BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಹೆದ್ದಾರಿಯಲ್ಲಿ ಅವೈಜ್ಞಾನಿಕ ಅಂಡರ್ ಪಾಸ್ ನಿರ್ಮಾಣ
  • ರಾಯಚೂರು ಬಿಎಸ್‌ಪಿ ಮುಖಂಡನ ಕೊಲೆ ಪ್ರಕರಣ
  • ಯಲಿಯೂರು ದಲಿತರಿಗೆ ಅಂಬೇಡ್ಕರ್ ಭವನಕ್ಕೆಂದು ಮೀಸಲಿರಿಸಿದ್ದ ಜಾಗ: ಎರಡು ಸಮುದಾಯಗಳ ನಡುವೆ ವೈಮನಸ್ಸು
  • ಹುಳಿಯಾರು ಪ.ಪಂ ತುರ್ತು ಸಭೆಯಲ್ಲಿ ಕಾವೇರಿದ ಚರ್ಚೆ
  • ಅತ್ಯಾಚಾರ ಕೊಲೆ ಪ್ರಕರಣ ದಿನ: ಅಭಯ ದಿನವನ್ನಾಗಿ ಆಚರಣೆ
  • ವಿಶೇಷ ರೋಜ್ಗಾರ್ ದಿನಾಚರಣೆಯಲ್ಲಿ ವಿಬಿಜಿ ರಾಮ್ ಜಿ ಯೋಜನೆ ಕುರಿತು ಸಮಗ್ರ ಮಾಹಿತಿ
  • ಡಯಾಬಿಟಿಕ್ ಪುಟ್ ಕಾಯಿಲೆಯನ್ನು ಆರಂಭದಲ್ಲೇ ಗುರುತಿಸಿ
  • ಅಸಹಾಯಕ ಮಹಿಳೆಯನ್ನು ದತ್ತು ಪಡೆದ ಇಕ್ಬಾಲ್ ಅಹಮದ್
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಸಂವಿಧಾನದಿ0ದ ಸಮಾಜದಲ್ಲಿ ಎಲ್ಲರಿಗೂ ಸಮಾನತೆ ಸಿಕ್ಕಿದೆ
ಇತರೆ ಸುದ್ಧಿಗಳು

ಸಂವಿಧಾನದಿ0ದ ಸಮಾಜದಲ್ಲಿ ಎಲ್ಲರಿಗೂ ಸಮಾನತೆ ಸಿಕ್ಕಿದೆ

ಸಂವಿಧಾನ ಕುರಿತ ಪ್ರಶ್ನೆಗೆ ಉತ್ತರಿಸಿದ ಮಕ್ಕಳಿಗೆ ಬಹುಮಾನ ವಿತರಿಸಿದ ಡೀಸಿ
By News Desk BenkiyabaleUpdated:November 27, 2025 4:31 pm

