ತುಮಕೂರು: ನಗರದ ಶ್ರೀ ಸಿದ್ಧರ‍್ಥ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ನ ವ್ಯಾಪ್ತಿಯ ಶ್ರೀ ಸಿದ್ಧರ‍್ಥ ವೈದ್ಯಕೀಯ ಕಾಲೇಜಿನ ಔಷಧಶಾಸ್ತ್ರ ಮತ್ತು ಔಷಧ ಪ್ರತಿರೋಧ ಪರಿಣಾಮ ಮೇಲ್ವಿಚಾರಣಾ ಕೇಂದ್ರ ವಿಭಾಗದ ಆಶ್ರಯದಲ್ಲಿ ರೋಗಿಗಳ ಸುರಕ್ಷತೆ ಮತ್ತು ಔಷಧಿಗಳಿಂದಾಗುವ ಪರಿಣಾಮದ ಪ್ರತಿಕ್ರಿಯೆಗಳು ಬಗ್ಗೆ ಜಾಗೃತಿ ಮೂಡಿಸುವ ೫ ನೇ ರಾಷ್ಟ್ರೀಯ ಔಷಧ ಜಾಗೃತಿ ಸಪ್ತಾಹವನ್ನು ಇತ್ತೀಚಿಗೆ ಯಶಸ್ವಿಯಾಗಿ ಆಚರಿಸಲಾಯಿತು.
ಅಗಲಕೋಟೆಯಲ್ಲಿಯಲ್ಲಿರು ವೈದ್ಯಕೀಯ ಕಾಲೇಜಿನ ಕ್ಯಾಂಪಸ್ ನಲ್ಲಿ ರ‍್ಪಟ್ಟ ಕರ‍್ಯಕ್ರಮವನ್ನು ಪ್ರಾಂಶುಪಾಲರಾದ ಡಾ. ಎಂ.ಬಿ. ಸಾನಿಕೋಪ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರ ರೋಗಿಗಳ ಸುರಕ್ಷತೆ, ರ‍್ಕಬದ್ಧವಾಗಿ ಔಷಧಿಗಳನ್ನು ಬಳಕೆ ಮಾಡಬೇಕು ಮತ್ತು ಸಮುದಾಯದಲ್ಲಿ ಔಷಧ ಬಳಕೆಯ ತಪಾಸಣೆಯನ್ನು ಬಲಪಡಿಸುವಲ್ಲಿ ತನ್ನ ಬದ್ಧತೆಯನ್ನು ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವ ತಂಡ ಮಾಡಬೇಕೆಂದು ಕರೆ ನೀಡಿದರು .
ಉಪ ಪ್ರಾಂಶುಪಾಲರಾದ ಡಾ. ಪ್ರಭಾಕರ ಜಿ.ಎನ್, ವೈದ್ಯಕೀಯ ಅಧೀಕ್ಷಕರಾದ ಡಾ. ವೆಂಕಟೇಶ್ ಮತ್ತು ಡಾ. ರಾಜೇಶ್ವರಿ ದೇವಿ, ಸಿಎಒ ಡಾ. ಕಿರಣ್ ಕುಮಾರ್ , ಫರ‍್ಮಕಾಲಜಿ ವಿಭಾಗದ ಮುಖ್ಯಸ್ಥರಾದ ಪ್ರೊ. ಡಿ. ನಂದಿನಿ ಟಿ ಸೇರಿದಂತೆ ಅಧ್ಯಾಪಕರ ಮತ್ತು ಸದಸ್ಯರು ಉಪಸ್ಥಿತರಿದ್ದರು.
ಸಪ್ತಾಹದ ಅಂಗವಾಗಿ ತುಮಕೂರು ರ‍್ಕಾರಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಸ್ಥಳೀಯ ಪ್ರೌಢಶಾಲೆಗಳು ಮತ್ತು ದೊಡ್ಡಸಗೆರೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಂವೇದನಾಶೀಲತಾ ಜಾಗೃತಿ ಜಾಥಾ ಮತ್ತು ಶಿಬಿರಗಳನ್ನು ನಡೆಸಲಾಯಿತು, ಜೊತೆಗೆ ಸಿದ್ದರ‍್ಥ ರ‍್ಸಿಂಗ್ ಸಿಬ್ಬಂದಿಗೆ ಸಂವಾದ ತರಗತಿಗಳನ್ನು ನಡೆಸಲಾಯಿತು. ಔಷಧಿ ಸೇವನೆಯ ಕುರಿತಾಗಿ ಸರ‍್ವಜನಿಕನ್ನು ಮತ್ತು ಪ್ರೇಕ್ಷಕರನ್ನು ತಲುಪಲು, ರೇಡಿಯೋ ಸಿದ್ಧರ‍್ಥದಲ್ಲಿ ಜಾಗೃತಿ ಆರೋಗ್ಯ ಮಾಹಿತಿಯನ್ನು ಪ್ರಸಾರ ಮಾಡಲಾಯಿತು. ಸುರಕ್ಷಿತ ಔಷಧ ಬಳಕೆಯ ಸಂದೇಶವನ್ನು ಹರಡುವಲ್ಲಿ ಸೃಜನಶೀಲತೆಯನ್ನು ಹೇಗೆ ಬಳಸಬೇಕೆಂಬ ಕುರಿತು ನಡೆಸಿದ ರಂಗೋಲಿ, ಪೋಸ್ಟರ್ ಮತ್ತು ಪ್ರಬಂಧ ಸ್ರ‍್ಧೆಗಳಲ್ಲಿ ವಿದ್ಯರ‍್ಥಿಗಳು ಉತ್ಸಾಹದಿಂದ ಭಾಗವಹಿಸಿದರು.
ನಾಗರ‍್ಜುನ ಸಭಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ವರ‍್ಷಿಕ ಫರ‍್ಮಕೋವಿಜಿಲೆನ್ಸ್ ಸುದ್ದಿಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ವಿವಿಧ ಸ್ರ‍್ಧೆಗಳ ವಿಜೇತರಾದ ವಿದ್ಯರ‍್ಥಿಗಳನ್ನು ಸನ್ಮಾನಿಸಲಾಯಿತು.
೫ ನೇ ರಾಷ್ಟ್ರೀಯ ಔಷಧ ಜಾಗೃತಿ ಸಪ್ತಾಹದ ಸಂಘಟನಾ ಕರ‍್ಯರ‍್ಶಿ ಮತ್ತು ಎಂಡಿಎಂಸಿ ಸಂಯೋಜಕರಾದ ಡಾ. ಅರುಣ್ ಹೆಬ್ಬಾರ್ ಜೆ.ಎನ್, ಉಪ ಸಂಯೋಜಕರಾದ ಮತ್ತು ಡಾ. ವಿನಯ್ ಕೆ , ಡಾ. ಪವನ್ ಕುಮಾರ್ ರೆಡ್ಡಿ ಮತ್ತು ಡಾ. ದೇವರಾಜು ಅವರನ್ನು ಒಳಗೊಂಡ ತಂಡ ರಾಷ್ಟ್ರೀಯ ಔಷಧ ಜಾಗೃತಿ ಚಟುವಟಿಕೆಗಳನ್ನು ಸಂಯೋಜಿಸಿತು.
(Visited 1 times, 1 visits today)