ತುಮಕೂರು: ಸಂವಿಧಾನ ಬದ್ದ ನೊಂದಾಯಿತ ಸಂಸ್ಥೆಯಲ್ಲದ ಆರ್.ಎಸ್.ಎಸ್‌ನ್ನು ದೇಶದಲ್ಲಿ ಬ್ಯಾನ್ ಮಾಡಬೇಕು, ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಕೆರೆ ಮಾಡಿದ,ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಮೇಲೆ ಶೂ ಎಸದ ವ್ಯಕ್ತಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಇಂದು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಹತ್ತಾರು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು,ಬ್ರಾಹ್ಮಣವಾದವನ್ನು ಮುಂದಿಟ್ಟು,ಸ0ವಿಧಾನದ ಬದಲಿಗೆ ಮನುಸೃತಿಯನ್ನು ತಮ್ಮ ಆಡಳಿತ ಗ್ರಂಥವಾಗಿ ಮಾರ್ಪಡಿಸುವ ಗುರಿ ಹೊಂದಿರುವ ಆರ್.ಎಸ್,ಎಸ್ ಸಂಘಟನೆಯನ್ನು ರಾಜ್ಯದಲ್ಲಿ ಬ್ಯಾನ್ ಮಾಡಬೇಕೆಂದು ಎ.ಡಿ.ಸಿ. ಡಾ..ಎನ್.ತಿಪ್ಪೇಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಜಾತ್ಯಾತೀತ ಯುವ ವೇದಿಕೆ ಅಧ್ಯಕ್ಷ ಡ್ಯಾಗೇರಹಳ್ಳಿ ವಿರೂಪಾಕ್ಷ, ೧೯೫೦ ರ ದಶಕದಲ್ಲಿಯೇ ಡಾ. ಬಾಬಾ ಸಾಹೇಬ ಅಂಬೇಡ್ಕರ್ ರವರು ಯಾವುದೇ ಕಾರಣಕ್ಕೂ ಆರ್.ಎಸ್.ಎಸ್. ಹಾಗೂ ವಿಶ್ವ ಹಿಂದೂ ಮಹಾಸಭಾದಂತಹ ಸಂಘಟನೆಗಳೊ0ದಿಗೆ ಹೊಂದಾಣಿಕೆ ಮಾಡಿಕೊಳ್ಳಬಾರದೆಂದು ರಾಜಕೀಯ ಪರಿಶಿಷ್ಟ ಜಾತಿಗಳ ಒಕ್ಕೂಟದ ಪ್ರಣಾಳಕೆಯಲ್ಲಿ ಎಚ್ಚರಿಕೆ ನೀಡಿದ್ದರು. ಅಷ್ಟಲ್ಲದೇ ಆರ್.ಎಸ್.ಎಸ್. ಅಪಾಯಕಾರಿ ಸಂಘಟನೆ ಎಂದು ಘೋಷಿಸಿದ್ದರು. ೧೫ ಆಗಸ್ಟ್ ೧೯೪೭ ರಂದು ಭಾರತದ ಸ್ವಾತಂತ್ರಗೊ0ಡು,೨೬ ಜನವರಿ ೧೯೫೦ ರಂದು ಅಂಬೇಡ್ಕರ್ ರವರು ರಚಿಸಿದ ಭಾರತ ಸಂವಿಧಾನ ಜಾರಿಗೊಂಡಾಗ ಇದೇ ಆರ್.ಎಸ್.ಎಸ್. ಪತ್ರಿಕೆಯಾದಭಾರತ ಸಂವಿಧಾನದಲ್ಲಿ ಏನೂ ಇಲ್ಲ ವಾಸ್ತವವಾಗಿ ನನ್ನ ಮನಸ್ಕೃತಿ ಪ್ರಾಚೀನವಾದುದ್ದು, ಜಗತ್ತಿನ ಜನರೆಲ್ಲಾ ಅದರ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ. ಆದರೆ ಸಂವಿಧಾನ ಪಂಡಿತರಿಗೆ ಅದು ಏನೂ ಅಲ್ಲವೆಂದು ಟೀಕಿಸಿತು.ಆ ಮೂಲಕ ಮನುವಾದಿಗಳು ಮನಸೃತಿಯನ್ನು ಪೂಜಿಸಿ ಭಾರತದ ಸಂವಿಧಾನವನ್ನು ಅಂದಿನಿAದಲೂ ತಿರಸ್ಕಾರದ ಮನೋಭಾವದಿಂದಲೆ ನೋಡುತ್ತಾ ಬಂದಿರುತ್ತಾರೆ.ಹಾಗಾಗಿ ಮಹಿಳೆಯರು, ದಲಿತರು, ಹಿಂದುಳಿದ ವರ್ಗದವರೆಗೆ, ಎಳಷ್ಟು ಗೌರವ ಭಾವನೆ ತೊರೆದ ಆರ್.ಎಸ್.ಎಸ್‌ನ್ನು ರಾಜ್ಯದಲ್ಲಿ ಬ್ಯಾನ್ ಮಾಡಬೇಕೆಂದು ಒತ್ತಾಯಿಸಿದರು.
