ತುಮಕೂರು: ನಾವು ಮಾಡುವ ಸೇವೆ ನಿಸ್ವಾರ್ಥತೆಯಿಂದ ಕೂಡಿರಬೇಕು. ಆಗ ಮಾತ್ರ ನಮ್ಮ ಸೇವೆಗೆ ಜನಮನ್ನಣೆ ದೊರೆಯುತ್ತದೆ ಎಂದು ರಾಷ್ಟçಪತಿ ಪದಕ ಪುರಸ್ಕöÈತ ಕೊರಟಗೆರೆ ಸರ್ಕಲ್ ಇನ್ಸ್ಪೆಕ್ಟರ್ ಆರ್.ಪಿ. ಅನಿಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಬಾರ್‌ಲೈನ್ ರಸ್ತೆಯಲ್ಲಿರುವ ಶ್ರೀ ಕೃಷ್ಣಮಂದಿರದಲ್ಲಿ ಅಖಿಲ ಭಾರತ ಮಾಧವ ಮಂಡಲ, ಕೃಷ್ಣ ಮಂದಿರ ಹಾಗೂ ವಿಪ್ರ ಬಾಂಧವರ ವತಿಯಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ನಮ್ಮ ಪೊಲೀಸ್ ಇಲಾಖೆಯಲ್ಲಿ ನಾನು ಮಾಡಿರುವ ಸೇವೆಯನ್ನು ಗುರುತಿಸಿ ಹಿರಿಯ ಅಧಿಕಾರಿಗಳ ಶಿಫಾರಸ್ಸಿನಿಂದ ರಾಷ್ಟçಪತಿ ಪದಕ ಬಂದಿರುವುದು ತುಂಬಾ ಖುಷಿ ತಂದಿದೆ. ಈ ಪ್ರಶಸ್ತಿ ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಸಮಾಜ ರಕ್ಷಣೆಯ ಹೊಣೆ ಸದಾ ನಮ್ಮ ಮೇಲಿರುತ್ತದೆ ಎಂದು ಹೇಳಿದರು.
ನಮ್ಮದು ಪೊಲೀಸ್ ಕುಟುಂಬ. ನಮ್ಮ ತಂದೆಯೂ ಸಹ ಪೊಲೀಸ್ ಅಧಿಕಾರಿಯಾಗಿದ್ದರು. ಈಗ ನಾನು ಮತ್ತು ನನ್ನ ಸಹೋದರ ಇಬ್ಬರು ಸಹ ಪೊಲೀಸ್ ಅಧಿಕಾರಿಗಳಾಗಿದ್ದೇವೆ. ಜನ ಸೇವೆಯೇ ನಮ್ಮ ಕುಟುಂಬದ ಉಸಿರಾಗಿದೆ ಎಂದರು.
ದೇಶದ ಭವಿಷ್ಯವು ಯುವಶಕ್ತಿಯನ್ನು ಅವಲಂಬಿಸಿದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯುವಜನಾಂಗವು ಅತ್ಯಾಧುನಿಕ ಕೌಶಲ್ಯ ಮತ್ತು ಜ್ಞಾನವನ್ನು ಹೊಂದಿರಬೇಕು ಹಾಗೂ ತನ್ನಲ್ಲಿರುವ ದೌರ್ಬಲ್ಯವನ್ನು ಅರಿತುಕೊಂಡು ಶಕ್ತಿ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಾನು ಈ ಹಿಂದೆ ದಾವಣಗೆರೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದೆ. ನಂತರ ತುಮಕೂರು ಜಿಲ್ಲೆಗೆ ವರ್ಗವಾಗಿ ಬಂದು ಕೊರಟಗೆರೆ ವೃತ್ತದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕೊರಟಗೆರೆ ತಾಲ್ಲೂಕಿನ ಜನರಿಂದಲೂ ಸಹ ಉತ್ತಮ ಸಹಕಾರ ದೊರೆಯುತ್ತಿದೆ ಎಂದು ಹೇಳಿದರು.
ಕಲ್ಬುರ್ಗಿ ಸೇರಿದಂತೆ ರಾಜ್ಯದ ವಿವಿಧೆಡೆ ಪ್ರಮುಖ ಅಪರಾಧ ಪ್ರಕರಣಗಳ ತನಿಖೆಯಲ್ಲೂ ಸಹ ಹಿರಿಯ ಅಧಿಕಾರಿಗಳೊಂದಿಗೆ ನಾನು ಕಾರ್ಯನಿರ್ವಹಿಸಿದ್ದೇನೆ. ಪ್ರಮುಖ ಪ್ರಕರಣಗಳ ತನಿಖಾ ಕಾರ್ಯದಲ್ಲಿ ಕೆಲಸ ಮಾಡಿರುವುದು ನನಗೆ ಉತ್ತಮ ಅನುಭವ ತಂದು ಕೊಟ್ಟಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಟೂಡಾ ಮಾಜಿ ಅಧ್ಯಕ್ಷ ಹಾಗೂ ಸಮಾಜದ ಮುಖಂಡರಾದ ಹೆಚ್.ಜಿ. ಚಂದ್ರಶೇಖರ್ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಮಾನವೀಯತೆಯನ್ನು ಮೈಗೂಡಿಸಿಕೊಂಡಿರುವ ಸರ್ಕಲ್ ಇನ್ಸ್ಪೆಕ್ಟರ್ ಅನಿಲ್‌ರವರ ಉತ್ತಮ ಸೇವೆಯನ್ನು ಗುರುತಿಸಿ ರಾಷ್ಟçಪ್ರಶಸ್ತಿ ದೊರೆತಿರುವುದು ನಮ್ಮ ಸಮುದಾಯಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದರು.
