಂದ ತಳಹಂತದ ಅಧಿಕಾರಿಗಳವರೆಗೆ ಮನವಿ ಸಲ್ಲಿಸಿದ್ದರೂ ಇದುವರೆಗೂ ಪ್ರಯೋಜನವಾಗಿಲ್ಲ. ಸರಕಾರದ ಈ ನಿರ್ಲಕ್ಷ ಖಂಡಿಸಿ, ೨೦೨೫ರ ಆಕ್ಟೋಬರ್ ೦೬ ರಿಂದ ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ಅನಿರ್ಧಿಷ್ಠಾವಧಿ ಮುಷ್ಕರವನ್ನು ಕೈಗೊಳ್ಳಲು ತೀರ್ಮಾನಿ ಸಲಾಗಿದೆ ಎಂದರು.
ರಾಜ್ಯದ ೩೧ ಜಿಲ್ಲೆಗಳಲ್ಲಿರುವ ನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಸುಮಾರು ೦೬ ಸಾವಿರ ಜನರು ನೀರು ಸರಬರಾಜು ಮಾಡುವ ಕೆಲಸದಲ್ಲಿ ತೊಡಗಿದ್ದಾರೆ.ಅತ್ಯಂತ ಕಡಿಮೆ ವೇತನಕ್ಕೆ ಅವರನ್ನು ದುಡಿಸಿಕೊಳ್ಳಲಾಗುತ್ತಿದೆ.ಸುಪ್ರಿಂಕೋರ್ಟೇ ಕನಿಷ್ಠ ವೇತನ ಮಾಸಿಕ ೨೨ ಸಾವಿರ ರೂ ನೀಡುವಂತೆ ಹೇಳಿದ್ದರೂ ೧೩ ರಿಂದ ೧೫ ಸಾವಿರ ರೂಗಳಿಗೆ ದುಡಿಸಿಕೊಳ್ಳಲಾಗುತ್ತಿದೆ. ಅದನ್ನು ಸರಿಯಾದ ಸಮಯಕ್ಕೆ ನೀಡುತ್ತಿಲ್ಲ. ಇದರಿಂದ ಇವರುಗಳ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ.ಮನೆ ಬಾಡಿಗೆ, ಮಕ್ಕಳ ಓದಿನ ಖರ್ಚು, ಕುಟುಂಬದ ಪೋಷಕರ ಆರೋಗ್ಯ, ದವಸ, ಧಾನ್ಯ ಹೀಗೆ ಹತ್ತು ಹಲವು ಖರ್ಚುಗಳಿಗೆ ಸಾಲ ಮಾಡಿ ಬದುಕುವಂತಹ ಸ್ಥಿತಿಗೆ ತಲುಪಿದ್ದಾರೆ. ಹಾಗಾಗಿ ಸರಕಾರ ಇವರನ್ನು ನೇರ ಪಾವತಿ ಯೋಜನೆಗೆ ಒಳಪಡಿಸಬೇಕು.ಹಾಗೆಯೇ ಮುಂದಿನ ಖಾಲಿ ಹುದ್ದೆಗಳ ನೇಮಕಾತಿ ಸಂದರ್ಭದಲ್ಲಿಯೂ ನೇರ ನೇಮಕಾತಿ ಮಾಡಬೇಕೆಂಬುದು ಇವರ ಬೇಡಿಕೆಯಾಗಿದೆ.ಸಾಮಾಜಿಕ ನ್ಯಾಯದ ಪರ ಎನ್ನುವ ಮುಖ್ಯಮಂತ್ರಿಗಳು ಈ ನೌಕರರ ಮನವಿಯನ್ನು ಆಲಿಸಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದು ಪಾವಗಡ ಶ್ರೀರಾಮ್ ತಿಳಿಸಿದರು.
ದಿನದ ೨೪ ಕೆಲಸ ಮಾಡುವ ನೀರು ಸರಬರಾಜು ನೌಕರರು ಹಬ್ಬ, ಹರಿದಿನ, ಜಾತ್ರೆಯ ಸಂದರ್ಭದಲ್ಲಿ ಹಗಲು, ರಾತ್ರಿ ಎನ್ನದೆ ಕೆಲಸ ಮಾಡಬೇಕಾಗುತ್ತದೆ.ಸಿದ್ದರಾಮಯ್ಯ ನವರ ಮೇಲೆ ನಂಬಿಕೆ ಇಟ್ಟು ಕಳೆದ ಮೂರು ವರ್ಷಗಳಿಂದಲೂ ಒಂದು ಮುಷ್ಕರ ಮಾಡದೆ ತಾಳ್ಮೆಯಿಂದ ಇದ್ದೇವೆ.ಇಂದು ನಮ್ಮ ತಾಳ್ಮೆಯ ಕಟ್ಟೆ ಒಡೆದಿದೆ. ಸರಕಾರ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ಅನಿವಾರ್ಯವಾಗಿ ಅಕ್ಟೋಬರ್ ೦೬ರಿಂದ ಮುಷ್ಕರಕ್ಕೆ ಹೋಗಬೇಕಾಗುತ್ತದೆ.ಕೇವಲ ೦೬ ಸಾವಿರ ಸಂಖ್ಯೆಯಲ್ಲಿರುವ ನೌಕರರ ಈ ಬೇಡಿಕೆ ಈಡೇರಿಸಲು ಪ್ರತ್ಯೇಕ ಬಜೆಟ್ ಮಂಡಿಸುವ, ವಿಶೇಷ ಅಧಿವೇಶನ ಕರೆಯುವ ಅಗತ್ಯವಿಲ್ಲ. ಸಚಿವ ಸಂಪುಟದ ಸಭೆಯಲ್ಲಿಯೇ ನಿರ್ಧಾರ ತೆಗೆದುಕೊಳ್ಳಬಹುದು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಆಪಾರ ನಂಬಿಕೆ ಇದೆ. ಅದನ್ನು ಉಳಿಸಿಕೊಳ್ಳಬೇಕೆಂದು ಪಾವಗಡ ಶ್ರೀರಾಮ್ ಒತ್ತಾಯಿಸಿದರು.