ಹೋರಾಟಗಾರರಾದ ಕುಂದೂರು ಮುರುಳಿ ಮಾತನಾಡಿ,ಹಿಂದೂ ಮಹಿಳೆಯರಿಗೆ ಪುರುಷರಷ್ಟೆ ಸಮನಾ ಹಕ್ಕು ನೀಡಲು ಬಯಸಿದ್ದು ಹಿಂದೂ ಕೋಡ್ ಬಿಲ್ ಜಾರಿಯಾಗಲು ಅಂಬೇಡ್ಕರ್ ಹೋರಾಡುತ್ತಿದ್ದರೆ ಅದರ ಪ್ರತಿಯನ್ನು ಸುಟ್ಟು ಹಾಕಿ ಆರ್.ಎಸ್.ಎಸ್. ವಿಕೃತಿ ಮೇರೆದಿತ್ತು. ಇತ್ತಿಚೆಗೆ ಭಾರತದ ಮುಖ್ಯ ನ್ಯಾಯಾದೀಶರಾದ ಜೆಸ್ವಿಸ್ ಗವಾಯಿ ರವರ ಮೇಲೆ ಶೂ ಏಸೆಯಲಾಗಿತ್ತು,ಆ ಕೃತ್ಯ ಮಾಡಿದ ವಕೀಲ ರಾಕೇಶ್ ಕಿಶೋರ್ ಸನಾತನ ಧರ್ಮ ಉಳಿಸಲು ಶೂ ಏಸೆದೆ ಎಂದು ಎದೆ ಉಬ್ಬಿಸಿ ಹೇಳುತ್ತಾನೆ. ಭಾರತ ದೇಶದಲ್ಲಿ ಆತನೂ ವಕೀಲನಾಗಿದ್ದು, ಮನಸೃತಿಯಿಂದಲೋ ಅಥವಾ ಸಂವಿಧಾನದಿ0ದಲೋ ಭಾರತ ಸಂವಿಧಾನವನ್ನು ಕಾಪಾಡುವ ಸುಪ್ರೀಮ್ ಕೋರ್ಟ್ ಮುಖ್ಯ ನ್ಯಾಯಾಧೀಶರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.ಭಾರತ ಸಂವಿಧಾನವನ್ನಲ್ಲವೆ ಈ ಪಾಪಿಯನ್ನು ಸಾಮಾಜಿಕ ಜಾಲತಾಣದಲ್ಲಿ ಬೆಂಬಲಿಸುತ್ತಿರುವ ಎಲ್ಲರೂ ಆರ್.ಎಸ್.ಎಸ್. ಹಾಗೂ ಬಿ.ಜೆ.ಪಿ. ಬೆಂಬಲಿಗರೆ ಯಾಕಾಗಿದ್ದಾರೆ,ಇದಕ್ಕೆ ಉತ್ತರ ಅವರಿಗೆ ಮನಸ್ಕೃತಿ ಜಾರಿಯಾಗಬೇಕಾಗಿದೆ. ಭಾರತ ಸಂವಿಧಾನದ ಮೇಲೆ ಯುದ್ದ ಸಾರಿರುವ ಆರ್.ಎಸ್.ಎಸ. ಮತ್ತು ಬಿ.ಜೆ.ಪಿ. ರವರ ಆಟ ಅತೀರೇಖವಾಗಿದೆ ಇಂತಹ ದೇಶ ದ್ರೋಹಿಗಳಿಗೆ ತಕ್ಕ ಪಾಠ ಕಲಿಸದೇ ಇದ್ದರೆ ಭಾರತದ ಸಂವಿಧಾನಕ್ಕೆ ಮುಂದೊ0ದು ದಿನ ಅಪಾಯ ಕಟ್ಟಿಟ್ಟಬುತ್ತಿ ಎಂದರು.
