ಶಿರಾ: ವಿದ್ಯೆಯಿಂದ ಮಾತ್ರ ಶೈಕ್ಷಣಿಕ, ಸಾಮಾಜಿಕ ಹಾಗೂ ರ‍್ಥಿಕವಾಗಿ ಸಮುದಾಯ ಸದೃಢರಾಗಲು ಸಾಧ್ಯ ಎಂದು ಸಹಕಾರಿ ಮಾಜಿ ಸಚಿವ ಹಾಗೂ ಶಾಸಕ ಕೆ ಎನ್ ರಾಜಣ್ಣ ಹೇಳಿದರು.
ಅವರು ಶಿರಾ ತಾಲ್ಲೂಕು ಕಳ್ಳಂಬೆಳ್ಳ ಹೋಬಳಿ ಮಟ್ಟದ ಹನುಮಂತನಗರ (ದೊಡ್ಡಲಾದಮರ) ದಲ್ಲಿ ಮದಕರಿ ನಾಯಕ ಪತ್ತಿನ ಸಾಕಾರ ಸಂಘದ ಸಹಯೋಗದೊಂದಿಗೆ ನಡೆದ ಶ್ರೀ ಮರ‍್ಷಿ ವಾಲ್ಮೀಕಿ ಜಯಂತೋತ್ಸವ ಕರ‍್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ವಿದ್ಯೆ ಕಲಿಸಿ ಶೈಕ್ಷಣಿಕವಾಗಿ ಬಲ ಹೊಂದುವಂತೆ ಮಾಡುವ ರ‍್ತವ್ಯ ಪೋಷಕರದ್ದು, ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು, ವಿದ್ಯೆ ಸೋಮಾರಿಗಳ ಸ್ವತ್ತಲ್ಲ, ಸಾಧಕರ ಸ್ವತ್ತು, ಇತ್ತೀಚಿನ ದಿನಮಾನಗಳಲ್ಲಿ ಜನಸಂಖ್ಯೆ ಸ್ಫೋಟ ಅತೀಯಾಗುತ್ತಿದ್ದು, ಉಳುಮೆ ಮಾಡುವ ಭೂಮಿಯ ವಿಸ್ತರ‍್ಣ ಕ್ಷೀಣಿಸುತ್ತಿದ್ದೆ, ಭೂಮಿ ನಂಬಿ ಬಧುಕು ಸಾಗಿಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನರ‍್ಮಾಣವಾಗಿದೆ, ವಿದ್ಯೆಯಿಂದ ಮಾತ್ರ ಬಧುಕು ಕಟ್ಟಿಕೊಳ್ಳಲು ಸಾಧ್ಯ, ವಿದ್ಯೆ ಕಲಿತವನು ಎಲ್ಲಿಯಾದರೂ ಹೋಗಿ ಜೀವನ ಕಟ್ಟಿಕೊಳ್ಳಬಲ್ಲನು, ರಾಜ್ಯದಲ್ಲಿ ನಡೆಯುತ್ತಿರುವ ರ‍್ಥಿಕ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ನಾಯಕ ಸಮುದಾಯದ ಪ್ರತಿಯೊಬ್ಬ ಬಂಧುಗಳು ಜಾತಿ ಕಾಲಂನಲ್ಲಿ ನಾಯಕ ಎಂದು ಬರೆಯಿಸುವಂತೆ ತಿಳಿ ಹೇಳಿದರು, ಅಸಮಾಧಾನ ದ್ವೇಷವಾಗಿ ಪರಿರ‍್ತನೆಯಾಗಬಾರದು, ರಾಜಕೀಯವಾಗಿ ದ್ವೇಷ ವಿದ್ದರೂ ಸಮುದಾಯದ ಏಳಿಗೆಗಾಗಿ ಎಲ್ಲರೂ ಒಗ್ಗೂಡಬೇಕು ಹಾಗೆಯೇ ಬೆಳೆವಣಿಗೆಗೆ ಸಹಕರಿಸಿದ ಎಲ್ಲಾ ರ‍್ಗದ ನಾಯಕರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ರ‍್ತವ್ಯ, ರಾಜ್ಯದಲ್ಲಿ ವಾಲ್ಮೀಕಿ ಸಮುದಾಯ ಸಂಘಟನೆಗೊಂಡು ಒಗ್ಗೂಡುವ ಅವಶ್ಯಕತೆಯಿದೆ ಎಂದರು.
ಕರ‍್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಶಾಸಕ ಹಾಗೂ ಟಿ.ಬಿ. ಜಯಚಂದ್ರ.