ನಗರ ಮತ್ತು ಗ್ರಾಮೀಣ ಭಾಗದಲ್ಲಿ ಮನೆ ಮನೆಗೆ ನೀರು ಸರಬರಾಜು ಮಾಡುವ ನೌಕರ ಕರ್ತವ್ಯದಲ್ಲಿದ್ದಾಗ ಅಕಾಲಿಕ ಮರಣಕ್ಕೆ ತುತ್ತಾದ ಸಂದರ್ಭದಲ್ಲಿ ಆ ಕುಟುಂಬದ ವ್ಯಕ್ತಿಗೆ ಅನುಕಂಪದ ಆಧಾರದಲ್ಲಿ ನೌಕರಿ ದೊರೆಯಬೇಕು,ನಿವೃತ್ತಿ ಹೊಂದಿದ ನೌಕರರಿಗೆ ಕನಿಷ್ಠ ೧೦ ಲಕ್ಷ ರೂ ಇಡುಗಂಟು ನೀಡಬೇಕು.ಇವರನ್ನು ನೇರ ಪಾವತಿ ವ್ಯವಸ್ಥೆಗೆ ಜಾರಿಗೆ ತರಬೇಕು, ಗುತ್ತಿಗೆ ಪದ್ದತಿ ರದ್ದು ಪಡಿಸಿ, ನೇರ ನೇಮಕಾತಿ ಮೂಲಕ ನೀರು ಸರಬರಾಜು ನೌಕರರನ್ನು ನೇಮಕ ಮಾಡಿಕೊಳ್ಳಬೇಕೆಂಬುದು ನಮ್ಮ ಬೇಡಿಕೆಯಾಗಿದೆ. ಸರಕಾರ ಇವುಗಳನ್ನು ಈಡೇರಿಸಲು ಮುಂದಾಗಬೇಕು.ಇಲ್ಲದಿದ್ದರೆ ಆಕ್ಟೋಬರ್ ೦೬ ರಿಂದ ಅನಿರ್ಧಿಷ್ಟಾವಧಿ ಮುಷ್ಕರ ಅನಿವಾರ್ಯ ಎಂದರು.
ವೇದಿಕೆಯಲ್ಲಿ ಕಾರ್ಮಿಕ ಹಕ್ಕುಗಳ ವೇದಿಕೆಯ ರಾಜ್ಯಾಧ್ಯಕ್ಷ ಬಿ.ಜಿ.ಸಾಗರ್, ಲಕ್ಷಿö್ಮದೇವಮ್ಮ, ಪೌರ ನೀರು ಸರಬರಾಜು ನೌಕರರ ಮಹಾಸಂಘದ ತುಮಕೂರು ಜಿಲ್ಲಾಧ್ಯಕ್ಷ ಮಾನಂಗಿ ಕುಮಾರ್, ಮಂಗಳೂರು ಜಿಲ್ಲಾಧ್ಯಕ್ಷ ನವೀನಾಕ್ಷ, ಶ್ರೀರಂಗಪಟ್ಟಣದ ಪುರು ಷೋತ್ತಮ್, ರಮೇಶ್ ಭಟ್ಕಳ, ಬೆಳಗಾಂನ ಶಾಮನೂರು,ಬಳ್ಳಾರಿಯ ಮಾರಪ್ಪ, ಶಿವಮೊಗ್ಗದ ಕಿರಣ, ತುಮಕೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್,ಉಪಾಧ್ಯಕ್ಷರಾದ ನಟರಾಜು, ಖಜಾಂಚಿ ಚಂದ್ರಯ್ಯ ಸೇರಿದಂತೆ ಕರ್ನಾಟಕದ ೩೧ ಜಿಲ್ಲೆಗಳ ೧೭೬ ತಾಲೂಕುಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
(Visited 1 times, 1 visits today)