ಹುಳಿಯಾರು: ಹುಳಿಯಾರು-ತಿಪಟೂರು ಮಾರ್ಗವಾಗಿ ಹುಳಿಯಾರು ಸೇರಿದಂತೆ ಹಂದನಕೆರೆ, ಮತಿಘಟ್ಟ ಒಳಗೊಂಡ0ತೆ ಸುಮಾರು ೨ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಸ್ ಪಾಸ್ ಮಾಡಿಸಿಕೊಂಡು, ಸಾವಿರಾರು ವಿದ್ಯಾರ್ಥಿಗಳು ಶಕ್ತಿ ಯೋಜನೆಯಲ್ಲಿ ನಿತ್ಯ ತಿಪಟೂರಿನ ಶಾಲಾ ಕಾಲೇಜುಗಳಿಗೆ ಮುಂಜಾನೆ ಸಂಚರಿಸುತ್ತಾರೆ.
ಸುಮಾರು ಒಂದು ಬಸ್ಸಿಗೆ ೭೦ ರಿಂದ ೮೦ ವಿದ್ಯಾರ್ಥಿಗಳು ಸಂಚರಿಸಿದರು ೩೦ ರಿಂದ ೪೦ ವಾಹನಗಳ ಅವಶ್ಯಕತೆ ಇರುತ್ತದೆ. ಆದರೆ ಮುಂಜಾನೆ ಓಡಾಡುವ ಐದಾರು ಬಸ್‌ಗಳಲ್ಲೇ ನೂಕುನುಗ್ಗಲಿನಲ್ಲಿ ವಿದ್ಯಾರ್ಥಿಗಳು ಓಡಾಡುತ್ತಿದ್ದಾರೆ. ಹುಳಿಯಾರಿನಲ್ಲಿ ಪ್ರತಿದಿನ ಬೆಳಿಗ್ಗೆ ೫:೩೦ ರಿಂದ ೯:೩೦ ರವರೆಗೆ ಬರುವಂತ ಎಲ್ಲಾ ಬಸ್ಸುಗಳು ಹುಳಿಯಾರು ನಿಲ್ದಾಣದಲ್ಲಿಯೇ ತುಂಬಿರುತ್ತವೆ. ಮುಂದಿನ ನಿಲ್ದಾಣಗಳಲ್ಲಿ ವಿದ್ಯಾರ್ಥಿಗಳು ನೂಕುನುಗ್ಗಲಿನಲ್ಲಿ ನಿಂತು ಪ್ರಯಾಣ ಮಾಡುತ್ತಾರೆ. ಇರುವ ಕಡಿಮೆ ವಾಹನದಲ್ಲಿ ವಿದ್ಯಾರ್ಥಿಗಳು ಕಷ್ಟಪಟ್ಟು ಪ್ರಯಾಣಿಸುತ್ತಿದ್ದು ಇದರಿಂದ ಅವರಿಗೆ ಪ್ರತಿದಿನ ಮಾನಸಿಕ ಒತ್ತಡ ಉಂಟಾಗುತ್ತಿದೆ.
ಇನ್ನು ಹೆಚ್ಚಿನ ವಾಹನಗಳು ಅವಶ್ಯವಿದ್ದರೂ ಸಹ ಇತ್ತೀಚಿನ ಒಂದು ತಿಂಗಳಿ0ದ ತಿಪಟೂರಿನ ಮಾರ್ಗ ಸಂಖ್ಯೆ ೬೩ ವಾಹನ ಸಂಖ್ಯೆ ಞಚಿ೦೬ ಜಿ ೧೨೮೮ ವಾಹನವನ್ನು ಕಾರಣವಿಲ್ಲದೆ ಏಕಾಏಕಿ ನಿಲ್ಲಿಸಿರುತ್ತಾರೆ. ಈ ವಾಹನವು ಶ್ರೀರಾಂಪುರ ಯಳನಾಡು ಮಾರ್ಗದಿಂದ ಹುಳಿಯಾರು ಮೂಲಕ ತಿಪಟೂರಿಗೆ ಪ್ರಯಾಣಿಸುತ್ತಿತ್ತು. ಈ ಬಸ್ ಪ್ರಯಾಣಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಬಹಳ ಅನುಕೂಲವಾಗಿತ್ತು. ಈ ಸಮಯದಲ್ಲಿ ಹುಳಿಯಾರಿನಲ್ಲಿ ಸುಮಾರು ಒಂದು ಗಂಟೆಗಳ ಕಾಲ ಯಾವುದೇ ವಾಹನವಿಲ್ಲದೆ ಹಿರಿಯೂರುನಿಂದ ಬರುವ ಹಾಸನ ಬಸ್‌ಗೆ ನೂರಕ್ಕೂ ಹೆಚ್ಚು ಪ್ರಯಾಣಿಕರು ವಿದ್ಯಾರ್ಥಿಗಳು ಸಂಚರಿಸಬೇಕಾದ ಪರಿಸ್ಥಿತಿ ಇದೆ.