ತುಮಕೂರು: ಭಾರತ ಸಂವಿಧಾನ ದಿನಾಚರಣೆ ಪ್ರಯುಕ್ತ ನಗರದ ಎಂಪ್ರೆಸ್ ಕಾಲೇಜಿನ ಆಡಿಟೋರಿಯಂನಲ್ಲಿ ಬುಧವಾರ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಸಂವಿಧಾನದ ವಿವಿಧ ಅನುಚ್ಛೇದ ಹಾಗೂ ತಿದ್ದುಪಡಿ, ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಕುರಿತು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ ಶಾಲಾ ವಿದ್ಯಾರ್ಥಿಗಳಿಗೆ “ಭಾರತ ಸಂವಿಧಾನ ಪುಸ್ತಕ” ಬಹುಮಾನ ಹಾಗೂ ಸಿಹಿ ವಿತರಿಸಲಾಯಿತು.
ನಗರದ ಗುಂಚಿ ಚೌಕದಲ್ಲಿರುವ ಮೌಲಾನಾ  ಶಾಲೆಯ ವಿದ್ಯಾರ್ಥಿಗಳಾದ ಮೊಹಮ್ಮದ್ ಖಾಸಿಂ ಸಾಬ್ ಹಾಗೂ ಜೋಯನಾಜ್, ಬಿಕ್ಕೆಗುಡ್ಡ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಸಿಂಚನ ಹಾಗೂ ಮಂಜು, ಕೋರಾ ಗ್ರಾಮದ ಡಾ: ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿ ಚೇತನ್, ನಗರದ ಎಂಪ್ರೆಸ್ ಕೆಪಿಎನ್ ಶಾಲೆ ವಿದ್ಯಾರ್ಥಿ ಭಾರ್ಗವಿ ಸೇರಿದಂತೆ ೫ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿಗಳು ಪುಸ್ತಕ ಬಹುಮಾನ ಹಾಗೂ ಸಿಹಿ ವಿತರಿಸಿದರು.
ನಂತರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಅಂಬೇಡ್ಕರ್ ರಚಿಸಿರುವ ಭಾರತ ಸಂವಿಧಾನದಿAದ ಸಮಾನತೆ,  ಧಾರ್ಮಿಕ , ಶೋಷಣೆಯ ವಿರುದ್ಧ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಹಾಗೂ ಸಂವಿಧಾನಾತ್ಮಕ ಪರಿಹಾರದ ಹಕ್ಕುಗಳು ದೊರೆತಿರುವುದರಿಂದ ನಾವೆಲ್ಲಾ ನೆಮ್ಮದಿಯಾಗಿ ಸಮಾಜದಲ್ಲಿ ಬದುಕುತ್ತಿದ್ದೇವೆ. ಭಾರತದಲ್ಲಿ ೧೯೦೧ರಲ್ಲಿ ಶೇ.೧ರಷ್ಟಿದ್ದ ಮಹಿಳೆಯರ ಸಾಕ್ಷರತಾ ಪ್ರಮಾಣ ಸಂವಿಧಾನದ ಹಕ್ಕುಗಳಿಂದ ಮಹಿಳೆಯರ ಸಾಕ್ಷರತಾ ಪ್ರಮಾಣ ಈಗ ಶೇ.೮೦ಕ್ಕೆ ತಲುಪಿದೆ ಎಂದು ಸಂವಿಧಾನದ ಮಹತ್ವಗಳ ಬಗ್ಗೆ ವಿವರಿಸಿದರು.
ವಿಶ್ವ ಶ್ರೇಷ್ಠ ಗ್ರಂಥ ನಮ್ಮ ಸಂವಿಧಾನ: ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ಆಧುನಿಕ ಇತಿಹಾಸದಲ್ಲಿ ನಮ್ಮ ಸಂವಿಧಾನವು ವಿಶ್ವ ಶ್ರೇಷ್ಠ ಗ್ರಂಥವೆನಿಸಿಕೊ0ಡಿದೆ. ಭಾರತ ಸಂವಿಧಾನ ಸಮರ್ಪಣೆಗೊಂಡ ದಿನದ ಸವಿನೆನಪಿಗಾಗಿ ಪ್ರತೀ ವರ್ಷ ನವೆಂಬರ್ ೨೬ರಂದು ಸಂವಿಧಾನ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಭಾರತ ಸಂವಿಧಾನವು ನಮ್ಮ ಅಸ್ತಿತ್ವದ ಪ್ರತೀಕ. ಈ ಸುದಿನದಂದು ಸಂವಿಧಾನ ರಚನೆಗೆ ಕೊಡುಗೆ ನೀಡಿರುವ ಮಹನೀಯರ ಪರಿಶ್ರಮದ ಬಗ್ಗೆ ತಿಳಿಯುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು.
ಭಾರತ ಮೂಲ ಸಂವಿಧಾನವು ೩೯೫ ಅನುಚ್ಛೇಧ, ೨೨ ಭಾಗ ಹಾಗೂ ೮ ಅನುಸೂಚಿಗಳನ್ನು ಒಳಗೊಂಡಿದೆ. ಪ್ರಸ್ತುತ ಹಲವಾರು ತಿದ್ದುಪಡಿ ಯಾಗಿರುವುದರಿಂದ ೪೪೮ಕ್ಕೂ ಹೆಚ್ಚು ಅನುಚ್ಛೇಧಗಳು, ೨೫ ಭಾಗ ಹಾಗೂ ೧೨ ಅನುಸೂಚಿಗಳನ್ನು ಒಳಗೊಂಡಿದೆಯಲ್ಲದೆ, ದೇಶದ ಪ್ರಜೆಗಳ ಹಿತ ಕಾಯುವ ಉದ್ದೇಶದಿಂದ ನೆಮ್ಮದಿಯಾಗಿ ಜೀವಿಸಲು ಶಾಸ ಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗವನ್ನು ಸೃಜಿಸಲಾಗಿದೆ ಎಂದು ತಿಳಿಸಿದರು.
