
ತುಮಕೂರು: ಆಗ್ನೇಯ ಪದವಿಧರ ಕ್ಷೇತ್ರದ ಚುನಾವಣೆಗೆ ಮತದಾರರ ನೊಂದಣಿಗೆ ನವೆಂಬರ್ ೨೫ ರಿಂದ ಡಿಸೆಂಬರ್ ೧೦ ರವರೆಗೆ ಅವಕಾಶ ನೀಡಿದ್ದು, ಮೊದಲನೇ ಹಂತದಲ್ಲಿ ಅರ್ಜಿ ಸಲ್ಲಿಸಿ ತಿರಸ್ಕೃತರಾದ ಪದವಿಧರರು ಮತ್ತು ಹೊಸದಾಗಿ ನೊಂದಾಯಿಸುವ ಅಭ್ಯರ್ಥಿಗಳಿಗೆ ತಮ್ಮ ಹೆಸರು ನೊಂದಾಯಿಸಿಕೊಳ್ಳುವAತೆ ಆಗ್ನೇ ಯ ಪದವಿಧರರ ಕ್ಷೇತ್ರದ ಚುನಾವಣೆಯ ಎನ್.ಡಿ.ಎ ಪ್ರಭಲ ಆಕಾಂಕ್ಷಿ ಡಾ.ಕೆ.ನಾಗರಾಜು ಮನವಿ ಮಾಡಿದ್ದಾರೆ.
ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಜೆಡಿಯು ಪಕ್ಷದ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿದ ಅವರು,ಆಗ್ನೇಯ ಪದವಿಧರರ ಕ್ಷೇತ್ರದ ವ್ಯಾಪ್ತಿಯ ೫ಜಿಲ್ಲೆಗಳಲ್ಲಿ ಎಲ್ಲಾ ಹೋಬಳಿ ಕೇಂದ್ರಗಳಲ್ಲಿಯೂ ಮೊದಲ ಹಂತದಲ್ಲಿ ನೊಂದಾಯಿಸಿದ ಮತದಾರರ ಆರ್ಹ ಮತದಾರರ ಕರಡು ಪ್ರತಿಯನ್ನು ಪ್ರದರ್ಶಿಸ ಲಾಗಿದೆ.ಮೊದಲ ಪಟ್ಟಿಯಲ್ಲಿ ಅವಕಾಶ ಸಿಗದ ಪದವಿಧರರ ಹಾಗೂ ಹೊಸದಾಗಿ ನೊಂದಾಯಿಸುವ ಪದವಿಧರರ ನವೆಂಬರ್ ೨೫ ರಿಂದ ಡಿಸೆಂಬರ್ ೧೦ರವರೆಗೆ ಎರಡನೇ ಹಂತದಲ್ಲಿ ನೊಂದಾಯಿಸಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ.ಹಾಗಾಗಿ ಇದುವರೆಗೂ ನೊಂದಾವಣೆಯಾಗದ ಪದವಿಧರರ ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ನೊಂದಾಯಿಸಿಕೊಳ್ಳಬೇಕೆ0ದರು.