ಮಾರ್ಗ ಸಂಖ್ಯೆ ೬೩ ನಿಲ್ಲಿಸಿರುವ ಬಗ್ಗೆ ಕೇಳಿದರೆ ತಿಪಟೂರು ಸಂಚಾರ ಅಧಿಕಾರಿಗಳು ಘಟಕ ವ್ಯವಸ್ಥಾಪಕರನ್ನು ಕೇಳಿ ಎಂದು, ಘಟಕ ವ್ಯವಸ್ಥಾಪಕರನ್ನು ಕೇಳಿದರೆ ವಿಭಾಗಿಯ ಕಚೇರಿಯನ್ನು ವಿಚಾರಿಸಿ ಎಂದು, ವಿಭಾಗೀಯ ಸಂಚಲನಾಧಿಕಾರಿಗಳನ್ನು ವಿಚಾರಿಸಿದರೆ ವಿಭಾಗಿಯ ಅಧಿಕಾರಿಗಳನ್ನು ಕೇಳಿ ಎಂದು ಒಬ್ಬರಮೇಲೋಬ್ಬರು ಬೆರಳು ತೋರಿಸಿ ಜಾರಿಕೊಳ್ಳುತ್ತಿದ್ದಾರೆ.
ಈ ವಾಹನವು ಹುಳಿಯಾರಿಗೆ ಮಧ್ಯಾಹ್ನ ೩:೩೦ ರ ಸಮಯ ಹಾಗೂ ಬೆಳಗಿನ ೭:೩೦ ರ ಸಮಯಕ್ಕೆ ಆಗಮಿಸುತ್ತಿದ್ದು ಪ್ರತಿದಿನವೂ ಈ ಎರಡು ಸಮಯದಲ್ಲಿ ಈ ವಾಹನದಲ್ಲಿ ಬೆಂಗಳೂರಿಗೆ ಹಾಗೂ ತಿಪಟೂರಿಗೆ ಹೋಗುವಂತಹ ೭೦ ರಿಂದ ೮೦ ಪ್ರಯಾಣಿಕರು ಸಾಮಾನ್ಯವಾಗಿ ಹತ್ತಿಳಿಯುತ್ತಾರೆ. ಈ ಮಾರ್ಗದಿಂದ ಸಂಸ್ಥೆಗೆ ಆದಾಯವು ಬರುತ್ತಿದ್ದು ನಿಗದಿತ ವಾಹನ ನಿಗದಿತ ಚಾಲನ ಸಿಬ್ಬಂದಿಗಳಿದ್ದು ಈ ಮಾರ್ಗ ನಿಲ್ಲಲು ಯಾವ ಬಲವಾದ ಕಾರಣ ಇದೆಯೋ ತಿಳಿಯದಾಗಿದೆ.
ಮಾರ್ಗ ಸಂಖ್ಯೆ ೬೩ ನಿಂತಿರುವ ಬಗ್ಗೆ ಸಾರ್ವಜನಿಕ ಪ್ರಯಾಣಿಕರು ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಸಹ ಇದರ ಬಗ್ಗೆ ಗಮನ ಹರಿಸದೆ ನಿರ್ಲಕ್ಷಿö್ಯಸಿದ್ದಾರೆ. ಇನ್ನಾದರೂ ಅಧಿಕಾರಿಗಳು ಬೆಳಗ್ಗೆ ಮತ್ತೆರಡು ಬಸ್‌ಗಳ ವ್ಯವಸ್ಥೆ ಮಾಡಿ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕೆಂಬುದು ಪತ್ರಿಕೆಯ ಆಶಯವಾಗಿರುತ್ತದೆ.
(Visited 1 times, 1 visits today)