ತುರುವೇಕೆರೆ:ರಾಷ್ಟ್ರೀಯ ಸ್ವಯಂ ಸೇವಕ ಸಂಘದ ೧೦೦ನೇ ವಾರ್ಷಿಕೋತ್ಸವದ ಅಂಗವಾಗಿ ತುರುವೇಕೆರೆ ಪಟ್ಟಣದಲ್ಲಿ ಅ.೧೯ ರಂದು ಭಾನುವಾರ ಪಥ ಸಂಚಲನ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಮಸಾಲ ಜಯರಾಮ್ ತಿಳಿಸಿದ್ದಾರೆ.
ಪಟ್ಟಣ ಸಮೀಪದ ಜೆ.ಎಸ್. ಫಾರ್ಮ್ ಹೌಸ್ ನಲ್ಲಿ ಅ.೧೯ ರಂದು ನಡೆಯಲಿರುವ ಗಣವೇಷಧಾರಿ ಪಥಸಂಚಲನ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ೧೦೦ ವಸಂತಗಳು ತುಂಬಿದ ಹಿನ್ನಲೆಯಲ್ಲಿ ತುರುವೇಕೆರೆ ತಾಲ್ಲೂಕಿನ ಸಮಸ್ತ ಆರ್.ಎಸ್.ಎಸ್. ನ ಶತಾಬ್ದಿ ವರ್ಷದ ನಿಮಿತ್ತ ಭಾನುವಾರ ಗಣ ವೇಷಧಾರಿ ಪಥ ಸಂಚಲನ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಜೆಲ್ಲೆಯ ಹಲವೆಡೆ ಕಾರ್ಯಕ್ರಮ ಯಶಸ್ವಿಗೊಂಡಿದ್ದು ನಮ್ಮ ತಾಲ್ಲೂಕಿನಲ್ಲಿಯೂ ಸಹಾ ಅ.೧೯ರಂದು ಭಾನುವಾರ ಬೆಳಿಗ್ಗೆ ೯:೩೦ಕ್ಕೆ ಉಡುಸಲಮ್ಮ ದೇವಾಲಯದಿಂದ ಸಾವಿರಾರು ಗಣವೇಷಧಾರಿಗಳೊಂದಿಗೆ ಹೊರಟು ಪಟ್ಟಣದ ರಸ್ತೆಗಳಲ್ಲಿ ಪಥ ಸಂಚಲನ ಹಮ್ಮಿಕೊಳ್ಳಲಾಗಿದೆ. ಮಹಿಳೆಯರು ಹಾಗೂ ನಾಗರೀಕರು ತಮ್ಮ ತಮ್ಮ ರಸ್ತೆಗಳಲ್ಲಿ ಗಣವೇಷಧಾರಿಗಳು ಪಥ ಸಂಚಲನ ನಡೆಸುವ ಸಂಧರ್ಭದಲ್ಲಿ ರಸ್ತೆ ಶೃಂಗರಿಸುವ ಒತೆಗೆ ಪುಷ್ಪವೃಷ್ಟಿ ಸುರಿಸುವ ಮೂಲಕ ದೇಶಾಭಿಮಾನ ತೋರಿಸಿ, ನೂರಾರು ಕಾರ್ಯಕರ್ತರು, ಮುಖಂಡರುಗಳು, ಚುನಾಯಿತ ಜನಪ್ರತಿನಿಧಿಗಳು ಹಾಗೂ ಸ್ವಯಂ ಸೇವಕರು ಗಣ ವೇಷದೊಂದಿಗೆ ಅಂದು ಪಾಲ್ಗೊಳ್ಳಬೇಕೆಂದು ತಾಲ್ಲೂಕಿನ ಜನತೆಯಲ್ಲಿ ಮನವಿ ಮಾಡಿದರು.
ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರಿಯಾಂಕ್ ಖರ್ಗೆ ತಮ್ಮ ಪ್ರಚಾರಕ್ಕಾಗಿ ಆರ್.ಎಸ್.ಎಸ್ ಚಟುವಟಿಕೆ ನಿಷೇಧದ ಕುರಿತು ಬೇಜವಾಬ್ದಾರಿತನದ ಮಾತುಗಳನ್ನಾಡಿದ್ದಾರೆ. ಹಿಂದೆ ಕಾಂಗ್ರೆಸ್ ಆರ್.ಎಸ್.ಎಸ್.ನ್ನು ನಿಷೇಧಿಸಿ ಮತ್ತೆ ವಾಪಸ್ ಪಡೆದ ಉದಾಹರಣೆಯಿದ್ದು ಮತ್ತೆ ಆರ್.ಎಸ್.ಎಸ್. ನಿಷೇಧಿಸುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕಿಲ್ಲ ಎಂದರು.
ಮಾಜಿ ಶಾಸಕ  ಮಾತನಾಡಿ ಒಂದು ಬಾರಿ ಗಣವೇಷ ಹಾಕಿದಲ್ಲಿ ದೇಶಾಭಿಮಾನ ತಾನೇ ತಾನಾಗಿ ಮೂಡಲಿದೆ. ಆ ನಿಟ್ಟಿನಲ್ಲಿ ತಾಲ್ಲೂಕಿನ ಪ್ರತಿಯೊಬ್ಬರೂ ಗಣವೇಷದೊಂದಿಗೆ ಪಾಲ್ಗೊಳ್ಳುವ ಮೂಲಕ ಶಿಸ್ತಿನ ಶಿಪಾಯಿಗಳಾಗಿ ಹಿಂದುತ್ವ ಕಾಪಾಡುವ ಮೂಲಕ ನೂರು ವರ್ಷಗಳ ಸಂಭ್ರಮವನ್ನು ಎತ್ತಿ ತೋರಿಸುವ ಕೆಲಸ ನಾವೆಲ್ಲೃರೂ ಮಾಡೋಣವೆಂದರು.
ಈ ಸಂಧರ್ಭದಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷ ಮೃತ್ಯುಂಜಯ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ್ ರಾಜ್, ಜಿಲ್ಲಾ ಘಟಕದ ವೇದಮೂರ್ತಿ, ಪ.ಪಂ.ಅಧ್ಯಕ್ಷೆ ಶೀಲಾ, ಸದಸ್ಯರಾದ ಪ್ರಭಾಕರ್, ಚಿದಾನಂದ್, ಆಶಾ, ಮುಖಂಡರಾದ ಅರಳೀಕೆರೆ ಶಿವಯ್ಯ, ಕಡೇಹಳ್ಳಿಸಿದ್ದೇಗೌಡ, ಮುದ್ದೇಗೌಡ, ಜಗಧೀಶ್, ಸೋಮಶೇಖರ್, ಕೃಷ್ಣಮೂರ್ತಿ, ಸಿದ್ದು, ಪ್ರಸಾದ್, ನವೀನ್ ಬಾಬು, ಮಹಿಳಾ ಘಟಕದ ಅನಿತಾ, ಚೂಡಾಮಣಿ, ವಿ.ಬಿ.ಸುರೇಶ್, ಆಯರಹಳ್ಳಿ ಪಾಂಡು, ಪ್ರಕಾಶ್ ಸೇರಿದಂತೆ ಹಲವುಜನಪ್ರತಿನಿಧಿಗಳು, ಮುಖಂಡರು, ಬಿಜೆಪಿ ಕಾರ್ಯಕರ್ತರು, ಆರ್.ಎಸ್.ಎಸ್. ಮುಖಂಡರು ಹಾಗೂ ಇತರರು ಪಾಲ್ಗೊಂಡಿದ್ದರು.

(Visited 1 times, 1 visits today)