ಸಮಾಜದ ಕಟ್ಟ ಕಡೆಯ ಮನುಷ್ಯನನ್ನು ದೃಷ್ಟಿಯಲ್ಲಿಟ್ಟುಕೊಂಡು ಸಂವಿಧಾ ನವನ್ನು ರಚಿಸಲಾಗಿದೆ. ಸಾಮಾನ್ಯ ವ್ಯಕ್ತಿಯು ತಾನು ಅನ್ಯಾಯಕ್ಕೊಳಗಾದಾಗ ನ್ಯಾಯಕ್ಕಾಗಿ ನೇರವಾಗಿ ಸರ್ವೋಚ್ಛ ನ್ಯಾಯಲಯದ ಮೆಟ್ಟಿಲೇರುವ ಹಕ್ಕನ್ನು ಈ ಸಂವಿಧಾನ ನೀಡಿದೆ. ಅಲ್ಲದೆ, ಪ್ರತಿಯೊಬ್ಬರೂ ಶಾಂತಿ-ಸಹಬಾಳ್ವೆಯಿ0ದ ಬದುಕಲು ಮೂಲಭೂತ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದೆ. ಪ್ರತಿಯೊಬ್ಬರೂ ಸಂವಿಧಾನ ಪುಸ್ತಕವನ್ನು ಓದಿ ತಿಳಿಯಬೇಕು. ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಂವಿಧಾನ ಶಿಲ್ಪಿ ಡಾ: ಅಂಬೇಡ್ಕರ್ ಅವರನ್ನು ಸ್ಫೂರ್ತಿಯಾಗಿಸಿಕೊಂಡು ಉನ್ನತ ವಿದ್ಯಾಭ್ಯಾಸ ಮಾಡಿ ಭವಿಷ್ಯವನ್ನು ಉಜ್ವಲವಾಗಿಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.
ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಮಾತನಾಡಿ ಸಂವಿಧಾನವು ದೇಶದ ಪ್ರತಿ ಪ್ರಜೆಯ ಸ್ವಾಭಿಮಾನದ ಸಂಕೇತವಾಗಬೇಕು. ಸಂವಿಧಾನದ ಜಾಗೃತಿ ಪ್ರತಿಯೊಬ್ಬರ ಮನದಲ್ಲೂ ಅಚ್ಚೊತ್ತಬೇಕು. ಸಂವಿಧಾನದ ಅರಿವು ಪ್ರತಿ ಪ್ರಜೆಯ ಕರ್ತವ್ಯವಾಗಬೇಕು. ಈ ಆಶಯವನ್ನು ಸಾಕಾರಗೊಳಿಸುವ ದೃಷ್ಟಿಯಿಂದಲೇ ಸಂವಿಧಾನ ದಿನವನ್ನು ಆಚರಿಸಲಾಗುತ್ತಿದೆ. ಸಂವಿಧಾನದ ಉದ್ದೇಶ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ಸಮಾನ ವಾಗಿ ವಿತರಿಸುವುದು ಹಾಗೂ ಅಭಿವ್ಯಕ್ತಿ ಸ್ವಾತಂತ್ರ‍್ಯವನ್ನು ರಕ್ಷಿಸುವುದಾಗಿದೆ. ಸಂವಿಧಾನದ ಅರ್ಥ, ಮಹತ್ವ ಹಾಗೂ ಜವಾಬ್ದಾರಿಯನ್ನು ನಮ್ಮ ಜನ ಅರ್ಥ ಮಾಡಿಕೊಳ್ಳಬೇಕೆಂಬುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯವಾಗಿತ್ತು ಎಂದು ತಿಳಿಸಿದರು.
ನಂತರ ಡಾ: ಬಿ.ಆರ್. ಅಂಬೇಡ್ಕರ್‌ವಾದಿ, ಭಾಷಣಕಾರ ವಿ.ಎಲ್. ನರಸಿಂಹಮೂರ್ತಿ ಅವರು ಸಂವಿಧಾನ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಮಹನೀಯರಾದ ಡಾ: ಬಿ.ಆರ್. ಅಂಬೇಡ್ಕರ್ ಹಾಗೂ ಡಾ: ಬಾಬು ಜಗಜೀವನ ರಾಂ ಅವರ ಭಾವಚಿತ್ರಕ್ಕೆ ಗಣ್ಯರಿಂದ ಪುಷ್ಪ ನಮನ ಸಲ್ಲಿಸಲಾಯಿತು. ಭಾರತ ಸಂವಿಧಾನ ಪೀಠಿಕೆಯ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು. ಈ ಸಂದರ್ಭದಲ್ಲಿ ಬೆಂಗಳೂರಿನ ಭೂಮಿ ತಾಯಿ ಬಳಗದ ನಿರ್ಮಲ ಹಾಗೂ ತಂಡದವರು “ಜೈ ಭೀಮ್ ಮಹಾರಾಷ್ಟçದ ಹಣತೆ-ನೀನೊಂದು ಮುಗಿಯದ ಚರಿತೆ”, “ಜಯಹೇ ಭಾರತ ಭಾಗ್ಯವಿಧಾತ-ಜಯವೇ ಸಂವಿಧಾನ ದಾತ”, “ಕತ್ತಲ ಜಗತಿಗೆ ಬೆಳಕನು ನೀಡಿದ ಅರಿವೇ ಅಂಬೇಡ್ಕರ-ದಿಕ್ಕು ದಿಕ್ಕಿಗೂ ಹೊಂಗಿರಣ ಬೀರಿದ ಗುರುವೇ ಅಂಬೇಡ್ಕರ” ಸೇರಿದಂತೆ ಹಲವಾರು ಸಂವಿಧಾನ ಹಾಗೂ ಅಂಬೇಡ್ಕರ್ ಅವರ ಕುರಿತ ಕ್ರಾಂತಿ ಗೀತೆಗಳನ್ನು ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ಗೃಹ ಸಚಿವರ ವಿಶೇಷ ಕರ್ತವ್ಯಾಧಿಕಾರಿ ನಾಗಣ್ಣ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ, ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ಸಣ್ಣ ಮಸಿಯಪ್ಪ ಹಾಗೂ ಯೋಜನಾ ನಿರ್ದೇಶಕ ನಾರಾಯಣಸ್ವಾಮಿ, ಡಿಎಲ್‌ಬಿಸಿ ಸದಸ್ಯ ಶ್ರೀಧರ್, ಡಿಡಿಪಿಐ ರಘುಚಂದ್ರ, ಡಿಡಿಪಿಯು ಬಾಲಗುರುಮೂರ್ತಿ, ಬಿಇಓ ಹನುಮಂತಪ್ಪ, ವಿವಿಧ ದಲಿತ ಮುಖಂಡರು ಹಾಗೂ ಪದಾಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

