ತುಮಕೂರು: ಒಂದು ಭಾಷೆ ಕಣ್ಮರೆಯಾಗುವುದೆಂದರೆ ಒಂದು ವಿವೇಕ ಸತ್ತಂತೆ. ಸ್ಥಳೀಯ ಭಾಷೆಗಳು ವೇಗಗತಿಯಲ್ಲಿ ನಶಿಸಿಹೋ ಗುತ್ತಿರುವುದು ಆತಂಕಕಾರಿಯಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಕಳವಳ ವ್ಯಕ್ತಪಡಿಸಿದರು.
ವಿಶ್ವವಿದ್ಯಾನಿಲಯ ಕಲಾ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊ ಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಹಾಗೂ ವಿವಿಧ ಘಟಕಗಳ ಉದ್ಘಾಟನಾ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾ ಡಿದರು. ೧೯೯೦ರ ದಶಕದ ಉದಾರೀಕರಣದ ಪರಿಣಾಮ ವಾಗಿ ಭಾರತವೂ ಜಾಗತೀಕರಣದ ಪ್ರಭಾವಕ್ಕೆ ಒಳಗಾಯಿತು. ಇಂಗ್ಲಿಷ್‌ನ ಪ್ರಬಲ ಹಿಡಿತದಿಂದಾಗಿ ಸ್ಥಳೀಯ ಭಾಷೆಗಳು ತೆರೆಮರೆಗೆ ಸರಿಯುತ್ತಿವೆ. ಹಲವು ಭಾಷೆಗಳ ಪತನಕ್ಕೆ ನಾವೆಲ್ಲ ಸಾಕ್ಷಿಯಾಗಿದ್ದೇವೆ. ಕನ್ನಡವನ್ನು ಉಳಿಸಿಕೊಳ್ಳುವ ಸವಾಲಿನಷ್ಟೇ ಸ್ಥಳೀಯ ಭಾಷೆಗಳನ್ನು ಉಳಿಸಿಕೊಳ್ಳುವುದೂ ದೊಡ್ಡ ಸವಾಲಾಗಿದೆ ಎಂದರು.
ಕನ್ನಡಕ್ಕೆ ತನ್ನನ್ನು ತಾನು ಉಳಿಸಿಕೊಳ್ಳುವ ಮತ್ತು ಬೆಳೆಯುವ ಶಕ್ತಿಯಿದೆ. ಹಾಗೆಂದು ಕನ್ನಡಿಗರಾದ ನಾವೇ ನಮ್ಮ ಅನ್ನದ ಭಾಷೆಯ ಕುರಿತು ಅಲಕ್ಷö್ಯವನ್ನು ತಾಳಬಾರದು. ನಮ್ಮ ಭಾಷೆಯ ಜೊತೆಗೆ ಅನ್ಯಭಾಷೆಗಳನ್ನೂ ಗೌರವಿಸುವ ಸೌಜನ್ಯವನ್ನು ಬೆಳೆಸಿ ಕೊಳ್ಳೋಣ ಎಂದರು.
ಕನ್ನಡಿಗರು ವಿಶಾಲಹೃದಯಿಗಳು. ಕನ್ನಡಿಗರು ದೇವರಿಗೆ ಕನ್ನಡ ಕಲಿಸಿದವರು. ವೇದ ಮಂತ್ರಗಳು, ಪ್ರಾಚೀನ ಕಾವ್ಯಗಳು ಸಂಸ್ಕೃತದಲ್ಲಿದ್ದು ಜನಸಾಮಾನ್ಯರಿಂದ ದೂರವಿದ್ದಾಗ ವಚನಕಾರರು ಸರಳಕನ್ನಡದಲ್ಲಿ ಅವುಗಳ ಸಾರವನ್ನು ಜನರಿಗೆ ತಲುಪಿಸಿದರು ಎಂದು ವಿಶ್ಲೇಷಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಕನ್ನಡ ಭಾಷೆ ಹಲವು  ಕೂಡಿದ್ದು, ನಮ್ಮ ನೆಲಸ ಇತಿಹಾಸ ಹಾಗೂ ಪರಂಪರೆಯನ್ನು ಪ್ರತಿಬಿಂಬಿ ಸುತ್ತದೆ. ಭಾಷೆ ತನ್ನೊಂದಿಗೆ ಸಂಸ್ಕಾರವನ್ನೂ ಕೊಂಡೊಯ್ಯುತ್ತದೆ. ಕನ್ನಡಿಗರು ಸಂಸ್ಕಾರವAತರು ಎಂಬುದನ್ನು ಜಗತ್ತಿಗೆ ಸಾರಬೇಕು ಎಂದರು.
ಪರೀಕ್ಷಾ0ಗ ಕುಲಸಚಿವ ಪ್ರೊ. ಎನ್. ಸತೀಶ್ ಗೌಡ ಮಾತನಾಡಿ, ಕಾನೂನಿನಂತಹ ಸಂಕೀರ್ಣ ವಿಷಯಗಳ ಬಗೆಗೂ ಕನ್ನಡದಲ್ಲಿ ಪರಾಮರ್ಶನ ಸಾಹಿತ್ಯವನ್ನು ಬೆಳೆಸುವ ಅಗತ್ಯವಿದೆ. ಮಾತೃಭಾಷೆಯಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಮೂಲಕ ಅದರ ಸಾಧ್ಯತೆಗಳನ್ನು ವಿಸ್ತರಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ. ದಾಕ್ಷಾಯಣಿ, ಕನ್ನಡವನ್ನು ಹೆಚ್ಚುಹೆಚ್ಚು ಬಳಸುವುದರಿಂದಷ್ಟೇ ಅದನ್ನು ಉಳಿಸಿ ಬೆಳೆಸುವುದು ಸಾಧ್ಯ. ಕನ್ನಡವನ್ನು ನಮ್ಮ ಹೃದಯದ ಭಾಷೆಯನ್ನಾಗಿ ಪೋಷಿಸಬೇಕು ಎಂದರು.
ಕನ್ನಡ ಪ್ರಾಧ್ಯಾಪಕ ಪ್ರೊ. ಬಿ. ಕರಿಯಣ್ಣ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಆರ್. ಸುದೀಪ್ ಕುಮಾರ್, ಡಾ. ಸಿ. ಶೋಭಾ, ಡಾ. ಮೌನೇಶ್ವರ ಶ್ರೀನಿವಾಸರಾವ್, ಡಾ. ಈ. ವನಜಾಕ್ಷಿ, ಡಾ. ಎಸ್. ವಿ. ಪದ್ಮಿನಿ ಉಪಸ್ಥಿತರಿದ್ದರು. ಡಾ. ಎಚ್. ಆರ್. ರೇಣುಕಾ ನಿರೂಪಿಸಿದರು. ಡಾ. ಸಿಬಂತಿ ಪದ್ಮನಾಭ ವಂದಿಸಿದರು.

(Visited 1 times, 1 visits today)