ತುಮಕೂರು:  ಪ್ರ‍್ರಕೃತಿಕ ವಿಕೋಪಗಳಿಂದ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು,ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ತೆರೆಯುವುದು ಸೇರಿದಂತೆ ರೈತರ ಹಲವಾರು ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಇಂದು ಅಖಿಲ ಭಾರತ ಕಿಸಾನ್ ಸಭಾ ತುಮಕೂರು ಜಿಲ್ಲಾ ಘಟಕದವತಿಯಿಂದ ರಾಜ್ಯ ಉಪಾಕ್ಷರಾದ ಕಂಬೇಗೌಡ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಖಿಲ ಭಾರತ ಕಿಸಾನ ಸಭಾದ ಕಾರ್ಯಕರ್ತರು ಸರಕಾರ ಕೂಡಲೇ ಸಂತ್ರಸ್ಥ ರೈತರ ನೆರವಿಗೆ ಬರಬೇಕು ಎಂದು ಆಗ್ರಹಿಸಿ,ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ  ಎಐಕೆಎಸ್‌ನ ರಾಜ್ಯ ಉಪಾಧ್ಯಕ್ಷ ಕಂಬೇಗೌಡ, ರಾಜ್ಯದ ಹಲವೆಡೆ ಅಕಾಲಿಕ ಮಳೆಯ ಅತಿವೃಷ್ಟಿಯಿಂದ ಬಹುತೇಕ ವಾಣಿಜ್ಯ ಹಾಗೂ ಆಹಾರ ಬೆಳೆಗಳು ನಾಶವಾಗಿ ರೈತರು ನಷ್ಟ ಅನುಭವಿಸುತ್ತಿದ್ದು, ಇಂತಹ ಹಾನಿಗೊಳಗಾದ ಎಲ್ಲಾ ರೈತರ ಬೆಳೆಗಳನ್ನು ಸರಕಾರ ಸಮೀಕ್ಷೆ ನಡೆಸಿ. ರೈತರಿಗೆ ಆದ ನಿಜವಾದ ನಷ್ಟಕ್ಕೆ ಪರಿಹಾರ ನೀಡಲು ರಾಜ್ಯ ಸರಕಾರ ಏಳಂಬ ಮತ್ತು ನಿರ್ಲಕ್ಷ್ಯವನ್ನು ಕೈ ಬಿಟ್ಟು ಕೂಡಲೇ ನಷ್ಟಕ್ಕೊಳಗಾದ ಬೆಲೆಯ ಮತ್ತು ಪರಿಹಾರ ಮೊತ್ತದ ವಿವರಗಳುಳ್ಳ ಪಟ್ಟಿಯನ್ನು ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಪ್ರಕಟಿಸಿ, ಪರಿಹಾರದ ಮೊತ್ತವನ್ನು ಕೂಡಲೇ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರಾಜ್ಯ ಹಾಗೂ ಕೇಂದ್ರ ಸರಕಾರಗಳು ರೈತರ ಬೆಳೆಗಳಿಗೆ ಸಾಮಾನ್ಯ ಬೆಂಬಲ ಬೆಲೆ ಪ್ರಕಟಿಸಿ ಕೆಲವು ಬೆಳೆಗಳ ಖರೀದಿಗೆ ದಿನಾಂಕ ನಿಗದಿ ಮಾಡಿ ರೈತರ ನೋಂದಾವಣೆ ಆರಂಭಿಸಿದ್ದರೂ ಖರೀದಿ ಕೇಂದ್ರಗಳ ಪಟ್ಟಿ ಬಿಡುಗಡೆ ಮಾಡಿದ್ದರೂ ಸಹ ಇದುವರೆವಿಗೂ ಖರೀದಿ ಪ್ರಕ್ರಿಯೆ ಆರಂಭವಾಗಿರುವುದಿಲ್ಲ. ಆದ್ದರಿಂದ ಈಗಾಗಲೇ ಅಳಿದುಳಿದ ಬೆಳೆ ಕಟಾವು ಮುಗಿದಿದ್ದು ರೈತರು ದಾಸ್ತಾನು ಮಾಡಿಟ್ಟುಕೊಳ್ಳಲು ಶಕ್ತಿ ಹಾಗೂ ಅನುಕೂಲವಿಲ್ಲದ ಕಾರಣ ಖಾಸಗಿ ವರ್ತಕರು ಮತ್ತು ದಲ್ಲಾಳಿಗಳಿಗೆ ಮಾರುವ ಒತ್ತಡಕ್ಕೆ ಸಿಲುಕಿದ್ದಾರೆ. ಮಾತ್ರವಲ್ಲ ಇನ್ನೂ ಕಟಾವು ಮಾಡಬೇಕಿರುವ ಬೆಳೆಗಳಿಗೆ ಖರೀದಿ ಕೇಂದ್ರಗಳಿಲ್ಲದೆ ಖಾಸಗಿ ವ್ಯಾಪಾರಿಗಳನ್ನು ಅವಲಂಬಿಸುವ ದುಸ್ಥಿತಿಯಲ್ಲಿದ್ದಾರೆ. ಆದ್ದರಿಂದ ಸರ್ಕಾರಗಳು ಕೂಡಲೇ ಇನ್ನೊಂದು ವಾರದ ಒಳಗೆ ಘೋಷಿಸಿರುವ ಬೆಂಬಲ ಬೆಲೆಯಲ್ಲಿ ರೈತರಿಂದ ಕೊಂಡುಕೊಳ್ಳಲು ಖರೀದಿ ಕೇಂದ್ರಗಳನ್ನು ಕಾರ್ಯಾರಂಭ ಮಾಡಲು ಆದೇಶ ಮತ್ತು ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.

ಸರಕಾರಿ ಭೂವಿಯಲ್ಲಿ ಸಾಗುವಳಿ ಮಾಡಿರುವ ಭೂ ರಹಿತ ರೈತರ ಭೂಮಿಯ ಹಕ್ಕುಪತ್ರ ನೀಡುವ ಅಕ್ರಮ ಸಕ್ರಮ ಸಮಿತಿಗಳಲ್ಲಿ ರಾಜ್ಯಾದ್ಯಂತ ಲಕ್ಷಾಂತರ ಅರ್ಜಿಗಳು ಇನ್ನೂ ವಿಲೇವಾರಿಯಾಗದೆ ಸಂಬAಧಿತ ಸಮಿತಿಗಳನ್ನು ನೇಮಿಸದೆ ಹತ್ತಾರು ವರ್ಷಗಳಿಂದ ಸರಕಾರಗಳು ನಿರ್ಲಕ್ಷ ತೋರಿಸಿದೆ. ರೈತರಿಗೆ ಭೂ ಒಡೆತನ ತ್ರಿಶಂಕು ಸ್ಥಿತಿಯಂತಾಗಿದೆ. ಆದ್ದರಿಂದ ರಾಜ್ಯ ಸರಕಾರ ಈ ದಿವ್ಯ ನಿರ್ಲಕ್ಷ್ಯವನ್ನು ಕೈ ಬಿಟ್ಟು ಬಗರ್ ಹುಕುಂ ಭೂಮಿಗೆ ಹಕ್ಕುಪತ್ರ ನೀಡುವ ಎಲ್ಲಾ ಪ್ರಕ್ರಿಯೆಗಳನ್ನು ಮೊದಲ ಆದ್ಯತೆಯಾಗಿ ಪೂರ್ಣಗೊಳಿಸಬೇಕು.