
ತುಮಕೂರು: ವ್ಯಕ್ತಿ ಮತ್ತು ಘಟನೆಗಳಿಂದ ಅನೇಕರು ಸ್ಪೂರ್ತಿ ಪಡೆದುಕೊಳ್ಳುತ್ತಾರೆ. ಹಾಗಾಗಿ ಶ್ರೀಸಿದ್ದಗಂಗಾ ಮಹಿಳಾ ಪದವಿ ಕಾಲೇಜಿನಲ್ಲಿ ಓದಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ಅಧಿಕಾರಿಗಳು,ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಈಗಿನ ವಿದ್ಯಾರ್ಥಿಗಳಿಗೆ ಪರಿಚಯಿಸುವ ಮೂಲಕ ಸಾಧನೆಯ ಮೆಟ್ಟಿಲು ಹತ್ತಲು ಸ್ಪೂರ್ತಿ ನೀಡಬೇಕೆಂದು ಶ್ರೀಸಿದ್ದಗಂಗಾ ಶಿಕ್ಷಣ ಸಂಸ್ಥೆಯ ಜಂಟಿ ನಿರ್ದೇಶಕ ಡಾ.ಶಿವಕುಮಾರಯ್ಯ ಸಲಹೆ ನೀಡಿದ್ದಾರೆ.
ನಗರದ ಶ್ರೀಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಿಳಾ ಪದವಿ ಕಾಲೇಜು ವತಿಯಿಂದ ಆಯೋಜಿಸಿದ್ದ ವಾರ್ಷಿಕ ಚುಟುವಟಿಕೆಗಳ ಸ್ಪೂರ್ತಿ, ಎನ್.ಎಸ್.ಎಸ್, ಯುವ ರೆಡ್‌ಕ್ರಾಸ್ ಮತ್ತು ಕ್ರೀಡಾ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಎಸ್.ಐ.ಟಿಯಲ್ಲಿ ಅಲ್ಯೂಮಿನಿ ಮೀಟ್ ಹೆಸರಿನಲ್ಲಿ ಇಂಜಿನಿಯರಿ0ಗ್,ಉದ್ದಿಮೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಳೆಯ ವಿದ್ಯಾರ್ಥಿಗಳನ್ನು ಗುರುತಿಸಿ, ಸನ್ಮಾನಿಸುವ ಮೂಲಕ ಹೊಸಬರಿಗೆ ಉತ್ತೇಜನ ನೀಡಲಾಗುತ್ತಿದೆ. ಹಾಗೆಯೇ ಈ ಕಾಲೇಜಿನಲ್ಲಿ ಓದಿ ಐಎಎಸ್, ಐಪಿಎಸ್,ಕೆ.ಎ.ಎಸ್ ಹುದ್ದೆಯಲ್ಲಿರುವ, ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಹಳೆಯ ವಿದ್ಯಾರ್ಥಿಗಳನ್ನು ಗುರುತಿಸಿ,ಸನ್ಮಾನಿಸುವ ಮೂಲಕ ವಿದ್ಯಾರ್ಥಿಗಳಿಗೆ ಸಾಧನೆಯ ಮೆಟ್ಟಿಲುಗಳ ಪರಿಚಯಿಸಬೇಕೆಂದರು.
