ಚಿಕ್ಕನಾಯಕನಹಳ್ಳಿ: ಶಿಕ್ಷಣದಿಂದ ಸಮಾಜದ ಉನ್ನತ ಹುದ್ದೆಗಳನ್ನು ಅಲಂಕರಿಸಲು ಸಾದ್ಯ ಅದ್ದರಿಂದ ಹೆಣ್ಣು ಮಕ್ಕಳ ಶಿಕ್ಷಣಕ್ಕು ಅದ್ಯತೆ ನೀಡಿ ಪರಿಶ್ರಮದ ಅದ್ಯಯನ ವ್ಯಕ್ತಿಯನ್ನು ನಿರ್ಮಿಸುತ್ತದೆ ಇಂತಹ ವ್ಯಕ್ತಿಗಳಿಂದ ಮಠ ಮಂದಿರಗಳ ಉತ್ತಮ ಸಮಾಜದ ನಿರ್ಮಣವಾಗುತ್ತದೆ ಎಂದು ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮಿ ತಿಳಿಸಿದರು.
ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿಯ ಅಜ್ಜೇನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಬೀರಲಿಂಗೇಶ್ವರಸ್ವಾಮಿ ದೇವಾಲಯ ನಿರ್ಮಾಣದ ಶಿಲ್ಪಿಗಳಿಗೆ ಏರ್ಪಡಿಸಲಾಗಿದ್ದ ಸನ್ಮಾನ ಸಮಾರಂಭದ ಸಾನಿದ್ಯ ವಹಿಸಿ ಮಾತನಾಡಿದ, ಅವರು ಶ್ರೀಮಠದಲ್ಲಿ ನಿತ್ಯ ದಾಸೋಹಕ್ಕಾಗಿ ಶಾಸಕರು ೨೪ ಲಕ್ಷ ರೂಪಾಯಿಗಳನ್ನು ನೀಡುವ ಮೂಲಕ ಭಕ್ತಿ ತೋರಿಸಿದ್ದು ಅದರಂತೆ ಮುಂದಿನ ತಿಂಗಳ ೮ ರಂದು ಮಠದಲ್ಲಿ ಕನಕ ದಾಸ ಜಯಂತಿಯನ್ನು ಅದ್ದೂರಿಯಾಗಿ ಆಚರಿಸುವ ಕಾರ್ಯಕ್ರಮಕ್ಕೆ ಸಮಾಜದ ಎಲ್ಲರೂ ಆಗಮಿಸುವಂತೆ ತಿಳಿಸಿದ ಅವರು ಈ ಗ್ರಾಮದ ಇಬ್ಬರು ಉಪ ವಿಭಾಗಾಧಿಕಾರಿಗಳು ಇದ್ದು ಅವರು ಮುಂದೆ ಇನ್ನು ಉನ್ನತ ಹುದ್ದೆಗಳಿಗೆ ಹೋಗುತ್ತಾರೆ ಅದಕ್ಕೆ ಕಾರಣ ಅವರ ಶ್ರಮದ ಅದ್ಯಯನ ಅದ್ದರಿಂದ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸುವ ಮೂಲಕ ಅವರ ಭವಿಷ್ಯವನ್ನು ರೂಪಿಸಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ, ಮಠ-ಮಂದಿರಗಳನ್ನು ದೇವಾಲಯಗಳನ್ನು ನಿರ್ಮಿಸುವುದು ಎಂದರೆ ಎಲ್ಲಾ ಮನಸ್ಸುಗಳನ್ನು ಒಂದು ಕಡೆ ಸೇರಿಸುವುದು ದೇವಾಲಯಕ್ಕಾಗಿ ಹೊಡೆದಾಡುವುದಲ್ಲ ಅದ್ದರಿಂದ ಇಂದು ಅಜ್ಜೇನಹಳ್ಳಿ ಗ್ರಾಮದಲ್ಲಿ ನಿರ್ಮಿಸಲಾಗಿರುವ ಬೀರಲಿಂಗೇಶ್ವರ ದೇವಾಲಯಕ್ಕೆ ಶಂಕುಸ್ಪಾಪನೆ ಮಾಡಿ ಇನ್ನು ಕೇವಲ ೧೧ ತಿಂಗಳಲ್ಲೇ ಇಂತಹ ಅದ್ಬುತ ದೇವಾಲಯ ನಿರ್ಮಿಸಿರುವುದು ಆಶ್ಚರ್ಯವಾಗಿದೆ. ಈ ಸುಂದರ ದೇವಾಲಯ ನಿರ್ಮಿಸಿದಂತಹ ಶಿಲ್ಪಿಗಳನ್ನು ನಾವು ಸ್ಮರಿಸಬೇಕಾಗಿದೆ. ಕಾರಣ ಒಂದು ಕಲ್ಲಿಗೆ ಜೀವವನ್ನು ತುಂಬಿ ಅದಕ್ಕೆ ದೈವತ್ವವನ್ನು ನೀಡುವುದರೊಂದಿಗೆ ಎಲ್ಲರೂ ಪೂಜೆಸುವಂತೆ ಮಾಡುವ ಕಲೆ ಶ್ರೇಷ್ಠವಾಗಿದೆ ಎಂದ ಅವರು ಈ ಗ್ರಾಮದ ರಸ್ತೆಗೆ ಈಗಾಗಲೇ ೯೦ಲಕ್ಷ ಅನುದಾನ ಹಾಕಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕುಪ್ಪೂರು ಲಿಂಗಯ್ಯ ಮಾತನಾಡಿ, ದೇವಾಲಯದ ನಿರ್ಮಾಣಕ್ಕೆ ನಮ್ಮ ಏಳು ಬೆಡಗಿನ ಎಲ್ಲಾ ಅಣ್ಣ ತಮ್ಮಂದಿರು ಸೇರಿದಂತೆ ನಮ್ಮ ಕುರುಬ ಸಮಾಜದವರು ಬೀರಪ್ಪನ ಭಕ್ತರು ಸಹಕಾರ ನೀಡಿದ್ದಾರೆ ಎಲ್ಲರ ಭಕ್ತಿಯ ಶ್ರಮವೇ ಈ ದೇವಾಲಯ ನಿರ್ಮಿಸಲು ಸಾದ್ಯವಾಗಿದೆ ಎಂದರು.
ಮಾಜಿ ತಾ.ಪಂ.ಅದ್ಯಕ್ಷ ಎ.ಬಿ.ರಮೇಶ್ಕುಮಾರ್ ಮಾತನಾಡಿ, ಕಳೆದ ೧೧ ತಿಂಗಳ ಹಿಂದೆ ಇದೇ ಜಾಗದಲ್ಲಿ ಶಾಸಕರು ಗುದ್ದಲಿ ಪೂಜೆ ಮಾಡಿದ್ದರು ಅವರ ಸಹಕಾರದೊಂದಿಗೆ ಭಕ್ತರು ಸೇರಿ ಈ ದೇವಾಲಯವನ್ನು ನಿರ್ಮಿಸಲು ಆ ಬೀರಪ್ಪ ದೇವರ ಅಪ್ಪಣೆಯೇ ಕಾರಣವಾಗಿದೆ. ಈ ದೇವಾಲಯ ನಿರ್ಮಿಸಿದಂತಹ ಶಿಲ್ಪಿಗಳು ಹಗಲು ಇರುಳು ಶ್ರಮದಿಂದ ದೇವಾಲಯ ನಿರ್ಮಿಸಿದ್ದಾರೆ ಅವರನ್ನು ಅಭಿನಂದಿಸುವುದು ನಮ್ಮ ಕರ್ತವ್ಯ ಎಂದು ಭಾವಿಸಿದ್ದೇವೆ ಮುಂದಿನ ದಿನಗಳಲ್ಲಿ ಇನ್ನು ಹಲವಾರು ದೇವಾಲಯದ ಕೆಲಸಗಳು ಬಾಕಿ ಇದ್ದು ಭಕ್ತರು ಸಹಕಾರ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ದೇವಾಲಯ ನಿರ್ಮಾಣ ಮಾಡಿದ ಶಿಲ್ಪಿಗಳಾದ ಗಣೇಶ್, ವಿನೋದ್, ಯೋಗಣ್ಣ ತಂಡದವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ವಿಜಯ್ಕುಮಾರ್, ದೇವಾಲಯ ನಿರ್ಮಾಣ ಸಮಿತಿಯ ಗೌರವಾದ್ಯಕ್ಷ ಮಹಾಲಿಂಗಪ್ಪ, ಅಧ್ಯಕ್ಷ ಶೆಟ್ಟಪ್ಪ, ಕಾರ್ಯದರ್ಶಿ ನಿಂಗಪ್ಪ, ಗುಡಿ ಗೌಡರಾದ ನಾಗರಾಜು, ಸೇರಿದಂತೆ ಮುಖಂಡರುಗಳಾದ ಎ.ಬಿ.ಕೃಷ್ಣಪ್ಪ, ಕೆಂಗಪ್ಪ, ಗೊಲ್ಲರಹಟ್ಟಿಯ ಬಸವರಾಜು, ಶಿವಾನಂದಯ್ಯ, ಗ್ರಾ.ಪಂ.ಸದಸ್ಯ ಮಹೇಶ್, ರಘು ,ಬಸವರಾಜ್ ಇದ್ದರು.
(Visited 1 times, 1 visits today)