ಪೊಲೀಸ್ ಅಧಿಕಾರಿಯಾಗಿ ಅನಿಲ್ ರವರು ಕಾನೂನು ಸುವ್ಯವಸ್ಥೆ ಕಾಪಾಡುವುದರ ಜತೆಗೆ ಸಮಾಜ ರಕ್ಷಣೆಗೆ ಸಲ್ಲಿಸಿರುವ ಸೇವೆಗೆ ರಾಷ್ಟçಪತಿ ಪದಕ ದೊರೆತಿರುವುದೇ ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲೂ ಸಹ ಅನಿಲ್ ರವರು ಪೊಲೀಸ್ ಇಲಾಖೆಯಲ್ಲಿ ಮತ್ತಷ್ಟು ಉತ್ತಮವಾಗಿ ಕಾರ್ಯನಿರ್ವಹಿಸಲಿ, ಉನ್ನತ ಹುದ್ದೆಗೆ ಬಡ್ತಿ ಹೊಂದಲಿ ಎಂದು ಆಶಿಸಿದರು.
ನಮ್ಮ ಮಾನಸಿಕ ಸ್ಥಿತಿ ಸದೃಢವಾಗಿರಬೇಕು. ಆಗ ಮಾತ್ರ ನಾವು ಮಾಡುವ ಕೆಲಸ ಕಾರ್ಯಗಳು ಸಹ ಉತ್ತಮವಾಗಿ ಕೂಡಿರುತ್ತವೆ. ಜತೆಗೆ ದೇವರ ಆರಾಧನೆಯಿಂದಲೂ ನಮ್ಮ ಮಾನಸಿಕ ಹಾಗೂ ಆತ್ಮಶಕ್ತಿ ಜಾಸ್ತಿಯಾಗುತ್ತದೆ ಎಂದರು.
ಮಾಧವ ಮಂಡಲದ ಅಧ್ಯಕ್ಷರಾದ ಜಿ.ಕೆ. ಶ್ರೀನಿವಾಸ್ ಮಾತನಾಡಿ, ರಾಷ್ಟçಪತಿ ಪದಕ ಪುರಸ್ಕöÈತರಾಗಿರುವ ಸರ್ಕಲ್ ಇನ್ಸ್ಪೆಕ್ಟರ್ ಆರ್.ಪಿ. ಅನಿಲ್ ರವರು ನಮ್ಮ ವಿಪ್ರ ಸಮುದಾಯದವರು ಎನ್ನುವುದು ಹೆಮ್ಮೆಯ ಸಂಗತಿ. ಇವರ ಕುಟುಂಬವೇ ಪೊಲೀಸ್ ಇಲಾಖೆಯಲ್ಲಿ ಸಲ್ಲಿಸುತ್ತಿದ್ದಾರೆ. ಅವಳಿ ಸಹೋದರರು ಸಹ ಪೊಲೀಸ್ ಇನ್ಸ್ಪೆಕ್ಟರ್‌ಗಳಾಗಿ ಸೇವೆ ಸಲ್ಲಿಸುತ್ತಿದ್ದು, ಒಂದೇ ಬಾರಿಗೆ ಇಬ್ಬರು ರಾಷ್ಟçಪತಿ ಪದಕಕ್ಕೆ ಭಾಜನರಾಗಿರುವುದು ಸಂತಸದ ಸಂತಸದ ಸಂಗತಿ ಎಂದರು.
ಬೆAಗಳೂರಿನಲ್ಲಿ ಇವರ ಕುಟುಂಬ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದೆ. ಇವರು ನಮ್ಮ ಸಮುದಾಯದವರು ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆ ಎನಿಸುತ್ತದೆ. ೨೦೦೮ ರಿಂದಲೂ ಅನಿಲ್ ರವರು ನನಗೆ ಪರಿಚಯಸ್ಥರು. ಪ್ರಾಮಾಣಿಕ ಅಧಿಕಾರಿ. ಇವರ ಜತೆ ನಮ್ಮ ಸಮುದಾಯ ಸದಾ ಇರುತ್ತದೆ.
ಕಾರ್ಯಕ್ರಮದಲ್ಲಿ ಕೃಷ್ಣಮಂದಿರದ ಅಧ್ಯಕ್ಷ ಎಸ್. ಶ್ರೀನಿವಾಸ್ ಹತ್ವಾರ್, ಮಾಧವ ಮಂಡಲದ ಅಧ್ಯಕ್ಷ ಜಿ.ಕೆ. ಶ್ರೀನಿವಾಸ್, ಕಾರ್ಯದರ್ಶಿ ಗುರುಪ್ರಸಾದ್, ಉಪಾಧ್ಯಕ್ಷ ವೇಣುಗೋಪಾಲ್, ವಾದಿರಾಜು, ಪರಿಮಳ, ಪೂಜಾ ವಾದಿರಾಜು ಮತ್ತಿತರರು ಉಪಸ್ಥಿತರಿದ್ದರು.
(Visited 1 times, 1 visits today)