(Visited 1 times, 1 visits today)
Previous Articleಜ.3: ಗುರುಗುಂಡ ಬ್ರಹ್ಮೇಶ್ವರಸ್ವಾಮಿ ಜಾತ್ರಾ ಮಹೋತ್ಸವ
Next Article ಆಗ್ನೇಯ ಪದವಿಧರ ಕ್ಷೇತ್ರದ ಚುನಾವಣೆ
News Desk Benkiyabale

Related Posts

ಹೆದ್ದಾರಿಯಲ್ಲಿ ಅವೈಜ್ಞಾನಿಕ ಅಂಡರ್ ಪಾಸ್ ನಿರ್ಮಾಣ

August 08, 2026 5:13 pm news

ರಾಯಚೂರು ಬಿಎಸ್‌ಪಿ ಮುಖಂಡನ ಕೊಲೆ ಪ್ರಕರಣ

August 08, 2026 5:11 pm news

ಯಲಿಯೂರು ದಲಿತರಿಗೆ ಅಂಬೇಡ್ಕರ್ ಭವನಕ್ಕೆಂದು ಮೀಸಲಿರಿಸಿದ್ದ ಜಾಗ: ಎರಡು ಸಮುದಾಯಗಳ ನಡುವೆ ವೈಮನಸ್ಸು

August 08, 2026 5:09 pm news
ತಾಜಾ ಸುದ್ಧಿಗಳು
news

ಹೆದ್ದಾರಿಯಲ್ಲಿ ಅವೈಜ್ಞಾನಿಕ ಅಂಡರ್ ಪಾಸ್ ನಿರ್ಮಾಣ

August 08, 2026 5:13 pm
news

ರಾಯಚೂರು ಬಿಎಸ್‌ಪಿ ಮುಖಂಡನ ಕೊಲೆ ಪ್ರಕರಣ

August 08, 2026 5:11 pm
news

ಯಲಿಯೂರು ದಲಿತರಿಗೆ ಅಂಬೇಡ್ಕರ್ ಭವನಕ್ಕೆಂದು ಮೀಸಲಿರಿಸಿದ್ದ ಜಾಗ: ಎರಡು ಸಮುದಾಯಗಳ ನಡುವೆ ವೈಮನಸ್ಸು

