ತುಮಕೂರು: ದೋಷಪೂರಿತದತ್ತಾಂಶವನ್ನು ಪರಿಗಣಿಸಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿಯನ್ನು ರಾಜ್ಯ ಸರ್ಕಾರ ಅವೈಜ್ಙಾನಿಕವಾಗಿ ವರ್ಗೀಕರಣ ಮಾಡಿದೆ ಎಂದು ಆಪಾದಿಸಿ, ಸರ್ಕಾರದ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಸೆ.೧೦ ರಂದು ಭೋವಿ, ಬಂಜಾರ, ಕೊರಚ, ಕೊರಮ ಹಾಗೂ ಅಲೆಮಾರಿ ಸಮುದಾಯಗಳಿಂದ ಬೆಂಗಳೂರು ಚಲೋ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಎಸ್.ಸಿ. ಮೋರ್ಚಾರಾಜ್ಯ ಕಾರ್ಯದರ್ಶಿ ಹಾಗೂ ಭೋವಿ ಸಂಘದಜಿಲ್ಲಾಧ್ಯಕ್ಷ ಓ0ಕಾರ್ ತಿಳಿಸಿದರು.
ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದಿನ ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿಗಳ ಮೀಸಲಾತಿ ಪ್ರಮಾಣವನ್ನು ಶೇ.೧೫ರಿಂದ ಶೇ.೧೭ಕ್ಕೆ ಏರಿಕೆ ಮಾಡಿಐತಿಹಾಸಿಕ ತೀರ್ಮಾನಕೈಗೊಂಡಿತ್ತು. ಈ ತೀರ್ಮಾನದಿಂದ ಇ0ದು ಸಾವಿರಾರು ವಿದ್ಯಾರ್ಥಿಗಳು ಇಂಜಿನಿಯರಿ0ಗ್, ಮೆಡಿಕಲ್ ಸೇರಿದಂತೆ ಅನೇಕ ಕೋರ್ಸ್ಗಳಿಗೆ ಪ್ರವೇಶ ಪಡೆದಿದ್ದಾರೆ.ದಲಿತರಕಲ್ಯಾಣಕ್ಕಾಗಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿದ ಬಿಜೆಪಿ ಸರ್ಕಾರದ ವಿರುದ್ಧ ಅಂದಿನ ವಿರೋಧ ಪಕ್ಷವಾಗಿದ್ದಕಾಂಗ್ರೆಸ್‌ಇದು ಕೇವಲ ಆಶ್ವಾಸನೆಜಾರಿಗೆ ಬರುವುದಿಲ್ಲ ಎಂದುಟೀಕೆ ಮಾಡಿತ್ತು, ಆದರೆಇಂದುಅದೇ ಮೀಸಲಾತಿ ಪ್ರಮಾಣದಲ್ಲಿತಮ್ಮ ಪಕ್ಷದ ನಾಯಕರನ್ನು ಮೆಚ್ಚಿಸಲುಅವೈಜ್ಙಾನಿಕವಾಗಿ ವರ್ಗೀಕರಣ ಮಾಡಿಗೊಂದಲ ಸೃಷ್ಠಿಸಿದ್ದಾರೆ ಎಂದು ಸರ್ಕಾರದ ವಿರುದ್ಧಕಿಡಿಕಾರಿದರು.
ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವಎಲ್ಲಾ ಸಮುದಾಯಗಳಲ್ಲಿ ಶಿಕ್ಷಣ, ಉದ್ಯೋಗ, ಅಂತರ್ ಹಿಂದುಳಿದಿರುವಿಕೆಯ ವಾಸ್ತವ ದತ್ತಾಂಶಗಳ ಆಧಾರದಲ್ಲಿ, ಪ್ರಾತಿನಿಧ್ಯಕೊರತೆಆಗದಂತೆ ಮೀಸಲಾತಿ ಪ್ರಮಾಣ ಹಂಚಿಕೆ ಮಾಡಬೇಕುಎಂಬುದು ಸುಪ್ರೀಂಕೋರ್ಟ್ಆದೇಶವಾಗಿದೆ.ಎಲ್ಲಾ ಸಮಾಜಗಳಿಗೂ ಸಮಾನ ಸಾಮಾಜಿಕ ನ್ಯಾಯಒದಗಿಸಬೇಕು ಎಂಬ ಇಚ್ಛಾಶಕ್ತಿಯನ್ನು ಸರ್ಕಾರತೋರಬೇಕುಎಂದು ಹೇಳಿದರು.