ಶ್ರೀ ಮರ‍್ಷಿ ವಾಲ್ಮೀಕಿಯವರ ಜನನ ಹಾಗದೆ ಇದ್ದಿದ್ದರೆ, ಈ ದೇಶದಲ್ಲಿ ರಾಮಾಯಣ ಯಾರಿಗೂ ಗೊತ್ತಾಗುತ್ತಿರಲಿಲ್ಲ, ವಾಲ್ಮೀಕಿ ರಾಮಾಯಣ ಇಲ್ಲದೇ ಹೋಗಿದ್ದಲ್ಲಿ ಸಮಾಜದಲ್ಲಿ ಆಜಾಗುರುಕತೆ, ಹರಾಜುಕತೆ ಹೆಚ್ಚಾಗಿತ್ತಿತ್ತು. ಇವರು ರಚಿಸಿದ ಈ ಮಹಾಕಾವ್ಯದಿಂದ ಆದಿಕವಿ ಎಂದು ಕರೆಯಲ್ಪಟ್ಟರು, ಈ ದೇಶದಲ್ಲಿ ನಡೆದಿರುವಂತಹ ಜೀವಂತ ಕಥೆ ಮಹಾಕಾವ್ಯ ವಾಲ್ಮೀಕಿ ರಾಮಾಯಣ, ಲವ ಕುಶ ಜನಿಸಿದ್ದು ವಾಲ್ಮೀಕಿ ಆಶ್ರಮದಲ್ಲಿ ಎನ್ನುವ ಸತ್ಯ ಸಾರುತ್ತಿದೆ, ರಾಮ ರ‍್ಯಾದ ಪುರುಷ, ಧೈವಾಂಶ ಸಂಭೂತ, ವಿಷ್ಣುವಿನ ಅವತಾರ, ಆತ ಸಹ ರಾಜನಾಗಿದ್ದವನು, ರಾಮರಾಜ್ಯದಲ್ಲಿ ರಾಮನು ನಡೆಸಿದ ಆಡಳಿತವನ್ನು ನಾವು ಸಹ ದೇಶ, ರಾಜ್ಯದಲ್ಲಿ ಹಾಗೂ ನಿಜ ಜೀವನದಲ್ಲಿ ಎಲ್ಲರೂ ಅಳವಡಿಸಿಕೊಂಡು ಅನುಸರಿಸಬೇಕಿದೆ. ಬಹುತೇಕ ಈ ದೇಶದ, ರಾಜ್ಯದ ಚರಿತ್ರೆಯಲ್ಲಿ ಆಡಳಿತ ಮಾಡಿರುವಂತಹ ಸಮುದಾಯ ಅಂತ ಯಾವುದಾದರು ಇದ್ರೆ ಅದು ನಾಯಕ(ಪಾಳೇಗಾರ) ಸಮುದಾಯದವರು ಇದಕ್ಕೆ ಸಾಕ್ಷಿ ಎಂಬಂತೆ ಐತಿಹಾಸಿಕ ಶಿರಾದಲ್ಲಿ ಕಸ್ತೂರಿ ರಂಗಪ್ಪ ನಾಯಕರು ಕಟ್ಟಿರುವಂತಹ ಕೋಟೆಯೇ ಸಾಕ್ಷಿ ಎಂದರು.
ಕರ‍್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾಡಿದ ಶಿಡ್ಲೇಕೋಣದ ಶ್ರೀ ವಾಲ್ಮೀಕಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ಸಂಜಯ್ ಕುಮಾರ್ ಮಹಾಸ್ವಾಮಿಜಿ.