August 08, 2026 5:09 pm
news

ಹುಳಿಯಾರು ಪ.ಪಂ ತುರ್ತು ಸಭೆಯಲ್ಲಿ ಕಾವೇರಿದ ಚರ್ಚೆ

August 08, 2026 4:30 pm
news

ಅತ್ಯಾಚಾರ ಕೊಲೆ ಪ್ರಕರಣ ದಿನ: ಅಭಯ ದಿನವನ್ನಾಗಿ ಆಚರಣೆ

August 08, 2026 4:28 pm
news

ವಿಶೇಷ ರೋಜ್ಗಾರ್ ದಿನಾಚರಣೆಯಲ್ಲಿ ವಿಬಿಜಿ ರಾಮ್ ಜಿ ಯೋಜನೆ ಕುರಿತು ಸಮಗ್ರ ಮಾಹಿತಿ

August 08, 2026 4:26 pm
Our Youtube Channel
Our Picks

ಹೆದ್ದಾರಿಯಲ್ಲಿ ಅವೈಜ್ಞಾನಿಕ ಅಂಡರ್ ಪಾಸ್ ನಿರ್ಮಾಣ

August 08, 2026 5:13 pm

ರಾಯಚೂರು ಬಿಎಸ್‌ಪಿ ಮುಖಂಡನ ಕೊಲೆ ಪ್ರಕರಣ

August 08, 2026 5:11 pm

ಯಲಿಯೂರು ದಲಿತರಿಗೆ ಅಂಬೇಡ್ಕರ್ ಭವನಕ್ಕೆಂದು ಮೀಸಲಿರಿಸಿದ್ದ ಜಾಗ: ಎರಡು ಸಮುದಾಯಗಳ ನಡುವೆ ವೈಮನಸ್ಸು

August 08, 2026 5:09 pm

ಹುಳಿಯಾರು ಪ.ಪಂ ತುರ್ತು ಸಭೆಯಲ್ಲಿ ಕಾವೇರಿದ ಚರ್ಚೆ

August 08, 2026 4:30 pm

ಅತ್ಯಾಚಾರ ಕೊಲೆ ಪ್ರಕರಣ ದಿನ: ಅಭಯ ದಿನವನ್ನಾಗಿ ಆಚರಣೆ

August 08, 2026 4:28 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಹೆದ್ದಾರಿಯಲ್ಲಿ ಅವೈಜ್ಞಾನಿಕ ಅಂಡರ್ ಪಾಸ್ ನಿರ್ಮಾಣ

By News Desk BenkiyabaleAugust 08, 2026 5:13 pm

ತುಮಕೂರು: ಕೇಂದ್ರ ಸರಕಾರ ಸುಮಾರು ೩೦೦೦ ಕೋಟಿ ರೂಖರ್ಚು ಮಾಡುತ್ತಿರುವ ರಾಷ್ಟಿçÃಯ ಹೆದ್ದಾರಿ ೨೦೬ರಲ್ಲಿ ತಿಪಟೂರು ಸಮೀಪದ ಅಯ್ಯನ ಭಾವಿ…

ರಾಯಚೂರು ಬಿಎಸ್‌ಪಿ ಮುಖಂಡನ ಕೊಲೆ ಪ್ರಕರಣ

August 08, 2026 5:11 pm

ಯಲಿಯೂರು ದಲಿತರಿಗೆ ಅಂಬೇಡ್ಕರ್ ಭವನಕ್ಕೆಂದು ಮೀಸಲಿರಿಸಿದ್ದ ಜಾಗ: ಎರಡು ಸಮುದಾಯಗಳ ನಡುವೆ ವೈಮನಸ್ಸು

August 08, 2026 5:09 pm

ಹುಳಿಯಾರು ಪ.ಪಂ ತುರ್ತು ಸಭೆಯಲ್ಲಿ ಕಾವೇರಿದ ಚರ್ಚೆ

August 08, 2026 4:30 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.