ತುಮಕೂರು: ಇತ್ತೀಚೆಗೆ ವಕೀಲರೊಬ್ಬರು ದೇಶದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದಿರುವ ಪ್ರಕರಣಕ್ಕೆ ಸಂಬ0ಧಿಸಿದ0ತೆ ಭಾರತದಾದ್ಯಂತ ಸಾರ್ವಜನಿಕವಾಗಿ ಗಂಭೀರ ಚರ್ಚೆಗಳು ನಡೆಯುತ್ತಿವೆ ಜೊತೆಗೆ ಸಾರ್ವಜನಿಕ ಅವಮಾನ ಮತ್ತು ಭದ್ರತಾ ಉಲ್ಲಂಘನೆ ಆಗಿರುವುದು ಸಹ ಕಂಡು ಬಂದಿದೆ ಆ ಪ್ರಯುಕ್ತ ತುಮಕೂರು ನಗರದ ಬಿಜಿಎಸ್ ವೃತ್ತ (ಟೌನ್ ಹಾಲ್ ವೃತ್ತ)ದಿಂದ ಜಿಲ್ಲಾಧಿಕಾರಿಗಳ ಕಛೇರಿಯವರೆಗೆ ಬೃಹತ್ ಜಾಥಾ ನಡೆಸಿ ಜಿಲ್ಲಾಧಿಕಾರಿಗಳ ಕಛೇರಿಗೆ ಕರ್ನಾಟಕ ಭೀಮ್ ಸೇನೆ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಮತ್ತು ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ವತಿಯಿಂದ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮನವಿಯನ್ನು ಮಾಡಲಾಯಿತು.
ಪ್ರಕರಣದ ಕುರಿತು ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್ ಮಾತನಾಡಿ ನಮ್ಮ ದೇಶದ ಸರ್ವೋಚ್ಛ ನ್ಯಾಯಾಲಯದಲ್ಲಿ ವಿಕೃತ ಘಟನೆಯೊಂದು ಜರುಗಿದೆ, ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಅವರಿಗೆ ರಾಕೇಶ್ ಕಿಶೋರ್ ಎಂಬ ಮತಾಂಧ ವಕೀಲನೊಬ್ಬ ತನ್ನ ಕಾಲಿನಿಂದ ಶೂ ಕಳಚಿ ನ್ಯಾಯಮೂರ್ತಿಗಳತ್ತ ತೂರಲು ಹವಣಿಸಿದ್ದಾನೆ. ಕಳೆದ ಒಂದು ತಿಂಗಳಿನಿ0ದ ಬಿ.ಆರ್.ಗವಾಯಿಯವರ ಸುತ್ತ ನಡೆದ ಕೆಲವು ಸಂಗತಿಗಳನ್ನು ಗಮನಿಸಿದರೆ ಇದೊಂದು ಸಂಘಟಿತ ಹಿಂಸೆಯ ಅನುಷ್ಠಾನ ಎಂಬುದು ಮನದಟ್ಟಾಗುತ್ತದೆ. ಮಹಾರಾಷ್ಟçಕ್ಕೆ ಗವಾಯಿಯವರು ಭೇಟಿ ಕೊಟ್ಟಾಗ ಅಲ್ಲಿ ಅವರಿಗೆ ಸಲ್ಲಬೇಕಾದ ಗೌರವ ಸಂದಿರಲಿಲ್ಲ. ಶಿಷ್ಟಾಚಾರ ಉಲ್ಲಂಘನೆಯಾಗಿದ್ದರಿ0ದ ಸ್ವತಃ ಅವರೆ ಬೇಸರ ತಳೆದಿದ್ದರು. ನ್ಯಾಯಮೂರ್ತಿಗಳ ತಾಯಿ ಕಮಲಾತಾಯಿಯವರಿಗೆ ಸಂಘಟನೆಯೊ0ದರ ಕಾರ್ಯಕ್ರಮಕ್ಕೆ ಆಹ್ವಾನ ಬಂದದ್ದು, ಕಮಲಾತಾಯಿಯವರು ಅದನ್ನು ನಿರಾಕರಿಸಿದ್ದು ಚರ್ಚೆಯಾಗಿತ್ತು. ಖುಜುರಾಹೋ ದೇವಾಲಯದ ಮೂರ್ತಿಗೆ ಸಂಬAಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಬಗ್ಗೆ ನ್ಯಾಯಮೂರ್ತಿಗಳು ಮಾಡಿದ ವಿಶ್ಲೇಷಣೆ ಮತೀಯವಾದಿ ಸಂಘಟನೆಗಳಿಗೆ ಅಪ ಥ್ಯವಾಗಿತ್ತು. ನೆನ್ನೆ ಶೂ ಎಸೆದ ಕಿಶೋರ್ ಎಂಬ ವಕೀಲ `ಸನಾತನ ಸಂಸ್ಥೆಗೆ ಅವಮಾನ ಎಸಗುವುದನ್ನು ಸಹಿಸುವುದಿಲ್ಲ’ ಎಂದು ಕೂಗಾಡಿರುವುದು ವರದಿಯಾಗಿದೆ ಆದುದರಿಂದ ತಪ್ಪಿತಸ್ಥರ ವಿರುದ್ಧ ಅತೀ ಶೀಘ್ರವಾಗಿ ಕ್ರಮ ಕೈಗೊಂಡು ಸಂವಿಧಾನಿಕ ನ್ಯಾಯವನ್ನು ಒದಗಿಸಬೇಕೆಂದು ಈ ಮೂಲಕ ಒತ್ತಾಯಿಸುತ್ತಿದ್ದೇವೆಂದು ಕರ್ನಾಟಕ ಭೀಮ್ ಸೇನೆಯ ಜಿಲ್ಲಾಧ್ಯಕ್ಷರಾದ ದಾಸಪ್ಪರವರು ಮನವಿ ಮಾಡಿದರು.