ಸಮುದಾಯದ ಬೆಳೆವಣಿಗೆಗೆ ಎಲ್ಲರೂ ಸಹ ಒಗ್ಗಟ್ಟಿನಿಂದ ಜೊತೆಯಾಗಬೇಕು, ನಾಯಕ ಸಮುದಾಯದ ನಮ್ಮ ಪರ‍್ವಿಕರ ತ್ಯಾಗ ಬಲಿದಾನವನ್ನು ನಾವೆಲ್ಲರೂ ಪ್ರತಿನಿತ್ಯ ಸ್ಮರಿಸಬೇಕಿದೆ, ಅವರ ಆರ‍್ಶ ತತ್ವ ಸಿದ್ದಂತಾಗಳನ್ನು ನಾವೆಲ್ಲರೂ ತಪ್ಪದೆ ಜೀವನದಲ್ಲಿ ಪಾಲಿಸಿಬೇಕು. ಸಮಾಜದಲ್ಲಿ ಇಂತಹ ಜಯಂತೋತ್ಸವಗಳು ನಡೆಯುವುದರಿಂದ ಸೌಹರ‍್ದತೆ, ಸಹಬಾಳ್ವೆ, ಸಹ ಜೀವನ, ದ್ವೇಷ ಅಸೂಯೆ ಈಗೇ ಎಲ್ಲವನ್ನೂ ಮರೆತು ಒಂದೆಡೆ ಸೇರಿ ಕರ‍್ಯಕ್ರಮಗಳನ್ನು ಮಾಡವುದರಿಂದ ಸಮುದಾಯಕ್ಕೆ ಒಳಿತನ್ನೂ ತರುವುದರ ಜೊತೆಗೆ ಸಮಾಜದ ಮುಖ್ಯವಾಹಿನಿಗೆ ಬರುವಲ್ಲಿ ಸಹಕರಿಯಾಗಿರುತ್ತದೆ, ಇಂದು ಅದ್ದೂರಿಯಾಗಿ ನಡೆದ ಶ್ರೀ ಮರ‍್ಷಿ ವಾಲ್ಮೀಕಿ ಜಯಂತೋತ್ಸವ ಕರ‍್ಯಕ್ರಮಕ್ಕೆ ತನು,ಮನದಿಂದ ಸಹಕರಿಸಿದ ಸಮುದಾಯದ ಎಲ್ಲಾ ಹಿರಿಯರಿಗೂ ಹಾಗೂ ಮುಖಂಡರುಗಳಿಗೆ ಭಗವಂತ ಅನುಗ್ರಹ ಕರುಣಿಸಲಿ, ಸಮುದಾಯದ ಏಳಿಗೆಗಾಗಿ ಸದಾ ಈಗೇ ಒಗ್ಗೂಡಿ ಎನ್ನುವ ಮಾತುಗಳನ್ನಾಡಿದರು.
ಇದೇ ಸಂರ‍್ಭದಲ್ಲಿ ಬೆಳ್ಳಿ ರಥದಲ್ಲಿ ಶ್ರೀ ವಾಲ್ಮೀಕಿ ಮರ‍್ಷಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಅಂಜನೇಯ ದೇವಸ್ಥಾನ ಗುಡಿಯಿಂದ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ರಾಜ ಬೀದಿಯಲ್ಲಿ ಅದ್ದೂರಿ ಮೆರವಣಿಗೆ ಮಾಡಲಾಯಿತು.
ವಿಧಾನ ಪರಿಷತ್ ಮಾಜಿ ಸದಸ್ಯ ಕೆ ಪಿ ನಂಜುಂಡಿ, ಜಿಲ್ಲಾ ನಾಯಕ ಸಂಘದ ಅಧ್ಯಕ್ಷ ವಿ. ಎನ್. ಮರ‍್ತಿ, ಪ್ರಧಾನ ಕರ‍್ಯರ‍್ಶಿ ಸಿ.ದಾಸಪ್ಪ, ಶ್ರೀ ಮರ‍್ಷಿ ವಾಲ್ಮೀಕಿ ಸಮಾಜದ ಹಿರಿಯ ಮುಖಂಡ ಹೆಚ್ಎನ್ ರಾಜಣ್ಣ, ಶ್ರೀ ಮರ‍್ಷಿ ವಾಲ್ಮೀಕಿ ನಾಯಕ ಕ್ರಿಯಾ ಸಮಿತಿ ಅಧ್ಯಕ್ಷ ಬಂಡೆ ರಾಮಕೃಷ್ಣಪ್ಪ, ವಾಲ್ಮೀಕಿ ಸಮಾಜದಹಿರಿಯ ಮುಖಂಡ ರಾಮಣ್ಣ, ಮುಖಂಡ ಅಂತಪುರ ಎಸ್ ಮಂಜಣ್ಣ,ಮದಕರಿ ನಾಯಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ದೇವರಾಜು, ಉಪಾಧ್ಯಕ್ಷ ಪಿ ಚಂದ್ರಶೇಖರ್ ನರ‍್ದೇಶಕರುಗಳಾದ ಜಯರಾಮಯ್ಯ ಬೊಮ್ಮಯ್ಯ ವೆಂಕಟರಾಮ ಅಣ್ಣಪ್ಪ ಶ್ರೀನಿವಾಸಮರ‍್ತಿ ರಾಮಣ್ಣ ಭಾಗ್ಯಮ್ಮ ಜಯಲಕ್ಷ್ಮಿ, ಪರ‍್ಣಿಮಾ ಮುಖಂಡ ಪೆದ್ದರಾಜು, ಗಾಣದಹುಣಸೆ ನಾಗರಾಜು, ಯುವ ಕಾಂಗ್ರೆಸ್ ಅಧ್ಯಕ್ಷ ಮಣಿ, ಸೇರಿದಂತೆ ಹಲವಾರು ಮುಖಂಡರು ವಾಲ್ಮೀಕಿ ಸಮಾಜದ ನೂರಾರು ಬಂಧುಗಳು ಉಪಸ್ಥಿತರಿದ್ದರು.