ಕÀಳೆದ ಹತ್ತಾರು ವರ್ಷಗಳಿಂದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಕೈಗಾರಿಕೆಗಾಗಿ. ಜನವಸತಿಗಾಗಿ, ಸಾರಿಗೆ, ವಿದ್ಯುತ್, ನೀರಾವರಿ ಮತ್ತಿತರ ಯೋಜನೆಗಳಿಗೆ ರೈತರ ಭೂಮಿಯನ್ನು ಪ್ರಕಟಿಸಿದೆ ಯೋಜನೆಗಳಿಗೆ ಉಪಯೋಗಿಸದೆ. ಒಂದಡೆ ರೈತರ ಭೂಮಿಯನ್ನು ದುರ್ಭಳಕೆಯಾಗುತ್ತಿದ್ದು, ಇನ್ನೊಂದೆಡೆ ಸರಕಾರದ ಯೋಜನೆಗಳನ್ನು ಆರಂಭಿಸಿಲ್ಲ.ಇದರಿAದ ರೈತರಿಗೆ ಅನ್ಯಾಯವಾಗಿದ್ದು ಸರಕಾರಗಳಿಂದ ಭೂ ಸ್ವಾಧೀನ ಕಾಯ್ದೆಯ ದುರ್ಬಳಕೆ ಯಾಗುತ್ತಿದೆ. ಅದ್ದರಿಂದ ರೈತರಿಂದ ಭೂ ಸ್ವಾಧೀನಪಡಿಸಿಕೊಂಡ ಐದು ವರ್ಷಗಳ ನಂತರದ ಅವಧಿಯ ಎಲ್ಲಾ ಭೂಮಿಯನ್ನು, ಆಯಾ ಭೂಮಿಯ ಮೂಲ ಮಾಲೀಕರಿಗೆ ವಾಪಸ್ ಮಾಡಬೇಕು ಅಥವಾ ಅರ್ಹ ಭೂ ರಹಿತರಿಗೆ ಹಂಚಿಕೆ ಮಾಡಬೇಕು ಆಗ್ರಹಿಸಿದರು.

ಸರಕಾರ ರೈತರ ಬೆಳೆ ಸಾಲ ಮನ್ನಾ ಮಾಡುವ ಜೊತೆಗೆ,ರೈತರಿಗೆ ಬಿತ್ತನೆ ಸಂದರ್ಭದಲ್ಲಿ ಗುಣಮಟ್ಟದ ಬಿತ್ತನೆ ಬೀಜ ನೀಡಬೇಕು.ಇಲ್ಲದಿದ್ದರೆ ರೈತರು ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು,ಕಳಪೆ ಬಿತ್ತನೆ ಬೀಜ ವಿತರಿಸುವ ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಿ,ರೈತರಿಗೆ ನ್ಯಾಯ ಒದಗಿಸಬೇಕು.ಅಲ್ಲದೆ ಮಳೆ ನೀರಿನಿಂದ ತುಂಬದ ಕೆರೆಗಳಿಗೆ, ನೀರಾವರಿ ಯೋಜನೆಗಳ ಮೂಲಕ ನೀರು ತುಂಬಿಸುವ ಕೆಲಸ ಮಾಡಬೇಕು.ಎತ್ತಿನ ಹೊಳೆ ಮತ್ತು ಭದ್ರಾ ಮೇಲ್ದಂಡೆ ಯೋಜನೆಗಳನ್ನು ಶೀಘ್ರವಾಗಿ ಜಾರಿ ಮಾಡಿ ರೈತರಿಗೆ ಅನುಕೂಲ ಕಲ್ಪಿಸಬೇಕೆಂದು ಕಂಬೇಗೌಡ ಒತ್ತಾಯಿಸಿದರು. ಈ ಸಂಬAಧ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಎಐಕೆಎಸ್ ನ ಪಾವಗಡ ತಾಲೂಕು ಅಧ್ಯಕ್ಷ ಈರದಾಸಪ್ಪ, ಶಿರಾ ತಾಲೂಕು ಅಧ್ಯಕ್ಷರಾದ ಗುರುಸಿದ್ದಪ್ಪ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

(Visited 1 times, 1 visits today)