ಹುಳಿಯಾರು: ಪ್ರತಿ ಗುರುವಾರ ವಾರದ ಸಂತೆ ಸುಂಕವಾಗಿ ಲಕ್ಷಾಂತರ ರೂ. ಸಂಗ್ರಹಿಸುತ್ತೀರಿ. ಆದರೆ ಮೂಲ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ ಹಾಗೂ ನೆರಳಿನ ವ್ಯವಸ್ಥೆ ಮಾಡದೆ . ಮುಂದಿನ ಸಂತೆಯಲ್ಲಿ ಕುಡಿಯುವ ನೀರು ಹಾಗೂ ೩ ತಿಂಗಳೊಳಗೆ ಶೌಚಾಲಯ, ನೆರಳಿನ ವ್ಯವಸ್ಥೆ ಮಾಡದಿದ್ದರೆ ಪಂಚಾಯ್ತಿ ಮುಂದೆ ಅಹೋರಾತ್ರಿ ಧರಣಿ ಹಮ್ಮಿ ಕೊಳ್ಳಬೇಕಾಗುತ್ತದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಹುಳಿಯಾರು ಪಟ್ಟಣ ಪಂಚಾಯ್ತಿಗೆ ಎಚ್ಚರಿಕೆ ನೀಡಿದೆ.
ಹುಳಿಯಾರು ಪಟ್ಟಣ ಪಂಚಾಯ್ತಿಗೆ ಹೊಸಹಳ್ಳಿ ಚಂದ್ರಣ್ಣ ಬಣದ ರಾಜ್ಯ ರೈತ ಸಂಘದ ಪದಾಧಿಕಾರಿಗಳೊಂದಿಗೆ ತೆರಳಿದ ಅವರು ಕಳೆದ ಐದಾರು ದಶಕಗಳಿಂದ ವಾರದ ಸಂತೆ ಮೈದಾನಕ್ಕೆ ಮೂಲಸೌಲಭ್ಯ ಕಲ್ಪಿಸುವಂತೆ ಕೇಳುತ್ತಿದ್ದರೂ . ಕನಿಷ್ಟ ಕುಡಿಯುವ ನೀರನ್ನೂ ಸಹ ಕೊಡದೆ ರೈತರನ್ನು ಕಡೆ ಗಣಿಸಿದ್ದೀರಿ. ನಿಮ್ಮ ಈ ರೈತ ವಿರೋಧಿ ಧೋರಣೆ ಮುಂದುವರಿದರೆ ಕರ ನಿರಾಕರಣೆ ಚಳುವಳಿಗೆ ಕರೆ ಕೊಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಪ್ರತಿ ನಿತ್ಯ ಹೋಬಳಿಯ ವಿವಿಧ ಹಳ್ಳಿಗಳಿಂದ ಹುಳಿಯಾರು ಬಸ್ ನಿಲ್ದಾಣಕ್ಕೆ ಸಾವಿರಾರು ಜನರು ಬಂದೋಗುತ್ತಾರೆ. ಆದರೆ ಇಲ್ಲಿಯೂ ಶೌಚಾಲಯ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳಿಲ್ಲ. ಹೆಣ್ಣು ಮಕ್ಕಳಂತೂ ಶೌಚಕ್ಕೆ ಪರದಾಡುವ ದೃಶ್ಯ ಸಾಮಾನ್ಯವಾಗಿದೆ. ಅಲ್ಲದೆ ಹುಳಿಯಾರು ಪಟ್ಟಣದ ತುಂಬೆಲ್ಲ ಕಸದ ರಾಶಿ ಬಿದ್ದಿದೆ. ಚರಂಡಿಗಳು ಕಟ್ಟಿಕೊಂಡು ದುರ್ನಾತ ಬೀರುತ್ತಿದೆ. ಪಂಚಾಯ್ತಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಹಾಗಾಗಿ ಪಂಚಾಯಿಗೆ ಬರುತ್ತಿರುವ ಕೋಟ್ಯಾಂತರ ರೂ. ಆದಾಯ ಯರ‍್ಯಾರ ಜೇಬಿಗೆ ಹೋಗುತ್ತಿದೆಯೋ ಎನ್ನುವ ಅನುಮಾನ ಮೂಡಿದೆ ಎಂದು ಕುಟುಕಿದ್ದಾರೆ.
ರೈತಸಂಘದ ತಾಲೂಕು ಕಾರ್ಯಾಧ್ಯಕ್ಷ ಕರಿಯಪ್ಪ, ಹೋಬಳಿ ಅಧ್ಯಕ್ಷ ಕೆಂಕೆರೆ ಬಸವರಾಜು, ನೀರಾ ಈರಣ್ಣ, ನಾಗಪ್ಪ, ಪೆದ್ದಾ ಭೋವಿ, ಕಾಫಿಪುಡಿ ಹನುಮಂತರಾಜು, ನಿಂಗಪ್ಪ, ಪುಷ್ಪಾಬಾಯಿ, ಪ್ರಶಾಂತ್, ಜಗದೀಶ್, ಜಯಣ್ಣ, ಚಂದ್ರಯ್ಯ, ಕರಷ್ಣಮೂರ್ತಿ, ಪುಟ್ಟಯ್ಯ, ಸಂತೋಷ್, ನಾಗರಾಜು, ಕುಮಾರ್, ದುರ್ಗಯ್ಯ, ಜಯಣ್ಣ, ಚಂದ್ರಶೇಖರರಾವ್, ಶ್ರೀಧರ್, ಶ್ರೀನಿವಾಸ್, ನಾಗರಾಜು, ರುದ್ದೇಶ್, ಕುಮಾರ್, ನಿಂಗರಾಜು, ಚಂದ್ರಮ್ಮ ಲಕ್ಕಮ್ಮ ಮತ್ತಿತರರು ಇದ್ದರು.
(Visited 1 times, 1 visits today)