ಈ ಒಂದು ಘಟನೆ ಸಂವಿಧಾನಕ್ಕೆ ಮಾಡಿದ ಅಪರಾಧವಾಗಿದೆ, ಇಂತಹ ಘಟನೆ ನಡೆಯಬಾರದಾಗಿತ್ತು, ಆದರೆ ಈ ಘಟನೆಯಿಂದ ನ್ಯಾಯಾಲಯಗಳಲ್ಲಿನ ಭದ್ರತೆ, ಬದ್ಧತೆ ಎಷ್ಟರ ಮಟ್ಟಿಗೆ ಇದೆ ಎಂಬ ಸಂಶಯಗಳು ಮೂಡುತ್ತಿವೆ, ಜೊತೆಗೆ ನ್ಯಾಯಮೂರ್ತಿಗಳ ಮೇಲೆಯೇ ಈ ರೀತಿಯಾದ ಅವಮಾನಕರ ಕೃತ್ಯವೆಸಗುವ ಮನಃಸ್ಥಿತಿ ಆ ಮನುಷ್ಯನಿಗೆ ಇದೆಯೆಂದರೆ ಇನ್ನು ಸಾರ್ವಜನಿಕರೊಡನೆ ಯಾವ ರೀತಿಯಾದ ವರ್ತನೆ ಮಾಡುತ್ತಾರೆಂದು ನಾವು ನೋಡಬೇಕಿದೆ, ಆದುದರಿಂದ ಕೃತ್ಯವೆಸಗಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಮ್ಮ ಆಶಯವಾಗಿದೆ ಎಂದು ದಲಿತ ಕ್ರಿಯಾ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಇಂದ್ರುಕುಮಾರ್ ಡಿ.ಕೆರವರು ಹೇಳಿದರು.
ಈ ಸಂದರ್ಭದಲ್ಲಿ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್, ದಲಿತ ಕ್ರಿಯಾ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಇಂದ್ರುಕುಮಾರ್ ಡಿ.ಕೆ, ಎ.ವಿ.ಎಸ್.ಎಸ್ ಜಿಲ್ಲಾಧ್ಯಕ್ಷರಾದ ರಾಮಾಂಜಿನಪ್ಪ, ಕರ್ನಾಟಕ ಭೀಮ್ ಸೇನೆ ತುಮಕೂರು ತಾಲೂಕು ಅಧ್ಯಕ್ಷರಾದ ಮಾದೇಶ್, ಕರ್ನಾಟಕ ಭೀಮ್ ಸೇನೆ ತುಮಕೂರು ಜಿಲ್ಲಾ ಯುವ ಘಟಕ ಕಾರ್ಯದರ್ಶಿ ರಂಜನ್, ತುಮಕೂರು ತಾಲೂಕು ಕಾರ್ಯಧ್ಯಕ್ಷರಾದ ನಂದನ್, ತುಮಕೂರು ಜಿಲ್ಲಾ ಉಪಾಧ್ಯಕ್ಷರಾದ ರಮೇಶ್, ತಾಲೂಕ್ ಕಾರ್ಯದರ್ಶಿ ವಿನಯ್, ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ತುಮಕೂರು ನಗರ ಅಧ್ಯಕ್ಷರಾದ ದಿಬ್ಬೂರು ಶ್ರೀನಿವಾಸ್, ಪದಾಧಿಕಾರಿಗಳಾದ ಮಹೇಶ್, ಅರುಣ್ ಕುಮಾರ್, ಶ್ರೀನಿವಾಸ್, ಅಭಿ, ಪೃಥ್ವಿ, ರಂಗಸ್ವಾಮಯ್ಯ ಕೆ ಎಸ್, ಶಿವಣ್ಣ ಇನ್ನು ಮುಂತಾದವರು ಉಪಸ್ಥಿತರಿದ್ದರು.