ತಾಂಡಗಳಲ್ಲಿ ವಾಸಿಸುತ್ತಿರುವ ಲಂಬಾಣಿಗಳು, ನೆಲೆ ಇಲ್ಲದ ಸ್ಥಳಗಳಲ್ಲಿ ಕಲ್ಲುಒಡೆದುಜೀವನ ನಡೆಸುತ್ತಿರುವ ಭೋವಿ ಸಮುದಾಯ, ಇರಲು ಸೂರುಗಳೇ ಇಲ್ಲದಕೊರಚ, ಕೊರಮ ಸಮಾಜದವರು, ಊರೂರುತಿರುಗುವಅಲೆಮಾರಿ ಸಮುದಾಯಗಳಿಗೆ ಸಿಎಂ ಸಿದ್ದರಾಮಯ್ಯ ನೇತೃತ್ವದರಾಜ್ಯ ಸರ್ಕಾರಈಗ ತೀರ್ಮಾನ ಮಾಡಿರುವ ಒಳಮೀಸಲಾತಿ ವರ್ಗೀಕರಣದಲ್ಲಿಅನ್ಯಾಯ ಮಾಡಿದೆ. ಬಂಜಾರ, ಭೋವಿ, ಕೊರಚ, ಕೊರಮ ಈ ನಾಲ್ಕು ಸಮುದಾಯಗಳಿಗೆ ಶೇಕಡ ೪.೫ ಹಾಗೂ ಅಲೆಮಾರಿ ಸಮುದಾಯಗಳಿಗೆ ಶೇಕಡ ೧ರಷ್ಟು ಒಳಮೀಸಲಾತಿ ನೀಡಬೇಕುಎಂದು ಹಿಂದಿನ ಬಿಜೆಪಿ ಸರ್ಕಾರ ಶಿಫಾರಸ್ಸು ಮಾಡಿತ್ತು.ಆ ದರೆ ಈಗಿನ ಕಾಂಗ್ರೆಸ್ ಸರ್ಕಾರ ೬೩ ಸಮುದಾಯಗಳನ್ನು ಒಟ್ಟಿಗೆ ಸೇರಿಸಿ ಶೇಕಡ ೫ರಷ್ಟು ಮೀಸಲಾತಿ ಹಂಚಿಕೆ ಮಾಡಿದ್ರೋಹ ಮಾಡಿದೆ.ಒಳಮೀಸಲಾತಿ ಪ್ರಮಾಣವನ್ನುಮರುಪರಿಶೀಲನೆ ಮಾಡಿ ಅವಕಾಶ ವಂಚಿತ, ಧ್ವನಿ ಇಲ್ಲದ ಸಮುದಾಯಗಳಿಗೆ ನ್ಯಾಯಒದಗಿಸಬೇಕುಎಂದುಓAಕಾರ್‌ಒತ್ತಾಯಿಸಿದರು.
ಸೆ.೧೦ರAದು ಬೆಳಿಗ್ಗೆ ೧೦ ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.ತುಮಕೂರುಜಿಲ್ಲೆಯ ಎಲ್ಲಾತಾಲ್ಲೂಕಿನ ಭೋವಿ, ಬಂಜಾರ, ಕೊರಚ, ಕೊರಮ ಹಾಗೂ ಅಲೆಮಾರಿ ಸಮುದಾಯದವರು ಸ್ವಯಂ ಪ್ರೇರಿತವಾಗಿ ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರು ಚಲೋ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆಎಂದು ತಿಳಿಸಿದರು
ಜಿಲ್ಲಾ ಬಂಜಾರ ಸಂಘದಕಾರ್ಯಾಧ್ಯಕ್ಷ ಬಾಂಬೆ ಕುಮಾರ ನಾಯಕ್, ಜಿಲ್ಲಾ ಭೋವಿ ಸಂಘದಉಪಾಧ್ಯಕ್ಷ ಶಿರಾ ಗೋವಿಂದರಾಜು, ಮುಖಂಡರಾದ ಸತೀಶ್, ಮಂಜುನಾಥ್ ಹಾಜರಿದ್ದರು.

(Visited 1 times, 1 visits today)