ಕೇ0ದ್ರದಲ್ಲಿ ಜೆಡಿಯು ಎನ್.ಡಿ.ಎ ಒಕ್ಕೂಟದ ಭಾಗವಾಗಿರುವ ಹಿನ್ನೆಲೆಯಲ್ಲಿ ಆಗ್ನೇಯ ಪದವಿಧರರ ಕ್ಷೇತ್ರದ ಚುನಾವಣೆಯಲ್ಲಿ ಎನ್.ಡಿ.ಎ ಅಭ್ಯರ್ಥಿಯಾಗಿಯೇ ಕಣಕ್ಕೆ ಇಳಿಯಬೇಕಾಗಿದೆ.ಈಗಾಗಲೇ ಜೆಡಿಯು ರಾಜ್ಯಾಧ್ಯಕ್ಷರಾಗಿರುವ ಮಹಿಮ ಜೆ. ಪಟೇಲ್ ಅವರು ನನ್ನನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ.ಈ ವಿಚಾರವನ್ನು ಪಕ್ಷದ ವರಿಷ್ಠರಿಗೂ ನಮ್ಮ ನಾಯಕರುಗಳು ಮುಟ್ಟಿಸಿದ್ದಾರೆ.ಹಾಗಾಗಿ ಜೆಡಿಯು ಪಕ್ಷದ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ.ಕ್ಷೇತ್ರ ವ್ಯಾಪ್ತಿಯ ಎಲ್ಲಾ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮಪಂ ಚಾಯಿತಿ ವಾರು ಕಾರ್ಯಕರ್ತರು ಎನ್.ಡಿ.ಎ ಒಕ್ಕೂಟದ ಪ್ರಭಲ ಆಕಾಂಕ್ಷಿಯಾಗಿರುವ ಡಾ.ಕೆ.ನಾಗರಾಜು ಅವರ ಪರವಾಗಿ ಮತದಾ ರರನ್ನು ಭೇಟಿಯಾಗಿ ಮನವೊಲಿಸುವ ಪ್ರಯತ್ನ ಮಾಡಬೇಕೆಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಜೆಡಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ರಂಗನಾಥ್.ಕೆ.ಆರ್. ಮಾತನಾಡಿ,ಜೆಡಿಯು ಎನ್.ಡಿ.ಎ ಒಕ್ಕೂಟದ ಭಾಗವಾಗಿರುವುದು ನಮಗೆ ಆಗ್ನೇಯ ಪದವಿಧರರ ಕ್ಷೇತ್ರದಲ್ಲಿ ಸಹಕಾರಿಯಾಗಲಿದೆ.ವೃತ್ತಿಪರರು, ಸಜ್ಜನರು ಆಗಿರುವ ನಮ್ಮ ಅಭ್ಯರ್ಥಿ ಡಾ.ಕೆ.ನಾಗರಾಜು, ಅವರದ್ದೇ ಆದ ದೃಷ್ಟಿಕೋನವನ್ನು ಇಟ್ಟುಕೊಂಡು ಚುನಾವಣೆ ಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಪ್ರತಿ ಜಿಲ್ಲೆ, ತಾಲೂಕು, ಹೋಬಳಿಗೂ ಭೇಟಿ ನೀಡಿ ಪದವಿಧರರನ್ನು ಭೇಟಿ ಯಾಗಿ,ಮತದಾರರ ಪಟ್ಟಿಗೆ ಹೆಸರು ನೊಂದಾಯಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.ಇದಕ್ಕೆ ನಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ಮಹಿಮ ಜೆ.ಪಟೇಲ್ ಅವರು ಸಹ ಸಹಕಾರ ನೀಡಿದ್ದಾರೆ.ತುಮಕೂರು ದೊಡ್ಡ ಜಿಲ್ಲೆಯಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ತಾಲೂಕಿನಲ್ಲಿ ಸಂಚಾಲಕರನ್ನು ನೇಮಕ ಮಾಡಿ, ಪಕ್ಷ ಸಂಘಟನೆಯ ಜೊತೆ, ಜೊತೆಗೆ, ಮತದಾರರ ನೊಂದಣಿಗೂ ಒತ್ತು ನೀಡಲಾಗುತ್ತಿದೆ. ನಮ್ಮ ಎನ್.ಡಿ.ಎ ಒಕ್ಕೂಟ ಪ್ರಭಲ ಆಕಾಂಕ್ಷಿಯಾಗಿರುವ ಡಾ.ಕೆ.ನಾಗರಾಜು ಪರವಾಗಿ ಒಗ್ಗೂಡಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದರು.
ಈ ವೇಳೆ ಮುಖಂಡರಾದ ಬಹದ್ದೂರ್, ಜೆಡಿಯು ಯುವಘ ಟಕದ ರಾಜ್ಯ ಕಾರ್ಯದರ್ಶಿ ಡಿ.ಜೆ.ಪ್ರಭು,ಜೆಡಿಯು ಪಕ್ಷದ ತುಮ ಕೂರು ಜಿಲ್ಲಾ ಸಂಚಾಲಕರಾದ ಕುದೂರು ಬಸಣ್ಣ, ಮುಖಂಡರಾದ ರತ್ನಾಕರ, ಮಂಜುನಾಥ್, ಪಕ್ಷದ ಯುವ ಮುಖಂಡರುಗಳಾದ ಮನೋಜ್, ಸುಮನ್ ಮತ್ತಿತರರು ಉಪಸ್ಥಿತರಿದ್ದರು.