ವಿದ್ಯಾರ್ಥಿ ಜೀವನದಲ್ಲಿ ಪಠ್ಯದ ಜೊತೆಗೆ, ಪಠ್ಯೇತರ ಚುಟುವಟಿಕೆಗಳು ಮುಖ್ಯ.ಕ್ರೀಡೆ,ಎನ್.ಎಸ್.ಎಸ್, ಎನ್,ಸಿ.ಸಿ. ಹಾಗೂ ಯುವ ರೆಡ್‌ಕ್ರಾಸ್ ಇವುಗಳು ಒಂದಕ್ಕೊAದು ಪೂರಕವಾಗಿವೆ. ಸಾಂಸ್ಕೃತಿಕ ಕಾರ್ಯಕ್ರಮಗಳು ವ್ಯಕ್ತಿಯಲ್ಲಿನ ಕಿಳೀರಿಮೆಯನ್ನು ಕಡಿಮೆ ಮಾಡಿ,ಸಮಾಜ ಸೇವೆ,ಸಹಕಾರ ಮನೋಭಾವ,ಸಮನ್ವಯತೆ,ಆತ್ಮಸ್ಥೆöÊರ್ಯ ತುಂಬಿದರೆ,ಕ್ರೀಡಾ ಚಟುವಟಿಕೆಗಳು ಏಕಾಗ್ರತೆ,ಧೈರ್ಯ ಮತ್ತು ನಾಯಕತ್ವದ ಗುಣದ ಜೊತೆಗೆ,ತಂಡವಾಗಿ ಹೇಗೆ ಕೆಲಸ ಮಾಡಬೇಕೆಂಬುದನ್ನು ಕಲಿಸುತ್ತದೆ.ಹಾಗಾಗಿ ಎಲ್ಲಾ ವಿದ್ಯಾರ್ಥಿಗಳು, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಡಾ.ಶಿವಕುಮಾರಯ್ಯ ಕಿವಿ ಮಾತು ಹೇಳಿದರು.
ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಎಸ್.ದಯಾಶಂಕರ್ ಮಾತನಾಡಿ,ಸ್ಪೂರ್ತಿ ಎಂಬುದು ಎಲ್ಲರಿಗೂ ಅಗತ್ಯವಿದೆ.ಸಾಧನೆಗೆ ಬಡತನ, ಅಂಗವಿಕಲತೆ ಅಡ್ಡಿಯಾಗಲಾರದು.ಎರಡು ಕೈಯಿಲ್ಲದೆ ಹುಟ್ಟಿದ ಜೆಸಿಕಾ ಕಾಕ್,ಬರವಣಿಗೆ,ಈಜು,ವಾಹನ ಚಾಲನೆ,ವಿಮಾನ ಚಾಲನೆ ಮಾಡಿ ಇತರರಿಗೆ ಸ್ಪೂರ್ತಿಯಾಗಿದ್ದಾರೆ.ಆಟೋ ಚಾಲಕನ ಮಗನಾಗಿ ಹುಟ್ಟಿದ ಕಾಶಿಯ ಗೋಪಾಲ್ ಜೈಸ್ವಾಲ್ ಐಎಎಸ್ ಅಧಿಕಾರಿಯಾಗುವುದು ಸಾಧ್ಯವಾಗಿದ್ದರೆ, ಅದು ಅವರ ಸಾಧಿಸುವ ಚಲದಿಂದ ಮಾತ್ರ.ಕಿಳೀರಿಮೆ ಬಿಟ್ಟು ಸಾಧನೆಯತ್ತ ಮುಖ ಮಾಡಿ, ನಿರಂತರ ಪರಿಶ್ರಮದಿಂದ ಗುರಿ ಸಾಧನೆ ಸಾಧ್ಯವೆಂದರು.
ಶ್ರೀಸಿದ್ದಗ0ಗಾ ಪದವಿ ಕಾಲೇಜುಗಳ ಸಂಯೋಜಕ ಡಾ.ಡಿ.ಎನ್.ಯೋಗೀಶ್ವರಪ್ಪ ಮಾತನಾಡಿ,ಇತ್ತೀಚಿನ ಮಕ್ಕಳಲ್ಲಿ ಭಾಷಾ ಸಂಪತ್ತು, ಬರವಣಿಗೆಯ ವೇಗ ಮತ್ತು ನೆನಪಿನ ಶಕ್ತಿ ಇವುಗಳ ಕೊರತೆ ಎದುರಿಸುತ್ತಿದ್ದಾರೆ.ಪಠ್ಯದ ಹೊರತಾಗಿ ಪುಸ್ತಕಗಳನ್ನು ಓದುವುದರ ಮೂಲಕ ತಮ್ಮ ಭಾಷಾ ಸಂಪತ್ತು ಹೆಚ್ಚಿಸಿಕೊಳ್ಳಲು ಸಾಧ್ಯ.ಹಾಗೆಯೇ ದಿನ ನಿತ್ಯ ಕನಿಷ್ಠ ಒಂದು ಗಂಟೆ ಬರೆಯುವುದನ್ನು ಅಭ್ಯಾಸ ಮಾಡಿದರೆ ಬರವಣಿಗೆಯ ವೇಗ ಹೆಚ್ಚಲಿದೆ.ಹಾಗೆಯೆ ಗಟ್ಟಿಯಾಗಿ ಓದುವುದು ಮತ್ತು ಅದನ್ನು ಪುನರಾವಲೋಕನ ಮಾಡುವ ಮೂಲಕ ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ಸಾಧ್ಯವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಸಿದ್ದಗಂಗಾ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಿಳಾ ಪದವಿ ಕಾಲೇಜು ಪ್ರಾಂಶುಪಾಲರಾದ ಡಾ.ಹೆಚ್.ಎಂ.ದಕ್ಷಿಣಮೂರ್ತಿ ಮಾತನಾಡಿ, ನಮ್ಮ ಕಾಲೇಜಿನಲ್ಲಿ ವರ್ಷವಿಡಿ ಸ್ಪೂರ್ತಿ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬರಲಾಗುತ್ತಿದೆ. ೨೫ ರೀತಿಯ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾದ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ.ಬಡತನ,ಅಂಗವೈಕಲ್ಯ ಸಾಧನೆಗೆ ಅಡ್ಡಿಯಲ್ಲ ಎಂಬುದನ್ನು ಅನೇಕರು ಸಾಭೀತು ಮಾಡಿ ತೊರಿಸಿದ್ದಾರೆ.ವಿದ್ಯಾರ್ಥಿನಿಯರು ಸಾಧಿಸುವ ಕೆಚ್ಚು ಬೆಳೆಸಿಕೊಳ್ಳಬೇಕೆಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಸ್ಪೂರ್ತಿಯ ಸಂಚಾಲಕರಾದ ಡಾ.ಜಗದೀಶ್,೧೯೮೨ರಲ್ಲಿ ೨೦೦ ವಿದ್ಯಾರ್ಥಿನಿಯರಿಂದ ಪ್ರಾರಂಭವಾದ ನಮ್ಮ ಕಾಲೇಜಿನಲ್ಲಿ ಇಂದು ೧೪೭೫ ವಿದ್ಯಾರ್ಥಿನಿಯರು ಕಲಿಯುತ್ತಿದ್ದು,ಗ್ರಾಮೀಣ ಭಾಗದ ವಿದ್ಯಾರ್ಥಿನಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.೧೯೮೪ರಲ್ಲಿ ಅಂದಿನ ಪ್ರಾಂಶುಪಾಲರಾಗಿದ್ದ ಕೆ.ಹೆಚ್.ಪರಮಶಿವಯ್ಯ ಸ್ಪೂರ್ತಿ ಕಾರ್ಯಕ್ರಮ ಆರಂಭಿಸಿದ್ದು,ಇAದಿಗೂ ಮಕ್ಕಳ ಪಾಲಿಗೆ ಒಂದು ವರ್ಣರಂಜಿತ ಕಾರ್ಯಕ್ರಮವಾಗಿದೆ.ಹಲವಾರು ಪ್ರತಿಭೆಗಳಿಗೆ ವೇದಿಕೆಯಾಗಿದೆ ಎಂದರು.
ಚಲನಚಿತ್ರ ಹಿನ್ನೆಲೆ ಗಾಯಕ ಸುನೀತ ಮುರುಳಿ ತಮ್ಮಗೆ ಪ್ರಖ್ಯಾತಿ ತಂದುಕೊಟ್ಟ ಜೋಗಿ ಚಿತ್ರದ ಎಲ್ಲೋ ಜೋಗಪ್ಪ ನಿನ್ನ ಅರಮನೆ ಹಾಡಿನ ಜೊತೆಗೆ, ಅವರು ಹಾಡಿದ ಪ್ರಸಿದ್ದ ಹಾಡುಗಳನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ಮೆರಗು ನೀಡಿದರು.
ವೇದಿಕೆಯಲ್ಲಿ ಉಪನ್ಯಾಸಕರಾದ ಶ್ರೀಮತಿ ಪಾವನ, ಶ್ರೀಮತಿ ಅಮೂಲ್ಯ.ಜೆ., ಶ್ರೀಮತಿ ಹರ್ಷಶ್ರೀ.ಎನ್. ಹಾಗೂ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.