ಆರ್.ಎಸ್.ಎಸ್. ೧೦೦ ಪೂರೈಸಿದೆ ಎಂದು ಕಾನೂನು ಬಾಹೀರವಾಗಿ ತನಗೆ ಬೇಕಾದ ಹಾಗೇ ಸಂಭ್ರಮಾಚರಣೆ ತೊಡಗಿದೆ. ಮುಂಗಡವಾಗಿ ಅನುಮತಿ ಇಲ್ಲದೆ ತನಗೆ ಬೇಕಾದ ಸ್ಥಳಗಳಲ್ಲಿ ಪಥ ಸಂಚಲನ ಮಾಡಿ ತೊಂದರೆ ಕೊಡುವುದನ್ನು ಸಚಿವರಾದ ಪ್ರಿಯಾಂಕ ಖರ್ಗೆ ರವರು ಅನುಮತಿ ಇಲ್ಲದೇ ಸರಕಾರಿ ಇತರೆ ಸ್ಥಳಗಳಲ್ಲಿ ಕಾರ್ಯಾಕ್ರಮಕ್ಕೆ ಅವಕಾಶ ಕೊಡಬಾರದೆಂದು ಸರಕಾರಕ್ಕೆ ಪತ್ರ ಬರೆದ ಪ್ರಯುಕ್ತ ಒಬ್ಬ ಮನುವಾದಿ ಆರ್.ಎಸ್.ಎಸ್. ಕಾರ್ಯಕರ್ತ ಪ್ರಿಯಾಂಕ ಖರ್ಗೆ ರವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಶಬ್ದ ಬಳಿಸಿದಲ್ಲದೇ ಅವರ ಪೋನಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದರು.ಇಂತಹ ಕೀಳು ಮಟ್ಟದ ಮನಸ್ಸತಿ ಹೊಂದಿರುವ ಆರ್.ಎಸ್.ಎಸ್ ಸಂಘಟನೆಯನ್ನು ಬ್ಯಾನ್ ಮಾಡಬೇಕು.ಉದ್ದೇಶಪೂರ್ವಕವಾಗಿ ಚಿತ್ತಾಪುರದಲ್ಲಿ ಆರ್.ಎಸ್.ಎಸ್ ಮೆರವಣಿಗೆ ನಡೆಸುವ ಹುನ್ನಾರಕ್ಕೆ ಕಡಿವಾಣ ಹಾಕಬೇಕಾಗಿದೆ.ಇಂತಹ ಮನುವಾದಿಗಳ ವಿರುದ್ಧ ಎದೆಗೊಟ್ಟು ಮುನ್ನಡೆಯಬೇಕು.ಪ್ರÀ್ರಭುದ್ದ ಭಾರತದಡೆಗೆ ಇನ್ನೊಂದಿಷ್ಟು ಗಟ್ಟಿಯಾಗಿ ಹೆಜ್ಜೆ ಇಡಬೇಕು.ಚಾತುರ್ವಣ್ರ ಭಾರತವನ್ನು ಕಟ್ಟಲು ಹೋರಟ ಸಂಘ ಪರಿವಾರದ ಹಗಲುಗನಸು ಪ್ರಭುದ್ಧ ಭಾರತ ನಿರ್ಮಾಣಕ್ಕಾಗಿ ಪಣತೊಡೋಣ ಎಂದು ಕುಂದೂರು ಮುರುಳಿ ತಿಳಿಸಿದರು.
ಈ ವೇಳೆ ಮುಖಂಡರಾದ ಕುಪ್ಪೂರ ಶ್ರೀಧರ್, ಜಿಲ್ಲಾ ಸಂಚಾಲಕರಾದ ಬಿ.ಆರ್.ಕೃಷ್ಣಸ್ವಾಮಿ, ಕೆಸ್ತೂರು ನರಸಿಂಹಮೂರ್ತಿ, ಚಂದ್ರಶೇಖರ್ ಗಡಬನಹಳ್ಳಿ, ದಯಾನಂದ್, ಮಂಜು ಗೊಲ್ಲಹಳ್ಳಿ,ಉಗ್ರನರಸಿಂಹಯ್ಯ, ತ್ರಿನೇಶ್, ರಾಯಣ್ಣ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

 

(Visited 1 times, 1 visits today)