ತುಮಕೂರು: ನಗರದ ವಾಸವಿ ಪದವಿ ಪೂರ್ವ ಕಾಲೇಜು ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ಕನಕದಾಸ ಜಯಂತಿ ಕಾರ್ಯಕ್ರಮದ ಅಂಗವಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ವಾಸವಿ ವಿದ್ಯಾಪೀಠದ ಅಧ್ಯಕ್ಷರಾದ ಕೆ.ಎಲ್. ಅಮರನಾರಾಯಣ್ ಕನ್ನಡ ರಾಜ್ಯೋತ್ಸವ ಮತ್ತು ಕನಕದಾಸರ ಜಯಂತಿಯ ಶುಭಾಶಯ ಹೇಳಿ, ವಿದ್ಯಾರ್ಥಿಗಳು ಓದುವ ಕಡೆ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳುವ ಮೂಲಕ ಯಶಸ್ಸು ಗಳಿಸಬೇಕು ಎಂದು ಕರೆ ನೀಡಿದರು.
ಸಂಸ್ಥೆಯ ಕಾರ್ಯದರ್ಶಿ ಸಿ.ಆರ್. ಮೋಹನ್‌ಕುಮಾರ್ ಮಾತ ನಾಡಿ, ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದು ಎಲ್ಲರ ಆದ್ಯ ಕರ್ತವ್ಯ. ಅದೇ ರೀತಿ ವಿದ್ಯಾರ್ಥಿಗಳು ಜ್ಞಾನಾರ್ಜನೆಗೆ ಹೆಚ್ಚು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಸಂಸ್ಥೆಯ ಉಪಾಧ್ಯಕ್ಷರು ಜಿ ಕೃಷ್ಣಮೂರ್ತಿ ರವರು ಕನ್ನಡ ರಾಜೋತ್ಸವ ಕುರಿತು ಮಾತನಾಡಿದರು. ಸಂಸ್ಥೆಯ ಖಜಾಂಚಿ ಟಿ.ಎಸ್. ಅಶೋಕ್ ಕುಮಾರ್ ಮಾತ ನಾಡಿ, ಕೇವಲ ಅಂಕಗಳಿಗೆ ಸೀಮಿತಗೊಳ್ಳದೆ ಎಲ್ಲ ವಿಷಯ ಗಳ ಬಗ್ಗೆಯೂ ಜ್ಞಾನಾರ್ಜನೆ ಪಡೆದುಕೊಳ್ಳಬೇಕು ಎಂದು ಹೇಳಿದರು.
ಸಂಸ್ಥೆಯ ನಿರ್ದೇಶಕರಾದ ಆರ್‌ಬಿಐ ಟಿ.ಎಸ್. ಅಶೋಕ್ ರವರು ಉತ್ತಮ ಕಾರ್ಯಕ್ರಮ ಏರ್ಪಡಿಸಿರುವ ವಾಸವಿ ಕಾಲೇಜಿನ ಪ್ರಾಚಾರ್ಯರಿಗೆ ಹಾಗೂ ಕಾಲೇಜಿನ ಎಲ್ಲಾ ಸಿಬ್ಬಂದಿಗಳಿಗೆ ಅಭಿನಂದನೆ ತಿಳಿಸಿದರು. ಪ್ರಾಚಾರ್ಯರಾದ ಚಂದ್ರಶೇಖರ ಆರಾಧ್ಯ ಎಚ್.ವಿ. ಮಾತನಾಡಿ, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಸಿ.ಎ. ಸೋಮೇಶ್ವರ ಗುಪ್ತರವರು ನಮಗೆಲ್ಲಾ ತಂದೆ ಸ್ಥಾನದಲ್ಲಿ ನಿಂತು ಜವಾಬ್ದಾರಿ ನೀಡಿದ್ದಾರೆ ಎಂದು ಹೇಳಿ, ಸಂಸ್ಥೆಯ ನೂತನ ಪದಾಧಿಕಾರಿಗಳನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ಗೋವಿಂದರಾಜ ಗುಪ್ತ, ವಾಸವಿ ಕಾಲೇಜಿನ ಹಿರಿಯ ಉಪನ್ಯಾಸಕರಾದ ಜಿ ಹನುಮಂತಯ್ಯ, ಬಿ. ಶಿವಣ್ಣ, ಬೆಂಕಿ ವಸಂತಕುಮಾರ್, ನರೇಂದ್ರ ಬಾಬು, ವಿನೋದ್, ಗೋವಿಂದರಾಜು, ನಟರಾಜು, ಸಂಧ್ಯಾ, ಪ್ರತಿಭಾ, ಮಹಾಲಕ್ಷ್ಮಿದೇವಿ, ದೀಪಶ್ರೀ ಹಾಗೂ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು
ಕೃತಿಕಾ ಪ್ರಾರ್ಥಿಸಿದರು. ಕಲ್ಪನಾ ಸ್ವಾಗತಿಸಿದರು. ಗುಣಶ್ರೀ ನಿಶ್ಚಿತ ಕಾರ್ಯಕ್ರಮ ನಿರೂಪಿಸಿದರು. ದಿಲೀಪ್ ವಂದಿಸಿದರು.

(Visited 1 times, 1 visits today)